»   » ಯೋಗ ಗುರುವಿಗೆ ರೂ.2 ಕೋಟಿ ಫ್ಲ್ಯಾಟ್ ನೀಡಿದ ಕಂಗನಾ

ಯೋಗ ಗುರುವಿಗೆ ರೂ.2 ಕೋಟಿ ಫ್ಲ್ಯಾಟ್ ನೀಡಿದ ಕಂಗನಾ

Posted By:
Subscribe to Filmibeat Kannada

ಕಂಗನಾ ರನೌತ್, ತಾವು 18 ವರ್ಷದಲ್ಲಿದ್ದಾಗಲೇ ಜುಹು ಬೀಚ್ ನಲ್ಲಿ ಜಿಮ್ನಾಸ್ಟಿಕ್ ಮಾಡುತ್ತಿದ್ದ ಸೂರ್ಯ ನಾರಾಯಣ ಸಿಂಘ್ ಅವರ ಬಳಿ ಯೋಗ ಕಲಿಯಲು ಹೋಗಿದ್ದರು. ಇಂದು ಬಾಲಿವುಡ್ ಚಿತ್ರರಂಗದ ಕ್ವೀನ್ ಆಗಿರುವ ಕಂಗನಾ ಇಂದಿಗೂ ಸಹ ಅವರ ಬಳಿಯಲ್ಲಿಯೇ ತಮ್ಮ ಯೋಗ ಕಲಿಕೆಯನ್ನು ಮುಂದುವರೆಸುತ್ತಿದ್ದಾರೆ.['ರಂಗೂನ್' ಟ್ರೈಲರ್: ಕಂಗನಾ ಪ್ರೀತಿಗಾಗಿ ಇಬ್ಬರ ಹೋರಾಟ!]

ಬಾಲಿವುಡ್ ನಟಿ ಕಂಗನಾ ರನೌತ್ ಈಗ ತಮ್ಮ ಯೋಗ ಗುರುವಿಗೆ ಗುರುದಕ್ಷಿಣೆ ಆಗಿ ರೂ.2 ಕೋಟಿ ಮೌಲ್ಯದ ಫ್ಲ್ಯಾಟ್ ಒಂದನ್ನು ನೀಡಿದ್ದಾರೆ. ಪ್ರಶ್ಚಿಮ ಅಂಧೇರಿಯಲ್ಲಿರುವ ಈ ಫ್ಲ್ಯಾಟ್ ಎರಡು ಬೆಡ್‌ ರೂಮ್ ಅನ್ನು ಹೊಂದಿದ್ದು, ಜೊತೆಗೆ ವಿಶಾಲವಾದ ಬಾಲ್ಕನಿ ಇದೆ.

Kangana Ranaut gifts a Rs 2 crore flat to her yoga guru

ಕಂಗನಾ ರನೌತ್, ಯೋಗ ಗುರು ಸೂರ್ಯ ನಾರಾಯಣ ಅವರಿಗೆ ನೀಡಿರುವ ಫ್ಲ್ಯಾಟ್ ನಲ್ಲಿ ವಿದ್ಯಾರ್ಥಿಗಳಿಗೆ ಯೋಗ ಪಾಠ ಹೇಳಿಕೊಡಲು ಅನುಕೂಲವಾಗಿದ್ದು, ಫ್ಲ್ಯಾಟ್ ಅನ್ನು ಗುರುದಕ್ಷಿಣೆ ಆಗಿ ನೀಡುವ ಮೊದಲು, ಯೋಗ ತರಬೇತಿ ನೀಡಲು ಬೇಕಾದಂತಹ ವಿನ್ಯಾಸಕ್ಕೆ ಕಂಗನಾ ಬದಲಾಯಿಸಿದ್ದರಂತೆ. ಈ ವೇಳೆ 'ಸೂರ್ಯ ನಾರಾಯಣ ಸಿಂಘ್ ಅವರು ನನ್ನ ಅಭಿವೃದ್ದಿಗೆ ಒಂದು ಪಿಲ್ಲರ್ ಆಗಿದ್ದಾರೆ' ಎಂದು ಕಂಗನಾ ಹೇಳಿದ್ದಾರೆ.['ರಂಗೂನ್' ಶೂಟಿಂಗ್ ಸಮಯದಲ್ಲಿ ಕಂಗನಾಗೆ ಎದುರಾದ ಕಷ್ಟಗಳಿವು]

Kangana Ranaut gifts a Rs 2 crore flat to her yoga guru

ಈ ಹಿಂದೆ ಕಂಗನಾ ತನ್ನ ಸಹೋದರಿ ರಂಗೋಲಿ ಚಾಂದೇಲ್ ಅವರ ಮದುವೆಗೆ ಉಡುಗೊರೆ ಆಗಿ ಎರಡು ಬೆಡ್ ರೂಮ್ ಇರುವ ಅಪಾರ್ಟ್ ಮೆಂಟ್ ಅನ್ನು ನಡಿದ್ದರು.

English summary
Bollywood actress Kangana Ranaut gifts a Rs 2 crore flat to her yoga guru as ‘guru dakshina’,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada