ಹಾಸ್ಯ ನಟ ಜಾನಿ ಲಿವರ್ ಪುತ್ರಿಯನ್ನೂ ಬಿಡಲಿಲ್ಲ ಕಾಸ್ಟಿಂಗ್ ಕೌಚ್;ವಿಡಿಯೋ ಕಾಲ್ ಮಾಡಿ ಬಟ್ಟೆ ಬಿಚ್ಚಲು ಹೇಳಿದ್ದ ನಿರ್ದೇಶಕ

ಭಾರತೀಯ ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ನಟಿಯರು ಧ್ವನಿ ಎತ್ತುತ್ತಿದ್ದಾರೆ. ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಸಿಡಿದೇಳುತ್ತಿದ್ದಾರೆ. ಈ ಬಗ್ಗೆ ಮಾತಾಡುವುದಕ್ಕೆ ಮುಜುಗರ ಪಡುತ್ತಿದ್ದ ನಟಿಯರು ಈಗೀಗ ಸಿನಿಮಾ ಇಂಡಸ್ಟ್ರಿಯಲ್ಲಿ ತಮಗಾದ ಕಹಿ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿವರೆಗೂ ಸಿನಿಮಾರಂಗದ ಹಿನ್ನೆಲೆ ಇರದ ನಟಿಯರು ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದರು. ಆದ್ರೀಗ ಬಾಲಿವುಡ್‌ನ ಜನಪ್ರಿಯ ನಟನ ಪುತ್ರಿಗೆ ಕೂಡ ಇಂತಹ ಅನುಭವ ಆಗಿದೆ.

ಆ ನಟಿ ಮತ್ಯಾರೂ ಅಲ್ಲ, ಬಾಲಿವುಡ್‌ನ ಜನಪ್ರಿಯ ಹಾಸ್ಯ ನಟ ಜಾನಿ ಲಿವರ್ ಅವರ ಪುತ್ರಿ ಜೇಮಿ ಲಿವರ್. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಜೇಮಿ ಲಿವರ್‌ ತಮಗಾದ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಸಿನಿಮಾರಂಗದಲ್ಲಾದ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ. ನಕಲಿ ನಿರ್ದೇಶಕರೊಬ್ಬರೊಂದಿಗೆ ನಡೆದ ಸಂಭಾಷಣೆಯ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದೆ.

Johnny lever daughter Jamie Lever s Insight on Casting Couch Experiences in the Industry

ಸಿನಿಮಾದಲ್ಲಿ ನಟಿಸಬೇಕು ಎನ್ನುವ ಆಸೆ ಹೊತ್ತು ಬರುವ ನಟಿಯರಿಗೇನು ಕಮ್ಮಿಯಿಲ್ಲ. ಸಾವಿರಾರು ನಟಿಯರು ಬೇರೆ ಬೇರೆ ಚಿತ್ರರಂಗದಲ್ಲಿ ಒಂದು ಚಿಕ್ಕ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆ. ಆದರೆ, ಇದನ್ನು ಬಂಡವಾಳ ಮಾಡಿಕೊಂಡು ಕೆಲವರು ತಮ್ಮ ಆಸೆಯನ್ನು ತೀರಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಅದು ಮೀಟೂ ಬಳಿಕ ಒಂದೊಂದಾಗಿಯೇ ಹೊರಬೀಳುತ್ತಿವೆ. ಈಗ ಬಾಲಿವುಡ್ ನಟ ಜಾನಿ ಲಿವರ್ ಅವರ ಪುತ್ರಿ ಜೇಮಿ ಲಿವರ್ ಕೂಡ ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.

ಮುಂದೆ ಓದಿ

ಬಾಲಿವುಡ್‌ ನಟ ಜಾನಿ ಲಿವರ್‌ ಪುತ್ರಿಗೆ ಕಾಸ್ಟಿಂಗ್ ಕೌಚ್ ಅನುಭವ
ನಕಲಿ ನಿರ್ದೇಶಕ ಫೋನ್ ಮಾಡಿ ಜೇಮಿ ಲಿವರ್‌ಗೆ ಹೇಳಿದ್ದು ಏನು?
ಅಂತರಾಷ್ಟ್ರೀಯ ನಿರ್ದೇಶಕ ಆಡಿಷನ್‌ಗೆ ಕರೆದು ಹೇಳಿದ್ದೇನು?
50 ವರ್ಷದ ವ್ಯಕ್ತಿ ಮುಂದೆ ಜೇಮಿ ಲಿವರ್ ಬೆತ್ತಲಾಗ ಬೇಕಿತ್ತೇ?

ಹೌದು, ಜೇಮಿ ಲಿವರ್ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ನಕಲಿ ನಿರ್ದೇಶಕನೊಬ್ಬ ಆಡಿಷನ್‌ ಕರೆದು ಇಟ್ಟ ಬೇಡಿಕೆಗಳನ್ನು ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಜೇಮಿ ಲಿವರ್‌ ತಂದೆಯ ಪ್ರಭಾವವಿಲ್ಲದೆ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವುದಕ್ಕೆ ಪ್ರಯತ್ನ ಪಡುತ್ತಿದ್ದರು. ಹೀಗಾಗಿ ಆಡಿಷನ್‌ಗಳನ್ನು ನೀಡುತ್ತಿದ್ದರು. ಈ ವೇಳೆ ಅಂತಾರರಾಷ್ಟ್ರೀಯ ಸಿನಿಮಾಗಳನ್ನು ನಿರ್ದೇಶಕ ಎಂದು ಹೇಳಿಕೊಂಡು ಒಬ್ಬ ವ್ಯಕ್ತಿ ಕರೆ ಮಾಡಿ ಆಡಿಷನ್ ಕೊಡುವಂತೆ ಹೇಳಿದ್ದನಂತೆ.

