"ದಯವಿಟ್ಟು ನನಗೆ ನಿಮ್ಮ ಸಿನಿಮಾದಲ್ಲಿ ಪಾತ್ರ ಕೊಡ್ಬೇಡಿ";'ಅನಿಮಲ್' ನಿರ್ದೇಶಕನಿಗೆ ಕಂಗನಾ ವಾರ್ನಿಂಗ್!

ಬಾಲಿವುಡ್‌ನಲ್ಲಿ ಇತ್ತೀಚೆಗೆ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದ ಸಿನಿಮಾ 'ಅನಿಮಲ್'. ಒಂದ್ಕಡೆ ಬಾಕ್ಸಾಫೀಸ್‌ನಲ್ಲಿ ಸಾವಿರ ಕೋಟಿ ಕ್ಲಬ್ ಸಮೀಪಕ್ಕೆ ಹೋಗುವಷ್ಟು ಕಲೆಕ್ಷನ್ ಮಾಡಿತ್ತು. ಅದೇ ಇನ್ನೊಂದು ಕಡೆ ಸಿನಿಮಾದಲ್ಲಿನ ಹಿಂಸೆ, ಮಹಿಳೆಯ ನಿಂದನೆ ಮಾಡಿದ್ದಕ್ಕೆ ದೇಶಾದ್ಯಂತ ಕೆಲವು ಪ್ರೇಕ್ಷಕರು ಕಿಡಿಕಾರಿದ್ದರು. ಅದರಲ್ಲಿ ಬಾಲಿವುಡ್‌ನ ಕಾಂಟ್ರವರ್ಸಿ ಕ್ವೀನ್ ಕಂಗನಾ ರಣಾವತ್ ಕೂಡ ಒಬ್ಬರು.

'ಅನಿಮಲ್' ಸಿನಿಮಾ ನೋಡಿ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ವಿರುದ್ಧ ಕಂಗನಾ ಆಕ್ರೋಶ ಹೊರಹಾಕಿದ್ದರು. ಮಹಿಳೆಯ ಘನತೆಯನ್ನು ತೆರೆಮೇಲೆ ಹರಾಜು ಹಾಕಿದ್ದಾರೆಂದು ಸಿಡಿಮಿಡಿಗೊಂಡಿದ್ದರು. ಈ ಸಿನಿಮಾ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದ ಬಾಲಿವುಡ್‌ನ ಕೆಲವೇ ಕೆಲವು ತಾರೆಯರಲ್ಲಿ ಕಂಗನಾ ಕೂಡ ಒಬ್ಬರು. ಇದಕ್ಕೆ ಸಂದೀಪ್ ರೆಡ್ಡಿ ವಂಗಾ ಕೂಡ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ್ದರು.

Kangana Ranaut said dont offer role for me to Animal director Sandeep Reddy Vanga

'ಅನಿಮಲ್' ನಿರ್ದೇಶಕನ ಈ ಪ್ರತಿಕ್ರಿಯೆಗೆ ಕಂಗನಾ ಮತ್ತೆ ತಿರುಗೇಟು ಕೊಟ್ಟಿದ್ದಾರೆ. ಇಬ್ಬರ ನಡುವಿನ ಈ ಮಾತಿನ ಜಟಾಪಟಿ ಬಾಲಿವುಡ್‌ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾಗೆ "ದಯವಿಟ್ಟು ನನಗೆ ಯಾವ ಪಾತ್ರವನ್ನು ಕೊಡಬೇಡಿ" ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಅಷ್ಟಕ್ಕೂ ಸಂದೀಪ್ ರೆಡ್ಡಿ ವಂಗಾ ಹೇಳಿದ್ದೇನು? ಅದಕ್ಕೆ ಕಂಗನಾ ತಿರುಗೇಟು ಕೊಟ್ಟಿದ್ದೇಕೆ? ತಿಳಿಯಲು ಮುಂದೆ ಓದಿ..

'ಅನಿಮಲ್' ವಿರುದ್ಧ ಕಂಗನಾ ಕಿಡಿ

ರಣ್‌ಬೀರ್ ಕಪೂರ್ ನಟನೆಯ 'ಅನಿಮಲ್' ಸಿನಿಮಾ ನೋಡಿ ಕಂಗನಾ ಕಿಡಿ ಕಾರಿದ್ದರು. "ಮಹಿಳೆಯರಿಗೆ ಹೊಡೆಯುವುದು, ಶೋಗಳನ್ನು ನೆಕ್ಕುವಂತೆ ಹೇಳುವುದು, ಸೆಕ್ಸ್ ವಸ್ತುಗಳಂತೆ ಬಳಸಿಕೊಳ್ಳುವುದನ್ನು ಪ್ರೋತ್ಸಾಹಿಸುತ್ತಿದ್ದಾರೆ" ಎಂದು ಕಂಗನಾ 'ಅನಿಮಲ್' ನಿರ್ದೇಶಕರ ವಿರುದ್ಧ ಕಿಡಿಕಾರಿದ್ದರು. ಇಂತಹ ಕಂಟೆಂಟ್‌ಗಳು ಸಿನಿಮಾದಲ್ಲಿ ಇರಬಾರದು ಅಂತ ಆಕ್ರೋಶ ಹೊರಹಾಕಿದ್ದರು. ಇದಕ್ಕೆ ಇತ್ತೀಚೆಗಿನ ಸಂದರ್ಶನದಲ್ಲಿ ಸಂದೀಪ್‌ಗೆ ಈ ಬಗ್ಗೆ ಪ್ರಶ್ನೆ ಕೇಳಲಾಗಿತ್ತು.

