"ಕಾರ್ತಿಕ್ ಆರ್ಯನ್ ಆಪ್ರಾಪ್ತ ಬಾಲಕಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದರೆ ಅದು ತಪ್ಪು"-ಜೇಸನ್ ಷಾ
ಇತ್ತೀಚೆಗೆ ಕಾರ್ತಿಕ್ ಆರ್ಯನ್ ಡೇಟಿಂಗ್ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಕಾರ್ತಿಕ್ ಆರ್ಯನ್ ಹಾಗೂ ಶ್ರೀಲೀಲಾ ಇಬ್ಬರೂ ಡೇಟಿಂಗ್ ಮಾಡುತ್ತಿರೋ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇಬ್ಬರೂ ಇನ್ನೇನು ಮದುವೆ ಆಗೇ ಬಿಡುತ್ತಾರೆ ಅನ್ನೋ ಲೆವೆಲ್‌ಗೆ ಚರ್ಚೆಯಾಗಿತ್ತು. ತಮ್ಮ ಡೇಟಿಂಗ್ ಮ್ಯಾಟರ್ ಬಗ್ಗೆ ದೇಶದ ಉದ್ದಗಲಕ್ಕೂ ಮಾತಾಡಿಕೊಳ್ಳುವಾಗ ಈ ಜೋಡಿ ತುಟಿಪಿಟಿಕ್ ಎಂದಿರಲಿಲ್ಲ.
ಆದರೆ, ಇತ್ತೀಚೆಗೆ ಕಾರ್ತಿಕ್ ಆರ್ಯನ್ ಬಗ್ಗೆ ಮತ್ತೊಂದು ಸುದ್ದಿ ಹಬ್ಬಿತ್ತು. ಬಾಲಿವುಡ್ ನಟ ಕಾರ್ತಿಕ್ ಆರ್ಯನ್ 18 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನ ಯುವತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ. ಇತ್ತೀಚೆಗೆ ಅವರಿಬ್ಬರೂ ಒಂದೇ ಹೋಟೆಲ್‌ನಲ್ಲಿ ಕಾಣಿಸಿಕೊಂಡಿದ್ದರ ಬಗ್ಗೆ ಸುದ್ದಿಯಾಗಿತ್ತು. ಈ ಸುದ್ದಿ ಈಗ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಕಾರ್ತಿಕ್ ಆರ್ಯನ್ ಡೇಟಿಂಗ್ ಬಗ್ಗೆ ಸಂಜಯ್ ಲೀಲಾ ಬನ್ಸಾಲಿಯ ವೆಬ್ ಸೀರಿಸ್ 'ಹೀರಾಮಂಡಿ'ಯಲ್ಲಿ ಗಮನ ಸೆಳೆದಿದ್ದ ನಟ ಜೇಸನ್ ಷಾ ಪ್ರತಿಕ್ರಿಯಿಸಿದ್ದಾರೆ. ಫಿಲ್ಮಿಬೀಟ್‌ಗೆ ನೀಡಿದ ಸಂದರ್ಶನದಲ್ಲಿ ಕಾರ್ತಿಕ್ ಆರ್ಯನ್ ಮೈನರ್ ಹುಡುಗಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆನ್ನುವ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಅದೇನು ಹೇಳಿದ್ದಾರೆಂದು ತಿಳಿಯುವುದಕ್ಕೆ ಮುಂದೆ ಓದಿ.
'ಹೀರಾಮಂಡಿ' ಖ್ಯಾತಿಯ ನಟ ಜೇಸನ್ ಷಾ ಫಿಲ್ಮಿಬೀಟ್‌ಗೆ ನೀಡಿದ ಸಂದರ್ಶನದಲ್ಲಿ ಹಲವು ವಿಷಯಗಳ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ತೆರೆಮೇಲೆ ಪ್ರಣಯದ ದೃಶ್ಯಗಳು, ಅವುಗಳನ್ನು ನಿಭಾಯಿಸುವಾಗ ಎದುರಾಗುವ ಸವಾಲುಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಹಾಗೇ ತಮ್ಮ ವೃತ್ತಿ ಜೀವನದ ಪಯಣವನ್ನು ಹಂಚಿಕೊಂಡಿದ್ದಾರೆ.