ಆ ನಕಲಿ ನಿರ್ದೇಶಕ ಆರಂಭದಲ್ಲಿ ಪ್ರಯಾಣ ಮಾಡುತ್ತಿರುವುದರಿಂದ ವಿಡಿಯೋ ಕ್ಯಾಮರಾ ಆನ್ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದ. ಆದರೆ, ಜೇಮಿ ಲಿಬರ್‌ಗೆ ವೀಡಿಯೊ ಆನ್ ಮಾಡುವಂತೆ ಹೇಳಿದ್ದ. ಹಾಗೇ ಈ ಆಡಿಷನ್‌ನಲ್ಲಿ ಸ್ಕ್ರಿಪ್ಟ್ ಇರುವುದಿಲ್ಲ. ಬೋಲ್ಡ್ ಪಾತ್ರಕ್ಕೆ ಆಡಿಷನ್ ನೀಡಬೇಕಿರುವುದರಿಂದ 50 ವರ್ಷದ ವ್ಯಕ್ತಿಯನ್ನು ಸೆಳೆಯುವ ಸನ್ನಿವೇಶವನ್ನು ಕಲ್ಪಿಸಿಕೊಂಡು ಅಭಿನಯಿಸಬೇಕು ಎಂದು ಹೇಳಿದ್ದನಂತೆ. ಇದೇ ವೇಳೆ ಬೋಲ್ಡ್ ಸೀನ್ ಆಗಿದ್ದರಿಂದ ಬಟ್ಟೆ ಬಿಚ್ಚಿ ನಟಿಸಬೇಕು ಎಂದು ಬೇಡಿಕೆ ಇಟ್ಟಿದ್ದ ಎಂದು ಜೇಮಿ ಲಿವರ್ ಹೇಳಿಕೊಂಡಿದ್ದಾರೆ.

Johnny lever daughter Jamie Lever s Insight on Casting Couch Experiences in the Industry

ಸಂದರ್ಶನದಲ್ಲಿ ಜೇಮಿ ಲಿವರ್ ಆ ಕಹಿ ಘಟನೆಯ ಬಗ್ಗೆ ಹಂಚಿಕೊಂಡಿದ್ದಾರೆ. "ನಿನ್ನ ಮುಂದೆ 50 ವರ್ಷದ ವ್ಯಕ್ತಿಯೊಬ್ಬ ಇದ್ದಾನೆ ಎಂದು ಕಲ್ಪಿಸಿಕೋ. ನೀನು ಆತನನ್ನು ಮೋಡಿ ಮಾಡುವುದಕ್ಕೆ ಪ್ರಯತ್ನಿಸಬೇಕು. ಆಮೇಲೆ ಇಬ್ಬರ ನಡುವೆ ಇಂಟಿಮೇಟ್ ಸೀನ್ ನಡೆಯಬೇಕು ಎಂದು ಹೇಳಿದ. ಆಗ ನಾನು, ಸ್ಕ್ರಿಪ್ಟ್ ಇದ್ದರೆ ಮಾತ್ರ ನಾನು ಆ ರೀತಿ ನಟಿಸಲು ಸಾಧ್ಯ ಎಂದು ಹೇಳಿದೆ. ಆಗ ಅವರು, ಸ್ಕ್ರಿಪ್ಟ್ ಏನೂ ಇರುವುದಿಲ್ಲ. ನೀನು ಹೇಗೆ ಬೇಕಾದರೂ ನಟಿಸಬಹುದು, ಬಟ್ಟೆ ಬಿಚ್ಚಬಹುದು, ಏನಾದರೂ ಡೈಲಾಗ್ ಹೇಳಬಹುದು ಎಂದರು" ಎಂದು ಜೇಮಿ ಲಿವರ್ ಹೇಳಿಕೊಂಡಿದ್ದಾರೆ.

ಈ ಸಂದರ್ಶನದಲ್ಲಿ ಜೇಮಿ ಲಿವರ್ ತನ್ನನ್ನು ಬ್ಲಾಕ್ ಮೇಲ್ ಮಾಡಬಹುದಿತ್ತು ಎಂಬ ಆತಂಕವನ್ನೂ ಹೊರ ಹಾಕಿದ್ದಾರೆ. ಬಾಲಿವುಡ್ ನಟ ಜಾನಿ ಲಿವರ್ ಪುತ್ರಿ ಆಗಿದ್ದರಿಂದ ಇಂತಹದ್ದೊಂದು ಸಾಧ್ಯತೆಯಿತ್ತು. ಅಲ್ಲದೇ ಆ ದೃಶ್ಯದಲ್ಲಿ ನಟಿಸುವುದಕ್ಕೆ ನಾನು ಕಂಫರ್ಟೆಬಲ್ ಆಗಿಲ್ಲ ಎಂದು ಹೇಳಿ ಹೊರ ಬಂದಿದ್ದಾಗಿ ಹೇಳಿಕೊಂಡಿದ್ದಾರೆ. ಒಂದು ವೇಳೆ ಆ ವಿಡಿಯೋದಲ್ಲಿ ನಟಿಸಿದ್ದರೆ, ಅದನ್ನು ದುರ್ಬಳಕೆ ಮಾಡಿಕೊಳ್ಳಬಹುದಿತ್ತು. ಅದರಿಂದ ದೊಡ್ಡ ಹಗರಣವೇ ನಡೆಯುವ ಸಾಧ್ಯತೆಯಿತ್ತು ಎಂದು ಜೇಮಿ ಲಿವರ್ ಹೇಳಿದ್ದಾರೆ.

More from Filmibeat

English summary
Johnny lever daughter Jamie Lever's Insight on Casting Couch Experiences in the Industry.
Read more about: casting couch johny lever actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X