26ರಲ್ಲೇ ಕನ್ಯತ್ವ ಕಳೆದುಕೊಂಡೆ.. ನಿಮ್ಮ ಕುಟುಂಬದ ಸದಸ್ಯರೊಬ್ಬರು ಕಾರಣ ಎಂದ ಕರಣ್; ಬೆಚ್ಚಿಬಿದ್ದ ಜಾಹ್ನವಿ
ಕಾಜೋಲ್ ಹಾಗೂ ಟ್ವಿಂಕಲ್ ಖನ್ನ ನಡೆಸಿಕೊಡುವ ಟಾಕ್ ಶೋ ಒಂದು ಬಾರೀ ಚರ್ಚೆಗೆ ಒಳಗಾಗುತ್ತಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ 'ಟೂ ಮಚ್ ವಿತ್ ಕಾಜೋಲ್ ಅಂಡ್ ಟ್ವಿಂಕಲ್'. ಈ ಶೋನಲ್ಲಿ ಇತ್ತೀಚೆಗೆ ಡೈರೆಕ್ಟರ್ ಕಮ್ ಪ್ರಡ್ಯೂಸರ್ ಕರಣ್ ಜೋಹರ್ ಹಾಗೂ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅತಿಥಿಗಳಲಾಗಿ ಭಾಗವಹಿಸಿದ್ದರು. ಅದರಲ್ಲಿ ಕರಣ್ ಜೋಹರ್ ಆಡಿದ ಮಾತು ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
ಈ ಟಾಕ್ ಶೋನಲ್ಲಿ ಕರಣ್ ಜೋಹರ್ " ನನ್ನ 26ನೇ ವಯಸ್ಸಿನಲ್ಲಿ ಕನ್ಯತ್ವವನ್ನು ಕಳೆದುಕೊಂಡೆ.. ನಿಮ್ಮ ಕುಟುಂಬದ ಸದಸ್ಯರೊಬ್ಬರೊಂದಿಗೆ ಸಂಬಂಧ ಇಟ್ಟುಕೊಂಡಿದ್ದೆ" ಎಂದು ಜಾಹ್ನವಿ ಕಪೂರ್‌ಗೆ ಹೇಳಿದ್ದರು. ಕರಣ್ ಜೋಹರ್ ಹೀಗೆ ಹೇಳುತ್ತಿದ್ದಂತೆ ಜಾಹ್ನವಿ ಗೊಂದಲಕ್ಕೆ ಬಿದ್ದಿದ್ದರು. ಇತ್ತ ವೀಕ್ಷಕರು ಕೂಡ ದಿಗ್ಬ್ರಾಂತರಾಗಿದ್ದರು.

'ಟೂ ಮಚ್ ವಿತ್ ಕಾಜೋಲ್ ಅಂಡ್ ಟ್ವಿಂಕಲ್' ಟಾಕ್ ಶೋ ಈ ಕಾರಣಕ್ಕೆ ಚರ್ಚೆಯಲ್ಲಿದೆ. ಇದೀಗ ಕರಣ್ ಜೋಹರ್ ಕೊಟ್ಟ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಷ್ಟಕ್ಕೂ ಕರಣ್ ಜೋಹರ್ ಯಾಕೀ ಮಾತು ಹೇಳಿದರು? ಜಾನ್ವಿ ಕಪೂರ್ ಕುಟುಂಬವನ್ನು ಎಳೆದು ತಂದಿದ್ದೇಕೆ? ತಿಳಿಯುವುದಕ್ಕೆ ಮುಂದೆ ಓದಿ.
ಬಾಲಿವುಡ್ ಸ್ಟಾರ್‌ಗಳು ನಡೆಸಿಕೊಡುವ ಶೋಗಳಲ್ಲಿ ಭಾಗವಹಿಸುವ ತಾರೆಯರು ಸಿಕ್ಕಾಪಟ್ಟೆ ಓಪನ್ ಆಗಿ ಮಾತಾಡುತ್ತಾರೆ. ಇವು ಕೆಲವೊಮ್ಮೆ ಚರ್ಚೆಗೂ ಎಡೆ ಮಾಡಿಕೊಡುತ್ತವೆ. ಇಂತಹ ಶೋಗಳಲ್ಲಿ ಕಾಜೋಲ್ ಹಾಗೂ ಟ್ವಿಂಕಲ್ ಖನ್ನಾ ನಡೆಸಿಕೊಡುವ 'ಟೂ ಮಚ್ ವಿತ್ ಕಾಜೋಲ್ ಅಂಡ್ ಟ್ವಿಂಕಲ್' ಕಾರ್ಯಕ್ರಮ ಕೂಡ ಒಂದು. ಕಾಜೋಲ್ ಹಾಗೂ ಟ್ವಿಂಕಲ್ ಇಬ್ಬರೂ ನಡೆಸಿಕೊಡುವ ಈ ಶೋನಲ್ಲಿ ಕರಣ್ ಜೋಹರ್‌ಗೆ ಜಾಹ್ನವಿ "ಸತ್ಯ ಇಲ್ಲವೇ ಸುಳ್ಳು" ಎಂಬ ಟಾಸ್ಕ್ ನೀಡಿದ್ದರು. ಇದರಲ್ಲಿ ಕರಣ್ ಕೊಟ್ಟ ಉತ್ತರದಲ್ಲಿ ಒಂದು ಸತ್ಯವಿತ್ತು. ಇನ್ನೊಂದು ಸುಳ್ಳಿತ್ತು.
