"ಹೃದಯಗಳೇ ಒಂದಾದ್ಮೇಲೆ.. ಜನರ ಅಗತ್ಯತೆಗಳ ಬಗ್ಗೆ ಏನ್ ಹೇಳೋದು?": ಸಲಿಂಗ ವಿವಾಹಕ್ಕೆ 'ಕ್ವೀನ್' ಬೆಂಬಲ!

ಬಾಲಿವುಡ್‌ ಕ್ವೀನ್ ಕಂಗನಾ ರನೌತ್ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದರು. ಇತ್ತೀಚೆಗೆ ಯಾಕೋ ಕೊಂಚ ವೈಲೆಂಟ್ ಆಗದೇ ಸೈಲೆಂಟ್ ಆಗಿದ್ದಾರೆ. ಯಾರ ಮೇಲೂ ತಿರುಗಿ ಬೀಳುವ ಗೋಜಿಗೆ ಹೋಗುತ್ತಿಲ್ಲ.

ಕಂಗನಾ ರನೌತ್ ಇತ್ತೀಚೆಗೆ ಹರಿದ್ವಾರಕ್ಕೆ ಹೋಗಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಚರ್ಚೆ ಮಾಡುವ ವೇಳೆ ಕೆಲವು ಗಂಭೀರ ವಿಷಯಗಳ ಬಗ್ಗೆ ಮಾತಾಡಿದ್ದಾರೆ. ಈ ಸಂದರ್ಭದಲ್ಲಿ ಕಂಗನಾಗೆ ಸಲಿಂಗ ವಿವಾಹದ ಬಗ್ಗೆನೂ ಪ್ರಶ್ನೆ ಮಾಡಲಾಗಿತ್ತು.

Kangana Ranaut shared her opinion on same-sex marriage in Haridwar

ಇತ್ತೀಚೆಗೆ ಸುಪ್ರೀಂ ಕೋರ್ಟ್ ಭಾರತದಲ್ಲಿ ಸಲಿಂಗ ವಿವಾಹಕ್ಕೆ ಕಾನೂನಿನ ಮಾನತ್ಯೆ ನೀಡುವ ಅರ್ಜಿಯ ವಿಚಾರಣೆ ನಡೆಸಿತು. ಅದನ್ನೇ ಗಮನದಲ್ಲಿಟ್ಟುಕೊಂಡು ಹರಿದ್ವಾರ ಟ್ರಿಪ್‌ನಲ್ಲಿದ್ದ ಕಂಗನಾ ರನೌತ್‌ಗೆ ಸಲಿಂಗ ವಿವಾಹದ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಈ ವೇಳೆ ಕಂಗನಾ ಸಲಿಂಗ ವಿವಾಹವನ್ನು ಬೆಂಬಲಿಸಿದ್ದಾರೆ.

" ಮದುವೆ ಅನ್ನೋದು ಹೃದಯಕ್ಕೆ ಸಂಬಂಧಪಟ್ಟಿದ್ದು, ಅದು ಎಲ್ಲರಿಗೂ ಗೊತ್ತು. ಹೃದಯಗಳೇ ಒಂದಾದ ಮೇಲೆ ನಾವು ಜನರ ಅಗತ್ಯತೆಗಳ ಬಗ್ಗೆ ಏನು ಮಾತಾಡೋಕೆ ಆಗುತ್ತೆ?" ಎಂದು ಮಾಧ್ಯಮಗಳ ಪ್ರಶ್ನೆ ಪ್ರತಿಕ್ರಿಯೆ ನೀಡಿದ್ದಾರೆ.

ಕಂಗನಾ ಸಲಿಂಗ ವಿವಾಹಕ್ಕೆ ಬೆಂಬಲ ಸೂಚಿಸಿ ಮಾತಾಡಿರುವ ವಿಡಿಯೋ ಟ್ವಿಟರ್‌ನಲ್ಲಿ ಹರಿದಾಡಿತ್ತು. ಆ ವಿಡಿಯೋ ನೋಡಿದ ಬಳಿಕ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. " ಕೇವಲ ಬಾಲಿವುಡ್ ಸೆಲೆಬ್ರೆಟಿಗಳು ಸಲಿಂಗ ವಿವಾಹವನ್ನು ಬೆಂಬಲಿಸುತ್ತಿದ್ದಾರೆ. ಇವರು ನಿಜವಾದ ಅರ್ಥದಲ್ಲಿ ಪ್ರಗತಿಪರರು" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು "ನಾನು ಆಕೆಯ ಅಭಿಮಾನಿಯಲ್ಲ. ಆದರೆ, ನಾನು ಈ ಕಾರಣಕ್ಕೆ ಅವರಿಗೆ ಗೌರವ ನೀಡುತ್ತೇನೆ. ಸಾರ್ವಜನಿಕವಾಗಿ LGBTQIA+ ಸಮುದಾಯಕ್ಕೆ ಮುಕ್ತವಾಗಿ ಬೆಂಬಲ ನೀಡುತ್ತಿರುವ ಕೆಲವೇ ಕೆಲವು ಸೆಲೆಬ್ರೆಟಿಗಳಲ್ಲಿ ಇವರು ಒಬ್ಬರು" ಎಂದು ಕಮೆಂಟ್ ಮಾಡಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿರೋ ಸಲಿಂಗ ವಿವಾಹ ಕೇಸ್ ಬಗ್ಗೆ ಕೆಲವು ದಿನಗಳ ಹಿಂದೆ ಕಂಗನಾ ರನೌತ್ ಟ್ವಿಟರ್‌ನಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು." ನೀನು ಪುರುಷ ಆಗಿರು ಅಥವಾ ಮಹಿಳೆಯಾಗಿರು. ನಿಮ್ಮ ಲಿಂಗ ಯಾವುದು ಅನ್ನೋದು ನಿಮಗೆ ಬಿಟ್ಟು ಬೇರೆ ಯಾರಿಗೂ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಮಾಡರ್ನ್ ಜಗತ್ತಿನಲ್ಲಿ ನಾವು ನಟಿಯರು ಅಥವಾ ಮಹಿಳಾ ನಿರ್ದೇಶಕರು ಎಂಬ ಪದಗಳನ್ನು ಬಳಸುವುದಿಲ್ಲ. ಬದಲಾಗಿ ಆಕ್ಟರ್ ಹಾಗೂ ಡೈರೆಕ್ಟರ್ ಎಂದು ಕರೆಯುತ್ತೇವೆ. ಈ ಜಗತ್ತಿನಲ್ಲಿ ನೀವು ಏನು ಮಾಡುತ್ತಿದ್ದೀರಿ ಎಂಬುದು ನಿಮ್ಮ ಗುರುತೇ ಹೊರತು, ನೀವು ಹಾಸಿಗೆಯಲ್ಲಿ ಏನು ಮಾಡುತ್ತೀರಿ ಅನ್ನೋದಲ್ಲ" ಎಂದು ಕಂಗನಾ ಟ್ವೀಟ್ ಮಾಡಿದ್ದರು.

More from Filmibeat

English summary
Kangana Ranaut shared her opinion on same-sex marriage in Haridwar, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X