"ಹೀರೋಗಳ ರೂಮಿಗೆ ಹೋಗುವಂತೆ ಒತ್ತಾಯ ಮಾಡ್ತಿದ್ರು" ಕಂಗನಾ ಗಂಭೀರ ಆರೋಪ!

ಬಾಲಿವುಡ್‌ ನಟಿ ಕಂಗನಾ ರನೌತ್ ವಿವಾದಗಳ ರಾಣಿ ಅನ್ನೋದು ಹೊಸದಾಗಿ ಏನೂ ಹೇಳಬೇಕಿಲ್ಲ. ಬಾಲಿವುಡ್‌ ವಿರುದ್ಧ ಆಗಾಗ ಏನಾದರೂ ಒಂದು ಆರೋಪ ಮಾಡುತ್ತಲೇ ಇರುತ್ತಾರೆ. ಬಾಲಿವುಡ್ ನಟ-ನಟಿಯರ ವಿರುದ್ಧ ಕಂಗನಾ ತಿರುಗಿಬಿದ್ದಿದ್ದು ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಇದೇ ವೇಳೆ ಮತ್ತೆ ಬಾಲಿವುಡ್ ಮಂದಿಯ ವಿರುದ್ಧ ತಿರುಗಿಬಿದ್ದಿದ್ದಾರೆ. ಸದ್ಯ ಈ ವಿಷಯ ಕೂಡ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ. ಕಂಗನಾ ರನೌತ್ ಈ ಹಿಂದೆ ಬಾಲಿವುಡ್ ಮಾಫಿಯಾ ಗ್ಯಾಂಗ್ ಎಂದು ಟೀಕಿಸಿದ್ದರು. ಈಗ ಮತ್ತೊಂದು ಟ್ವೀಟ್ ಮೂಲಕ ಕೆಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಇತ್ತೀಚೆಗೆ ಕಂಗನಾ ರೌನತ್ ಕರಣ್ ಜೋಹರ್ ಹಾಗೂ ಸ್ಟಾರ್ ಮಕ್ಕಳ ಬಗ್ಗೆ ಟ್ವೀಟ್ ಮಾಡಿದ್ದರು. ಈಗ ಬಾಲಿವುಡ್ ಹೀರೊಗಳ ಬಗ್ಗೆ ಗಂಭೀರ ಆರೋಪಗಳನ್ನು ಮಾಡಿದ್ದಾರೆ. "ಬಾಲಿವುಡ್‌ನ ಹೀರೊಗಳ ರೂಮಿಗೆ ಹೋಗುವಂತೆ ಹಲವು ಬಾರಿ ಒತ್ತಾಯ ಮಾಡುತ್ತಿದ್ದರು. ಅದನ್ನು ಒಪ್ಪದೆ ಇದ್ದಾಗ, ನನ್ನನ್ನು ಹುಚ್ಚಿ ಎಂದು ಕರೆದು ಬಿಟ್ಟರು" ಎಂದು ಬಾಲಿವುಡ್ ಕ್ವೀನ್ ಕಂಗನಾ ರನೌತ್ ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಕಂಗನಾ ಟ್ವೀಟ್ ಮಾಡಿದ್ದು, ಈ ಟ್ವೀಟ್ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

Kangana Ranaut Shocking Comment that she was forced to visit heroes rooms but strongly refused

