ನವಾಜುದ್ದೀನ್ ನಟಿಸಿದ್ದ ದೃಶ್ಯ ಕತ್ತರಿಸಿದ್ದ ಕಮಲ್ ಹಾಸನ್, ಬಿಕ್ಕಳಿಸಿ ಅತ್ತಿದ್ದರಂತೆ ನಟ

ಭಾರತದ ಅತ್ಯಂತ ಬ್ಯುಸಿ ನಟರಲ್ಲಿ ಒಬ್ಬರು ಬಾಲಿವುಡ್ ನಟ ನವಾಜುದ್ಧೀನ್ ಸಿದ್ಧಿಕಿ. ಅತ್ಯಂತ ಸಣ್ಣ ಪಾತ್ರಗಳಲ್ಲಿ ನಟಿಸುತ್ತಾ ಬಂದ ನವಾಜುದ್ದೀನ್ ಇಂದು ಭಾರತದ ಅತ್ಯುತ್ತಮ ನಟರಲ್ಲಿ ಒಬ್ಬರು.

ಹೆಸರೇ ಇಲ್ಲದ ಪಾತ್ರಗಳನ್ನು ನಟಿಸುತ್ತಾ ಒಂದೊಂದೇ ಮೆಟ್ಟಿಲು ಹತ್ತಿದವರು ನವಾಜುದ್ದೀನ್ ಸಿದ್ಧಿಕಿ. ಮುನ್ನಾಭಾಯಿ ಎಂಬಿಬಿಎಸ್ ನಲ್ಲಿ ಕಳ್ಳನ ಪಾತ್ರ. ತಲಾಶ್ ಸಿನಿಮಾದಲ್ಲಿ ಕಳ್ಳನ ಪಾತ್ರ. ರಂಗೀಲಾ ಸಿನಿಮಾದಲ್ಲಿ ಹೋಟೆಲ್ ವೇಯ್‌ಟರ್ ಪಾತ್ರ. ಹೀಗೆ ಅತ್ಯಂತ ಸಣ್ಣ ಪಾತ್ರಗಳಲ್ಲಿ ನಟಿಸಿದ್ದರು ನವಾಜುದ್ಧೀನ್ ಸಿದ್ಧಿಕಿ.

ಅವಕಾಶಕ್ಕಾಗಿ ಅರಸುತ್ತಿದ್ದ ಕಾಲದಲ್ಲಿ ನಟ ಕಮಲ್‌ ಹಾಸನ್ ಸಿದ್ಧಿಕಿಗೆ ತಮ್ಮ ನಿರ್ದೇಶನದ ಹೇರಾಮ್ ಸಿನಿಮಾದಲ್ಲಿ ಸಣ್ಣ ಪಾತ್ರವೊಂದನ್ನು ಕೊಟ್ಟಿದ್ದರಂತೆ. ನವಾಜುದ್ದೀನ್ ನಟಿಸಿದ್ದರಂತೆ ಸಹ ಆದರೆ ಎಡಿಟಿಂಗ್ ಸಮಯದಲ್ಲಿ ಆ ದೃಶ್ಯಕ್ಕೆ ಕತ್ತರಿ ಹಾಕಿಬಿಟ್ಟರಂತೆ ಕಮಲ್.

ಹೇರಾಮ್ ಸಿನಿಮಾದಲ್ಲಿ ನವಾಜುದ್ಧಿನ್ ನಟನೆ

ಹೇರಾಮ್ ಸಿನಿಮಾದಲ್ಲಿ ನವಾಜುದ್ಧಿನ್ ನಟನೆ

ಹೌದು, ಹೇರಾಮ್ ಸಿನಿಮಾದಲ್ಲಿ, ಗುಂಪಿನ ದಾಳಿಯಿಂದ ನವಾಜುದ್ಧೀನ್ ಅನ್ನು ಕಮಲ್ ಹಾಸನ್ ರಕ್ಷಿಸುವ ದೃಶ್ಯವನ್ನು ಚಿತ್ರೀಕರಿಸಲಾಗಿತ್ತಂತೆ, ಆದರೆ ಸಂಕಲನದ ಸಮಯದಲ್ಲಿ ಅದನ್ನು ತೆಗೆದುಹಾಕಿಬಿಟ್ಟಿದ್ದರಂತೆ ನಿರ್ದೇಶಕರೂ ಆಗಿದ್ದ ಕಮಲ್ ಹಾಸನ್.