ಇದೇ ಸಂದರ್ಶನದಲ್ಲಿ ತಮ್ಮ ವೃತ್ತಿ ಬದುಕಿನ ಮಹಾದಾಸೆಯನ್ನು ಶೇರ್ ಮಾಡಿಕೊಂಡಿದ್ದಾರೆ. ಜೇಸನ್ ಷಾ ಅವರಿಗೆ ಹಿರಿಯ ನಟಿ ರೇಖಾ ಅವರೊಂದಿಗೆ ತೆರೆ ಹಂಚಿಕೊಳ್ಳುವ ಆಸೆ ಇದೆಯಂತೆ. ಈ ಬಗ್ಗೆನೂ ಈ ಸಂದರ್ಶನದಲ್ಲಿ ಮಾತಾಡಿದ್ದಾರೆ. ಜೊತೆಗೆ ಅವರ ಪಾತ್ರಗಳ ಆಯ್ಕೆ ಮತ್ತು ನಟನಾ ಶೈಲಿಯ ಬಗ್ಗೆ ಸಾಕಷ್ಟು ವಿವರಗಳನ್ನು ಕೊಟ್ಟಿದ್ದಾರೆ.
ಇವೆಲ್ಲವುಗಳ ಜೊತೆಗೆ ಮಹಿಳೆಯರ ಸುರಕ್ಷತೆ ಬಗ್ಗೆ ಮಾತಾಡಿದ್ದಾರೆ. ಅದರಲ್ಲೂ ಅಪ್ರಾಪ್ತರ ಮೇಲಿನ ದೌರ್ಜನ್ಯದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. "ಇಲ್ಲಿಗೆ ಬರುವಾಗ, ನಾನು 15 ವರ್ಷದ ಹುಡುಗಿಯನ್ನು ಅತ್ಯಾಚಾರ ಮಾಡಿ, ಕಿಟಕಿಯಿಂದ ಹೊರಗೆಸೆದು ನಗುತ್ತಿರುವ ಇಬ್ಬರು ಹುಡುಗರ ವೀಡಿಯೊವನ್ನು ನೋಡುತ್ತಿದ್ದೆ. ಇಂತಹ ವಿಷಯಗಳ ಬಗ್ಗೆ ಚರ್ಚೆಯಾಗಬೇಕು. ಇದರ ಬಗ್ಗೆ ಕಠಿಣ ನಿಯಮಗಳು ಮತ್ತು ನಿಬಂಧನೆಗಳನ್ನು ಜಾರಿಗೆ ತರಬೇಕು. ಜೊತೆಗೆ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಜೇಸನ್ ಷಾ ಹೇಳಿದ್ದಾರೆ.
ವೈಯಕ್ತಿಕವಾಗಿ ಅಪ್ರಾಪ್ತ ಮಹಿಳೆಯರಿಗೆ ಸಂಬಂಧಿಸಿದ ಯಾವುದೇ ವಿಚಾರದ ಬಗ್ಗೆ ತನಗೆ ಆಸಕ್ತಿಯಿಲ್ಲ. ತಾನು ಅದರಿಂದ ಸಂಪೂರ್ಣವಾಗಿ ದೂರವಿರುತ್ತೇನೆ ಎಂದೂ ಹೇಳಿದ್ದಾರೆ. ಇದೇ ವೇಳೆ ಕಾರ್ತಿಕ್ ಆರ್ಯನ್ ಅಪ್ರಾಪ್ತ ಯುವತಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆನ್ನುವ ಸುದ್ದಿ ಬಗ್ಗೆನೂ ಪ್ರತಿಕ್ರಿಯಿಸಿದ್ದು, "ಕಾರ್ತಿಕ್ ಆರ್ಯನ್ ಆಪ್ರಾಪ್ತ ಬಾಲಕಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದರೆ ಅದು ತಪ್ಪು" ಎಂದು ಜೇಸನ್ ಷಾ ಹೇಳಿದ್ದಾರೆ.


Click it and Unblock the Notifications











