ಮೋಹನ್ ಲಾಲ್ 'ಭೀಮ'ನ ಪಾತ್ರ ಮಾಡಿದರೆ ಅವಮಾನ: ಕಮಾಲ್ ಆರ್ ಖಾನ್

By Suneel

1000 ಕೋಟಿ ಬಜೆಟ್ ನಲ್ಲಿ ಯುಎಇ ಉದ್ಯಮಿ ಕನ್ನಡಿಗ ಬಿ.ಆರ್.ಶೆಟ್ಟಿ ಅವರು 'ದಿ ಮಹಾಭಾರತ' ಸಿನಿಮಾ ಮಾಡಲಿದ್ದಾರೆ ಎಂಬುದು ನಿಮಗೆಲ್ಲಾ ಗೊತ್ತಿರುವ ವಿಷಯ.[1000 ಕೋಟಿ ವೆಚ್ಚದಲ್ಲಿ ಮೂಡಲಿದೆ 'ದಿ ಮಹಾಭಾರತ']

'ದಿ ಮಹಾಭಾರತ'ಕ್ಕೆ ನಿರ್ದೇಶಕ ವಿ.ಎ.ಶ್ರೀಕುಮಾರ್ ಮೆನನ್ ತಾರಾಬಳಗದ ಹುಟುಕಾಟದಲ್ಲಿದ್ದಾರೆ. ಆದರೆ ಈಗಾಗಲೇ ಚಿತ್ರದಲ್ಲಿ ಭೀಮನ ಪಾತ್ರವನ್ನು 'ದಿ ಕಂಪ್ಲೀಟ್ ಆಕ್ಟರ್' ಮೋಹನ್ ಲಾಲ್ ನಿರ್ವಹಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿದೆ. ಈ ಹಿನ್ನೆಲೆಯಲ್ಲಿ ಬಾಲಿವುಡ್ ನ ನಟ-ನಿರ್ಮಾಪಕ ಕಮಾಲ್ ರಶಿದ್ ಖಾನ್(ಕಮಾಲ್ ಆರ್ ಖಾನ್), ಮೋಹನ್ ಲಾಲ್ ಬಗ್ಗೆ ವ್ಯಂಗ್ಯವಾಡಿದ್ದು, ಮಾಲಿವುಡ್ ಸಿನಿರಸಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಮಾಲ್ ಆರ್ ಖಾನ್ ಹೇಳಿದ್ದೇನು ಗೊತ್ತಾ?

ಭೀಮನ ಪಾತ್ರಕ್ಕೆ ಅವಮಾನ

ಭೀಮನ ಪಾತ್ರಕ್ಕೆ ಅವಮಾನ

'ದಿ ಮಹಾಭಾರತ' ಚಿತ್ರದಲ್ಲಿ ಮೋಹನ್ ಲಾಲ್ ಭೀಮನ ಪಾತ್ರ ನಿರ್ವಹಿಸಲಿರುವ ಹಿನ್ನೆಲೆಯಲ್ಲಿ ಬಾಲಿವುಡ್ ನ ನಟ-ನಿರ್ಮಾಪಕ ಕಮಾಲ್ ಆರ್ ಖಾನ್, "ಮೋಹನ್ ಲಾಲ್ ಭೀಮನ ಪಾತ್ರ ನಿರ್ವಹಿಸಿದರೆ ಗ್ರೇಟೆಸ್ಟ್ ಭೀಮನಿಗೆ ಅವಮಾನ ಮಾಡಿದಂತಾಗುತ್ತದೆ' ಎಂದು ಟ್ವೀಟ್ ಮಾಡಿದ್ದಾರೆ.

ಮೋಹನ್ ಲಾಲ್ ಛೋಟಾ ಭೀಮ್

ಮೋಹನ್ ಲಾಲ್ ಛೋಟಾ ಭೀಮ್

ಕಮಾಲ್ ಆರ್ ಖಾನ್ ಟ್ವಿಟರ್ ನಲ್ಲಿ ವ್ಯಂಗ್ಯಸ್ತ್ರಾಗಳನ್ನು ಪ್ರಯೋಗ ಮಾಡಿ, ಮೋಹನ್ ಲಾಲ್ ಅವರ ಫೋಟೋ ಹಾಕಿ "ದಯವಿಟ್ಟು ಈ ಛೋಟಾ ಭೀಮ್ ನೋಡಿ. ಜೋಕರ್, ಭೀಮನ ಪಾತ್ರ ಮಾಡಿದಂತಾಗುತ್ತದೆ" ಎಂದು ಬರೆದಿದ್ದಾರೆ.

ಬಿ.ಆರ್.ಶೆಟ್ಟಿ ಹಣ ವೇಸ್ಟ್ ಮಾಡಬೇಡಿ

ಬಿ.ಆರ್.ಶೆಟ್ಟಿ ಹಣ ವೇಸ್ಟ್ ಮಾಡಬೇಡಿ

"ಸರ್ ಮೋಹನ್ ಲಾಲ್ ನೀವು ಛೋಟಾ ಭೀಮ್ ರೀತಿಯಲ್ಲಿ ಕಾಣ್ತೀರಿ. ಹಾಗಿದ್ದು 'ಮಹಾಭಾರತ'ದಲ್ಲಿ ಭೀಮನ ಪಾತ್ರದಲ್ಲಿ ಅಭಿನಯ ಮಾಡಿ ಬಿ.ಆರ್.ಶೆಟ್ಟಿ ಅವರ ಹಣವನ್ನೇಕೆ ವೇಸ್ಟ್ ಮಾಡುತ್ತೀರಾ?" ಎಂದು ಕಮಾಲ್ ಆರ್ ಖಾನ್ ಟ್ವೀಟ್ ಮಾಡಿದ್ದಾರೆ.

