ಅಬ್ಬಾ ಆ ಕಿಸ್ಸಿಂಗ್ ಸೀನ್ ಸಾಕಾಗೋಗಿತ್ತು: ಅಮೀರ್ ಖಾನ್‌ ಚುಂಬನದ ದೃಶ್ಯ ನೆನೆದು ನಡುಗಿದ ಕರಿಷ್ಮಾ

ಕರಿಷ್ಮಾ ಕಪೂರ್ ಮತ್ತು ಅಮೀರ್ ಖಾನ್ ಅಭಿನಯದ 1996ರ ರೊಮ್ಯಾಂಟಿಂಕ್ ಡ್ರಾಮಾ 'ರಾಜಾ ಹಿಂದೂಸ್ತಾನಿ' ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಸಿನಿಮಾದ ಹಾಡುಗಳು ಹಾಗೂ ಕರಿಷ್ಮಾ ಮತ್ತು ಅಮೀರ್ ಜೋಡಿ ಚಿತ್ರರಸಿಕರ ಮನಗೆದ್ದಿದ್ದವು. ಇಬ್ಬರ ನಡುವಿನ ಕೆಮಿಸ್ಟ್ರಿ ಕುರಿತು ಈಗಲೂ ಮೆಚ್ಚುಗೆ ವ್ಯಕ್ತಪಡಿಸುವಷ್ಟರ ಮಟ್ಟಿಗೆ ಜನರ ಮನಸಿನಲ್ಲಿ ಈ ಸಿನಿಮಾ ಆಳವಾಗಿ ಇಳಿದಿತ್ತು.

ಮುಖ್ಯವಾಗಿ ಇಬ್ಬರೂ ಕಾಣಿಸಿಕೊಂಡ ಚುಂಬನ ದೃಶ್ಯ ಬಾಲಿವುಡ್‌ನಲ್ಲಿ ಭಾರಿ ಸದ್ದು ಮಾಡಿತ್ತು. ಆ ಕಾಲದಲ್ಲಿ ಅದರ ಬಗ್ಗೆ ತೀವ್ರ ಚರ್ಚೆ ನಡೆದಿತ್ತು. ಈಗ ಸಾಮಾನ್ಯವಾಗಿರುವಂತೆ ಚುಂಬನ ದೃಶ್ಯಗಳು ಆಗ ಚಾಲ್ತಿಯಲ್ಲಿ ಇರಲಿಲ್ಲ. ಹಾಗೆಯೇ ಅವುಗಳ ಚಿತ್ರೀಕರಣವೂ ಸಲೀಸಾಗಿ ಇರಲಿಲ್ಲ. ಜನರು ಅಂದುಕೊಂಡಷ್ಟು ದೃಶ್ಯ ಚಿತ್ರೀಕರಣ ರೋಮಾಂಚನಕಾರಿಯಾಗಿ ಇರಲಿಲ್ಲ. ಇಬ್ಬರಿಗೂ ಅದು ಸಾಕು ಸಾಕಾಗಿತ್ತು ಎಂದು ಹೇಳಿದ್ದಾರೆ ಕರಿಷ್ಮಾ.

ಮೂರು ದಿನ ಚಿತ್ರೀಕರಣ

ಮೂರು ದಿನ ಚಿತ್ರೀಕರಣ

ಸಂದರ್ಶನವೊಂದರಲ್ಲಿ 'ರಾಜಾ ಹಿಂದೂಸ್ತಾನಿ' ಚಿತ್ರದ ಚುಂಬನ ದೃಶ್ಯದ ಬಗ್ಗೆ ಕರಿಷ್ಮಾ ನೆನಪಿಸಿಕೊಂಡಿದ್ದಾರೆ. 'ನಮ್ಮಿಬ್ಬರಿಗೂ ಆ ದೃಶ್ಯ ಸಾಕಾಗಿ ಹೋಗಿತ್ತು. ಇಬ್ಬರೂ ಹೈರಾಣಾಗಿದ್ದೆವು. ಜನರು ಆ ದೃಶ್ಯವನ್ನು 'ಓ ಕಿಸ್ ದೃಶ್ಯ' ಎಂದು ಮೆಚ್ಚಿಕೊಂಡು ಮಾತನಾಡುತ್ತಾರೆ. ಆದರೆ ಆ ಸನ್ನಿವೇಶವನ್ನು ನಾವು ಮೂರು ದಿನ ಚಿತ್ರೀಕರಿಸಿದ್ದೆವು' ಎಂದು ಹೇಳಿದ್ದಾರೆ.

