ದೀಪಿಕಾ ಪಡುಕೋಣೆ 'ಕಲ್ಕಿ 2898 AD' ಫಸ್ಟ್ ಲುಕ್ ಔಟ್: ಡಿಪ್ಪಿ ಬೇಸರದಲ್ಲಿ ಇರೋದ್ಯಾಕೆ?
ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಪಡುಕೋಣೆ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಇದೊಂದು ಖುಷಿಯಾಗಿದ್ದರೆ. ಮತ್ತೆ ದಕ್ಷಿಣ ಭಾರತದ ಸಿನಿಮಾದಲ್ಲಿ ನಟಿಸಿರುವ 'ಕಲ್ಕಿ 2898 AD' ರಿಲೀಸ್ ಆಗುತ್ತಿದೆ. ಹೀಗಾಗಿ ದೀಪಿಕಾ ಪಡುಕೋಣೆ ಡಬಲ್ ಖುಷಿಯಲ್ಲಿದ್ದಾರೆ. ಈ ಮಧ್ಯೆ 'ಕಲ್ಕಿ' ತಂಡ ಸಿನಿಮಾದ ಫಸ್ಟ್ ಲುಕ್ ಅನ್ನು ರಿಲೀಸ್ ಮಾಡಿದೆ.
ವೈಜಯಂತಿ ಮೂವೀಸ್ ಬ್ಯಾನರ್ ನಿರ್ಮಾಣ ಮಾಡುತ್ತಿರುವ ಭಾರತದ ಅತ್ಯಂತ ದುಬಾರಿ ಸಿನಿಮಾ ಇದು. ಪ್ರಭಾಸ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರೆ, ಇವರೊಂದಿಗೆ ದೀಪಿಕಾ ಪಡುಕೋಣೆ ಕೂಡ ಅಷ್ಟೇ ಪ್ರಮುಖ ಪಾತ್ರದಲ್ಲಿ ನಟಿಸುವ ಮೂಲಕ ಮತ್ತೆ ದಕ್ಷಿಣ ಭಾರತದ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

'ಕಲ್ಕಿ' ಸಿನಿಮಾ ರಿಲೀಸ್ ಸಜ್ಜಾಗುತ್ತಿರುವಾಗಲೇ ದೀಪಿಕಾ ಪಡುಕೋಣೆ ಪಾತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ನಾಳೆ (ಜೂನ್ 9) 'ಕಲ್ಕಿ 2898 AD'ಯ ಟ್ರೈಲರ್ ರಿಲೀಸ್ ಆಗುತ್ತಿದೆ. ಅದಕ್ಕೂ ಮುನ್ನ ದೀಪಿಕಾ ಲುಕ್ ರಿವೀಲ್ ಆಗಿದೆ. ಆದರೆ, ಕುತೂಹಲ ಏನಂದ್ರೆ, " ಈಕೆಯಿಂದಲೇ ಭರವಸೆ ಆರಂಭ" ಎಂದು ಟೀಮ್ ಬರೆದುಕೊಂಡಿದೆ. ಹೀಗಾಗಿ ದೀಪಿಕಾ ಪಡುಕೋಣೆ ರೋಲ್ ಈ ಸಿನಿಮಾ ಟರ್ನಿಂಗ್ ಪಾಯಿಂಟ್ ಆಗಿರಬಹುದೆಂಬ ನಿರೀಕ್ಷೆ ಹುಟ್ಟಿಕೊಂಡಿದೆ.
