ಮಹೇಶ್ ಭಟ್ ಹೊಸಬರಿಗೆ ಅವಕಾಶ ನೀಡುವುದು ಏಕೆ ಗೊತ್ತೇ?: ಕಂಗನಾ ನೀಡಿದ ವಿವರಣೆ

ಬಾಲಿವುಡ್‌ನಲ್ಲಿ ಸ್ವಜನಪಕ್ಷಪಾತದ ಚರ್ಚೆ ಮುಂದುವರಿದಿದೆ. ತಮಗೆ ಯಾವ ಸ್ಟಾರ್ ಹೀರೋಗಳೂ ಬೇಡ ಎಂದು ವಿಭಿನ್ನ ಸಿನಿಮಾಗಳನ್ನು ಮಾಡುತ್ತಿರುವ ನಟಿ ಕಂಗನಾ ರಣಾವತ್, ನಿರ್ದೇಶಕ ಮಹೇಶ್ ಭಟ್ ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

Recommended Video

RockLine Venkatesh Hospitalized,ಆಸ್ಪತ್ರೆಗೆ ದಾಖಲಾದ ರಾಕ್ ಲೈನ್ ವೆಂಕಟೇಶ್ | Filmibeat Kannada

'ಗ್ಯಾಂಗ್ ಸ್ಟರ್' ಚಿತ್ರಕ್ಕೆ 2006ರ ಫಿಲ್ಮ್ ಫೇರ್ ಅವಾರ್ಡ್ ಕಾರ್ಯಕ್ರಮದಲ್ಲಿ ಅತ್ಯುತ್ತಮ ಪದಾರ್ಪಣೆಯ ನಟಿ ಪ್ರಶಸ್ತಿ ಪಡೆದಿದ್ದ ಕಂಗನಾರ ವಿಡಿಯೋವನ್ನು ಪೂಜಾ ಭಟ್ ಹಂಚಿಕೊಂಡಿದ್ದಾರೆ. ಈ ಚಿತ್ರ ಪೂಜಾ ಭಟ್ ಕುಟುಂಬದ ವಿಶೇಷ್ ಫಿಲಂಸ್ ನಿರ್ಮಾಣ ಸಂಸ್ಥೆಯಿಂದ ತಯಾರಾಗಿತ್ತು. ಪೂಜಾ ತಂದೆ ಮಹೇಶ್ ಭಟ್ ಮತ್ತು ಚಿಕ್ಕಪ್ಪ ಮುಕೇಶ್ ಭಟ್ ಇದರ ಮಾಲೀಕರು. ಪ್ರಶಸ್ತಿ ಪಡೆದಿದ್ದ ಕಂಗನಾ, ಅದಕ್ಕಾಗಿ ಮುಕೇಶ್ ಮತ್ತು ಮಹೇಶ್ ಅವರಿಗೆ ಧನ್ಯವಾದ ಸಲ್ಲಿಸಿದ್ದರು. ವೇದಿಕೆಗೆ ಹೋಗುವಾಗ ಅವರಿಗೆ ಅಪ್ಪುಗೆ ಕೂಡ ನೀಡಿದ್ದರು. ಮುಂದೆ ಓದಿ...

ವಿಡಿಯೋ ಸುಳ್ಳು ಹೇಳುತ್ತವೆಯೇ?

ವಿಡಿಯೋ ಸುಳ್ಳು ಹೇಳುತ್ತವೆಯೇ?

'ಊಹಿಸಿ, ವಿಡಿಯೋಗಳೂ ಸುಳ್ಳು ಹೇಳುತ್ತವೆಯೇ? ಇಲ್ಲಿ ಒಬ್ಬರ ಮೇಲೆ ಆರೋಪ ಮಾಡುವುದು ಅದನ್ನು ನಿರಾಕರಿಸುವುದು ಮುಂತಾದವುಗಳು ನನಗೆ ಬೇಡ. ಅದರ ಬದಲು ವಾಸ್ತವಗಳನ್ನು ನಿಮ್ಮ ಮುಂದೆ ಇಡುತ್ತೇನೆ' ಎಂದು ಪೂಜಾ ಭಟ್ ಬರೆದಿದ್ದಾರೆ.