ದೃಶ್ಯ ಯಾವಾಗ ಮುಗಿಯುತ್ತದೆಯೋ..

ದೃಶ್ಯ ಯಾವಾಗ ಮುಗಿಯುತ್ತದೆಯೋ..

ಫೆಬ್ರವರಿಯಲ್ಲಿ ಊಟಿಯಲ್ಲಿ ಇದರ ಚಿತ್ರೀಕರಣ ನಡೆಯುತ್ತಿತ್ತು. ಈ ಕಿಸ್ಸಿಂಗ್ ದೃಶ್ಯ ಯಾವಾಗ ಮುಗಿದು ಹೋಗುತ್ತದೆಯೋ ಎಂದು ನಾವಿಬ್ಬರೂ ಮಾತಾಡಿಕೊಳ್ಳುತ್ತಿದ್ದೆವು. ಅಷ್ಟರ ಮಟ್ಟಿಗೆ ನಮ್ಮನ್ನು ಈ ದೃಶ್ಯದ ಚಿತ್ರೀಕರಣ ಸುಸ್ತು ಮಾಡಿತ್ತು ಎಂದಿದ್ದಾರೆ.

ನಡುಗುವ ಚಳಿಯಲ್ಲಿ ಚಿತ್ರೀಕರಣ

ನಡುಗುವ ಚಳಿಯಲ್ಲಿ ಚಿತ್ರೀಕರಣ

ಆ ಸನ್ನಿವೇಶ ಚಿತ್ರೀಕರಿಸುವಾಗ ವೇಗವಾಗಿ ಬೀಸುವ ಫ್ಯಾನ್ ಹಾಗೂ ಥಂಡಿಯಾದ ನೀರು ಬಳಸಲಾಗಿತ್ತು. ಊಟಿಯ ಚಳಿಯಲ್ಲಿ ಇದು ಹೇಗಿರಬಹುದು ಊಹಿಸಿ. ಅಂತಹ ವಾತಾವರಣದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ನಾವು ಕೆಲಸ ಮಾಡಿದ್ದೆವು. ಮಾತನಾಡುವ ವೇಳೆ ನಡುಗುತ್ತಿದ್ದೆವು. ಅದು ಬೇರೆಯದೇ ಕಾಲವಾಗಿತ್ತು. ಅಂತಹ ಸಂದರ್ಭಗಳಲ್ಲಿ ಕೆಲಸ ಮಾಡುವುದು ಸುಲಭವಾಗಿರಲಿಲ್ಲ ಎಂದು ಕರಿಷ್ಮಾ ನೆನಪಿಸಿಕೊಂಡಿದ್ದಾರೆ.

ವೆಬ್ ಸೀರೀಸ್‌ನಲ್ಲಿ ಕರಿಷ್ಮಾ

ವೆಬ್ ಸೀರೀಸ್‌ನಲ್ಲಿ ಕರಿಷ್ಮಾ

ಬಹಳ ವರ್ಷಗಳ ಬಳಿಕ ಕರಿಷ್ಮಾ ನಟನೆಗೆ ಹಿಂದಿರುಗಿದ್ದಾರೆ. ಈ ಬಾರಿ ಅವರು 'ಮೆಂಟಲ್ ಹುಡ್' ಎಂಬ ವೆಬ್ ಸೀರೀಸ್‌ನಲ್ಲಿ ನಟಿಸುತ್ತಿದ್ದಾರೆ. ಏಕ್ತಾ ಕಪೂರ್ ಅವರ ವೆಬ್ ಸೀರೀಸ್ ಅನ್ನು ಆಲ್ಟ್ ಬಾಲಾಜಿ ನಿರ್ಮಿಸುತ್ತಿದೆ. ಮೆಂಟಲ್‌ಹುಡ್‌ನಲ್ಲಿ ಸಂಧ್ಯಾ ಮೃದುಲ್, ಡಿನೊ ಮೊರಿಯಾ, ಸಂಜಯ್ ಸೂರಿ, ಶ್ರುತಿ ಸೇತ್ ಮುಂತಾದವರು ನಟಿಸುತ್ತಿದ್ದು ಮಾರ್ಚ್ 11ರಂದು ಪ್ರದರ್ಶನಗೊಳ್ಳಲಿದೆ.

More from Filmibeat

English summary
Actress Karisha Kapoor talks about on kissing scene with Aamir Khan in Raja Hindustani.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X