Kangana Ranaut: ₹6 ಕೋಟಿ ಮರುಪಾವತಿಸುವಂತೆ ಜೀ ಸ್ಟುಡಿಯೋ 'ತಲೈವಿ' ವಿರುದ್ಧ ದೂರು.. ಕೆರಳಿದ ಕಂಗನಾ
2021 ಸೆಪ್ಟೆಂಬರ್‌ನಲ್ಲಿ ತಮಿಳುನಾಡಿನ ಮಾಜಿ ಸಿಎಂ ದಿವಂಗತ ಜಯಲಲಿತಾ ಬಯೋಪಿಕ್ ತಲೈವಿ ತೆರೆಕಂಡಿತ್ತು. ಈ ಸಿನಿಮಾವನ್ನು ಜೀ ಸ್ಟುಡಿಯೋಸ್ ವಿತರಣೆ ಮಾಡಿತ್ತು. ಈಗ ಸಿನಿಮಾ ತೆರೆಕಂಡು ಎರಡು ವರ್ಷಗಳ ಬಳಿಕ 'ತಲೈವಿ' ಸಿನಿಮಾದ ವಿರುದ್ಧ ಜೀ ಸ್ಟುಡಿಯೋಸ್ ತಿರುಗಿಬಿದ್ದಿದೆ.
'ತಲೈವಿ' ತೆರೆಕಂಡಲ್ಲಿಂದ ಒಂದಲ್ಲ ಒಂದು ವಿವಾದಕ್ಕ ಸಿಕ್ಕಿಕೊಳ್ಳುತ್ತಲೇ ಇದೆ. ಸಿನಿಮಾ ರಿಲೀಸ್ ಆಗಿ ಎರಡು ವರ್ಷಗಳಾದರೂ, ವಿವಾದದಿಂದ ಮಾತ್ರ ಮುಕ್ತಿ ಸಿಕ್ಕಿಲ್ಲ. ಜೀ ಸ್ಟುಡಿಯೋಸ್ 'ತಲೈವಿ' ಸಿನಿಮಾ ತಮಿಳು ಹಾಗೂ ಹಿಂದಿ ಅವತರಣೆಕೆಯನ್ನು ವಿತರಣೆ ಮಾಡಿತ್ತು. ಆದರೆ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋಲುಂಡಿತ್ತು.
'ತಲೈವಿ' ಪಾತ್ರದಲ್ಲಿ ಬಾಲಿವುಡ್ ಕ್ವೀನ್ ಕಂಗನಾ ರನೌತ್ ನಟಿಸಿದ್ದರು. ತಮಿಳು ನಿರ್ದೇಶಕ ಎಲ್ ವಿಜಯ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ತಮಿಳಿನ ಸ್ಟಾರ್ ನಟ ಅರವಿಂದ್ ಸಾಮಿ ಈ ಸಿನಿಮಾದಲ್ಲಿ ಎಂಜಿಆರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಂತಹ ತಾರಾಗಣವಿದ್ದರೂ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು.

