ಅಂಬಾನಿ ಪುತ್ರನ ಪ್ರೀ ವೆಡ್ಡಿಂಗ್‌ಗೆ ಕಂಗನಾ ಯಾಕೆ ಹೋಗಿಲ್ಲ? ಲತಾ ಮಂಗೇಶ್ವರ್ ವಿಷಯ ಶೇರ್ ಮಾಡಿ ತಾರೆಯರಿಗೆ ಗುಮ್ಮಿದ ನಟಿ!

ವಿಶ್ವದ ಶ್ರೀಮಂತ ಉದ್ಯಮಿಯಲ್ಲಿ ಒಬ್ಬರಾಗಿರುವ ಮುಕೇಶ್ ಅಂಬಾನಿ ತಮ್ಮ ಕೊನೆಯ ಪುತ್ರ ಅನಂತ್ ಅಂಬಾನಿಯ ಪ್ರೀ ವೆಡ್ಡಿಂಗ್ ಸಮಾರಂಭವನ್ನು ಅದ್ಧೂರಿಯಾಗಿ ಮಾಡಿದ್ದರು. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರೀ ವೆಡ್ಡಿಂಗ್ ಸಮಾರಂಭ ಗುಜರಾತ್‌ನ ಜಾಮ್‌ನಗರದಲ್ಲಿ ಮಾರ್ಚ್ 1 ರಿಂದ ಮಾರ್ಚ್ 3ರವರೆಗೆ ಅದ್ಧೂರಿಯಾಗಿ ನಡೆದಿತ್ತು.

ಈ ಸಮಾರಂಭಕ್ಕೆ ಮುಕೇಶ್ ಅಂಬಾನಿ ಒಂದು ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆಂಬ ಸುದ್ದಿ ಹರಿದಾಡಿತ್ತು. ಈ ಸಮಾರಂಭಕ್ಕೆ ಸಿನಿಮಾರಂಗದ ಪ್ರಮುಖ ಸೆಲೆಬ್ರೆಟಿಗಳು, ಕ್ರಿಕೆಟಿಗರು, ವಿಶ್ವದ ಶ್ರೀಮಂತ ಉದ್ಯಮಿಗಳು ಆಗಮಿಸಿದ್ದರು. ಮೂರು ದಿನಗಳ ಕಾಲ ಜಾಮ್‌ನಗರದಲ್ಲಿ ಭರ್ಜರಿ ಮನರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

kangana ranaut gave reason why she didn t dance in Anant Ambani pre wedding

ಈ ಅದ್ಧೂರಿ ಸಮಾರಂಭಕ್ಕೆ ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ರೈ, ಶಾರುಖ್ ಖಾನ್, ಸಲ್ಮಾನ್ ಖಾನ್, ಆಮಿರ್ ಖಾನ್, ರಣವೀರ್ ಕಪೂರ್, ದೀಪಿಕಾ ಪಡುಕೋಣೆ, ರಾಣಿ ಮುಖರ್ಜಿ, ರಜನಿಕಾಂತ್, ಅಟ್ಲಿ, ರಾಮ್ ಚರಣ್, ಕರೀನಾ ಕಪೂರ್, ಸೈಫ್ ಅಲಿ ಖಾನ್ ಸೇರಿದಂತೆ ಅನೇಕ ಗಣ್ಯರು ಬಂದಿದ್ದರು. ಒಂದೇ ವೇದಿಕೆಯಲ್ಲಿ ಸಲ್ಮಾನ್ ಖಾನ್, ಶಾರುಖ್ ಖಾನ್, ಆಮಿರ್ ಖಾನ್ ಹೆಜ್ಜೆ ಹಾಕಿ ರಂಜಿಸಿದ್ದರು. ಪಾಪ್ ಕ್ವೀನ್ ರಿಹಾನ್ನಾ ಈ ಸಮಾರಂಭದಲ್ಲಿ ಪ್ರದರ್ಶನ ನೀಡಿದ್ದಳು.

ಅನಂತ್ ಅಂಬಾನಿ ಮದುವೆ ಬಾಲಿವುಡ್‌ನ ಬಹುತೇಕ ಎಲ್ಲಾ ಸೆಲೆಬ್ರೆಟಿಗಳು ಬಂದಿದ್ದರೂ, ಕಂಗನಾ ರಣಾವತ್ ಮಾತ್ರ ಕಾಣಿಸಿಕೊಂಡಿಲ್ಲ. ಈಗ ಸೋಶಿಯಲ್ ಮೀಡಿಯಾದಲ್ಲಿ ತಾನೇಕೆ ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್ ಮದುವೆಗೆ ಹೋಗಿಲ್ಲ ಅನ್ನೋದನ್ನು ಪರೋಕ್ಷವಾಗಿ ಒಂದು ಪೋಸ್ಟ್ ಮೂಲಕ ಸಂದೇಶ ರವಾನೆ ಮಾಡಿದ್ದಾರೆ. ವಿಶೇಷ ಅಂದರೆ, ಲತಾ ಮಂಗೇಶ್ಕರ್ ಹೇಳಿಕೆಯೊಂದನ್ನು ಬಿತ್ತರಿಸಿದ್ದ ನ್ಯೂ ಪೇಪರ್ ಕಟಿಂಗ್ಸ್‌ ಅನ್ನು ಹಂಚಿಕೊಳ್ಳುವ ಮೂಲಕ ಸಂಚಲನ ಮೂಡಿಸಿದ್ದಾರೆ.

