Saptami Gowda: ಸಪ್ತಮಿ ಗೌಡ ಮೊದಲ ಬಾಲಿವುಡ್ ಸಿನಿಮಾ 'ದಿ ವ್ಯಾಕ್ಸಿವ್ ವಾರ್' ಟ್ರೈಲರ್ ಔಟ್!

ಒಂದ್ಕಡೆ ವಿವಾದಾತ್ಮಕ ನಿರ್ದೇಶಕ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ವಿವೇಕ್ ಅಗ್ನಿ ಹೋತ್ರಿ. ಅದೇ ಇನ್ನೊಂದು ಕಡೆ 'ಕಾಂತಾರ' ಸುಂದರಿ ಸಪ್ತಮಿ ಗೌಡ ಸಿನಿಮಾ. ಇವರಿಬ್ಬರೂ ಒಟ್ಟಿಗೆ ಕೆಲಸ ಮಾಡಿದ ಸಿನಿಮಾ 'ದಿ ವ್ಯಾಕ್ಸಿನ್ ವಾರ್'.

'ದಿ ಕಾಶ್ಮೀರ್ ಫೈಲ್ಸ್' ಅನ್ನೋ ವಿವಾದಾತ್ಮಕ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತೊಂದು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಅದುವೇ 'ದಿ ವ್ಯಾಕ್ಸಿನ್ ವಾರ್'. ಈ ಸಿನಿಮಾದ ಟ್ರೈಲರ್ ಇಂದು (ಸೆಪ್ಟೆಂಬರ್ 12) ಅದ್ದೂರಿಯಾಗಿ ರಿಲೀಸ್ ಆಗಿದೆ. ವಿಶೇಷ ಅಂದರೆ, ಈ ಸಿನಿಮಾದಲ್ಲಿ ಕನ್ನಡದ ನಟಿ ಸಪ್ತಮಿ ಗೌಡ ಕೂಡ ವಿಜ್ಞಾನಿಯಾಗಿ ಕಾಣಿಸಿಕೊಂಡಿದ್ದಾರೆ.

the-vaccine-war-sapthami-gowda

ಅಂದ್ಹಾಗೆ 'ದಿ ವ್ಯಾಕ್ಸಿನ್ ವಾರ್' ಸಿನಿಮಾದಲ್ಲಿ ನಾನಾ ಪಾಟೇಕರ್, ಕಾಂತಾರ ನಟಿ ಸಪ್ತಮಿ ಗೌಡ, ಅನುಪಮ್ ಖೇರ್, ಪಲ್ಲವಿ ಜೋಷಿ ಸೇರಿದಂತೆ ಹಲವು ಮಂದಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಇದು ಕೊರೊನಾ ವೈರಸ್ ವಿರುದ್ಧ ಭಾರತದ ವಿಜ್ಞಾನಿಗಳು ಲಸಿಕೆಯನ್ನು ಕಂಡು ಹಿಡಿಯುವ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡಲಾಗಿದೆ.

ಇದೇ 'ದಿ ವ್ಯಾಕ್ಸಿನ್ ವಾರ್' ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಟ್ರೈಲರ್ ರಿಲೀಸ್ ಆದಲ್ಲಿಂದ ಭಾರತದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಸಹಜವಾಗಿ 'ದಿ ಕಾಶ್ಮೀರ್ ಫೈಲ್ಸ್'ನಂತೆಯೇ ಈ ಸಿನಿಮಾ ಕೂಡ ವಿವಾದವನ್ನು ಸೃಷ್ಟಿಸಬಹುದು ಅನ್ನೋ ನಿರೀಕ್ಷೆಯಿತ್ತು. ಅಂತಯೇ ಸಿನಿಮಾದ ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ಚರ್ಚೆ ಶುರುವಾಗಿದೆ.