ಈ ಸೋಲಿನ ಹಿಂದೆನೇ ವಿವಾದದಲ್ಲಿಯೂ ಸಿಕ್ಕಿಕೊಂಡಿತ್ತು. ಕೋವಿಡ್ ಬಳಿಕ ಚಿತ್ರಮಂದಿರಗಳು ಸಂಪೂರ್ಣವಾಗಿ ಓಪನ್ ಆಗಿದ್ದವು. ಆ ವೇಳೆ 'ತಲೈವಿ' ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ಸಿನಿಮಾ ಮೊದಲ ದಿನ 32 ಲಕ್ಷ ಗಳಿಸಲಷ್ಟೇ ಸಾಧ್ಯವಾಗಿತ್ತು. ಹಿಂದಿಯ ಲೈಫ್ ಟೈಮ್ ಕಲೆಕ್ಷನ್ 2 ಕೋಟಿ ರೂ. ಇನ್ನು ವಿಶ್ವದಾದ್ಯಂತ ತಮಿಳು ಹಾಗೂ ತೆಲುಗಿನ ಕಲೆಕ್ಷನ್ 5.75 ಕೋಟಿ ಗಳಿಸಿತ್ತಷ್ಟೇ.
ಹೀಗಾಗಿ ನಿರ್ಮಾಪಕರು ಸಿನಿಮಾ ತೆರೆಕಂಡ ಎರಡು ವಾರಗಳಿಗೆ 'ತಲೈವಿ'ಯನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದರು. ನೆಟ್‌ಫ್ಲಿಕ್ಸ್‌ನಲ್ಲಿ 'ತಲೈವಿ' ಸ್ಟ್ರೀಮಿಂಗ್‌ಗೆ ಒಪ್ಪಿಗೆಯನ್ನೂ ನೀಡಿದ್ರು. ಇದು ಮಲ್ಟಿಪ್ಲೆಕ್ಸ್ ಮಾಲೀಕ ಕೆಂಗಣ್ಣಿಗೆ ಗುರಿಯಾಗಿತ್ತು. ಹೀಗಾಗಿ ಈ ಸಿನಿಮಾ ಮಲ್ಟಿಪ್ಲೆಕ್ಸ್ ಬ್ಯಾನ್ ಮಾಡಿತ್ತು.
ಈಗ ಜೀ ಸ್ಟುಡಿಯೋಸ್ ತನಗೆ ಬರಬೇಕಿರೋ 6 ಕೋಟಿ ರೂ.ಯನ್ನು ಹಿಂತಿರುಗಿಸುವಂತೆ ನಿರ್ಮಾಪಕರ ವಿರುದ್ಧ IMPPA (ಇಂಡಿಯನ್ ಮೋಷನ್ ಪಿಕ್ಚರ್ಸ್ ಪ್ರೊಡ್ಯೂಸರ್ಸ್ ಅಸೋಶಿಯೆಷನ್) ಮೊರೆ ಹೋಗಿದೆ. ಈ ಸಂಬಂಧ IMPPAಗೆ ದೂರು ಸಲ್ಲಿಸಿದ್ದು, ಮಧ್ಯಸ್ಥಿಗೆ ವಹಿಸುವಂತೆ ಕೇಳಿಕೊಂಡಿದೆ. ಅಲ್ಲದೆ ಅಗತ್ಯ ಬಿದ್ದರೆ ಕೋರ್ಟ್ ಮೊರೆ ಹೋಗಲು ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
'ತಲೈವಿ' ಸಿನಿಮಾದ ತಮಿಳು, ಹಿಂದಿ ಅವತರಣಿಕೆಗಳನ್ನು ಜೀ ಸ್ಟುಡಿಯೋಸ್ ಭಾರತ ಹಾಗೂ ವಿದೇಶಗಳಲ್ಲಿ ರಿಲೀಸ್ ಮಾಡಿತ್ತು. ಈ ವೇಳೆ ವಿಬ್ರಿ ಮೋಷನ್ ಪಿಕ್ಚರ್ಸ್‌ಗೆ ವಿತರಣೆಯ ಹಕ್ಕುಗಳಿಗಾಗಿ 6 ಕೋಟಿ ಮುಂಗಡ ಹಣವನ್ನು ಪಾವತಿಸಲಾಗಿತ್ತು. ಈ ಹಣವನ್ನು ಹಿಂದಿರುಗಿಸುವಂತೆ ಜೀ ಸ್ಟುಡಿಯೋಸ್ ಕೇಳಿಕೊಂಡಿತ್ತು. ಈ ಸಂಬಂಧ ಪತ್ರವನ್ನು ಬರೆಯಾಗಿತ್ತು. ಆದರೂ, ವಿಬ್ರಿ ಮೋಷನ್ ಪಿಕ್ಚರ್ಸ್ ಪ್ರತಿಕ್ರಿಯೆ ನೀಡಿರಲಿಲ್ಲ. ಹೀಗಾಗಿ IMPPA ಮೆಟ್ಟಿಲೇರಿದೆ.
ಈ ಪ್ರಕರಣಕ್ಕೆ ಕಂಗನಾ ರನೌತ್ ಪ್ರತಿಕ್ರಿಯಿಸಿದ್ದಾರೆ. 'ತಲೈವಿ' ವಿತರಣೆ ಕುರಿತ ಸುದ್ದಿಗಳಲ್ಲಿ ಸತ್ಯಾಂಶವಿಲ್ಲ ಎಂದು ಹೇಳಿಕೊಂಡಿದ್ದಾರೆ. ಸಿನಿಮಾ ಬಿಡುಗಡೆಯಾಗಿ ಎರಡು ವರ್ಷಗಳಾದರೂ ಇಂತಹ ಸುದ್ದಿಗಳು ಹೇಗೆ ಹುಟ್ಟಲು ಸಾಧ್ಯವೆಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ.

" ಇದೆಲ್ಲವೂ ಫಿಲ್ಮ್ ಮಾಫಿಯಾದಿಂದ ಮಾಡಲಾಗುತ್ತಿರುವ ಅಪಪ್ರಚಾರ. ನಾನು ನನ್ನ 'ಎಮರ್ಜೆನ್ಸಿ' ಸಿನಿಮಾವನ್ನು ಜೀ ಸ್ಟುಡಿಯೋಗೆ ಮಾರಾಟ ಮಾಡಿದ್ದೇನೆ. ತಲೈವಿ ಬಿಡುಗಡೆಗೂ ಮುನ್ನವೇ ಲಾಭದಲ್ಲಿತ್ತು. ಈ ಸಿನಿಮಾ ರಿಲೀಸ್ ಆಗಿ ಎರಡು ವರ್ಷಗಳಾಗಿವೆ. ನನ್ನ ಬಗ್ಗೆ ಸುಳ್ಳು ಸುದ್ದಿಗಳನ್ನು ನಿರಂತರವಾಗಿ ಹಬ್ಬಿಸಲಾಗುತ್ತಿದೆ. ನನ್ನ ವಿರುದ್ಧ ಅಸೂಯೆ ವ್ಯಕ್ತಪಡಿಸುತ್ತಿರುವವರನ್ನು ನಿರ್ಲಕ್ಷ್ಯ ಮಾಡಿ" ಎಂದಿದ್ದಾರೆ ಕಂಗನಾ.


Click it and Unblock the Notifications











