»   » 1000 ಕೋಟಿ ವೆಚ್ಚದಲ್ಲಿ ಮೂಡಲಿದೆ 'ದಿ ಮಹಾಭಾರತ'

1000 ಕೋಟಿ ವೆಚ್ಚದಲ್ಲಿ ಮೂಡಲಿದೆ 'ದಿ ಮಹಾಭಾರತ'

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಭಾರತ ಚಿತ್ರರಂಗದಲ್ಲೇ ಬಹು ದೊಡ್ಡ ಮಟ್ಟದ ಬಜೆಟ್ ಸಿನಿಮಾ ಅಂದ್ರೆ ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ- ದಿ ಬಿಗಿನ್ನಿಂಗ್' ಮತ್ತು 'ಬಾಹುಬಲಿ- ದಿ ಕನ್ ಕ್ಲೂಶನ್' ಎಂಬ ಅಭಿಪ್ರಾಯವಿತ್ತು. ಆದರೆ ಈ ಸಿನಿಮಾಗಳ ದಾಖಲೆಗಳನ್ನು ಬ್ರೇಕ್ ಮಾಡಿ, ಭಾರತೀಯ ಸಿನಿಮಾ ರಂಗದಲ್ಲೇ ಹೊಸ ದಾಖಲೆ ನಿರ್ಮಿಸುವ 1000 ಕೋಟಿ ರೂ ವೆಚ್ಚದ ಸಿನಿಮಾ ನಿರ್ಮಾಣ ಮಾಡಲು ದುಬೈ ಉದ್ಯಮಿಯಾಗಿರುವ ಕನ್ನಡಿಗ ಬಿ.ಆರ್.ಶೆಟ್ಟಿ ಕಂಪನಿ ಬಂಡವಾಳ ಹೂಡುತ್ತಿದೆ.

  ಇನ್ನೊಂದು ವಿಶೇಷತೆ ಅಂದ್ರೆ ಬಿ.ಆರ್.ಶೆಟ್ಟಿ ನಿರ್ಮಾಣ ಮಾಡಬೇಕೆಂದಿರುವ ಭಾರತದ ಅತಿದೊಡ್ಡ ಚಲನಚಿತ್ರ 'ದಿ ಮಹಾಭಾರತ' ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ. 1000 ಕೋಟಿ ವೆಚ್ಚದಲ್ಲಿ ಮೂಡಿಬರಲಿರುವ ಈ ಸಿನಿಮಾ ಮೇಕಿಂಗ್ ದೃಷ್ಟಿಯಿಂದಲೇ ಹಲವು ವಿಶೇಷತೆಗಳನ್ನು ಹೊಂದಿದ್ದು, ನಿರ್ದೇಶಕರು ಯಾರು? ತಾರಾಬಳಗದಲ್ಲಿ ಯಾರೆಲ್ಲಾ ಇರಲಿದ್ದಾರೆ? ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ..

  1000 ಕೋಟಿ ಬಜೆಟ್ ಚಿತ್ರಕ್ಕೆ ನಿರ್ದೇಶಕ ಯಾರು?

  ಯುಎಇ ಉದ್ಯಮಿ ಬಿ.ಆರ್.ಶೆಟ್ಟಿ ಅವರು 1000 ಕೋಟಿ ಬಂಡವಾಳ ಹೂಡುತ್ತಿರುವ 'ದಿ ಮಹಾಭಾರತ' ಚಿತ್ರಕ್ಕೆ ಜಾಹೀರಾತು ಫಿಲ್ಮ್ ಮೇಕರ್ ವಿ.ಎ.ಶ್ರೀಕುಮಾರ್ ಮೆನನ್ ಆಕ್ಷನ್ ಕಟ್ ಹೇಳಲಿದ್ದಾರೆ.