ಕಂಗನಾ ರಣಾವತ್ ಲೆಜೆಂಡರಿ ಸಿಂಗರ್ ಲತಾ ಮಂಗೇಶ್ಕರ್ ವಿಷಯವನ್ನು ಮುಂದಿಟ್ಟಿದ್ದಾರೆ. ಲತಾ ಮಂಗೇಶ್ಕರ್ ಅವರು ಮದುವೆ ಸಮಾರಂಭಗಳಲ್ಲಿ ಹಾಡಲು ನಿರಾಕರಿಸಿದ್ದ ಸಂದರ್ಭವನ್ನು ಹಂಚಿಕೊಂಡಿದ್ದಾರೆ. "ಎಷ್ಟೇ ಲಕ್ಷ ಡಾಲರ್ ಕೊಟ್ಟರೂ ಮದುವೆಯಲ್ಲಿ ಹಾಡುವುದಿಲ್ಲ." ಎಂದು ಲತಾ ಮಂಗೇಶ್ಕರ್ ಹೇಳಿದ್ದರು. ನಾನು ಕೂಡ ಮದುವೆ ಸಮಾರಂಭಗಳಲ್ಲಿ ಡ್ಯಾನ್ಸ್ ಮಾಡಿಲ್ಲ. ಎಷ್ಟೇ ಹಣದ ಆಮಿಷವೊಡ್ಡಿದ್ದರೂ ಡ್ಯಾನ್ಸ್ ಮಾಡಲಿಲ್ಲ. ಅದ್ಭುತ ಹಾಡುಗಳಿಗೆ ಹೆಜ್ಜೆ ಹಾಕುವಂತೆ ಅವಕಾಶ ಬಂದಿದ್ದವು. ಆದರೆ, ನಾನು ಒಪ್ಪಿಕೊಳ್ಳಲಿಲ್ಲ ಎಂದಿದ್ದಾರೆ.

kangana ranaut gave reason why she didn t dance in Anant Ambani pre wedding

ಜಗತ್ತಿನಲ್ಲಿ ಹಣ ಸಂಪಾದನೆ ಮಾಡುವುದಕ್ಕೆ ಹಲವು ಶಾರ್ಟ್ ಕಟ್‌ಗಳಿದ್ದಾವೆ. ಪ್ರಾಮಾಣಿಕವಾಗಿ ಹಣವನ್ನು ಸಂಪಾದನೆ ಮಾಡಬೇಕು ಅನ್ನೋದನ್ನು ಇಂದಿನ ಯುವ ಪೀಳಿಗೆ ಅರ್ಥ ಮಾಡಿಕೊಳ್ಳಬೇಕು ಎಂದು ಕಂಗನಾ ರಣಾವತ್ ಬುದ್ಧಿವಾದವನ್ನು ಹೇಳಿದ್ದಾರೆ. ಇದು ಅನಂತ್ ಅಂಬಾನಿ ಮದುವೆ ಸಮಾರಂಭದಲ್ಲಿ ಸೆಲೆಬ್ರೆಟಿಗಳು ಕುಣಿದು ಕುಪ್ಪಳಿಸಿರುವ ಸೆಲೆಬ್ರೆಟಿಗಳಿಗೆ ಟಾಂಗ್ ಕೊಡುವುದಕ್ಕೆ ಈ ಫೋಸ್ಟ್ ಶೇರ್ ಮಾಡಿರಬಹುದೆಂದು ಊಹಿಸಲಾಗಿದೆ.

ಇನ್ನೊಂದು ಮೂಲದ ಪ್ರಕಾರ, ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರೀ ವೆಡ್ಡಿಂಗ್‌ಗೆ ಕಂಗನಾ ರಣಾವತ್‌ಗೆ ಆಹ್ವಾನವಿರಲಿಲ್ಲ. ಆ ಕಾರಣಕ್ಕೆ ಕಂಗನಾ ರಣಾವತ್ ತನ್ನ ಸ್ಟೈಲ್‌ನಲ್ಲಿ ತಿರುಗೇಟು ಕೊಟ್ಟಿದ್ದಾರೆ ಅನ್ನೋ ಸುದ್ದಿ ಕೂಡ ಓಡಾಡುತ್ತಿದೆ.

More from Filmibeat

English summary
kangana ranaut gave reason why she didn't dance in Anant Ambani pre wedding
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X