"ಅನುಷ್ಕಾ ಶರ್ಮಾ ಕೆರಿಯರ್ ನಾಶ ಮಾಡಿಬಿಡುತ್ತಿದೆ" –ಕರಣ್ ಜೋಹರ್: ಈ ಹೇಳಿಕೆ ಹಿನ್ನೆಲೆ ಏನು?
ಬಾಲಿವುಡ್‌ನ ವಿವಾದಾತ್ಮಕ ನಿರ್ಮಾಪಕ ಕಮ್ ನಿರ್ದೇಶಕ ಕರಣ್ ಜೋಹರ್. ನೆಪೋಟಿಸಂ ಹಾಗೂ ಮೂವಿ ಮಾಫಿಯಾದಂತಹ ಗಂಭೀರ ಆರೋಪ ಇವರ ಮೇಲಿದೆ. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಕೆರಿಯರ್ ಅನ್ನೇ ಮುಗಿಸಿಬಿಡುತ್ತಿದ್ದೆ ಅಂತ ಕರಣ್ ಜೋಹರ್ ಶಾಕಿಂಗ್ ಹೇಳಿಕೆಯನ್ನು ಕೊಟ್ಟಿದ್ದಾರೆ.
ಇತ್ತೀಚೆಗೆ ಬಾಲಿವುಡ್ ಪಾಲಿಟಿಕ್ಸ್‌ನಿಂದ ಇಂಡಸ್ಟ್ರಿಯನ್ನು ತೊರೆದಿದ್ದಾಗಿ ಪ್ರಿಯಾಂಕಾ ಚೋಪ್ರಾ ಹೇಳಿದ್ದರು. ಈ ಬೆನ್ನಲ್ಲೇ ಬಾಲಿವುಡ್‌ನ ಸ್ಟಾರ್ ನಿರ್ಮಾಪಕ ಕರಣ್ ಜೋಹರ್ ಅನುಷ್ಕಾ ಶರ್ಮಾ ವೃತ್ತಿ ಬದುಕನ್ನೇ ನಾಶ ಮಾಡಿಬಿಡುತ್ತಿದ್ದೆ ಅಂತ ಅನುಪಮಾ ಚೋಪ್ರಾ ಅವರೊಂದಿಗೆ ಸಂದರ್ಶನದಲ್ಲಿ ಒಪ್ಪಿಕೊಂಡಿದ್ದಾರೆ. ಇದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