ಕಂಗನಾಗೆ ಕಥೆ ಹೇಳುತ್ತೇನೆ

ಕಂಗನಾ 'ಅನಿಮಲ್' ಸಿನಿಮಾವನ್ನು ವಿಮರ್ಶೆ ಮಾಡಿದ್ದಕ್ಕೆ ಸಂದೀಪ್ ರೆಡ್ಡಿ ವಂಗಾ ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ್ದರು. " ಪಾತ್ರಕ್ಕೆ ಕಂಗನಾ ಸೂಕ್ತ ಎನಿಸಿ, ಅವಕಾಶ ಸಿಕ್ಕರೆ ಅವರ ಬಳಿ ಹೋಗಿ ಕಥೆ ಹೇಳುತ್ತೇನೆ. ಅವರು ನಟಿಸಿದ ಕ್ವೀನ್ ಹಾಗೂ ಕೆಲವು ಸಿನಿಮಾಗಳನ್ನು ನೋಡಿದ್ದೇನೆ. ಅವರ ನಟನೆಯನ್ನು ಇಷ್ಟ ಪಟ್ಟಿದ್ದೇನೆ. ನನ್ನ ಸಿನಿಮಾ ಅನಿಮಲ್ ನೋಡಿ ನೆಗೆಟಿವ್ ಆಗಿ ಮಾತಾಡಿದರೂ ನನಗೆ ಕೋಪ ಬರುವುದಿಲ್ಲ. ನಾನಿಲ್ಲಿ ರಾಜಕೀಯವಾಗಿ ಸರಿ ಯಾವುದು? ತಪ್ಪು ಯಾವುದು? ಅಂತ ಮಾತಾಡುತ್ತಿಲ್ಲ. ನನಗೆ ಅವರ ನಟನೆ ಇಷ್ಟವಾಗಿದೆ ಅಷ್ಟೇ." ಎಂದು ಹೇಳಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಕಂಗನಾ ಫುಲ್ ರಾಂಗ್ ಆಗಿದ್ದಾರೆ.

"ದಯವಿಟ್ಟು ನನಗೆ ಪಾತ್ರ ಕೊಡಬೇಡಿ"

ಕಂಗನಾ ರಣಾವತ್ ಎಕ್ಸ್ (ಟ್ವಿಟರ್)ನಲ್ಲಿ ಹರಿದಾಡುತ್ತಿರುವ ವಿಡಿಯೋವನ್ನು ಟ್ಯಾಗ್ ಮಾಡಿ ತಿರುಗೇಟು ಕೊಟ್ಟಿದ್ದಾರೆ. "ವಿಮರ್ಶೆ ಹಾಗೂ ಟೀಕೆ ಇವೆರಡೂ ಒಂದೇ ಅಲ್ಲ. ಎಲ್ಲಾ ಪ್ರಕಾರದ ಆರ್ಟ್ ಅನ್ನೂ ವಿಮರ್ಶಿಸಬೇಕು. ಚರ್ಚೆಗೆ ಒಳಪಡಿಸಬೇಕು. ಹಾಗೇ ಚರ್ಚೆಗೆ ಒಳಪಡಿಸುವುದು ಒಳ್ಳೆಯದು. ಸಂದೀಪ್​ ಅವರು ನಗುತ್ತಲೇ ನಾನು ಮಾಡಿದ ವಿಮರ್ಶೆ ಬಗ್ಗೆ ಗೌರವ ನೀಡಿದ್ದಾರೆ. ಇದನ್ನು ನೋಡಿದರೆ ಅವರು ಕೇವಲ ಗಂಡಿಸಿನ ಪರಾಕ್ರಮದ ಬಗ್ಗೆ ಮಾತ್ರ ಸಿನಿಮಾ ಮಾಡುವುದಷ್ಟೇ ಅಲ್ಲ, ಅವರ ವರ್ತನೆ​ ಕೂಡ ಹಾಗೆಯೇ ಇದೆ ಅನಿಸುತ್ತದೆ. ನಿಮಗೆ ಧನ್ಯವಾದಗಳು ಸರ್​. ನೀವು ದಯವಿಟ್ಟು ನನಗೆ ಯಾವುದೇ ಪಾತ್ರವನ್ನೂ ಕೊಡಬೇಡಿ. ಒಂದು ವೇಳೆ ಕೊಟ್ಟಿದ್ದೇ ಆದರೆ, ನಿಮ್ಮ ಆಲ್ಫಾ ಮೇಲ್​ ಹೀರೊಗಳು ಸ್ತ್ರೀವಾದಿಗಳಾಗಿ ಬಿಡುತ್ತಾರೆ. ಆಗ ನಿಮ್ಮ ಸಿನಿಮಾಗಳು ಹೀನಾಯವಾಗಿ ಸೋಲುತ್ತವೆ. ಬ್ಲಾಕ್​ ಬಸ್ಟರ್​ ಸಿನಿಮಾಗಳನ್ನು ಕೊಡುವ ನೀವು ಇಂಡಸ್ಟ್ರಿಗೆ ಅಗತ್ಯ ಇದೆ" ಎಂದು ಕಂಗನಾ ರಣಾವತ್​ ತಿರುಗೇಟು ಕೊಟ್ಟಿದ್ದಾರೆ.

More from Filmibeat

English summary
Kangana Ranaut warning to Animal director Sandeep Reddy Vanga.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X