ಆಲಿಯಾ ಭಟ್ ಚಿತ್ರದ ವಿರುದ್ಧ ಕಂಗನಾ ರಣಾವತ್ ಕಿಡಿ
ಬಾಲಿವುಡ್ ನಟಿ ಕಂಗನಾ ರಣಾವತ್ ಸದಾ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ಕೇವಲ ತಮ್ಮ ವಿಚಾರಕ್ಕೆ, ತಮ್ಮ ಸಿನಿಮಾ ವಿಚಾರಕ್ಕೆ ಸಂಬಂಧ ಪಟ್ಟ ಹಾಗೆ ಮಾತ್ರ ಅಲ್ಲ. ಬೇರೆಯವರ ವಿಚಾರ ಮತ್ತು ಬೇರೆ ಸಿನಿಮಾಗಳ ವಿಚಾರವಾಗಿಯೇ ಕಂಗನಾ ಅವರು ಸುದ್ದಿ ಆಗುತ್ತೇ ಇರುತ್ತಾರೆ. ಪ್ರತಿ ಬಾರಿ ಆಕೆಯ ಹೆಸರು ಮುನ್ನೆಲೆಗೆ ಬಂದಾಗ ಅದ್ಯಾರ ಬಗ್ಗೆ ಕಂಗನಾ ಮಾತ್ನಾಡಿದ್ದಾರೆ, ಕಿಡಿಕಾರಿದ್ದಾರೆ ಅಥವಾ ಮೆಚ್ಚಿಕೊಂಡಿದ್ದಾರೆ ಎನ್ನುವ ಕುತೂಹಲ ಸಹಜವಾಗಿಯತೇ ಮೂಡುತ್ತದೆ.
ಈ ಬಾರಿ ಕಂಗನಾ ಆಲಿಯಾ ಭಟ್ ಸಿನಿಮಾ ವಿಚಾರವಾಗಿ ಮಾತನಾಡಿ ಸುದ್ದಿ ಆಗಿದ್ದಾರೆ. ಆಲಿಯಾ ಭಟ್ ಅಭಿನಯದ "ಗಂಗೂಬಾಯಿ ಕಾಠಿಯಾವಾಡಿ" ರಿಲೀಸ್‌ಗೆ ರೆಡಿಯಾಗಿದೆ. ಈಗಾಗಲೇ ಚಿತ್ರ ದೊಡ್ಡ ಮಟ್ಟದ ಕ್ರೇಜ್ ಹುಟ್ಟು ಹಾಕಿದೆ. ಈ ಚಿತ್ರ ಫೆಬ್ರವರಿ 25ರಂದು ತೆರೆಗೆ ಬರುತ್ತಿದೆ.
ದೀಪಿಕಾ 'ಗೆಹ್ರೈಯಾನ್' ಕೆಟ್ಟ ಮತ್ತು ಅಶ್ಲೀಲ ಸಿನಿಮಾ ಎಂದು ಟೀಕಿಸಿದ ಕಂಗನಾ!
ಆದರೆ ಈ ನಡುವೆ ಕಂಗನಾಳ ಕೆಂಗಣ್ಣಿಗೆ ಆಲಿಯಾ ಭಟ್ ಗುರಿಯಾಗಿದ್ದಾಳೆ. ಆಲಿಯಾ ಮಾಡಿದ್ದು ಸರಿಯಲ್ಲ ಎಂದು ಕಂಗನಾ ಕಿಡಿ ಕಾರಿದ್ದಾರೆ. ಅಷ್ಟಕ್ಕೂ ಆಲಿಯಾ ಮಾಡಿದ ತಪ್ಪೇನು? ಕಂಗನಾ ಹೇಳುತ್ತಲಿರುವುದೇನು ಎನ್ನುವುದನ್ನು ಮುಂದೆ ಓದಿ...

ವೈರಲ್ ಡೈಲಾಗ್ ವಿರುದ್ಧ ಕಂಗನಾ ಗುಡುಗು!