'ಕಲ್ಕಿ' ಸಿನಿಮಾದಲ್ಲಿ ತನ್ನ ಪಾತ್ರದ ಪೋಸ್ಟರ್ ಅನ್ನು ದೀಪಿಕಾ ಪಡುಕೋಣೆ ಕೂಡ ಶೇರ್ ಮಾಡಿಕೊಂಡಿದ್ದಾರೆ. ಆದರೆ, ಈ ಫಸ್ಟ್ ಲುಕ್‌ನಲ್ಲಿ ದೀಪಿಕಾ ಯಾವುದೋ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿರುವಂತೆ ಕಾಣುತ್ತಿದೆ. ಮಳೆ ಸುರಿಯುತ್ತಿರುವ ಸಂದರ್ಭ. ಹಿನ್ನೆಲೆಯಲ್ಲಿ ಆ ಮಳೆಯಲ್ಲಿಯೇ ನೆನೆಯುತ್ತಿರುವ ಜನರು ಈ ಸಿನಿಮಾ ಕತೆಯನ್ನು ಹೇಳುತ್ತಿದೆ ಎನಿಸುತ್ತಿದೆ.
ದೀಪಿಕಾ ಪಡುಕೋಣೆ 'ಕಲ್ಕಿ' ಪೋಸ್ಟರ್ ನೋಡಿ ರಣ್‌ವೀರ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ದೀಪಿಕಾ ತನ್ನ ಇನ್‌ಸ್ಟಾಗ್ರಾಂನಲ್ಲಿ ಖಾತೆಯಲ್ಲಿ ಪೋಸ್ಟರ್ ಅನ್ನು ಹಂಚಿಕೊಳ್ಳುತ್ತಿದ್ದಂತೆ ರಣ್‌ವೀರ್ ಸಿಂಗ್ " ಬೂಮ್.. ಬೆರಗುಗೊಳಿಸುವಂತಿದೆ" ಎಂದು ಕಾಮೆಂಟ್ ಮಾಡಿದ್ದಾರೆ. ಹಾಗೇ ದೀಪಿಕಾ ಪಡುಕೋಣೆ ಅಭಿಮಾನಿಗಳು ಕೂಡ ಫಸ್ಟ್ ಲುಕ್‌ಗೆ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
"ದೀಪಿಕಾ ನಿಜವಾಗಿಯೂ ನೀವು ಸಿನಿಮಾ ಹಾಗೂ ನನ್ನ ಹೃದಯವನ್ನು ಆಳುತ್ತಿದ್ದೀರಾ" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಇದು " ಇದು ಈ ಸಿನಿಮಾದ ಬೆಸ್ಟ್ ಪೋಸ್ಟರ್. ಈ ಹಿಂದೆ ರಿಲೀಸ್ ಮಾಡಿದ ವಿಡಿಯೋ ಗೇಮ್ ಪೋಸ್ಟರ್‌ಗಿಂತ ಇದು ಎಷ್ಟೋ ಉತ್ತಮ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಇನ್ನು ಕೆಲವರು "ತಾಯಿ ಅದ್ಭುತವಾಗಿ ಕಾಣುತ್ತಿದ್ದಾಳೆ." ಎಂದು ಕಾಮೆಂಟ್ ಮಾಡಿದ್ದರೆ, ಇನ್ನು ಕೆಲವರು " ಹಾಲಿವುಡ್‌ಗೆ ರೂಲ್ ಮಾಡುವುದಕ್ಕೆ ಬರುತ್ತಿದ್ದೇವೆ" ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ದೀಪಿಕಾ ಪಡುಕೋಣೆ ಸಿನಿಮಾದ ಪೋಸ್ಟರ್‌ಗೆ ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ದೀಪಿಕಾ ಸದ್ಯ ಗರ್ಭಿಣಿಯಾಗಿದ್ದರಿಂದ ಸಿನಿಮಾ ಪ್ರಚಾರಕ್ಕೆ ಬರುತ್ತಾರಾ? ಅನ್ನುವ ಪ್ರಶ್ನೆಯಂತೂ ಇದೆ. ಆದರೆ, ಇದೇ ಜೂನ್ 27ಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದು, ಪ್ರಚಾರಕ್ಕೆ ಕೇವಲ 15 ದಿನಗಳು ಬಾಕಿ ಉಳಿದಿವೆ ಅಷ್ಟೇ.


Click it and Unblock the Notifications











