ದೀಪಿಕಾ 'ಗೆಹ್ರೈಯಾನ್' ಕೆಟ್ಟ ಮತ್ತು ಅಶ್ಲೀಲ ಸಿನಿಮಾ ಎಂದು ಟೀಕಿಸಿದ ಕಂಗನಾ!

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಮುಂದಿನ ಚಿತ್ರ 'ಗೆಹ್ರೈಯಾನ್' ಸಲುವಾಗಿ​​ ಸುದ್ದಿಯಲ್ಲಿದ್ದಾರೆ. ಈ ಚಿತ್ರ ಈಗಾಗಲೇ ಸಾಕಷ್ಟು ಚರ್ಚೆ ಮಾಡಿದೆ. ನಟಿ ದೀಪಿಕಾ ಹಿಂದೆಂದೂ ಕಾಣಿಸಿಕೊಂಡಿರದಷ್ಟು ಬೋಲ್ಡ್ ಆಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರಕ್ಕಾಗಿ ಹಲವು ವರ್ಷಗಳ ಬಳಿಕ ದೀಪಿಕಾ ಬಿಕಿನಿ ಕೂಡ ಧರಿಸಿದ್ದಾರೆ. ಚಿತ್ರದಲ್ಲಿ ಲಿಪ್ ಲಾಕ್, ರೊಮ್ಯಾಂಟಿಕ್ ಸೀನ್​ಗಳು ಹೆಚ್ಚಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಇದು ಒಂದಷ್ಟು ಮಂದಿಯ ಮನಸ್ಸು ಗೆದ್ದಿದ್ದರೆ, ಮತ್ತೊಂದಿಷ್ಟು ಮಂದಿ ಈ ಬಗ್ಗೆ ಟೀಕೆ ವ್ಯಕ್ತ ಪಡಿಸುತ್ತಿದ್ದಾರೆ.

ಸಿನಿಮಾದಲ್ಲಿ ಕಿಸ್ ಮಾಡಲು ಪತಿಯ ಪರ್ಮೀಷನ್ ಪಡೆಯುತ್ತಾರಾ ದೀಪಿಕಾ ಪಡುಕೋಣೆ?
'ಗೆಹ್ರೈಯಾನ್' ನಲ್ಲಿ ದೀಪಿಕಾ ಪಡುಕೋಣೆ ಹಾಟ್‌ನೆಸ್‌ನ ಮಿತಿ ಮೀರಿದ್ದಾರೆ ಎನ್ನುವಂತಹ ಕಮೆಂಟ್‌ಗಳು ಕೂಡ ಬರುತ್ತಿದೆ. ಇದೀಗ ಬಾಲಿವುಡ್ ನಟಿ ಕಂಗನಾ ಕೂಡ ಈ ಸಿನಿಮಾದ ಬಗ್ಗೆ ಟೀಕೆ ಮಾಡಿದ್ದಾರೆ. ಅವರು ಏನು ಹೇಳಿದ್ದಾರೆ ಬನ್ನಿ ನೋಡೋಣ.