ನವಾಜುದ್ಧೀನ್‌ಗೆ ಸಮಾಧಾನ ಮಾಡಿದ್ದ ಶ್ರುತಿಹಾಸನ್

ನವಾಜುದ್ಧೀನ್‌ಗೆ ಸಮಾಧಾನ ಮಾಡಿದ್ದ ಶ್ರುತಿಹಾಸನ್

ತಮ್ಮ ದೃಶ್ಯಕ್ಕೆ ಕತ್ತರಿಬಿದ್ದಿದ್ದು ಗೊತ್ತಾದಾಗ ತೀವ್ರವಾಗಿ ಕುಸಿದುಹೋಗಿದ್ದರಂತೆ ನಟ ನವಾಜುದ್ಧೀನ್, ಬೇಸರದಿಂದ ಕಣ್ಣೀರು ಸುರಿಸಿದ್ದರಂತೆ. ಆಗ ಅವರಿಗೆ ಸಮಾಧಾನ ಮಾಡಿದ್ದರಂತೆ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್. ಇದನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ ಕಮಲ್.

'ಕಮಲ್ ಹೆಸರು ಹೇಳಲೂ ಸಹ ಯೋಗ್ಯತೆ ಇದೆಯೋ ಇಲ್ಲವೋ'

'ಕಮಲ್ ಹೆಸರು ಹೇಳಲೂ ಸಹ ಯೋಗ್ಯತೆ ಇದೆಯೋ ಇಲ್ಲವೋ'

ಆದರೆ ಈ ಬಗ್ಗೆ ಕಮಲ್ ಹಾಸನ್ ಬಗ್ಗೆ ತುಸುವೂ ಸಹ ಬೇಸರವಿಲ್ಲವಂತೆ ನವಾಜುದ್ದೀನ್‌ಗೆ. 'ಕಮಲ್ ಹಾಸನ್ ಅವರೆಂದರೆ ನನಗೆ ದೇವರಿಗೆ ಸಮಾನ, ಅವರನ್ನು ಆರಾಧಿಸುತ್ತಾ ಬೆಳದವನು ನಾನು, ಅವರ ಹೆಸರು ಹೇಳಲು ಸಹ ನನಗೆ ಯೋಗ್ಯತೆ ಇದೆಯೋ ಇಲ್ಲವೋ' ಎಂದಿದ್ದಾರೆ ನವಾಜುದ್ದೀನ್.

Recommended Video

ಮುನಿರತ್ನ ಬೆಂಬಲಕ್ಕೆ ಅಣ್ಣ ದರ್ಶನ್ ಜೊತೆಗೆ ಬಂದ ಅಮೂಲ್ಯ | Darshan | Amulya | Munirathna
ಹಲವು ಸಿನಿಮಾಗಳಲ್ಲಿ ನವಾಜುದ್ಧೀನ್ ಬ್ಯುಸಿ

ಹಲವು ಸಿನಿಮಾಗಳಲ್ಲಿ ನವಾಜುದ್ಧೀನ್ ಬ್ಯುಸಿ

ಭೋಲೆ ಚೂಡಿಯಾ, ಜಿಗರಾ ಸಾ ರಾ ರಾ, ಕ್ರಿಶ್ 4, ದಿ ಮ್ಯೂಸಿಕ್ ಟೀಚರ್, ಫರ್ಜಿ, ದಿ ಮಾಯಾ ಟೇಪ್, ಫೊಬಿಯಾ 2, ರೋಮ್ ರೋಮ್ ಮೆ ಇನ್ನೂ ಹಲವು ಸಿನಿಮಾಗಳಲ್ಲಿ ನಟ ನವಾಜುದ್ಧೀನ್ ಬ್ಯುಸಿಯಾಗಿದ್ದಾರೆ.

More from Filmibeat

English summary
Actor and director Kamal Haasan axed Nawazuddin Siddiqui's scene from movie Hey Ram. Nawazuddin said he cried a lot.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X