"ದೇಶ ವಿರೋಧಿಗಳ ವಿರುದ್ಧ ಮಾತಾಡಿದ್ದಕ್ಕೆ ಪ್ರತಿ ವರ್ಷ ₹30-40 ಕೋಟಿ ನಷ್ಟ ಆಗಿದೆ": ನಟಿ ಕಂಗನಾ ರನೌತ್
ಬಾಲಿವುಡ್‌ನ ಕಾಂಟ್ರವರ್ಸಿ ಕ್ವೀನ್ ಕಂಗನಾ ರನೌತ್. ಏನಾದರೂ ಹೇಳಿಕೆ ಕೊಟ್ಟು ವಿವಾದಕ್ಕೆ ಸಿಕ್ಕಿಕೊಳ್ಳುತ್ತಲೇ ಇರುತ್ತಾರೆ. ಇದರಿಂದ ಸೋಶಿಯಲ್ ಮೀಡಿಯಾದಲ್ಲಿ ಟೀಕೆ ಒಳಗಾಗಿದ್ದೂ ಇದೆ.
ಇನ್ನೊಂದು ಕಡೆ ಕಂಗನಾ ರನೌತ್‌ಗೆ ಕೆಲಸ ಕಂಡು ನೆಟ್ಟಿಗರು ಮೆಚ್ಚು ಕೊಂಡಾಡಿದ್ದೂ ಇದೆ. ಆದರೆ, ಕಳೆದ ಕೆಲವು ವರ್ಷಗಳಿಂದ ಕಂಗನಾ ರನೌತ್ ಕೆಲವರ ವಿರುದ್ಧ ತಿರುಗಿಬಿದ್ದಿದ್ದರು. ಬಾಲಿವುಡ್‌ನಲ್ಲೇ ಕೆಲವು ಮಂದಿಯನ್ನು ವಿರೋಧಿಸಿದ್ದರು. ಹೀಗಾಗಿ ದೇಶದಾದ್ಯಂತ ಸಾಕಷ್ಟು ವಿರೋಧವನ್ನು ಕಟ್ಟಿಕೊಂಡಿದ್ದಾರೆ.

ಕಂಗನಾ ರನೌತ್ ಈಗ ಮತ್ತೊಂದು ಹೇಳಿಕೆ ಕೊಟ್ಟಿದ್ದು, ತಾನು 'ರಾಜಕಾರಣಿಗಳು', 'ದೇಶ ವಿರೋಧಿಗಳು' ಹಾಗೂ 'ತುಕಡೆ ತುಕಡೆ ಗ್ಯಾಂಗ್' ವಿರುದ್ಧ ಮಾತಾಡಿದ್ದಕ್ಕೆ ಸುಮಾರು 25 ಜಾಹೀರಾತುಗಳಿಂದ 30 ರಿಂದ 40 ಕೋಟಿ ರೂ.ಕಳೆದುಕೊಂಡಿದ್ದಾಗಿ ಹೇಳಿಕೊಂಡಿದ್ದಾರೆ.
ಕಂಗನಾ ರನೌತ್ ಹೇಳಿದ್ದೇನು?
ಕಂಗನಾ ರನೌತ್ ತನ್ನ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಂಡಿದ್ದರು. ಅದು ಟ್ವಿಟರ್ ಮುಖ್ಯಸ್ಥ ಎಲಾನ್ ಮಸ್ಕ್ ಸಂದರ್ಶನ. ಈ ಸಂದರ್ಶನದ ಪೋಸ್ಟ್ ಶೇರ್ ಮಾಡುವ ಮೂಲಕ ತಾನು ಕಳೆದುಕೊಂಡಿದ್ದರ ಬಗ್ಗೆ ಕಂಗನಾ ಮನವರಿಕೆ ಮಾಡಿಕೊಡಲು ಯತ್ನಿಸಿದ್ದಾರೆ.
ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಸಂದರ್ಶನವೊಂದರಲ್ಲಿ ಹೀಗೆ ಹೇಳಿದ್ದರು. "ಎಲಾನ್ ಮಸ್ಕ್: ನನಗೆ ಹೇಳಬೇಕು ಅನಿಸಿದ್ದನ್ನು ನಾನು ಹೇಳುತ್ತೇನೆ. ಅದರ ಪರಿಣಾಮದಿಂದ ಹಣವನ್ನು ಕಳೆದುಕೊಳ್ಳುತ್ತಿದ್ದರೆ. ಹಾಗೇ ಇರಲಿ" ಎಂದು ಎಲಾನ್ ಮಸ್ಕ್ ಹೇಳಿದ್ದರು. ಅದನ್ನೇ ಶೇರ್ ಮಾಡಿಕೊಂಡಿದ್ದಾರೆ.