ಇತ್ತೀಚೆಗೆ "ಗಂಗೂಬಾಯಿ ಕಾಠಿಯಾವಾಡಿ" ಸಿನಿಮಾದಲ್ಲಿ ಬರುವ ಡೈಲಾಗ್ ದೃಶ್ಯ ಒಂದನ್ನು ಆಲಿಯಾ ಭಟ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಕಷ್ಟು ಆಲಿಯಾ ಅಭಿಮಾನಿಗಳು, ಸಿನಿಮಾ ಪ್ರೇಮಿಗಳು ಈ ಡೈಲಾಗ್ ಅನುಕರಣೆ ಮಾಡುತ್ತಿದ್ದಾರೆ. ಆಲಿಯಾ ಭಟ್ ರೀತಿಯೇ ವಿಡಿಯೋ ಮಾಡಿ ಹಂಚಿಕೊಳ್ಳುತ್ತಲಿದ್ದಾರೆ. ಇದೇ ಡೈಲಾಗ್ ವಿಡಿಯೋವನ್ನು ಪುಟ್ಟ ಬಾಲಕಿ ಒಬ್ಬಳು ಮರು ಸೃಷ್ಟಿ ಮಾಡಿದ್ದಾಳೆ. ಆಲಿಯಾಳನ್ನು ಈ ಬಾಲಕಿ ಅನುಕರಣೆ ಮಾಡಿದ್ದಕ್ಕೆ ಬಾಲಿವುಡ್ ನಟಿ ಕಂಗನಾ ರಣಾವತ್ ಟೀಕೆ ಮಾಡಿದ್ದಾರೆ.
ಆಲಿಯಾಳಂತೆ ಸಿಗರೇಟು ಹಿಡಿದ ಪುಟ್ಟ ಪೋರಿ!
ಕಿಯಾರಾ ಖನ್ನಾ ಎಂಬ ಬಾಲಕಿ "ಗಂಗೂಬಾಯಿ ಕಾಠಿಯಾವಾಡಿ" ಚಿತ್ರದ ವೈರಲ್ ವಿಡಿಯೋವನ್ನು ಅನುಕರಿಸಿದ್ದಾಳೆ. ಈ ಪೋರಿ ಚಿತ್ರದಲ್ಲಿ ಆಲಿಯಾ ಭಟ್ ಹಾಕಿರುವ ರೀತಿಯಲ್ಲೇ ಕಾಸ್ಟ್ಯೂಮ್ ಹಾಕಿಕೊಂಡು, ರೀಲ್ಸ್ ಮಾಡಿದ್ದಾಳೆ. ಅಷ್ಟೇ ಅಲ್ಲ, ಈ ದೃಶ್ಯದಲ್ಲಿ ಆಲಿಯಾ ಬಾಯಿಗೆ ಬೀಡಿ ಇಟ್ಟಂತೆ ಬಾಲಕಿ ಕೂಡ ಬಾಯಿಗೆ ಬೀಡಿ ಇಟ್ಟುಕೊಂಡಿದ್ದಾಳೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಅನೇಕರು ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದರು. ಆದರೆ ಈ ಬಗ್ಗೆ ಕಂಗನಾ ಅಸಮಾಧಾನ ಹೊರಹಾಕಿದ್ದಾರೆ.

ಮಕ್ಕಳು ಬೀಡಿ ಹಿಡಿದು, ವೇಶ್ಯೆ ಪಾತ್ರವನ್ನು ಅನುಕರಣೆ ಮಾಡುದು ಎಷ್ಟು ಸರಿ: ಕಂಗನಾ!