"ಬಾಲಿವುಡ್ ಗ್ಯಾಂಗ್ ನನ್ನ ವರ್ತನೆಯನ್ನು ಅಹಂಕಾರವೆಂದು ಕರೆಯಿತು. ಯಾಕಂದ್ರೆ, ನಾನು ಬೇರೆ ಹುಡುಗಿಯರ ಹಾಗೆ ಮುಗುಳುನಗೆ ಬೀರಲಿಲ್ಲ, ಐಟಂ ಸಾಂಗ್ ಮಾಡಲಿಲ್ಲ, ಮದುವೆಯಲ್ಲಿ ಕುಣಿಯಲಿಲ್ಲ, ರಾತ್ರಿ ಹೊತ್ತಲ್ಲಿ ಹೀರೊಗಳು ಕರೆದ ಕೂಡಲೇ ಅವರ ಕೋಣೆಗೆ ಹೋಗುವುದನ್ನು ಸರಾಸಗಟಾಗಿ ತಿರಸ್ಕರಿಸಿದ್ದೆ. ಇದಕ್ಕೆ ನನ್ನನ್ನು ಹುಚ್ಚಿ ಎಂದು ಕರೆದರು. ಈ ವರ್ತನೆಯ ವಿರುದ್ಧ ನನ್ನನ್ನು ಜೈಲಿಗೆ ಕಳಿಸುತ್ತಾರೆಯೇ? ತಮ್ಮನ್ನು ತಾವು ಸುಧಾರಣೆ ಮಾಡಿಕೊಳ್ಳುವುದನ್ನು ಬಿಟ್ಟು,ನನ್ನನ್ನು ಸುಧಾರಣೆ ಮಾಡುವುದಕ್ಕೆ ಬರುತ್ತಿದ್ದಾರೆ. ವಿಷಯ ಏನಂದ್ರೆ, ನನಗೋಸ್ಕರ ಏನೂ ಬೇಡ. ನಾನು ನನ್ನದೆಲ್ಲ ಆಸ್ತಿಯನ್ನು ಅಡವಿಟ್ಟು ಒಂದು ಸಿನಿಮಾ ಮಾಡಿದ್ದೇನೆ. ರಕ್ಷಸರ ನಿರ್ನಾಮ ಆಗುತ್ತೆ. ತಲೆಗಳು ಉರುಳುತ್ತವೆ. ಯಾರೂ ನನ್ನನ್ನು ದೂಷಿಸಬೇಡಿ." ಎಂದು ಕಂಗನಾ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಮಾಡುತ್ತಿದ್ದಂತೆ ಕಂಗನಾ ರನೌತ್ ಹಲವು ಟೀಕೆಗಳನ್ನು ಎದುರಿಸಬೇಕಾಗಿದೆ. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ವಿಕ್ಟಿಮ್ ಕಾರ್ಡ್ ಪ್ಲೇ ಮಾಡುವುದನ್ನು ನಿಲ್ಲಿಸುವಂತೆ ಕಮೆಂಟ್ ಮಾಡುತ್ತಿದ್ದಾರೆ. ಒಬ್ಬರಂತೂ " ಯೇ ಆಂಟಿ ನಿನ್ನ ಸಿನಿಮಾ ರಿಲೀಸ್ ಆಗುವಾಗ ಇಂತಹ ವಿಕ್ಟಿಮ್ ಕಾರ್ಡ್ ಪ್ಲೇ ಮಾಡುವುದನ್ನು ಮೊದಲು ನಿಲ್ಲಿಸು. ಇದು ಹಳೆಯ ಟ್ರಿಕ್. ಯಾವುದಾದರೂ ಹೊಸ ಟ್ರಿಕ್ ಇದ್ದರೆ ಉಪಯೋಗಿಸಿ, ಪ್ರಚಾರದ ತಂತ್ರವನ್ನು ಬಳಸಿ." ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.

ಕಂಗನಾ ರನೌತ್ ಹಲವು ವರ್ಷಗಳಿಂದ ಬಾಲಿವುಡ್ ಸೆಲೆಬ್ರೆಟಿಗಳ ವಿರುದ್ಧ ಮಾತಾಡುತ್ತಿದ್ದಾರೆ. ಇದರಿಂದ ಹಲವು ಮಂದಿಯ ವಿರೋಧವನ್ನೂ ಕಟ್ಟಿಕೊಂಡಿದ್ದಾರೆ. ಇನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಬೆಂಬಲವನ್ನೂ ಸೂಚಿಸಿದ್ದಾರೆ. ಕಂಗನಾ ಫೇವರಿಟ್ ಟಾರ್ಗೆಟ್ ಕರಣ್ ಜೋಹರ್. ಈಕೆಯ ಪ್ರಕಾರ, ನೆಪೊಟಿಸಂಗೆ ಪ್ರಮುಖ ಕಾರಣ ಕರಣ್ ಜೋಹರ್ ಎಂದು ಈಕೆಯ ನಂಬಿಕೆ. ಅಲ್ಲಿಂದ ಕಂಗನಾ ರನೌತ್ ಬಾಲಿವುಡ್ ನಿರ್ಮಾಪಕ ಕಮ್ ನಿರ್ದೇಶಕ ಕರಣ್ ಜೋಹರ್ ಅನ್ನು ಬಾಲಿವುಡ್ ಮಾಫಿಯಾ ಎಂದು ಕರೆಯುತ್ತಿದ್ದಾರೆ.

More from Filmibeat

English summary
Kangana Ranaut Shocking Comment that she was forced to visit heroes rooms but strongly refused, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X