ಬಾಯ್‌ಫ್ರೆಂಡ್‌ಗಾಗಿ ಆಸ್ಪತ್ರೆ ಬೆಡ್ ಮೇಲಿದ್ದ ಪತಿಯನ್ನೇ ಬಿಟ್ಟಿ ಓಡಿ ಹೋಗಿದ್ದ ನಟಿ.. ಆತನೂ ಕೈ ಕೊಟ್ಮೇಲೆ ನಡೆದಿದ್ದೇನು? ? ?
ಸಿನಿಮಾ ಮಂದಿಯ ಬಾಳಲ್ಲಿ ಏನೇನೋ ನಡೆದಿರುತ್ತೆ. ಅವರ ವೃತ್ತಿ ಬದುಕು ಮತ್ತು ವೈಯಕ್ತಿಕ ಬದುಕು ಒಂದಕ್ಕೊಂದು ಸಂಬಂಧವೇ ಇರೋದಿಲ್ಲ. ಇವರ ಬಾಳಲ್ಲಿ ಲವ್,ಬ್ರೇಕಪ್, ಧೋಕಾ ಮಾಮೂಲಿ. ಅದರಲ್ಲೂ ಇತ್ತೀಚೆಗೆ ಸೆಲೆಬ್ರೆಟಿಗಳ ಜೀವನದಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚಾಗಿದೆ. ಹೀಗೆ ಒಂದಲ್ಲ ಒಂದು ಸಂಗತಿಗಳು ಇವರನ್ನು ಸುತ್ತುವರೆದಿರುತ್ತವೆ.
ಕೆಲವೊಮ್ಮೆ ತಮ್ಮ ಬದುಕಿನಲ್ಲಿ ನಡೆದು ಹೋದ ಕಹಿ ಘಟನೆಗಳನ್ನು ಓಪನ್ ಆಗಿ ಶೇರ್ ಮಾಡಿಕೊಂಡ ಉದಾಹರಣೆಗಳು ಕೂಡ ಇವೆ. ಕೆಲವು ಪ್ರಕರಣಗಳು ಗಂಭೀರವಾಗಿರುತ್ತೆ. ತಾವು ಮಾಡಿದ ತಪ್ಪನ್ನು ಮುಂದಿನ ದಿನಗಳಲ್ಲಿ ನೆನಪಿಸಿಕೊಂಡು ಪಶ್ಚಾತಾಪ ಪಟ್ಟಿರುವ ಸಾಕಷ್ಟು ಉದಾಹರಣೆಗಳು ಕೂಡ ಇವೆ. ಕೆಲವೊಮ್ಮೆ ಕಣ್ಣೀರು ಹಾಕಿದ್ದೂ ಕೂಡ ಇದೆ.

ಹಿಂದಿ ಕಿರುತೆರೆಯಲ್ಲಿ ಮಿಂಚುತ್ತಿರುವ ಈ ಸ್ಟಾರ್ ನಟಿಯ ಬಾಳಿನಲ್ಲೂ ಒಂದು ಕಹಿ ಘಟನೆ ನಡೆದಿತ್ತು. ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ತನ್ನ ಪತಿಯನ್ನು ಹಾಗೂ ಮಗಳನ್ನು ಬಿಟ್ಟು ಓಡಿ ಹೋಗಿದ್ದರು. ಅದು ಒಬ್ಬ ಬಾಯ್‌ಫ್ರೆಂಡ್‌ಗಾಗಿ. ಆ ಬಳಿಕ ತನ್ನ ಜೀವನದಲ್ಲಿ ಏನೆಲ್ಲ ಆಯ್ತು ಅನ್ನೋದನ್ನು ಈ ನಟಿಯೇ ಹೇಳಿಕೊಂಡಿದ್ದರು. ಅಷ್ಟಕ್ಕೂ ಈ ನಟಿ ಯಾರು? ಅಂತಹದ್ದೇನಾಗಿತ್ತು? ಗಂಡ ಅನಾರೋಗ್ಯದಿಂದ ಬಳಲುತ್ತಿರುವಾಗ ಬಾಯ್‌ಫ್ರೆಂಡ್‌ಗಾಗಿ ಓಡಿ ಹೋಗುವಂತಹದ್ದು ಏನಿತ್ತು? ಅನ್ನೋದನ್ನು ವಿವರಿಸಿದ್ದಾರೆ.
