'ಕಂಗನಾ ವಿರುದ್ಧ ಟೀಕೆ ಮಾಡಿದ್ದಕ್ಕಾಗಿ ತಾಪ್ಸಿಗೆ ಸಿನಿಮಾ ಮತ್ತು ಪ್ರಶಸ್ತಿ ಸಿಗುತ್ತಿವೆ'

ಹಿಂದಿ ಚಿತ್ರರಂಗದ ತಮ್ಮ ಸಹೋದ್ಯೋಗಿಗಳ ವಿರುದ್ಧ ಕಂಗನಾ ರಣಾವತ್ ಆಗಾಗ್ಗೆ ಕಿಡಿಕಾರುತ್ತಿರುತ್ತಾರೆ. ನೇರ, ನಿಷ್ಠುರ ಮಾತಿನ ಕಂಗನಾಗೆ ವೈರಿಗಳೂ ಹೆಚ್ಚು. ಹಾಗೆಂದು ಕಂಗನಾ ತಮಗೆ ಅನಿಸಿದ್ದನ್ನು ಹೇಳುವುದಕ್ಕೆ ಹಿಂದೇಟು ಹಾಕುವುದಿಲ್ಲ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಬಾಲಿವುಡ್‌ನ ನೆಪೋಟಿಸಂ ವಿಚಾರವಾಗಿ ಕಂಗನಾ ಅನೇಕರ ವಿರುದ್ಧ ನೇರಾನೇರ ವಾಗ್ದಾಳಿ ನಡೆಸಿದ್ದಾರೆ. ಈಗ ಅವರ ಕಣ್ಣು ತಾಪ್ಸಿ ಪನ್ನು ಮೇಲೆ ಬಿದ್ದಿದೆ.

Recommended Video

Nikhil & Revathi GYM Workout : ಪ್ರಕೃತಿ ನಡುವೆ ನಿಖಿಲ್ ಕುಮಾರಸ್ವಾಮಿ-ರೇವತಿ ವರ್ಕ್‌ಔಟ್ | Filmiibeat Kannada

ತಾಪ್ಸಿ ಪನ್ನು ಬಾಲಿವುಡ್‌ನ ಸ್ವಜನಪಕ್ಷಪಾತದ ಬಗ್ಗೆ ಈ ಹಿಂದೆ ಮಾತನಾಡಿದ್ದ ಪತ್ರಿಕೆಯ ಲೇಖನಗಳನ್ನು ಹಂಚಿಕೊಂಡಿರುವ ಕಂಗನಾ ರಣಾವತ್ ಅವರ ಸಾಮಾಜಿಕ ಜಾಲತಾಣದ ತಂಡ, ಕಂಗನಾ ವಿರುದ್ಧ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ತಾಪ್ಸಿಗೆ ಸಿನಿಮಾಗಳಲ್ಲಿ ಅವಕಾಶ ಮತ್ತು ಪ್ರಶಸ್ತಿ ಸಿಕ್ಕಿವೆ ಎಂದು ಆರೋಪಿಸಿದೆ. ಮುಂದೆ ಓದಿ...

ಚಳವಳಿ ಹಳಿ ತಪ್ಪಿಸುತ್ತಿದ್ದಾರೆ

ಚಳವಳಿ ಹಳಿ ತಪ್ಪಿಸುತ್ತಿದ್ದಾರೆ

'ಹೊರಗಿನಿಂದ ಬಂದ ಅನೇಕ ಕಾಂಜಿಪಿಂಜಿಗಳು ಕಂಗನಾ ಆರಂಭಿಸಿದ ಚಳವಳಿಯನ್ನು ಹಳಿತಪ್ಪಿಸಲು ನಿರಂತರವಾಗಿ ಪ್ರಯತ್ನಿಸುತ್ತಿವೆ. ಅವರು ಮೂವಿ ಮಾಫಿಯಾದಲ್ಲಿ ಇರಲು ಬಯಸಿದ್ದಾರೆ. ಕಂಗನಾ ವಿರುದ್ಧ ವಾಗ್ದಾಳಿ ನಡೆಸುವ ಕಾರಣದಿಂದ ಅವರು ಸಿನಿಮಾ ಮತ್ತು ಪ್ರಶಸ್ತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ' ಎಂದು ತಾಪ್ಸಿ ವಿರುದ್ಧ ಕಂಗನಾ ತಂಡ ಕಿಡಿಕಾರಿದೆ.

ತಾಪ್ಸಿಗೆ ನಾಚಿಕೆಯಾಗಬೇಕು

ತಾಪ್ಸಿಗೆ ನಾಚಿಕೆಯಾಗಬೇಕು

'ಮಹಿಳೆಯೊಬ್ಬರ ಮೇಲಿನ ಬಹಿರಂಗ ಕಿರುಕುಳದಲ್ಲಿ ಅವರೂ ಭಾಗಿಯಾಗುತ್ತಿದ್ದಾರೆ. ಆಕೆಯ ಪರದಾಟಗಳ ಲಾಭ ಪಡೆದು ಆಕೆಯ ವಿರುದ್ಧ ಗುಂಪು ಕಟ್ಟಿಕೊಂಡಿರುವುದುಕ್ಕೆ ತಾಪ್ಸಿಗೆ ನಾಚಿಕೆಯಾಗಬೇಕು' ಎಂದು ತಾಪ್ಸಿ ಪನ್ನು ಅವರನ್ನು ತ್ಯಾಗ್ ಮಾಡಿ ಟ್ವೀಟ್ ಮಾಡಿದೆ.