ಕರಣ್ ಜೋಹರ್ ಬೋಲ್ಡ್ ಆಗಿ ಉತ್ತರ ಕೊಡುವ ಸೆಲೆಬ್ರಿಟಿ. ಅಷ್ಟೇ ಬೋಲ್ಡ್ ಪ್ರಶ್ನೆಗಳನ್ನು ಕೇಳುವ ನಿರೂಪಕ ಎರಡೂ ಆಗಿದ್ದರಿಂದ ತಕ್ಷಣವೇ " ನಾನು 26ನೇ ವಯಸ್ಸಿನಲ್ಲಿಯೇ ನನ್ನ ಕನ್ಯತ್ವವನ್ನು ಕಳೆದುಕೊಂಡೆ. ನಿಮ್ಮ ಕುಟುಂಬದ ಸದಸ್ಯರೊಂದಿಗೆ ರೊಮ್ಯಾಂಟಿಕ್ ಸಂಬಂಧ ಹೊಂದಿದ್ದೆ" ಎಂದು ಜಾಹ್ನವಿಗೆ ಉತ್ತರ ಕೊಟ್ಟಿದ್ದರು. ಕರಣ್ ಜೋಹರ್ ಹೀಗೆ ಹೇಳುತ್ತಿದ್ದಂತೆ ಜಾಹ್ನವಿ ಒಮ್ಮೆ ಬೆಚ್ಚಿಬಿದ್ದಿದ್ದರು.
ಅದರಲ್ಲಿ ನಿಮ್ಮ ಕುಟುಂಬದವರೊಂದಿಗೆ ಸಂಬಂಧ ಹೊಂದಿದ್ದೆ ಎಂದು ಹೇಳಿದ್ದು ಆಘಾತ ಉಂಟು ಮಾಡಿತ್ತು. ಕರಣ್ ಕೊಟ್ಟ ಉತ್ತರದಲ್ಲಿ ಸತ್ಯ ಯಾವುದು ಸುಳ್ಳು ಯಾವುದು ಅನ್ನೋ ಆಲೋಚನೆ ಕೂಡ ಮಾಡಲಿಲ್ಲ. ಇದೇ ಹೊತ್ತಲ್ಲಿ ಟ್ವಿಂಕಲ್ ಖನ್ನಾ ಉರಿಯುವ ತುಪ್ಪಕ್ಕೆ ಬೆಂಕಿ ಸುರಿದಂತೆ "ಅದು ಬೋನಿ ಕಪೂರ್ ಇರಬೇಕು ಅಲ್ವಾ?" ಎಂದು ಕೆಣಕಿದರು.
ಆದರೆ, ಜಾಹ್ನವಿ ಮುಖ ನೋಡುತ್ತಿದ್ದಂತೆ ಕರಣ್ ಸುಳ್ಳು ಯಾವುದೆಂದು ಸ್ಪಷ್ಟಪಡಿಸಿದರು. "ನಾನು ಅಂದಿನ ಪಾರ್ಟಿಗೆ ತಡವಾಗಿ ಹೋಗಿದ್ದೆ. ನಾನು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಸಂಬಂಧ ಇಟ್ಟುಕೊಂಡಿಲ್ಲ. ಆದರೂ ಕೆಲವೊಮ್ಮೆ ಅಂತಹ ಆಲೋಚನೆ ಬರುತ್ತೆ" ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ. ಈ ಶೋನಲ್ಲಿ ಮದುವೆ, ಸಂಬಂಧಗಳು, ವಿಚ್ಚೇದನ, ಹೊಂದಾಣಿಕೆ, ದ್ರೋಹ ಇಂತಹದ್ದೇ ವಿಷಯಗಳ ಬಗ್ಗೆ ಚರ್ಚೆಯಾಗುತ್ತೆ.


Click it and Unblock the Notifications