ಚಪ್ಪಲಿ ಎಸೆಯುವ ಹಕ್ಕು ಇಲ್ಲ

ಚಪ್ಪಲಿ ಎಸೆಯುವ ಹಕ್ಕು ಇಲ್ಲ

ಇದಕ್ಕೆ ಖಡಕ್ ಪ್ರತಿಕ್ರಿಯೆ ನೀಡಿರುವ ಕಂಗನಾ ರಣಾವತ್ ತಂಡ, 'ಆತ್ಮೀಯ ಪೂಜಾ, ಕಂಗನಾ ಅವರ ಪ್ರತಿಭೆಯನ್ನು ಗುರುತಿಸಿದ್ದು ಅನುರಾಗ್ ಬಸು. ಮುಕೇಶ್ ಭಟ್ ಕಲಾವಿದರಿಗೆ ಹಣ ನೀಡುವುದನ್ನು ಬಯಸುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಪ್ರತಿಭಾವಂತ ಜನರಿಂದ ಬಿಟ್ಟಿಯಾಗಿ ದುಡಿಸಿಕೊಳ್ಳುತ್ತಾರೆ. ಇದರಿಂದ ಅನೇಕರಿಗೆ ಲಾಭವಾಗುತ್ತದೆ. ಆದರೆ ಇದರ ಅರ್ಥ ನಿಮ್ಮ ತಂದೆಗೆ ಆಕೆಯತ್ತ ಚಪ್ಪಲಿ ಎಸೆಯುವ ಪರವಾನಗಿ ಕೊಡುವುದಿಲ್ಲ ಎಂದು ಹೇಳಿದೆ.

ಸುಶಾಂತ್ ಸಂಬಂಧದಲ್ಲಿ ಹಸ್ತಕ್ಷೇಪ

ಸುಶಾಂತ್ ಸಂಬಂಧದಲ್ಲಿ ಹಸ್ತಕ್ಷೇಪ

ಆಕೆಯನ್ನು ಹುಚ್ಚಿ ಎಂದು ಕರೆಯುವುದು ಮತ್ತು ಆಕೆಗೆ ಹಿಂಸೆ ನೀಡುವುದು. ಆಕೆಗೆ ದುರಂತ ಅಂತ್ಯ ಆಗುತ್ತದೆ ಎಂದೂ ನಿಮ್ಮ ತಂದೆ ಹೇಳಿದ್ದರು. ಮುಖ್ಯವಾಗಿ ಸುಶಾಂತ್ ಸಿಂಗ್ ಮತ್ತು ರಿಯಾ ಚಕ್ರಬೊರ್ತಿ ಸಂಬಂಧದ ನಡುವೆ ಏಕೆ ಅವರು ಮೂಗು ತೂರಿಸಿದ್ದರು? ಸುಶಾಂತ್ ಅಂತ್ಯವನ್ನೂ ಏಕೆ ಮಹೇಶ್ ಭಟ್ ಘೋಷಿಸಿದ್ದರು. ಕೆಲವು ಪ್ರಶ್ನೆಗಳನ್ನು ನೀವು ಅವರಿಗೆ ಕೇಳಬೇಕು ಎಂದು ತಿರುಗೇಟು ನೀಡಿದೆ.