ತಾಪ್ಸಿ ಪರೋಕ್ಷ ಪ್ರತಿಕ್ರಿಯೆ

ತಾಪ್ಸಿ ಪರೋಕ್ಷ ಪ್ರತಿಕ್ರಿಯೆ

ಕೆಲವು ಗಂಟೆಗಳ ಬಳಿಕ ತಾಪ್ಸಿ ಟ್ವೀಟ್ ಮಾಡಿದ್ದು, 'ನನ್ನ ಜೀವನದಲ್ಲಿ ಅದರಲ್ಲಿಯೂ ಕಳೆದ ಕೆಲವು ತಿಂಗಳಿನಿಂದ ಕೆಲವು ಸಂಗತಿಗಳನ್ನು ನಾನು ಅನುಸರಿಸುತ್ತೇನೆ. ಇದು ನನಗೆ ಜೀವನವನ್ನು ಮತ್ತಷ್ಟು ಚೆನ್ನಾಗಿ ನೋಡಲು ಸಹಾಯ ಮಾಡುತ್ತಿದೆ. ನನಗೆ ಬಹಳ ಶಾಂತಿ ಮತ್ತು ಗ್ರಹಿಕೆಗಳನ್ನು ನೀಡಿದೆ. ಹೀಗಾಗಿ ಶೇರ್ ಮಾಡುತ್ತಿದ್ದೇನೆ' ಎಂದು ಕೆಲವು ಕೋಟ್‌ಗಳನ್ನು ಹಂಚಿಕೊಂಡಿದ್ದಾರೆ.

ಅವರಿಗಾಗಿ ಪ್ರಾರ್ಥಿಸೋಣ

ಅವರಿಗಾಗಿ ಪ್ರಾರ್ಥಿಸೋಣ

'ಕೆಟ್ಟ ಮನಸಿನ ಜನರು. ದೇವರು ಅವರನ್ನು ಪ್ರೀತಿಸುತ್ತಾನೆ. ಹೀಗಾಗಿ ನಾವೂ ಪ್ರೀತಿಸಬೇಕು. ಅವರಿಗಾಗಿ ಪ್ರಾರ್ಥಿಸಬೇಕು. ಯಾವುದಾದರೂ ಪಾಸಿಟಿವ್ ವಿಚಾರದ ಬಗ್ಗೆ ನೆಗೆಟಿವ್ ಮಾತನಾಡಲು ಅವರು ಏನನ್ನಾದರೂ ಕಂಡುಕೊಳ್ಳುತ್ತಾರೆ. ನಿಮ್ಮ ಬಗ್ಗೆ ಅವರು ಸಂತೋಷ ಪಡಲಾರರು. ಏಕೆಂದರೆ ಅವರು ಅವರ ಬಗ್ಗೆಯೇ ಅಸಹ್ಯಪಟ್ಟುಕೊಳ್ಳುತ್ತಿರುತ್ತಾರೆ. ಅವರ ಜೊತೆ ಕೆಡಕು ಬೇಡ. ನಾವು ಮತ್ತಷ್ಟು ಉತ್ತಮರಾಗಿ ಅವರ ಬೆಳವಣಿಗೆ ಮತ್ತು ಪ್ರಬುದ್ಧತೆಗಾಗಿ ಪ್ರಾರ್ಥಿಸೋಣ' ಎಂದು ಒಂದು ನಾಣ್ಣುಡಿ ಹೇಳುತ್ತದೆ.

ಕಂಗನಾರ ಕೆಟ್ಟ ಕಾಪಿ

ಕಂಗನಾರ ಕೆಟ್ಟ ಕಾಪಿ

ತಾಪ್ಸಿ ವಿರುದ್ಧ ಕಂಗನಾ ಬಳಗ ವಾಗ್ದಾಳಿ ನಡೆಸಿರುವುದು ಇದು ಮೊದಲೇನಲ್ಲ. ತಾಪ್ಸಿ, ಕಂಗನಾರ ಕೆಟ್ಟ ನಕಲು ಎಂದು ಕಂಗನಾರ ಸಹೋದರಿ ರಂಗೋಲಿ ವ್ಯಂಗ್ಯವಾಡಿದ್ದರು. 'ಸಾಂದ್ ಕಿ ಆಂಕ್' ಚಿತ್ರದಲ್ಲಿ 60 ವರ್ಷ ದಾಟಿದ ಮಹಿಳೆಯ ಪಾತ್ರದಲ್ಲಿ ತಾಪ್ಸಿ ನಟಿಸಿದ್ದಾಗ ಅವರು ಈ ಟೀಕೆ ಮಾಡಿದ್ದರು.

More from Filmibeat

English summary
Kangana Ranaut's social media team slams Taapsee Pannu, says she gets movies and awards for attacking Kangana.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X