»   » ರಾಣಿ ಲಕ್ಷ್ಮೀಬಾಯಿ ಅವತಾರದಲ್ಲಿ 'ಕ್ವೀನ್' ಕಂಗನಾ: ಫೋಟೋ ವೈರಲ್

ರಾಣಿ ಲಕ್ಷ್ಮೀಬಾಯಿ ಅವತಾರದಲ್ಲಿ 'ಕ್ವೀನ್' ಕಂಗನಾ: ಫೋಟೋ ವೈರಲ್

Posted By:
Subscribe to Filmibeat Kannada

ಬಾಲಿವುಡ್ ನಟಿ ಕಂಗನಾ ರನೌತ್ ಅಭಿನಯದ ಇತ್ತೀಚಿಗೆ ಬಿಡುಗಡೆ ಆದ 'ರಂಗೂನ್' ಬಾಕ್ಸ್ ಆಫೀಸ್ ನಲ್ಲಿ ಮೋಡಿ ಮಾಡುವಲ್ಲಿ ಯಶಸ್ವಿ ಆಗಲಿಲ್ಲ. ಕಾರಣ ಅವರ ಇತ್ತೀಚಿನ ವಿವಾದಾತ್ಮಕ ಹೇಳಿಕೆಗಳು ಮತ್ತು ಬೋಲ್ಡ್ ಸ್ಟೇಟ್ ಮೆಂಟ್ ಗಳು ಬಿ ಟೌನ್ ನಲ್ಲಿ ಸಖತ್ ಸದ್ದು ಮಾಡಿದ್ದು ಇರಬಹುದು. ಇವೆಲ್ಲವನ್ನೂ ಪಕ್ಕಕ್ಕೇ ಸರಿಸಿರುವ ಕಂಗನಾ ಈಗ ತಮ್ಮ ಮುಂದಿನ ಚಿತ್ರಕ್ಕೆ ಸದ್ದಿಲ್ಲದೇ ಸಿದ್ದವಾಗುತ್ತಿದ್ದಾರೆ.['ಕ್ವೀನ್' ಕಂಗನಾ'ಳ ರಂಗು ರಂಗಿನಾ 'ರಂಗೂನ್' ವಿಮರ್ಶೆ]

'ಅತ್ಯುತ್ತಮ ನಟಿ' ರಾಷ್ಟ್ರ ಪ್ರಶಸ್ತಿ ಗಿಟ್ಟಿಸಿಕೊಂಡ ಕಂಗನಾ ರನೌತ್ ಸದ್ಯದಲ್ಲೇ ರಾಣಿ ಲಕ್ಷ್ಮೀಬಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರತಂಡ ಈಗಾಗಲೇ ಕಂಗನಾ'ರ ಗೆಟಪ್ ಹೇಗಿರಬೇಕು ಎಂಬುದನ್ನು ಅತ್ಯಾಕರ್ಷಕವಾಗಿ ಸ್ಕೆಚ್ ಮಾಡಿದೆ.

ರಾಣಿ ಲಕ್ಷ್ಮೀಬಾಯಿ ಗೆಟಪ್ ನಲ್ಲಿ 'ಕ್ವೀನ್' ಕಂಗನಾ

ಚಿತ್ರತಂಡ ರೆಡಿ ಮಾಡಿರುವ ಕಂಗನಾ ರ ರಾಣಿ ಲಕ್ಷ್ಮಿಬಾಯಿ ಲುಕ್ ಈಗಾಗಲೇ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಶಾರ್ಟ್ ಹೇರ್ ಮತ್ತು ಸುಂದರವಾದ ಟರ್ಬನ್ ಲುಕ್ ನಲ್ಲಿ ಕಂಗನಾ ಲುಕ್ ಅತ್ಯಾಕರ್ಷಕವಾಗಿದ್ದು, ಜೊತೆಗೆ ಕಿವಿಯೋಲೆ ಮತ್ತು ಮೂಗಿಗೆ ರಿಂಗ್ ಧರಿಸಿದ್ದು ಕಂಗೊಳಿಸುತ್ತಿದ್ದಾರೆ.[ಯೋಗ ಗುರುವಿಗೆ ರೂ.2 ಕೋಟಿ ಫ್ಲ್ಯಾಟ್ ನೀಡಿದ ಕಂಗನಾ]

