ಕಂಗನಾ ಕೆನ್ನೆಗೆ ಕಪಾಳಮೋಕ್ಷ; ನೂತನ ಸಂಸದೆ ವ್ಯಕ್ತಪಡಿಸಿದ ಆತಂಕವೇನು?
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಕಂಗನಾ ರನೌತ್ ನೂತನವಾಗಿ ಆಯ್ಕೆಯಾಗಿದ್ದಾರೆ. ಈ ಬೆನ್ನಲ್ಲೇ ಚಂಡೀಗಢದ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಸಿಬ್ಬಂದಿ ಕಪಾಳ ಮೋಕ್ಷ ಮಾಡಿದ್ದರು. ಈ ಸುದ್ದಿ ಹರಡುತ್ತಿದ್ದಂತೆ ದೇಶಾದ್ಯಂತ ಟೀಕೆಗಳು ಹರಿದು ಬರುತ್ತಿವೆ.
ಕಪಾಳಮೋಕ್ಷ ಮಾಡಿದ ವಿಡಿಯೋ ಹರಿದಾಡುತ್ತಿದ್ದಂತೆ ಕಂಗನಾ ರನೌತ್ ಪ್ರತಿಕ್ರಿಯೆ ನೀಡಿದ್ದಾರೆ. ತನ್ನ ಎಕ್ಸ್ ಖಾತೆಯ ಮೂಲಕ ವಿಡಿಯೋ ಒಂದನ್ನು ಶೇರ್ ಮಾಡಿಕೊಂಡಿದ್ದು, ಘಟನೆಯನ್ನು ವಿವರಿಸಿದ್ದಾರೆ. ಇದರ ಜೊತೆಗೆ ಕಂಗನಾ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಯನ್ನು ವಿವರಿಸಿದ ಕಂಗನಾ ವೀಡಿಯೋ ಹೇಳಿಕೆ ರಿಲೀಸ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮಾಧ್ಯಮಗಳು ಹಾಗೂ ಹಿತೈಷಿಗಳು ಫೋನ್ ಕರೆಗಳನ್ನು ಮಾಡುತ್ತಿದ್ದಾರೆ. ನಾನು ಸುರಕ್ಷಿತವಾಗಿದ್ದೇನೆ ಎಂದು ಹೇಳಿದ್ದಾರೆ. ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಹೀಗೆ ಹೇಳಿದ್ದಾರೆ.
"ನಮಸ್ಕಾರ ಸ್ನೇಹಿತರೇ.. ನನಗೆ ಮೀಡಿಯಾ ಕಡೆಯಿಂದ ಹಾಗೂ ಹಿತೈಶಿಗಳಿಂದ ಸಿಕ್ಕಾಪಟ್ಟೆ ಫೋನ್ ಕರೆಗಳು ಬರುತ್ತಿವೆ. ಮೊದಲನೆಯದ್ದಾಗಿ ನಾನು ಸೇಫ್ ಆಗಿದ್ದೇನೆ. ಇಂದು ಚಂಢೀಗಡ ಏರ್‌ಪೋರ್ಟ್‌ನಲ್ಲಿ ಏನು ಘಟನೆ ನಡೆದಿದೆ ಅದು ಸೆಕ್ಯೂರಿಟಿ ಚೆಕ್ ಮಾಡುವವರೊಂದಿಗೆ ನಡೆದಿದೆ. ನಾನು ಸೆಕ್ಯೂರಿಟಿ ಚೆಕ್ ಮಾಡಿದ ಬಳಿಕ ಮುಂದಕ್ಕೆ ಹೋಗುತ್ತಿದ್ದಂತೆ ಇನ್ನೊಂದು ಕ್ಯಾಬಿನ್‌ನಲ್ಲಿ ಮಹಿಳೆ ಇದ್ದರು ಸಿಐಎಸ್‌ಎಫ್ ಸೆಕ್ಯುರಿಟಿ ಸಿಬ್ಬಂದಿಯಾಗಿದ್ದರು ಅವರು ನಾನು ದಾಟಿ ಬರುವುದನ್ನೇ ಕಾಯುತ್ತಿದ್ದರು. ಸೈಡ್‌ನಿಂದ ಬಂದು ಹೊಡೆದರು. ಬೈಯ್ಯುವುದಕ್ಕೆ ಶುರು ಮಾಡಿದ್ದರು." ಎಂದು ಘಟನೆಯನ್ನು ವಿವರಿಸಿದ್ದಾರೆ.
ಹಾಗೇ, "ನೀನು ಯಾಕೆ ಹೀಗೆ ಮಾಡಿದೆ ಅಂತ ನಾನು ಅವರಿಗೆ ಕೇಳಿದೆ. ಅವರು ರೈತರ ಪ್ರತಿಭಟನೆ ಏನಿದೆ? ಅದಕ್ಕೆ ಸಪೋರ್ಟ್ ಮಾಡುತ್ತೇನೆ ಎಂದರು. ಸದ್ಯ ನಾನು ಸೇಫ್ ಆಗಿದ್ದೇನೆ. ಆದರೆ, ಪಂಜಾಬ್‌ನಲ್ಲಿ ಹೆಚ್ಚಾಗುತ್ತಿರುವ ಉಗ್ರವಾದದ ಬಗ್ಗೆ ನನಗೆ ಆತಂಕ ಹೆಚ್ಚಾಗಿದೆ" ಎಂದು ಕಂಗನಾ ರಣಾವತ್ ವಿಡಿಯೋ ಮಾಡಿ ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬಾಲಿವುಡ್ ನಟಿ ಹಾಗೂ ಮಂಡಿ ಕ್ಷೇತ್ರದ ನೂತನ ಸಂಸದೆ ಕಂಗನಾ ಚಂಡೀಗಢದಿಂದ ದೆಹಲಿ ಕಡೆಗೆ ಪಯಣ ಬೆಳೆಸಿದ್ದರು. ಈ ವೇಳೆ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ವಿಭಾಗದ ಸಿಐಎಸ್ಎಫ್ ಮಹಿಳಾ ಸಿಬ್ಬಂದಿ ಕುಲ್ವಿಂದರ್ ಕೌರ್ ಎಂಬುವವರು ಕಂಗನಾಗೆ ಕಪಾಳಮೋಕ್ಷ ಮಾಡಿದ್ದರು. ಸದ್ಯ ಕುಲ್ವಿಂದರ್ ಕೌರ್ ಅವರನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ ಎನ್ನಲಾಗಿದೆ.


Click it and Unblock the Notifications











