ಆಲಿಯಾ ಭಟ್ ರನ್ನು ಮುಲಾಜಿಲ್ಲದೆ ಜಾಡಿಸಿದ ಕಂಗನಾ ರನೌತ್!
'ಗಂಗೂಬಾಯಿ ಕಾಠಿಯಾವಾಡಿ' ಬಾಲಿವುಡ್‌ನ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಸಂಜಯ್ ಲೀಲಾ ಬನ್ಸಾಲಿ ಹಾಗೂ ಆಲಿಯಾ ಭಟ್ ಕಾಂಬಿನೇಷನ್‌ನಲ್ಲಿ ಬರುತ್ತಿರುವ ಮೊದಲ ಸಿನಿಮಾ. ಈ ಸಿನಿಮಾ ಆರಂಭವಾದ ದಿನದಿಂದಲೂ ಗಂಗೂಬಾಯಿ ಸಿನಿಮಾ ವಿವಾದಕ್ಕೆ ಸಿಲುಕುತ್ತಲೇ ಇದೆ. ಇನ್ನೇನು ಬಿಡುಗಡೆಗೆ ಕೆಲವೇ ದಿನಗಳು ಇದೆ ಅನ್ನುವಾಗಲೇ 'ಗಂಗೂಬಾಯಿ ಕಾಠಿಯಾವಾಡಿ' ಚಿತ್ರದ ವಿರುದ್ಧ ಬಾಲಿವುಡ್ ಕಾಂಟ್ರವರ್ಸಿ ಕ್ವೀನ್ ನಟಿ ಕಂಗನಾ ಕಿಡಿ ಕಾರಿದ್ದಾರೆ.
'ಗಂಗೂಬಾಯಿ ಕಾಠಿಯಾವಾಡಿ' ಸಿನಿಮಾದಲ್ಲಿ ಆಲಿಯಾ ಅಭಿನಯದ ಬಗ್ಗೆ ಟೀಕೆ ಮಾಡಿರುವ ಕಂಗನಾ ಆಲಿಯಾ ಅವರನ್ನು 'ಡ್ಯಾಡಿಸ್ ಏಂಜೆಲ್' ಮತ್ತು 'ರೋಮ್‍ಕಾಮ್ ಬಿಂಬೋ' ಎಂದು ಕರೆಯುವ ಮೂಲಕ ಬಾಲಿವುಡ್‍ನಲ್ಲಿ ಸ್ಟಾರ್ ಡಮ್ ಹೇಗೆ ನಿರ್ಧಾರವಾಗುತ್ತೆ ಎಂಬುದನ್ನು ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ.
'ಈ ಸಿನಿಮಾದಲ್ಲಿ ನನ್ನ ತಾಯಿ ವೇಶ್ಯೆಯಾಗಿ ಬದಲಾಗಿದ್ದಾಳೆ': ಆಲಿಯಾ ವಿರುದ್ಧ ಗಂಗೂಬಾಯಿ ಪುತ್ರ ಕಿಡಿ
ಗಂಗೂಬಾಯಿ ಕಥಿಯಾವಾಡಿ' ಸಿನಿಮಾ ರಿಲೀಸ್ ಗೆ ಇನ್ನೂ 5 ದಿನ ಇರಬೇಕಾದರೆ ಬಾಕ್ಸ್ ಆಫೀಸ್‍ನಲ್ಲಿ ಬಾಂಬ್ ಸ್ಫೋಟಿಸಲಿದೆ ಎಂದು ಎಲ್ಲ ಕಡೆ ಸುದ್ದಿ ಹಬ್ಬಿದೆ. ಈ ಸುದ್ದಿ ಕೇಳಿ ರೋಚಿಗೆದ್ದ ಕಂಗನಾ ಇನ್‍ಸ್ಟಾಗ್ರಾಮ್ ನಲ್ಲಿ, ಈ ಶುಕ್ರವಾರ 200 ಕೋಟಿ ರೂ. ಬಾಕ್ಸ್ ಆಫೀಸ್‍ನಲ್ಲಿ ಸುಟ್ಟು ಬೂದಿಯಾಗಲಿದೆ. ಪಾಪಾ ಕಿ ಪರಿ ಏಕೆಂದರೆ ಅಪ್ಪ ತನ್ನ ರೋಮ್‍ಕಾಮ್ ಬಿಂಬೋ ನಟಿಸುತ್ತಾಳೆ ಎಂದು ಸಾಬೀತು ಮಾಡಲು ಬಯಸುತ್ತಾರೆ. ಅದಕ್ಕೆ ಈ ಸಿನಿಮಾದ ದೊಡ್ಡ ನ್ಯೂನತೆಯೆಂದರೆ ಪಾತ್ರಕ್ಕೆ ಸರಿಯಾದ ಕಾಸ್ಟಿಂಗ್ ಮಾಡದಿರುವುದು. ಈ ಜನರು ಎಂದೂ ಬದಲಾಗುವುದಿಲ್ಲ. ದಕ್ಷಿಣ ಮತ್ತು ಹಾಲಿವುಡ್ ಚಿತ್ರರಂಗದಲ್ಲಿಯೂ ಈ ಸಿನಿಮಾ ತೆರೆಕಾಣಿಸಿಕೊಳ್ಳುವುದರಲ್ಲಿ ಯಾವುದೇ ರೀತಿಯ ಆಶ್ಚರ್ಯವಿಲ್ಲ. ಬಾಲಿವುಡ್ ಸಿನಿಮಾ ಮಾಫಿಯಾ ಆಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.





Click it and Unblock the Notifications