ಅನಿಸಿದ್ದನ್ನು ಸದಾ ಮುಕ್ತವಾಗಿ ಮಾತು ವ್ಯಕ್ತಪಡಿಸುವ ನಟಿ ಕಂಗನಾ

ಅನಿಸಿದ್ದನ್ನು ಸದಾ ಮುಕ್ತವಾಗಿ ಮಾತು ವ್ಯಕ್ತಪಡಿಸುವ ನಟಿ ಕಂಗನಾ

ಬಾಲಿವುಡ್ ನಟಿ ಕಂಗನಾ ರಣಾವತ್ ತನ್ನ ಬೋಲ್ಡ್ ಹಾಗೂ ಖಡಕ್ ಹೇಳಿಕೆಗಳಿಂದಾಗಿಯೇ ಸಾಕಷ್ಟು ಸುದ್ದಿಯನ್ನು ಮಾಡಿರುವ ನಟಿಯಾಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ಕಂಗನಾ ಹೇಳುವ ಮಾತುಗಳು ದೊಡ್ಡ ಚರ್ಚೆ ಮತ್ತು ವಿವಾದಗಳಿಗೆ ಕಾರಣವಾಗುತ್ತದೆ. ತಮಗೆ ಅನಿಸಿದ್ದನ್ನು ಸದಾ ಮುಕ್ತವಾಗಿ ಮಾತು ವ್ಯಕ್ತಪಡಿಸುವ ನಟಿ ಕಂಗನಾ ರಣಾವತ್ ಬಾಲಿವುಡ್‌ನ ಯಾವ ನಟರನ್ನು ಕೂಡಾ ಎದುರು ಹಾಕಿಕೊಳ್ಳುವುದಕ್ಕೆ ಹಿಂಜರಿಯುವುದಿಲ್ಲ. ನೇರವಾಗಿ ಟೀಕಾಪ್ರಹಾರವನ್ನು ಮಾಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ.

ಸಿನಿಮಾದ ಕುರಿತಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ ನಟಿ

ಸಿನಿಮಾದ ಕುರಿತಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ ನಟಿ

ಕೆಲವೇ ದಿನಗಳ ಹಿಂದೆಯಷ್ಟೇ ನಟಿ ದೀಪಿಕಾ ಪಡುಕೋಣೆ,‌ ಅನನ್ಯ ಪಾಂಡೆ,‌ ಸಿದ್ದಾಂತ್ ಚತುರ್ವೇದಿ ಧೈರ್ಯ ಕರ್ವ, ಹಿರಿಯ ನಟ ನಾಸೀರುದ್ದಿನ್ ಶಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿದ್ದ ಶಕುನ್ ಬಾತ್ರಾ ನಿರ್ದೇಶನ ಮಾಡಿರುವ ಗೆಹರಾಯಿಯಾ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾ ನೋಡಿದ ನಂತರ ನಟಿ ಕಂಗನಾ ರಣಾವತ್ ತಮ್ಮದೇ ಆದ ಕಟುವಾದ ಶೈಲಿಯಲ್ಲಿ ಸಿನಿಮಾದ ಕುರಿತಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಕಟುವಾಗಿ ಸಿನಿಮಾವನ್ನು ಟೀಕೆ ಮಾಡಿದ ಕಂಗನಾ

ಕಟುವಾಗಿ ಸಿನಿಮಾವನ್ನು ಟೀಕೆ ಮಾಡಿದ ಕಂಗನಾ

ಕಂಗನಾ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿ, ಗೆಹರಾಯಿಯಾ ಸಿನಿಮಾದ ಕುರಿತಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಕಂಗನಾ, "ನಾನು ಕೂಡ ಈ ಕಾಲದವಳೆ, ಇಂತಹ ರೋಮ್ಯಾನ್ಸ್ ಅನ್ನು ಅರ್ಥಮಾಡಿಕೊಳ್ಳಬಲ್ಲೆ. ಆದರೆ ಸಹಸ್ರಮಾನದ ಸಿನಿಮಾ, ಈ ಕಾಲದ ಸಿನಿಮಾ, ನಗರ ಪ್ರದೇಶದ ಸಿನಿಮಾ ಎಂದು ಉಲ್ಲೇಖ ಮಾಡುತ್ತಾ ಕಸವನ್ನು ಮಾರಾಟ ಮಾಡಬೇಡಿ" ಎಂದು ಗೆಹರಾಯಿಯಾ ಸಿನಿಮಾದ ಕುರಿತಾಗಿ ಟೀಕೆ ಮಾಡಿದ್ದಾರೆ.

ಇದರಲ್ಲಿ ಯಾವುದೇ ರೀತಿಯ ಗಹನವಾದ ವಿಷಯವಿಲ್ಲ!

ಇದರಲ್ಲಿ ಯಾವುದೇ ರೀತಿಯ ಗಹನವಾದ ವಿಷಯವಿಲ್ಲ!