  2018 ರಿಂದ ಚಿತ್ರೀಕರಣ ಆರಂಭ

  ಬಿ.ಆರ್.ಶೆಟ್ಟಿ ಅವರು 'ದಿ ಮಹಾಭಾರತ' ಚಿತ್ರವನ್ನು ಎರಡು ಭಾಗಗಳಲ್ಲಿ ನಿರ್ಮಾಣ ಮಾಡಲಿದ್ದು, 2018 ರಿಂದ ಚಿತ್ರೀಕರಣ ಆರಂಭವಾಗಲಿದೆ. 2020 ರ ವೇಳೆಗೆ ಸಿನಿಮಾ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಹಾಗೂ ಚಿತ್ರದ ಎರಡನೇ ಭಾಗವನ್ನು 'ದಿ ಮಹಾಭಾರತ' ಮೊದಲನೇ ಭಾಗ ಬಿಡುಗಡೆ ಮಾಡಿದ 90 ದಿನಗಳ ನಂತರ ರಿಲೀಸ್ ಮಾಡಲಿದೆ.

  ಭಾರತೀಯ ಪ್ರಮುಖ ಭಾಷೆಗಳಲ್ಲಿ 'ದಿ ಮಹಾಭಾರತ'

  'ದಿ ಮಹಾಭಾರತ'ವನ್ನು ಇಂಗ್ಲೀಷ್, ಹಿಂದಿ, ಮಲಯಾಳಂ, ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ನಿರ್ಮಿಸಲಿದ್ದು ಭಾರತೀಯ ಇತರೆ ಭಾಷೆಗಳಿಗೆ ಮತ್ತು ವಿದೇಶಿ ಪ್ರಮುಖ ಭಾಷೆಗಳಿಗೆ ಡಬ್ ಮಾಡಲಾಗುತ್ತದೆ ಎಂದು ಬಿ.ಆರ್.ಶೆಟ್ಟಿ ಅವರ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

  'ದಿ ಮಹಾಭಾರತ'ದ ತಾರಾಬಳಗದ ವಿಶೇಷತೆ

  'ದಿ ಮಹಾಭಾರತ' ಸಿನಿಮಾ ಬಗೆಗಿನ ಕುತೂಹಲಕಾರಿ ವಿಷಯ ಅಂದ್ರೆ ತಾರಾಬಳಗದಲ್ಲಿ ಜಾಗತಿಕ ಸಿನಿಮಾರಂಗದ ಖ್ಯಾತ ನಟ-ನಟಿಯರು ಕಾಣಿಸಿಕೊಳ್ಳಲಿದ್ದು, ಭಾರತ ಚಿತ್ರರಂಗದ ಪ್ರಖ್ಯಾತರು ಮತ್ತು ಹಾಲಿವುಡ್ ಚಿತ್ರರಂಗದ ಪ್ರಮುಖರು ಅಭಿನಯಿಸಲಿದ್ದಾರೆ.

  ತಾಂತ್ರಿಕ ವಿಭಾಗದಲ್ಲಿ ಪ್ರಶಸ್ತಿ ವಿಜೇತರು

  'ದಿ ಮಹಾಭಾರತ' ಸಿನಿಮಾದಲ್ಲಿ ನಿರ್ದೇಶಕ ವಿ.ಎ.ಶ್ರೀಕುಮಾರ್ ಹೊರತುಪಡಿಸಿ ಸಂಕಲನ, ಗ್ರಾಫಿಕ್, ಕ್ಯಾಮೆರಾ ವರ್ಕ್ ಇತರೆ ಎಲ್ಲಾ ತಾಂತ್ರಿಕ ವಿಭಾಗದಲ್ಲಿ ಪ್ರಪಂಚದ ಸಿನಿಮಾ ರಂಗದಲ್ಲಿ ಪ್ರಖ್ಯಾತಿಗೊಂಡ ಮತ್ತು ಹಲವು ಅಕಾಡೆಮಿ ಪ್ರಶಸ್ತಿಗಳನ್ನು ಪಡೆದವರು ಕೆಲಸ ಮಾಡಲಿದ್ದಾರೆ.

