For Quick Alerts
ALLOW NOTIFICATIONS
For Daily Alerts

ಮದ್ರಾಸ್ ಕೆಫೆ ವ್ಯಾಪಾರ ನಿಧಾನವಾಗಿ ಚೇತರಿಕೆ

By ಜೇಮ್ಸ್ ಮಾರ್ಟಿನ್

ಜಾನ್ ಅಬ್ರಹಾಂ ಹಾಗೂ ನರ್ಗಿಸ್ ಫಕ್ರಿ ಅಭಿನಯದ 'ಮದ್ರಾಸ್ ಕೆಫೆ' ಚಿತ್ರಕ್ಕೆ ಬಾಕ್ಸಾಫೀಸ್ ನಲ್ಲಿ ಭರ್ಜರಿ ಆರಂಭ ಸಿಗದಿದ್ದರೂ ಪರ್ವಾಗಿಲ್ಲ ಎನ್ನುವ ಮಟ್ಟಿಗೆ ವ್ಯಾಪಾರ ನಡೆಸಿದೆ. ಮೊದಲೆರಡು ದಿನಗಳ ಅಂತ್ಯಕ್ಕೆ ಶೂಚಿತ್ ಸಿರ್ಕಾರ್ ಅವರ ಚಿತ್ರ ದೇಶಿ ಮಾರುಕಟ್ಟೆಯಲ್ಲಿ ಸ್ವಲ್ಪಮಟ್ಟಿಗೆ ಚೇತರಿಕೆ ಕಂಡಿದೆ.

ವಿಮರ್ಶಕರಿಂದ ಉತ್ತಮ ಹೊಗಳಿಕೆ ಸಿಕ್ಕಿರುವ ಹಿನ್ನೆಲೆಯಲ್ಲಿ ಶನಿವಾರದ ಅಂತ್ಯಕ್ಕೆ ಚಿತ್ರಮಂದಿರಗಳತ್ತ ಜನ ಬರಲು ಶುರು ಮಾಡಿದ್ದಾರೆ. ರಾಜಕೀಯ, ಯುದ್ಧ ಕಥಾನಕ ಹೊಂದಿರುವ ಚಿತ್ರ ನಿಧಾನಗತಿಯಿಂದ ಪ್ರೇಕ್ಷಕರಿಗೂ ಹಿಡಿಸುತ್ತಿದೆ. ಜಾನ್ ಅಬ್ರಹಾಂ ಅವರ ಈ ಹಿಂದಿನ ಚಿತ್ರಕ್ಕೆ ಹೋಲಿಸಿದರೆ 'ಮದ್ರಾಸ್ ಕೆಫೆ' ಚಿತ್ರ ಗಲ್ಲಾಪೆಟ್ಟಿಗೆಯನ್ನು ತುಂಬಿಸುವುದು ಗ್ಯಾರಂಟಿ.

ಜಾನ್ ಅವರ ಸೆ.30,2011 ಚಿತ್ರ ಫೋರ್ಸ್ ಗೆ ಹೋಲಿಸಿದರೆ ಕೆಫೆ ಉತ್ತಮ ಗಳಿಕೆಯತ್ತ ದಾಪುಗಾಲಿಟ್ಟಿದೆ. ಮದ್ರಾಸ್ ಕೆಫೆ ಚಿತ್ರಕ್ಕೆ ಸಿಕ್ಕ 'ನೆಗಟಿವ್ ಪಬ್ಲಿಸಿಟಿ' ಚಿತ್ರಕ್ಕೆ ಪೂರಕವಾಗಿ ನಿಂತಿಲ್ಲ. ವಾರಾಂತ್ಯದಲ್ಲಿ ಮನರಂಜನೆ ಬಯಸುವ ಜನ 'ಮದ್ರಾಸ್ ಕೆಫೆ' ಯಂಥ ಸೀರಿಯಸ್ ಸಬ್ಜೆಕ್ಟ್ ಇರುವ ಚಿತ್ರಕ್ಕೆ ನೋಡಲು ಕೊಂಚ ಹಿಂದೇಟು ಹಾಕಿರುವುದು ಅಂಕಿ ಅಂಶಗಳಿಂದ ತಿಳಿದು ಬಂದಿದೆ. [ಚಿತ್ರದ ವಿಮರ್ಶೆ ಓದಿ]