ಕಂಗನಾಗೆ 3040 ಕೋಟಿ ರೂ. ನಷ್ಟ
ಕೆಲವು ವರ್ಷಗಳ ಹಿಂದಷ್ಟೇ ಕಂಗನಾ ವಿವಾದಾತ್ಮಕ ಟ್ವೀಟ್‌ಗಳು ಟೀಕೆಗೆ ಒಳಗಾಗಿದ್ದವು. ಇದರಿಂದ ಕಂಗನಾ ರನೌತ್ ಟ್ವಿಟರ್ ಖಾತೆಯನ್ನು ನಿರ್ಬಂಧಿಸಲಾಗಿತ್ತು. ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ ಬಳಿಕ ಈ ಖಾತೆಯನ್ನು ಮತ್ತೆ ಹಿಂತಿರುಗಿಸಲಾಯಿತು. ಈಗ ಎಲಾನ್ ಮಸ್ಕ್ ಸಂದರ್ಶನವನ್ನೇ ಹಂಚಿಕೊಂಡು, ತನಗೆ ಅದೆಷ್ಟೇ ನಷ್ಟವಾದರೂ ನನಗೆ ಅನಿಸಿದ್ದನ್ನು ಮಾತಾಡುತ್ತಲೇ ಇರುತ್ತೇನೆ ಎಂದಿದ್ದಾರೆ.
" ಇದು ನಿಜವಾದ ಕ್ಯಾರೆಕ್ಟರ್. ನಿಜವಾದ ಸ್ವಾತಂತ್ರ್ಯ ಮತ್ತು ಯಶಸ್ಸು. ಹಿಂದೂ ಧರ್ಮದ ಪರವಾಗಿ ಮಾತನಾಡುವುದು, ರಾಜಕಾರಣಿಗಳು.. ದೇಶ ವಿರೋಧಿಗಳು.. ತುಕಡೆ ಗ್ಯಾಂಗ್ ವಿರುದ್ಧ ಮಾತಾಡಿದ್ದಕ್ಕೆ ರಾತ್ರೋ ರಾತ್ರಿ 20-25 ಜಾಹೀರಾತುಗಳಿಂದ ನನ್ನನ್ನು ಕೈಬಿಟ್ಟರು. ಇದರಿಂದ ಪ್ರತಿ ವರ್ಷಕ್ಕೆ 30-40 ಕೋಟಿ ರೂ. ನಷ್ಟ ಆಗುತ್ತಿದೆ" ಎಂದಿದ್ದಾರೆ.
"ನನಗೆ ಅನಿಸಿದ್ದನ್ನು ಮಾತಾಡುವುದನ್ನು ನಿಲ್ಲಿಸಲ್ಲ"
ಇದೇ ನನಗೆ ಅನಿಸಿದ್ದನ್ನು ಮಾತಾಡುವುದನ್ನು ನಾನು ನಿಲ್ಲಿಸುವುದಿಲ್ಲ. "ನಾನು ಎಲಾನ್ ಮಸ್ಕ್ ಅನ್ನು ಪ್ರಶಂಸೆ ಮಾಡುತ್ತೇನೆ. ಯಾಕಂದ್ರೆ, ಪ್ರತಿಯೊಬ್ಬರೂ ದೌರ್ಬಲ್ಯಗಳನ್ನು ಹೇಳಿಕೊಳ್ಳುತ್ತಾರೆ. ಕನಿಷ್ಠ ಪಕ್ಷ ಶ್ರೀಮಂತರಾದರೂ, ಹಣಕ್ಕಾಗಿ ಕಾಳಜಿ ವಹಿಸಬಾರದು.. ಶ್ರೀಮಂತರೂ ವಂಚಿತರಾಗುವುದನ್ನು ನಾನು ಕಂಡಿದ್ದೇನೆ" ಎಂದು ಕಂಗನಾ ಹೇಳಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬರೋದಾದರೆ, ಅವರ ಕೈಯಲ್ಲಿ 'ಎಮರ್ಜೆನ್ಸಿ', 'ತೇಜಸ್', 'ಚಂದ್ರಮುಖಿ 2', 'ಮಣಿಕರ್ಣಿಕಾ ರಿಟರ್ನ್ಸ್' ಹಾಗೂ 'ದಿ ಇನ್‌ಕಾರ್ನೇಷನ್: ಸೀತಾ' ಸಿನಿಮಾಗಳು ಕೈಯಲ್ಲಿವೆ.


Click it and Unblock the Notifications











