ಕರೀನಾ, ಕಿಯಾರಾ, ಸುಹಾನಾ ಫ್ಯಾಷನ್ ಬ್ರ್ಯಾಂಡ್‌ಗೆ ರಾಯಬಾರಿಗಳಾದ ಬಾಲಿವುಡ್ ಬ್ಯೂಟೀಸ್
ಬಾಲಿವುಡ್ ನಟಿಯರು ಸದಾ ಬ್ಯೂಟಿಯಾಗಿರುತ್ತಾರೆ. ಸಿನಿಮಾ, ಪಾರ್ಟಿ ಅಂತ ಹೇಗೆ ಬ್ಯುಸಿಯಾಗಿರುತ್ತಾರೋ ಹಾಗೇ ಹಣ ಸಂಪಾಧನೆಯಲ್ಲೂ ಮುಂದಿದ್ದಾರೆ. ಸಿನಿಮಾದಲ್ಲಿ ಬಿಡುವು ಸಿಕ್ಕಾಗ ಫ್ಯಾಷನ್ ಬ್ರ್ಯಾಂಡ್‌ಗಳ ಮೂಲಕ ಸಂಪಾದನೆ ಮಾಡುತ್ತಾರೆ.
ಬಾಲಿವುಡ್‌ನಲ್ಲಿ ಚರ್ಚೆಯಲ್ಲಿರೋ ಮೂವರು ಸುಂದರಿಯರು ಹೊಸ ಫ್ಯಾಷನ್ ಬ್ರ್ಯಾಂಡ್‌ಗೆ ರಾಯಬಾರಿಗಳಾಗಿದ್ದಾರೆ. ಇತ್ತೀಚೆಗೆ ಹೊರಬಂದಿರೋ ಓಮ್ನಿ-ಚಾನಲ್ ಬ್ಯೂಟಿ ರೀಟೇಲ್ ಪ್ಲಾಟ್ ಫಾರಂ ಟಿರಾಗೆ ಬೇರೆ ಬೇರೆ ವಯಸ್ಸಿನ ಬಾಲಿವುಡ್ ಬ್ಯೂಟಿಯರನ್ನು ಆಯ್ಕೆ ಮಾಡಲಾಗಿದೆ. ಕರೀನಾ ಕಪೂರ್, ಕಿಯಾರಾ ಅಡ್ವಾಣಿ ಹಾಗೂ ಸುಹಾನಾ ಖಾನ್ ಈ ಬ್ರ್ಯಾಂಡ್‌ನ ರಾಯಬಾರಿಗಳು.

ಟಿರಾ ತನ್ನ ಮೊಟ್ಟಮೊದಲ 360-ಡಿಗ್ರಿ ಅಭಿಯಾನ 'ಫಾರ್ ಎವೆರಿಯೂ'ಗೆ ಚಾಲನೆ ನೀಡಿದ್ದು, ಇದರಲ್ಲಿ ಕರೀನಾ ಕಪೂರ್ ಖಾನ್, ಕಿಯಾರಾ ಅಡ್ವಾಣಿ ಮತ್ತು ಸುಹಾನಾ ಖಾನ್ ತಮ್ಮದೇ ಶೈಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಅಭಿಯಾನವು ಪ್ರತಿಯೊಬ್ಬ ವ್ಯಕ್ತಿಯೂ ನಿಭಾಯಿಸುವ ಹಲವು ಪಾತ್ರಗಳು, ಅವರ ಭಾವನೆಗಳು, ಮನಸ್ಥಿತಿಗಳನ್ನು ಪ್ರತಿನಿಧಿಸುತ್ತದೆ. ಅಲ್ಲದೆ ಇದು ಜನರು ಸೌಂದರ್ಯವನ್ನು ಹೇಗೆ ಸಂಭ್ರಮಿಸುತ್ತಾರೆ? ಅಭಿವ್ಯಕ್ತಿ ಪಡಿಸುತ್ತಾರೆ ಅನ್ನೋದನ್ನು ಬಿಂಬಿಸಲಿದೆ.
ಕರೀನಾ, ಕಿಯಾರಾ ಮತ್ತು ಸುಹಾನಾ ಮೂವರು ಬಾಲಿವುಡ್ ನಟಿಯರು ಬ್ಯೂಟಿಯ ವಿಭಿನ್ನ ಆವೃತ್ತಿಗಳನ್ನು ಪ್ರತಿನಿಧಿಸುತ್ತಿದ್ದಾರೆ. ಮೂವರು ನಟಿಯರಿಗಾಗಿ 30 ಸೆಕೆಂಡುಗಳಷ್ಟು ವಿಶೇಷವಾದ ಜಾಹೀರಾತು ವಿಡಿಯೋ ಮಾಡಲಾಗಿದೆ. 'ಫಾರ್ ಎವೆರಿ ಯೂ' ಅಭಿಯಾನವನ್ನು ಕಿರುತೆರೆ, ಪ್ರಿಂಟ್ ಹಾಗೂ ಡಿಜಿಟಲ್ ಕಾರ್ಯಕ್ರಮಗಳು, ಇನ್-ಸ್ಟೋರ್ ಮತ್ತು ಆನ್-ಗ್ರೌಂಡ್ ಕಾರ್ಯಕ್ರಮಗಳ ಮೂಲಕ ಜಗತ್ತಿಗೆ ತಿಳಿಸಲಾಗಿದೆ.
ಟಿರಾ ಫ್ಯಾಷನ್ ಬ್ರ್ಯಾಂಡ್ ಈವೆಂಟ್‌ನ ಪ್ರಮುಖ ಆಕರ್ಷಣೆ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್. ಕೆಂಪು ಬಣ್ಣದ ಸ್ಟ್ರಾಪ್‌ಲೆಸ್ ವಿ ಗೌನ್ ಧರಿಸಿ ಬಂದಿದ್ದರು. ಇವರೊಂದಿಗೆ ಬ್ಲ್ಯಾಕ್ ಡ್ರೆಸ್‌ನಲ್ಲಿ ಕರೀನಾ ಕಪೂರ್ ಖಾನ್ ಹಾಗೂ ತಿಳಿ ನೀಲಿ ಬಣ್ಣದ ಕಾಸ್ಟ್ಯೂಮ್‌ನಲ್ಲಿ ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿದ್ದಾರೆ.
ಈ ಅಭಿಯಾನದ ಕುರಿತು ಇಶಾ ಅಂಬಾನಿ "ಏಪ್ರಿಲ್ 2023ರಲ್ಲಿ ನಾವು ಪ್ರಾರಂಭಿಸಿದ ದಿನದಿಂದಲೂ ಟಿರಾಗೆ ಅಭೂತಪೂರ್ವ ಪ್ರತಿಕ್ರಿಯೆ ಪಡೆದಿದ್ದೇವೆ. ಟಿರಾದೊಂದಿಗೆ ನಾವು ಸೌಂದರ್ಯ ಮತ್ತು ಸ್ಕಿನ್‌ನ ಆರೈಕೆಯಲ್ಲಿರುವ ಅಡೆತಡೆಗಳನ್ನು ಹೊಡೆದು ಹಾಕುವ ಉದ್ದೇಶ ಹೊಂದಿದ್ದೇವೆ" ಎಂದಿದ್ದಾರೆ.


Click it and Unblock the Notifications