ವಿವಾದಗಳನ್ನು ಪಕ್ಕಕ್ಕಿಟ್ಟು ನೋಡುವುದಾದರೆ, 'ಕಾಂತಾರ' ಸಿನಿಮಾ ಮೂಲಕ ದೇಶಾದ್ಯಂತ ಸದ್ದು ಮಾಡಿರುವ ಕನ್ನಡದ ನಟಿ ಸಪ್ತಮಿ ಗೌಡ 'ದಿ ವ್ಯಾಕ್ಸಿನ್ ವಾರ್'ನಲ್ಲಿ ವಿಜ್ಞಾನಿಯಾಗಿ ಕಾಣಿಸಿಕೊಂಡಿದ್ದಾರೆ. 'ಕಾಂತಾರ' ಬಳಿಕ ರಿಲೀಸ್ ಆಗಲಿರುವ 2ನೇ ಸಿನಿಮಾವಿದು. ಹೀಗಾಗಿ ಕನ್ನಡಿಗರಲ್ಲಿ ಸಪ್ತಮಿ ಗೌಡ ನಟನೆಯ ಮೊದಲ ಬಾಲಿವುಡ್ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

the-vaccine-war-sapthami-gowda

'ದಿ ವ್ಯಾಕ್ಸಿನ್ ವಾರ್' ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡೋಕೆ ಶುರು ಮಾಡಿದ್ದಾರೆ. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಬಿಜೆಪಿ ಬೆಂಬಲಿಗ. ಇವರ ನಿರ್ದೇಶಿಸಿದ ವ್ಯಾಕ್ಸಿನ್ ವಾರ್ ಬೆಜೆಪಿ ಸಾಧನೆಯನ್ನೇ ತೋರಿಸಿದೆ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಮತ್ತೆ ಕೆಲವರಿಗೆ 'ದಿ ವ್ಯಾಕ್ಸಿನ್ ವಾರ್‌'ನಲ್ಲಿ ನಿರ್ದೇಶಕ ವಿವೇಕ್ ಅಗ್ನಿ ಹೋತ್ರಿ ಬೇಕಂತಲೇ 'ಭಾರತ್' ಅನ್ನುವ ಪದವನ್ನು ಹೆಚ್ಚು ಬಳಸಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಭಾರತ್ Vs ಇಂಡಿಯಾ ಚರ್ಚೆಯನ್ನು ವಿವೇಕ್ ಅಗ್ನಿಹೋತ್ರಿ ತಮ್ಮ ಸಿನಿಮಾಗಾಗಿ ಬಳಸಿಕೊಂಡಿದ್ದಾರೆಂದು ನೆಟ್ಟಿಗರು ಆರೋಪ ಮಾಡುತ್ತಿದ್ದಾರೆ.

ಆದರೆ, 'ದಿ ವ್ಯಾಕ್ಸಿನ್ ವಾರ್' ಸಿನಿಮಾ ನೈಜ ಘಟನೆಗಳನ್ನು ಇಟ್ಟುಕೊಂಡು ನಿರ್ಮಿಸಿದ ಸಿನಿಮಾ ಎಂದು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹೇಳಿಕೊಂಡಿದ್ದಾರೆ. ಕೋವಿಡ್ ಪೀಕ್‌ನಲ್ಲಿದ್ದಾಗ ಲಸಿಕೆಯಿಂದ ಜನರ ಜೀವ ಉಳಿಯಲು ಸಾಧ್ಯವೆಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆ ಭಾರತೀಯ ವಿಜ್ಞಾನಿಗಳು ಲಸಿಕೆಯನ್ನು ಕಂಡು ಹಿಡಿದು ಭಾರತದ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾದರು. ಇದೇ ಘಟನೆಗಳನ್ನು ಸಿನಿಮಾದಲ್ಲಿ ತೋರಿಸಿದ್ದಾಗಿ ಹೇಳಿಕೊಂಡಿದ್ದಾರೆ.

'ದಿ ವ್ಯಾಕ್ಸಿನ್ ವಾರ್' ಸಿನಿಮಾ ಇದೇ ಸೆಪ್ಟೆಂಬರ್ 28ರಂದು ವಿಶ್ವದಾದ್ಯಂತ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಟ್ರೈಲರ್‌ನಲ್ಲೇ ಅನೌನ್ಸ್ ಮಾಡಿದೆ. ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ಮಾತ್ರ ಈ ಸಿನಿಮಾ ರಿಲೀಸ್ ಆಗಲಿದ್ದು, ಸಪ್ತಮಿ ಗೌಡ ಅಂತಹ ನಟಿ ನಟಿಸಿದ್ದರೂ ಕನ್ನಡದಲ್ಲಿ ರಿಲೀಸ್ ಮಾಡದೇ ಇರುವುದಕ್ಕೂ ವಿರೋಧ ವ್ಯಕ್ತವಾಗಿದೆ.

More from Filmibeat

English summary
Kashmir Files Director Vivek Agnihotri, Nana Patekar, Sapthami Gowda movie The Vaccine War Trailer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X