ಎಷ್ಟು ಪ್ರಮಾಣದಲ್ಲಿ ಅಶ್ಲೀಲತೆ ಮತ್ತು ಚರ್ಮ ಪ್ರದರ್ಶನವನ್ನು ಮಾಡಿದರೂ ಕೂಡಾ ಕೆಟ್ಟ ಸಿನಿಮಾವನ್ನು ಗೆಲ್ಲಿಸುವುದಕ್ಕೆ ಸಾಧ್ಯವಿಲ್ಲ. ಒಂದು ಕೆಟ್ಟ ಸಿನಿಮಾ ಯಾವಾಗಲೂ ಕೆಟ್ಟ ಸಿನಿಮಾ ಆಗಿಯೇ ಇರುತ್ತದೆ. ಇದು ಮೂಲಭೂತವಾದ ವಿಚಾರವಾಗಿದ್ದು ಇದರಲ್ಲಿ ಯಾವುದೇ ರೀತಿಯ ಗಹನವಾದ ವಿಷಯವಿಲ್ಲ, ಎಂದು ಹೇಳುವ ಮೂಲಕ ದೀಪಿಕಾ ಪಡುಕೋಣೆ ಅವರ ಹೊಸ ಸಿನಿಮಾವನ್ನು ಟೀಕಿಸಿದ್ದಾರೆ. ಕಂಗನಾ ಹೇಳಿಕೆಯನ್ನು ಕಂಡು ದೀಪಿಕಾ ಪಡುಕೋಣೆ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಆದರೆ ಇನ್ನೊಂದಷ್ಟು ಜನ ಕಂಗನಾ ಅವರ ಹೇಳಿಕೆಗೆ ಮೆಚ್ಚುಗೆಯನ್ನು ನೀಡಿದ್ದಾರೆ.

ಸಾಕಷ್ಟು ಟ್ರೋಲ್‌ಗೆ ಒಳಗಾಗುತ್ತಿರುವ ದೀಪಿಕಾ ಪಡುಕೋಣೆ!

ಸಾಕಷ್ಟು ಟ್ರೋಲ್‌ಗೆ ಒಳಗಾಗುತ್ತಿರುವ ದೀಪಿಕಾ ಪಡುಕೋಣೆ!

ಶಕುನ್ ಬಾತ್ರಾ ನಿರ್ದೇಶನದ 'ಗೆಹ್ರೈಯಾನ್' ಚಿತ್ರ ಓಟಿಟಿಯಲ್ಲಿ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಸಿದ್ಧಾಂತ್ ಚತುರ್ವೇದಿ ನಡುವೆ ಒಂದಷ್ಟು ಹಾಟ್ ದೃಶ್ಯಗಳು ಮತ್ತು ಲಿಪ್ ಲಾಕ್ ಸೀನ್‌ಗಳು ಇವೆ. ದೀಪಿಕಾ ಕಿಸ್ಸಿಂಗ್ ದೃಶ್ಯಗಳು ಟ್ರೋಲ್‌ಗೆ ತುತ್ತಾಗಿವೆ. "ನೀವೂ ಕಿಸ್ಸಿಂಗ್ ದೃಶ್ಯದಲ್ಲಿ ಅಭಿನಯಿಸುವ ಮುನ್ನ ಪತಿ ರಣ್ವೀರ್ ಸಿಂಗ್ ಬಳಿ ಅನುಮತಿ ಪಡೆದುಕೊಂಡಿದ್ದಾರಾ." ಎಂದು ಕಮೆಂಟ್ ಮಾಡಲಾಗಿದೆ. ಸಂದರ್ಶನ ಒಂದರಲ್ಲಿ ನಟಿ ದೀಪಿಕಾಗೆ ಈ ಪ್ರಶ್ನೆ ಕೂಡ ಎದುರಾಗಿತ್ತು.

More from Filmibeat

English summary
Controversial queen Kangana Ranaut is back with yet another hard-hitting post for another Bollywood celeb
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X