ನಿಮ್ಮಿಂದ ಲಾಂಚ್ ಆಗಿದ್ದಲ್ಲ

ನಿಮ್ಮಿಂದ ಲಾಂಚ್ ಆಗಿದ್ದಲ್ಲ

'ಕಂಗನಾ ಅವರು ಗ್ಯಾಂಗ್ ಸ್ಟರ್ ಜತೆಗೆ ಪೋಕಿರಿ ಚಿತ್ರಕ್ಕೂ ಆಡಿಷನ್ ನೀಡಿ ಆಯ್ಕೆಯಾಗಿದ್ದರು. ಪೋಕಿರಿ ಸಾರ್ವಕಾಲಿಕ ಬ್ಲಾಕ್ ಬಸ್ಟರ್ ಚಿತ್ರವಾಗಿ ಹೊರಹೊಮ್ಮಿತು ಎನ್ನುವುದು ನಿಮಗೆ ತಿಳಿದಿರಲಿ. ಗ್ಯಾಂಗ್ ಸ್ಟಾರ್ ಚಿತ್ರದ ಕಾರಣದಿಂದ ಅವರು ಇಲ್ಲಿ ಇದ್ದಾರೆ ಎಂದು ನೀವು ಆಲೋಚಿಸಿದ್ದರೆ ಅದು ಕೆಲಸ ಮಾಡುವುದಿಲ್ಲ' ಎಂದಿದೆ.

ನಗು ಬರುತ್ತದೆಯಷ್ಟೇ!

ನಗು ಬರುತ್ತದೆಯಷ್ಟೇ!

ಕಂಗನಾ ಸೇರಿದಂತೆ ಅನೇಕ ಹೊಸಬರನ್ನು ಮಹೇಶ್ ಭಟ್ ಮತ್ತು ಅವರ ನಿರ್ಮಾಣ ಸಂಸ್ಥೆ ಪರಿಚಯಿಸಿದೆ. ನೆಪೋಟಿಸಂ ಬಗ್ಗೆ ಜನರು ಅಸಮಾಧಾನ ಹೊರಹಾಕುತ್ತಿದ್ದಾರೆ. ಇಡೀ ಚಿತ್ರರಂಗ ಸೇರಿಸಿದರೂ ಅದಕ್ಕಿಂತ ಹೆಚ್ಚು ಹೊಸ ಪ್ರತಿಭೆಗಳು, ನಟರು, ಸಂಗೀತಗಾರರು ಮತ್ತು ತಂತ್ರಜ್ಞರನ್ನು ಪರಿಚಯಿಸಿದ ಕುಟುಂಬದವಳಾಗಿ ನಾನು ಈ ಆರೋಪಗಳ ಬಗ್ಗೆ ನಗಬಲ್ಲೆ ಅಷ್ಟೇ ಪೂಜಾ ಭಟ್ ಹೇಳಿದ್ದರು.

ಆಗ ಹೀಗೆ ಆರೋಪಿಸುತ್ತಿದ್ದರು...

ಆಗ ಹೀಗೆ ಆರೋಪಿಸುತ್ತಿದ್ದರು...

ಒಂದು ಕಾಲವಿತ್ತು. ಆಗ ಭಟ್ ಕುಟುಂಬವು ಕೇವಲ ಹೊಸಬರನ್ನು ಪರಿಚಯಿಸುತ್ತಾ ಅವರೊಂದಿಗೆ ಕೆಲಸ ಮಾಡುತ್ತಿದೆ. ತಾರಾ ನಟರನ್ನು ಪರಿಗಣಿಸುತ್ತಿಲ್ಲ ಎಂದು ಹೆಸರು ಮಾಡಿದ ನಟರು ಹೇಳುವ ಹಾಗೂ ಕೀಳರಿಮೆ ಹೊಂದುತ್ತಿದ್ದರು. ಈಗ ಅದೇ ಜನರು ಸ್ವಜನಪಕ್ಷಪಾತದ ಕಾರ್ಡ್ ಆಡಿಸುತ್ತಿದ್ದಾರೆ. ಗೂಗಲ್ ಮತ್ತು ಟ್ವೀಟ್ ಜನರು ಯೋಚಿಸಿ ಮಾತನಾಡುವುದೂ ಇಲ್ಲ ಎಂದು ಟೀಕಿಸಿದ್ದರು.

More from Filmibeat

English summary
Kangana Ranaut slams Pooja Bhat and said Bhatt's family has launches talented people without paying them.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X