ಬಾಲಿವುಡ್ ನಿರ್ದೇಶಕ ಆದಿತ್ಯಾ ಚೋಪ್ರಾಗೆ ತಮ್ಮ ಸಿನಿಮಾದಿಂದ ಅನುಷ್ಕಾ ಶರ್ಮಾರನ್ನು ಕೈ ಬಿಡುವಂತೆ ಸಲಹೆ ನೀಡಿದ್ದನ್ನು ಒಪ್ಪಿಕೊಂಡಿದ್ದಾರೆ. ಅಷ್ಟಕ್ಕೂ ಸಿನಿಮಾಗೆ ಅನುಷ್ಕಾ ಶರ್ಮಾ ಬೇಡ ಎಂದಿದ್ದೇಕೆ? ಬೇರೆ ಯಾವ ನಟಿಯ ಹೆಸರನ್ನು ಸೂಚಿಸಿದ್ದರು? ಅಸಲಿಗೆ ಆ ಘಟನೆ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಕರಣ್ ಜೋಹರ್‌ನಿಂದ ಅನುಷ್ಕಾ ಕೆರಿಯರ್ ಖತಂ ಆಗ್ತಿತ್ತಾ?
ಬಾಲಿವುಡ್ ನಿರ್ದೇಶಕ ಆದಿತ್ಯ ಚೋಪ್ರಾ 'ರಬ್ ನೆ ಬನಾ ದಿ ಜೋಡಿ' ಸಿನಿಮಾ ಮಾಡಲು ಹೊರಟಿದ್ದರು. ಶಾರುಖ್ ಖಾನ್ ಲೀಡ್ ರೋಲ್‌ಗೆ ಆಯ್ಕೆ ಮಾಡಲಾಗಿತ್ತು. ಇತ್ತ ಹೀರೊಯಿನ್ ಹುಡುಕಾಟ ನಡೆಯುತ್ತಿತ್ತು. ಈ ವೇಳೆ ಆದಿತ್ಯ ಚೋಪ್ರಾ, ಕರಣ್ ಜೋಹರ್ ಬಳಿಕ ಅನುಷ್ಕಾ ಶರ್ಮಾ ಫೋಟೊ ತೋರಿಸಿ ಅಭಿಪ್ರಾಯ ಕೇಳಿದ್ದರು. ಆಗ ಕರಣ್ ಮತ್ತೊಬ್ಬ ನಟಿಯ ಹೆಸರನ್ನು ಸೂಚಿಸಿದ್ದರು.
"ಆದಿತ್ಯ ಚೋಪ್ರ ನನಗೆ ಆಕೆಯ ಫೋಟೊ ತೋರಿಸಿದ್ದರು. ಆ ಫೋಟೊ ನೋಡಿ, ನಾನು ಬೇಡ ಬೇಡ, ನಿನಗೆ ಹುಚ್ಚು ಹಿಡಿದೆಯಾ? ನೀವು ಅವಳನ್ನು ಈ ಸಿನಿಮಾಗೆ ಹಾಕಿಕೊಳ್ಳುತ್ತಿದ್ದೀಯಾ? ಈ ಸಿನಿಮಾಗಾಗಿ ಅನುಷ್ಕಾ ಶರ್ಮಾ ಜೊತೆ ಒಪ್ಪಂದ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದೆ" ಎಂದು ಕರಣ್ ಜೋಹರ್ ಒಪ್ಪಿಕೊಂಡಿದ್ದಾರೆ.
ಅನುಷ್ಕಾ ಬದಲು ಸೋನಂ ಕಪೂರ್ ಹೆಸರು
ಕರಣ್ ಜೋಹರ್ ಅಂದು ನಿರ್ದೇಶಕ ಆದಿತ್ಯ ಚೋಪ್ರಾಗೆ ಮತ್ತೊಬ್ಬ ನಟಿ ಸೋನಂ ಕಪೂರ್ ಹೆಸರನ್ನು ಸೂಚಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. "ಆ ಸಮಯದಲ್ಲಿ ಮತ್ತೊಬ್ಬ ಲೀಡ್ ಹೀರೊಯಿನ್ ಇದ್ದರು. ಆದಿ ಆಕೆಯನ್ನು ಸಿನಿಮಾಗೆ ಹಾಕಿಕೊಳ್ಳಬೇಕು ಅಂತಿತ್ತು." ಎಂದು ಕರಣ್ ಜೋಹರ್ ಹೇಳಿಕೊಂಡಿದ್ದಾರೆ.

"ಈ ಮೂಲಕ ಅನುಷ್ಕಾ ಶರ್ಮಾ ಅವರ ವೃತ್ತಿ ಬದುಕೇ ನಾಶವಾಗುತ್ತಿತ್ತು. ಆದರೂ, ಒಲ್ಲದ ಮನಸ್ಸಿನಿಂದ ಸಿನಿಮಾ ನೋಡಿದರೂ, ಯಶಸ್ಸನ್ನು ತಡೆಯಲು ಸಾಧ್ಯವಾಗಿಲ್ಲ. ಈ ಮೂಲಕ ಅವರಲ್ಲಿ ಕ್ಷಮೆಯಾಚಿಸುತ್ತೇನೆ" ಎಂದು ಕರಣ್ ಜೋಹರ್ ಸಂದರ್ಶನದಲ್ಲಿ ಹೇಳಿದ್ದಾರೆ.
ಕರಣ್ ಸಿನಿಮಾದಲ್ಲಿ ಅನುಷ್ಕಾ ಶರ್ಮಾ
ಕರಣ್ ಜೋಹರ್ 'ಏ ದಿಲ್ ಹೈ ಮುಷ್ಕಿಲ್' ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಈ ಸಿನಿಮಾದಲ್ಲಿ ಅನುಷ್ಕಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೇ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ಹಾಗೂ ಐಶ್ವರ್ಯಾ ರೈ ಬಚ್ಚನ್ ನಟಿಸಿದ್ದರು.
'ರಬ್ ನೆ ಬನಾ ದಿ ಜೋಡಿ' ಸಿನಿಮಾದ ಬಳಿಕ ಕರಣ್ ಜೋಹರ್ 'ಬ್ಯಾಂಡ್ ಬಾಜಾ ಬಾರಾತ್' ಸಿನಿಮಾ ನೋಡಿದ್ದರು. ಈ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಅಭಿನಯದವನ್ನು ನೋಡಿ ಕರಣ್ ಜೋಹರ್ ಮೆಚ್ಚಿಕೊಂಡಿದ್ದರು.


Click it and Unblock the Notifications