ಚಿತ್ರಕ್ಕಾಗಿ ಕಂಗನಾ ತಯಾರಿ

ಇನ್ನೂ ರಾಣಿ ಲಕ್ಷ್ಮೀಬಾಯಿ ಪಾತ್ರದ ನಿರ್ವಹಣೆಗಾಗಿ ಕಂಗನಾ ಕುದುರೆ ಸವಾರಿ ಮತ್ತು ಕತ್ತಿ ವರಸೆ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. 'ಬಾಲಿವುಡ್ ಲೈಫ್' ವರದಿ ಪ್ರಕಾರ " ಕಂಗನಾ 'ಮಣಿಕರ್ಣಿಕಾ' ಚಿತ್ರಕ್ಕಾಗಿ ಪ್ರಸ್ತುತದಲ್ಲಿ ಮುಂಬೈನ ಮಹಾಲಕ್ಷ್ಮಿ ರೇಸ್ ಕೋರ್ಸ್ ನಲ್ಲಿ ಖ್ಯಾತ ಹಾರ್ಸ್ ರೈಡರ್ ಸುರೇಶ್ ಟಪೊರಿಯಾ ಬಳಿ ತರಬೇತಿ ಪಡೆಯುತ್ತಿದ್ದಾರೆ" ಎಂದು ತಿಳಿದಿದೆ.

ಕ್ರಿಶ್ ನಿರ್ದೇಶನದಲ್ಲಿ 'ಮಣಿಕರ್ಣಿಕಾ'

'ಮಣಿಕರ್ಣಿಕಾ - ದಿ ಕ್ವೀನ್ ಆಫ್ ಝಾನ್ಸಿ' ಸಿನಿಮಾಗೆ ಈ ಹಿಂದೆ ಅಕ್ಷಯ್ ಕುಮಾರ್ ಅಭಿನಯದ 'ಗಬ್ಬರ್ ಇಸ್ ಬ್ಯಾಕ್' ಚಿತ್ರವನ್ನು ನಿರ್ದೇಶನ ಮಾಡಿದ್ದ ಕ್ರಿಶ್ ರವರು ಆಕ್ಷನ್ ಕಟ್ ಹೇಳಲಿದ್ದಾರೆ.

ಕೆ.ವಿ.ವಿಜಯೇಂದ್ರ ಪ್ರಸಾದ್ ಚಿತ್ರಕಥೆ

ವಿಶೇಷ ಅಂದ್ರೆ ಕ್ರಿಶ್ ನಿರ್ದೇಶನ ಮಾಡಲಿರುವ ಕಂಗನಾ ರನೌತ್ ಅಭಿನಯದ ಚಿತ್ರಕ್ಕೆ ಎಸ್.ಎಸ್.ರಾಜಮೌಳಿ ಅವರ ತಂದೆ ಕೆ.ವಿ.ವಿಜಯೇಂದ್ರ ಪ್ರಸಾದ್ ಅವರು ಚಿತ್ರಕಥೆ ಬರೆದಿದ್ದಾರೆ.

ಸಿನಿಮಾ ಶೂಟಿಂಗ್ ಯಾವಾಗ?

'ಮಣಿಕರ್ಣಿಕಾ' ಸಿನಿಮಾ ಶೂಟಿಂಗ್ ಎಲ್ಲವೂ ಅಂದುಕೊಂಡಂತೆ ಆದಲ್ಲಿ ಜೂನ್ ಮೊದಲ ವಾರದಿಂದ ಆರಂಭವಾಗಲಿದೆ.

English summary
Kangana Ranaut's last release Rangoon failed to work its charm at the box office and her controversial and bold statements are making her the talk of the town. Amidst all this, the actress has started prepping up for her film 'Manikarnika- The Queen Of Jhansi'
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada