ಸೆನ್ಸಾರ್ ಬೋರ್ಡ್‌ನಲ್ಲಿ ಸಿಕ್ಕಿಕೊಂಡ ಕಂಗನಾ 'ಎಮರ್ಜೆನ್ಸಿ'; ಶಿರೋಣಿಮಣಿ ಅಕಾಲಿ ದಳದಿಂದ ಲೀಗಲ್ ನೋಟಿಸ್

ಬಾಲಿವುಡ್‌ನ ವಿವಾದಾತ್ಮಕ ನಟಿ ಕಂಗನಾ ರನೌತ್ ಸಿನಿಮಾ 'ಎಮರ್ಜೆನ್ಸಿ' ಸೆಪ್ಟೆಂಬರ್ 6ರಂದು ಬಿಡುಗಡೆ ಆಗುತ್ತೆ ಎಂಬ ಸುದ್ದಿ ಹಬ್ಬಿತ್ತು. ಆದ್ರೀಗ ಈ ಸಿನಿಮಾ ಬಿಡುಗಡೆ ಆಗುವುದಕ್ಕೆ ಅನುಮಾ ಎಂದು ಹೇಳಲಾಗುತ್ತಿದೆ. ಇನ್ನೂ ಈ ಸಿನಿಮಾಗೆ ಸೆನ್ಸಾರ್ ಬೋರ್ಡ್‌ನಿಂದ ಕ್ಲಿಯರೆನ್ಸ್ ಸಿಕ್ಕಿಲ್ಲ. ಹೀಗಾಗಿ ಈಗಾಗಲೇ ಸಿದ್ಧತೆ ಮಾಡಕೊಂಡಿದ್ದ ದಿನದಂದು ರಿಲೀಸ್ ಆಗುವುದು ಅನುಮಾ ಎಂದು ಹೇಳಲಾಗುತ್ತಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಕಂಗನಾ ರನೌತ್ ತನ್ನ ಎಕ್ಸ್ ಖಾತೆಯಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸೆನ್ಸಾರ್ ಬೋರ್ಡ್‌ನ ಸದಸ್ಯರಿಗೆ ಬೆದರಿಕೆ ಕರೆಗಳು ಬಂದಿವೆ ಎಂದು ಕಂಗನಾ ಆ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಈ ವಿಡಿಯೋ ಈ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Kangana Ranaut released video on Emergency movie stuck with the censor board

"ನಮ್ಮ ಸಿನಿಮಾ ಎಮರ್ಜೆನ್ಸಿಗೆ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ. ಆದರೆ ಇದು ಸತ್ಯಕ್ಕೆ ದೂರವಾಗಿದೆ. ಈ ಹಿಂದೆ ನಮ್ಮ ಸಿನಿಮಾಗೆ ಕ್ಲಿಯರ್ ಆಗಿತ್ತು. ಆದರೆ, ಹಲವು ಜೀವ ಬೆದರಿಕೆ ಕರೆಗಳು ಬಂದಿದ್ದರಿಂದ ಸಿನಿಮಾಗೆ ಸರ್ಟಿಫಿಕೆಟ್ ಕೊಡುವುದನ್ನು ತಡೆಹಿಡಿಯಲಾಗಿದೆ. " ಎಂದು 'ಎಮರ್ಜೆನ್ಸಿ' ಸಿನಿಮಾದ ನಾಯಕಿ ಕಂಗನಾ ರನೌತ್ ಹೇಳಿಕೊಂಡಿದ್ದಾರೆ.

ಹಾಗೇ " ಸೆನ್ಸಾರ್ ಬೋರ್ಡ್‌ನ ಸದಸ್ಯರಿಗೆ ಸಿಕ್ಕಾಪಟ್ಟೆ ಬೆದರಿಕೆಗಳು ಬರುತ್ತಿವೆ. ಇಂದಿರಾ ಗಾಂಧಿ ಹಾಗೂ ಜರ್ನೈಲ್ ಸಿಂಗ್ ಭಿಂದ್ರನ್‌ವಾಲೆ ಹತ್ಯೆ ಮತ್ತು ಪಂಜಾಬ್‌ನ ಗಲಭೆಗಳನ್ನು ತೋರಿಸದಂತೆ ನಮ್ಮ ಮೇಲೆ ಒತ್ತಡವನ್ನು ತರಲಾಗುತ್ತಿದೆ. ಹಾಗಾದರೆ, ನಾವೇನು ತೋರಿಸಬೇಕು ಅನ್ನೋದು ತಿಳಿಯುತ್ತಿಲ್ಲ. ಇಂತಹದ್ದೊಂದು ಸಮಯವನ್ನು ನನಗೆ ನಂಬಲಾಗುತ್ತಿಲ್ಲ. ಈ ದೇಶದ ಸ್ಥಿತಿಯ ಬಗ್ಗೆ ನನಗೆ ವಿಷಾದವಿದೆ " ಎಂದು ಕಂಗನಾ ರನೌತ್ ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಸೆನ್ಸಾರ್‌ ಬೋಡ್‌ಗೆ ಶಿರೋಮಣಿ ಅಕಾಲಿ ದಳ ಶುಕ್ರವಾರ (ಆಗಸ್ಟ್ 10) ಲೀಗಲ್ ನೋಟಿಸ್ ಅನ್ನು ಕಳುಹಿಸಿಕೊಟ್ಟಿದೆ. ಕಂಗನಾ ರನೌತ್ ಸಿನಿಮಾ 'ಎಮರ್ಜೆನ್ಸಿ'ಯನ್ನು ತಡೆ ಹಿಡಿಯುವ ಸಲುವಾಗಿ ನೋಟಿಸ್ ಕಳುಹಿಸಿದೆ. ಈ ಸಿನಿಮಾದಲ್ಲಿ ಸುಳ್ಳು ಸಂದೇಶ ಹಾಗೂ ಕೋಮು ಗಲಭೆ ಆಗುವ ಸಾಧ್ಯತೆಯಿದೆ ಎಂದು ಹೇಳಿಕೊಂಡಿದೆ.

ಕಂಗನಾ ರನೌತ್ ಸಿನಿಮಾ 'ಎಮರ್ಜೆನ್ಸಿ' ಟ್ರೈಲರ್‌ನಲ್ಲಿರುವ ಘಟನೆಗಳು ಸುಳ್ಳಾಗಿವೆ. ಈ ಸಿನಿಮಾ ಸಿಖ್ ಸಮುದಾಯವನ್ನು ತಪ್ಪಾಗಿ ಪ್ರತಿನಿಧಿಸುತ್ತದೆ. ಅಷ್ಟೇ ಅಲ್ಲದೆ, ದ್ವೇಷ ಹಾಗೂ ಸಮಾಜದಲ್ಲಿ ಸಮುದಾಯಗಳ ನಡುವೆ ವೈಮನಸ್ಸನ್ನು ಉತ್ತೇಜಿಸುತ್ತದೆ ಎಂದು ವಾದ ಮಾಡುತ್ತಿದ್ದಾರೆ.

ಶಿರೋಮಣಿ ಅಕಾಲಿ ದಳ ನೀಡಿದ ನೋಟಿಸ್‌ನಲ್ಲಿ " ಇಂತಹ ಸಿನಿಮಾಗಳು ಸಮಾಜದ ದಾರಿಯನ್ನು ತಪ್ಪಿಸುತ್ತವೆ. ಅಷ್ಟೇ ಅಲ್ಲದೆ, ಪಂಜಾಬ್ ಹಾಗೂ ಇಡೀ ರಾಷ್ಟ್ರದ ಸಾಮಾಜಿಕ ರಚನೆಯ ಮೇಲೆ ಪರಿಣಾಮವನ್ನು ಬೀರುತ್ತವೆ. ಕಂಗನಾ ರನೌತ್ 'ಎಮರ್ಜೆನ್ಸಿ' ಸಿನಿಮಾವನ್ನು ಆಯ್ಕೆ ಮಾಡಿಕೊಂಡಿರುವುದು ಕಾಂಗ್ರೆಸ್ ವಿರುದ್ಧ ರಾಜಕೀಯ ಹಾಗೂ ಐತಿಹಾಸಿ ಹೇಳಿಕೆ ನೀಡುವುದಕ್ಕೆ ಅಲ್ಲ. ಬದಲಾಗಿ ಸಿಖ್ ಸಮುದಾಯವನ್ನು ಗುರಿ ಮಾಡುವುದಕ್ಕೆ ಎಂಬುದು ಸ್ಪಷ್ಟವಾಗಿದೆ" ಎಂದು ನೋಟಿಸ್‌ನಲ್ಲಿ ಹೇಳಿಕೊಂಡಿದೆ.

ಈ ನೋಟಿಸ್‌ನಲ್ಲಿ ಕಂಗನಾ ರನೌತ್ ಸಿನಿಮಾಗೆ ಕೊಟ್ಟಿರುವ ಸರ್ಟಿಫಿಕೆಟ್ ಅನ್ನು ಹಿಂಪಡೆಯಬೇಕು. ಅಲ್ಲದೆ ಸಿನಿಮಾದ ಬಿಡುಗಡೆಯ ದಿನವನ್ನು ತಡೆ ಹಿಡಿಯಬೇಕು ಎಂದು ಹೇಳಿದೆ. ಹೀಗಾಗಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ರನೌತ್ ನಟಿಸಿರುವ 'ಎಮರ್ಜೆನ್ಸಿ' ಸಿನಿಮಾ ಸೆಪ್ಟೆಂಬರ್ 6ರಂದು ಬಿಡುಗಡೆಯಾಗುವುದು ಬಹುತೇಕ ಅನುಮಾನ ಎಂದು ಹೇಳಲಾಗುತ್ತಿದೆ.

More from Filmibeat

English summary
Kangana Ranaut about says censor board members getting threats over Emergency movie:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X