ಕೆಆರ್‌ಕೆ ಟ್ರೋಲ್ ಮಾಡಿದ ಮಾಲಿವುಡ್

ಕೆಆರ್‌ಕೆ ಟ್ರೋಲ್ ಮಾಡಿದ ಮಾಲಿವುಡ್

ಮೋಹನ್ ಲಾಲ್ ಅವರನ್ನು ಗೇಲಿ ಮಾಡಿರುವುದಕ್ಕೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಕಮಾಲ್ ಆರ್ ಖಾನ್ ವಿರುದ್ಧ ಮಾಲಿವುಡ್ ಟ್ರೋಲ್ ನಡೆಸಿದೆ. ಅಲ್ಲದೇ ಕಮಾಲ್ ಆರ್ ಖಾನ್ ಅವರ ಈ ನಡೆ ಹೊಸ ವಿವಾದಕ್ಕೆ ಎಡೆಮಾಡಿದೆ.

ನಾನೇ ಕೃಷ್ಣನ ಪಾತ್ರ ಮಾಡಲು ರೆಡಿ

ನಾನೇ ಕೃಷ್ಣನ ಪಾತ್ರ ಮಾಡಲು ರೆಡಿ

ಇನ್ನೂ 'ದಿ ಮಹಾಭಾರತ'ದ ತಾರಾಬಳಗದ ಬಗ್ಗೆಯೂ ನಿರಂತರವಾಗಿ ಟ್ವೀಟ್ ಮಾಡಿರುವ ನಟ "ನಾನು ಕೃಷ್ಣನ ಪಾತ್ರ ಮಾಡಲು ಬಯಸುತ್ತೇನೆ. ಕಾರಣ ನಾನು ಯುಪಿ'ಯ ಮಥುರದಿಂದಲೇ ಬಂದವನು. ಪ್ರಭಾಸ್-ಭೀಮ, ರಾಣಾ-ದುರ್ಯೋಧನ, ಅಮೀರ್ ಖಾನ್- ಅರ್ಜುನ, ಶಾರುಖ್ ಖಾನ್- ಕರ್ಣ, ರಣಬೀರ್-ಅಭಿಮನ್ಯು, ಸಲ್ಮಾನ್ ಖಾನ್-ಏಕಲವ್ಯ, ದೀಪಿಕಾ- ದ್ರೌಪದಿ" ಎಂದು ಟ್ವೀಟಿಸಿದ್ದಾರೆ.

100 ಭಾಷೆಗಳಲ್ಲಿ 'ದಿ ಮಹಾಭಾರತ'

100 ಭಾಷೆಗಳಲ್ಲಿ 'ದಿ ಮಹಾಭಾರತ'

ಅಂದಹಾಗೆ 'ದಿ ಮಹಾಭಾರತ' ನಿರ್ಮಾಪಕರಾದ ಬಿ.ಆರ್.ಶೆಟ್ಟಿ ಅವರು ಸಿನಿಮಾವನ್ನು ಪ್ರಮುಖವಾಗಿ ಕನ್ನಡ, ಇಂಗ್ಲಿಷ್, ಹಿಂದಿ,ತೆಲುಗು, ತಮಿಳಿನಲ್ಲಿ ಚಿತ್ರೀಕರಿಸುವ ಯೋಜನೆ ರೂಪಿಸಿದ್ದು, 10೦ ಭಾರತೀಯ ಭಾಷೆಗಳಿಗೆ ಡಬ್ ಮಾಡುವ ನಿರೀಕ್ಷೆ ಹೊಂದಿದ್ದಾರೆ.

'ದಿ ಮಹಾಭಾರತ'

'ದಿ ಮಹಾಭಾರತ'

ಚಿತ್ರವನ್ನು ಮಲಯಾಳಂ ಖ್ಯಾತ ಸಾಹಿತಿ ಜ್ಞಾನಪೀಠ ಹಾಗೂ ಪದ್ಮಭೂಷಣ ಪ್ರಶಸ್ತಿ ವಿಜೇತರಾದ ಎಂ.ಟಿ.ವಾಸುವೇವನ್ ನಾಯರ್ ಅವರ 'ರಂಡಾಮೂಳಮ್'(ಎರಡನೇ ಪರ್ವ) ಕೃತಿ ಆಧರಿತವಾಗಿ ನಿರ್ಮಿಸಲಿದ್ದು 2020 ಕ್ಕೆ ತೆರೆಗೆ ತರಲಿದ್ದಾರೆ.

More from Filmibeat

English summary
Malayalam actor Mohanlal, who will be seen playing the role of Bheem in a mega budget film 'The Mahabhath', is trolled by bollywood actor and producer Kamaal R Khan. He stated that Mohanlal is unfit for the role and also called him ‘Chota Bheem’.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X