  ಚಿತ್ರಕ್ಕೆ ಎಂ.ಟಿ.ವಾಸುದೇವನ್ ಅವರ ಕೃತಿ ಅಳವಡಿಕೆ

  1000 ಕೋಟಿ ವೆಚ್ಚದ 'ದಿ ಮಹಾಭಾರತ' ಚಿತ್ರಕ್ಕೆ ಮಲಯಾಳಂ ಖ್ಯಾತ ಸಾಹಿತಿ ಜ್ಞಾನಪೀಠ ಹಾಗೂ ಪದ್ಮಭೂಷಣ ಪ್ರಶಸ್ತಿ ವಿಜೇತರಾದ ಎಂ.ಟಿ.ವಾಸುವೇವನ್ ನಾಯರ್ ಅವರ 'ರಂಡಾಮೂಳಮ್'(ಎರಡನೇ ಪರ್ವ) ಕೃತಿಯನ್ನು ಅಳವಡಿಸಿಕೊಳ್ಳುವ ಸಾಧ್ಯತೆ ಇದೆ.

  'ದಿ ಮಹಾಭಾರತ'ದಲ್ಲಿ ಭೀಮ ಪಾತ್ರಕ್ಕೆ ಮಾಲಿವುಡ್ ಸೂಪರ್ ಸ್ಟಾರ್

  'ದಿ ಮಹಾಭಾರತದ' ಚಿತ್ರದಲ್ಲಿ ಭೀಮನ ಪಾತ್ರವನ್ನು ಮಾಲಿವುಡ್ ಎವರ್ ಗ್ರೀನ್ ನಟ ಮೋಹನ್ ಲಾಲ್ ನಿರ್ವಹಿಸುವ ಸಾಧ್ಯತೆಗಳಿವೆ ಎಂದು ಮೂಲಗಳ ಪ್ರಕಾರ ತಿಳಿದಿದೆ.

  ಮೇಕ್ ಇನ್ ಇಂಡಿಯಾ ಪ್ರಾಜೆಕ್ಟ್

  'ಯುಎಇ ಎಕ್ಸ್‌ಚೇಂಜ್ ಮತ್ತು ಎನ್ಎಂಸಿ ಹೆಲ್ತ್ ಕೇರ್' ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಬಿ.ಆರ್.ಶೆಟ್ಟಿ ಅವರು ಭಾರತದ ಸಂಸ್ಕೃತಿ ಮತ್ತು ಶ್ರೀಮಂತಿಕೆಯನ್ನು ಪೌರಾಣಿಕ ಕಥೆ ಮೂಲಕ ಹೇಳುವ ಆಸಕ್ತಿ ಹೊಂದಿದ್ದು, ಈ ಸಿನಿಮಾವನ್ನು ನೂರು ಭಾಷೆಗಳಿಗೆ ಡಬ್ ಮಾಡಲಾಗುತ್ತದೆ. ಅಲ್ಲದೇ 300 ಕೋಟಿ ಜನರಿಗೆ ಸಿನಿಮಾ ತಲುಪಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

  'ಮಹಾಭಾರತ'ದ ಬಗ್ಗೆ ರಾಜಮೌಳಿ ಸಹ ಪ್ಲಾನ್ ಮಾಡಿದ್ದಾರೆ

  'ದಿ ಮಹಾಭಾರತ' ಒಂದು ಕಡೆಯಾದರೆ ಇನ್ನೊಂದು ಕಡೆ ಎಸ್.ಎಸ್.ರಾಜಮೌಳಿ ಅವರು ಸಹ ಅಮೀರ್ ಖಾನ್ ಮತ್ತು ಅಬಿತಾಬ್ ಬಚ್ಚನ್ ಅವರ ಮುಖ್ಯ ಭೂಮಿಕೆಯಲ್ಲಿ 'ಮಹಾಭಾರತ' ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಅಮೀರ್ ಖಾನ್ ಜೊತೆ ರಾಜಮೌಳಿ ರವರು ಈಗಾಗಲೇ ಮಾತುಕತೆ ಸಹ ನಡೆಸಿದ್ದಾರೆ.['ಮಹಾಭಾರತ'ದಲ್ಲಿ ಅಮೀರ್ ಖಾನ್: ರಾಜಮೌಳಿ ಎಕ್ಸ್ ಕ್ಲೂಸಿವ್ ಮಾಹಿತಿ ]

  English summary
  A UAE based Indian businessman is investing Rs 1,000 crore (USD 150 million) to produce Indias biggest ever motion picture, The Mahabharata. This magnum opus is being directed by noted ad man and advertising film maker V A Shrikumar Menon.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more