ಮುಂಬೈನಲ್ಲಿ ಚಿತ್ರಮಂದಿರಗಳಲ್ಲಿ ಮಾರ್ನಿಂಗ್ ಶೋ ಶೇ 25 ರಿಂದ 35ರಷ್ಟು ಮಾತ್ರ ತುಂಬಿತ್ತು.ಆದರೆ, ಮ್ಯಾಟ್ನಿ ಹಾಗೂ ಫಸ್ಟ್ ಶೋಗೆ ಚೇತರಿಕೆ ಕಂಡು ತುಂಬಿದ ಗೃಹ ಪ್ರದರ್ಶನ ಕಂಡಿತ್ತು. ಶುಕ್ರವಾರದ ಗಳಿಕೆ ದೇಶಿ ಮಾರುಕಟ್ಟೆಯಲ್ಲಿ 5.17 ಕೋಟಿ ರು ಮಾತ್ರ ಬಂದಿದೆ.

ಎರಡನೇ ದಿನದಲ್ಲಿ ಗಳಿಕೆಯಲ್ಲಿ ಕೊಂಚ ಪ್ರಗತಿ ಕಂಡು ಬಂದಿದ್ದು ಜಾನ್ ಅವರ ಚಿತ್ರ ಒಟ್ಟಾರೆ 7 ಕೋಟಿ ರು ಗಳಿಸಿದೆ. ಒಟ್ಟಾರೆ ಎರಡು ದಿನಗಳಲ್ಲಿ 12.17 ಕೋಟಿ ರು ಗಳಿಕೆ ಕಂಡಿದೆ. ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಚಿತ್ರ ಬಿಡುಗಡೆಗೆ ಉಂಟಾದ ಅಡ್ಡಿ ಗಲ್ಲಾಪೆಟ್ಟಿಗೆಗೆ ಹೊಡೆತ ನೀಡಿರುವ ಸಾಧ್ಯತೆಯಿದೆ ಎಂದು ಭಾವಿಸಲಾಗಿದೆ.

ಜಾನ್ ಅವರ ಈ ಹಿಂದಿನ ಹಿಟ್ ಚಿತ್ರ ಪೋರ್ಸ್ ಮೊದಲೆರಡು ದಿನಗಳಲ್ಲಿ ಕ್ರಮವಾಗಿ 5.05 ಹಾಗೂ 4.75 ಕೋಟಿ ರು ಮಾತ್ರ ಗಳಿಸಿತ್ತು. ಆದರೆ, ಮದ್ರಾಸ್ ಕೆಫೆ ಚಿತ್ರದ ಬಗ್ಗೆ ವಿಮರ್ಶಕರಿಂದ ಸಿಕ್ಕಿರುವ ಒಳ್ಳೆ ಮಾತುಗಳು, ಪ್ರೇಕ್ಷಕರ ಬಾಯ್ಮಾತಿನ ಪ್ರಚಾರದಿಂದ ಚಿತ್ರ ಇನ್ನಷ್ಟು ಹೆಚ್ಚಿನ ಗಳಿಕೆ ಮಾಡುವ ನಿರೀಕ್ಷೆ ಹೊಂದಲಾಗಿದೆ. ಭಾನುವಾರ ಚಿತ್ರದ ಗಳಿಕೆ 8 ರಿಂದ 10 ಕೋಟಿ ರು ಗಳಿಕೆ ಮುಟ್ಟುವ ನಿರೀಕ್ಷೆಯಿದೆ. ಚಿತ್ರದ ಗಳಿಕೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಖ್ಯಾತ ವಿಮರ್ಶಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದು ಹೀಗೆ...

#MadrasCafe Fri 5.17 cr, Sat trends suggest around 7 cr. May even cross 7 cr. Biz on the rise and how. Power of strong word of mouth!
— taran adarsh (@taran_adarsh) August 25, 2013

#MadrasCafe is zooming upwards. Not just plexes of urban centres, even single screens/mass circuits have witnessed an upswing in biz. WOW!
— taran adarsh (@taran_adarsh) August 25, 2013

English summary
Shoojit Sircar's latest directorial venture Madras Cafe starring John Abraham and Nargis Fakhri in leads, opened to a lackluster response at the Indian Box Office, but has picked up very well on Saturday. This political espionage thriller has smashed the first and second day collection records of John's previous solo movie Force, which had hit the screen on September 30, 2011.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X