ಕಂಗನಾ ತಮ್ಮ ಪೋಸ್ಟ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. "ಚಿಕ್ಕ ಮಕ್ಕಳು ಬಾಯಲ್ಲಿ ಬೀಡಿ ಇಟ್ಟುಕೊಂಡು, ವೇಶ್ಯೆ ಪಾತ್ರವನ್ನು ಅನುಕರಣೆ ಮಾಡುವುದು ಎಷ್ಟು ಸರಿ?. ಇಷ್ಟು ಚಿಕ್ಕ ವಯಸ್ಸಿಗೆ ಅವಳ ಮನಸ್ಸಿನಲ್ಲಿ ಈ ರೀತಿ ವಿಚಾರ ತುಂಬುವುದು ಸರಿಯೇ?, ಬೇರೆ ಮಕ್ಕಳು ಕೂಡ ಇವರನ್ನೇ ಹಿಂಬಾಲಿಸುತ್ತಿರುತ್ತಾರೆ." ಎಂದು ಬರೆದುಕೊಂಡು, ಈ ಪೋಸ್ಟನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿಗೆ ಟ್ಯಾಗ್ ಮಾಡಿದ್ದಾರೆ. ಚಿತ್ರದಲ್ಲಿ ಗಂಗೂಬಾಯಿ ವೇಶ್ಯೆ ಆಗಿರುತ್ತಾಳೆ. ನಂತರ ಅವರು ಕಾಮಾಟಿಪುರದ ಡಾನ್ ಆಗಿ ಬೆಳೆಯುತ್ತಾಳೆ. ಇದೇ ಕಥೆ ಆಧರಿಸಿ ಸಿನಿಮಾ ಮಾಡಲಾಗಿದೆ. ಈ ರೀತಿಯ ಕಥೆಯುಳ್ಳ ಸಿನಿಮಾಗಳ ಡೈಲಾಗ್ಗಳನ್ನು ಬಾಲಕಿ ಕಿಯಾರಾ ಕಾಪಿ ಮಾಡಿರುವುದಕ್ಕೆ ಕಂಗನಾ ಅಸಮಾಧಾನ ಹೊರಹಾಕಿದ್ದಾರೆ.

ದೀಪಿಕಾ ಪಡುಕೋಣೆ ಚಿತ್ರವನ್ನು ಟೀಕಿಸಿದ್ದ ಕಂಗನಾ!
ದೀಪಿಕಾ ಪಡುಕೋಣೆ ನಟನೆಯ "ಗೆಹ್ರೈಯಾನ್" ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರದ ಬಗ್ಗೆಯೂ ನಟಿ ಕಂಗನಾ ಟೀಕೆ ಮಾಡಿದ್ದರು. ಇದೊಂದು ಕೆಟ್ಟ ಸಿನಿಮಾ ಎಂದು ಅವರು ಹೇಳಿದ್ದರು. ಜೊತೆಗೆ "ನಾನೂ ಕೂಡ ಈ ಕಾಲದವಳು, ಈ ಬಗೆಯ ರೊಮ್ಯಾನ್ಸ್ ಅನ್ನು ಗುರುತಿಸಿ, ಅರ್ಥ ಮಾಡಿಕೊಳ್ಳ ಬಲ್ಲೆ. ಹೊಸ ಯುಗದ ಸಿನಿಮಾ ಎಂಬ ಹೆಸರಿನಲ್ಲಿ ತ್ಯಾಜ್ಯವನ್ನೆಲ್ಲ ಮಾರಾಟ ಮಾಡಬೇಡಿ. ಕೆಟ್ಟ ಸಿನಿಮಾ ಯಾವಾಗಲೂ ಕೆಟ್ಟ ಸಿನಿಮಾವೇ ಆಗಿರುತ್ತದೆ. ಎಷ್ಟೇ ಪ್ರಮಾಣದಲ್ಲಿ ಅಶ್ಲೀಲತೆ ಮತ್ತು ಮೈ ತೋರಿಸಿದರೂ ಈ ಸಿನಿಮಾವನ್ನು ಗೆಲ್ಲಿಸಲು ಸಾಧ್ಯವಿಲ್ಲ. ಇದು ಸತ್ಯ." ಎಂದು ಕಂಗನಾ ರಣಾವತ್ ಕಮೆಂಟ್ ಮಾಡಿದ್ದರು.


Click it and Unblock the Notifications