ಹಿಂದಿ ಕಿರುತೆರೆ ಜಗತ್ತಿನಲ್ಲಿ ಕಾಮ್ಯಾ ಪಂಜಾಬಿ ತುಂಬಾನೇ ಚಿರಪರಿಚಿತ ನಟಿ. ತಮ್ಮ ಅಭಿನಯದ ಜೊತೆ ಜೊತೆಗೆ ವೈಯಕ್ತಿಕ ಜೀವನದಿಂದಲೂ ಆಗಾಗ ಸಿಕ್ಕಾಪಟ್ಟೆ ಸುದ್ದಿಯಲ್ಲಿ ಇರುತ್ತಾರೆ. ಕಾಮ್ಯಾ ಪಂಜಾಬಿ ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡಿರಬಹುದು. ಆದರೆ, ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ನೋವಿನ ಅಧ್ಯಾಯಗಳಿವೆ. ಇದರಲ್ಲಿ ತಮ್ಮ ಮೊದಲನೇ ಮದುವೆಯ ಕಹಿ ಘಟನೆಯನ್ನು ಈ ಹಿಂದಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
2003ರಲ್ಲಿ ಬಂಟಿ ನೇಗಿ ಎಂಬುವವರ ಜೊತೆ ಕಾಮ್ಯಾ ಪಂಜಾಬಿ ಮೊದಲ ವಿವಾಹವಾಗಿದ್ದರು. ಮದುವೆಯಾದ ಒಂದು ವರ್ಷದ ನಂತರ ಇವರ ಸಂಬಂಧದಲ್ಲಿ ಬಿರುಕು ಮೂಡಿತ್ತು. ಆದರೂ ಇಬ್ಬರೂ ಬೇರೆಯಾಗಲಿಲ್ಲ. ತಮ್ಮ ಸಂಬಂಧವನ್ನು ಮುಂದುವರೆಸಿದ್ದರು. ಸುಮಾರು ಹತ್ತು ವರ್ಷಗಳ ಕಾಲ ಈ ಸಂಬಂಧವನ್ನು ಉಳಿಸಿಕೊಳ್ಳಲು ಪ್ರಯತ್ನಪಟ್ಟರು. ಆದರೆ, 2013ರಲ್ಲಿ ಬಂಟಿ ನೇಗಿಯವರಿಗೆ ವಿಚ್ಛೇದನ ನೀಡಿದರು. ಆ ಸಮಯದಲ್ಲಿ ಇವರು ವಿಚ್ಛೇದನ ನೀಡಿದ್ದು ಸಾಕಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು ಕಾಮ್ಯಾ ಅವರೇ ಹೇಳಿಕೊಂಡಂತೆ. ತಮ್ಮ ಪತಿ ಹಾಸಿಗೆ ಹಿಡಿದಿದ್ದರು. ಆ ವೇಳೆ ಈ ನಟಿ ಸಿಕ್ಕಾಪಟ್ಟೆ ಮನನೊಂದು ಆ ಸ್ಥಿತಿಯಲ್ಲಿ ಗಂಡನನ್ನು ಬಿಟ್ಟು ಓಡಿ ಹೋಗಿದ್ದರು.
ಭಾಯ್‌ಫ್ರೆಂಡ್‌ಗಾಗಿ ಮೊದಲ ಪತಿಗೆ ವಿಚ್ಛೇದನ ನೀಡಿದ್ದಾರೆಂದು ಚರ್ಚೆಯಾಗಿತ್ತು. ಹೀಗೆ ಚರ್ಚೆಯಾಗುತ್ತಿರುವಾಗಲೇ ಕಾಮ್ಯಾ ಪಂಜಾಬಿ ನಟ ಕರಣ್ ಪಟೇಲ್ ಅವರೊಂದಿಗೆ ನಾಲ್ಕು ವರ್ಷಗಳ ಕಾಲ ಡೇಟಿಂಗ್ ಮಾಡಿದರು. ಆದರೆ, ನಟ ಕರಣ್ ಪಟೇಲ್ ತಮಗೆ ಮೋಸ ಮಾಡುತ್ತಿದ್ದಾರೆಂದು ಗೊತ್ತಾದಾಗ, ಕಾಮ್ಯಾ ಅವರೊಂದಿಗೆ ಬ್ರೇಕಪ್ ಮಾಡಿಕೊಂಡರು. ಕಾಮ್ಯಾರಿಂದ ಬೇರೆಯಾದ ನಾಲ್ಕು ದಿನಗಳಲ್ಲೇ ಕರಣ್ ಮದುವೆಯಾಗುವುದಾಗಿ ಘೋಷಿಸಿದ್ದರು.
ಈ ಸುದ್ದಿ ನಟಿ ಕಾಮ್ಯಾ ಪಂಜಾಬಿ ತೀವ್ರ ನೋವುಂಟು ಮಾಡಿತ್ತು. ಈ ಆಘಾತದಿಂದ ಹೊರಬರಲು ಅವರಿಗೆ ಸುಮಾರು ಎರಡೂವರೆ ವರ್ಷ ಬೇಕಾಯಿತು. ಆ ನಂತರ ಕಾಮ್ಯಾ ಬಾಳಲ್ಲಿ ಶಲಭ್ ಪ್ರವೇಶ ಮಾಡಿದರು. 2020ರ ಫೆಬ್ರವರಿ 10ರಂದು ಕಾಮ್ಯಾ ಮತ್ತು ಶಲಭ್ ವೈವಾಹಿಕ ಜೀವನ ನಡೆಸಿದ್ದರು. ಪ್ರಸ್ತುತ, ಕಾಮ್ಯಾ ಪಂಜಾಬಿ ತಮ್ಮ ಪತಿ ಶಲಭ್ ಅವರೊಂದಿಗೆ ಉತ್ತಮ ಜೀವನ ನಡೆಸುತ್ತಿದ್ದಾರೆ.


Click it and Unblock the Notifications











