ಕತ್ರಿನಾ ಕೈಫ್ ವಿಕ್ಕಿ ಕೌಶಲ್ ಒಂದೇ ಒಂದು ಸಿನಿಮಾದಲ್ಲೂ ನಟಿಸಿಲ್ಲ ಆದರೂ ಪ್ರೀತಿ ಹುಟ್ಟಿದ್ದು ಹೇಗೆ?

ಕಳೆದೊಂದು ವಾರದಿಂದ ಬಾಲಿವುಡ್ ಜೋಡಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆ ಬಗ್ಗೆನೇ ಚರ್ಚೆ. ಮೊದಲಿಗೆ ಇದು ಗಾಳಿ ಸುದ್ದಿ ಅಂದುಕೊಂಡಿದ್ದರು. ಬಾಲಿವುಡ್ ಈ ರಾಯಲ್ ವಿವಾಹಕ್ಕೆ ಸಜ್ಜಾಗುತ್ತಿರುವುದು ನೋಡಿದಾಗ ಇಬ್ಬರ ಅದ್ಧೂರಿ ಕಲ್ಯಾಣ ಫಿಕ್ಸ್ ಅನ್ನುವ ಸೂಚನೆ ಸಿಕ್ಕಿತ್ತು. ಇನ್ನೊಂದು ಕಡೆ ರಾಜಸ್ಥಾನದ ಸವಾಯ್‌ ಮಧುಪುರದ ಸಿಕ್ಸ್‌ ಸೆನ್ಸಸ್‌ ಸ್ಟಾರ್‌ ಹೋಟೆಲ್‌ ಲುಕ್ ಸಂಪೂರ್ಣ ಬದಲಾಗುತ್ತಿತ್ತು. ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಜೋಡಿ ಕಲ್ಯಾಣಕ್ಕೆ ಇವಿಷ್ಟು ಸುಳಿವು ಸಾಕಾಗಿತ್ತು.

ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮದುವೆಗೆ ಕೆಲವೇ ಆಪ್ತರ ಸಮ್ಮುಖದಲ್ಲಿ ನಡೆಯುತ್ತಿದ್ದರೂ, ಸಿಕ್ಸ್‌ ಸೆನ್ಸಸ್‌ ಸ್ಟಾರ್‌ ಹೋಟೆಲ್‌ ಒಳಗೆ ನಡೆಯುತ್ತಿರುವ ಸಿದ್ಧತೆಗಳು ಮಾತ್ರ ಗುಟ್ಟಾಗಿ ಉಳಿಯುತ್ತಿಲ್ಲ. ಕತ್ರಿನಾ ವಿಕ್ಕಿ ಮದುವೆ ಯಾವಾಗ? ಎಷ್ಟು ಹೊತ್ತಿಗೆ ಮುಹೂರ್ತ? ಮದುವೆ ಬಂದಿರುವ ಅತಿಥಿಗಳು ಯಾರು? ಇಂತಹ ವಿಷಯಗಳು ಲೀಕ್ ಆಗುತ್ತಿವೆ. ಈ ಮಧ್ಯೆ ಒಂದೇ ಒಂದು ಸಿನಿಮಾದಲ್ಲೂ ಜೊತೆಯಾಗಿ ನಟಿಸದ ಕ್ಯಾಟ್ ವಿಕ್ಕಿ ನಡುವೆ ಪ್ರೀತಿ ಪ್ರೇಮ ಶುರುವಾಗಿದ್ದು ಹೇಗೆ ಅನ್ನುವ ಚರ್ಚೆ ಆಗುತ್ತಿದೆ.

ಕಾಫಿ ವಿಥ್ ಕರಣ್ ಶೋನಲ್ಲಿ ಕತ್ರಿನಾ ಹೇಳಿದ್ದೇನು?

ಕಾಫಿ ವಿಥ್ ಕರಣ್ ಶೋನಲ್ಲಿ ಕತ್ರಿನಾ ಹೇಳಿದ್ದೇನು?

ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಇದೂವರೆಗೂ ಒಂದೇ ಒಂದು ಸಿನಿಮಾದಲ್ಲಿ ಜೊತೆಯಾಗಿ ನಟಿಸಿಲ್ಲ. ಆದರೂ ಈ ಜೋಡಿ ಭೇಟಿಯಾಗಿದ್ದು ಯಾವಾಗ? ಇಬ್ಬರಲ್ಲಿ ಪ್ರೀತಿ ಚಿಗುರಿದ್ದು ಹೇಗೆ? ಮೊದಲು ಪ್ರಪೋಸ್ ಮಾಡಿದ್ದು ಯಾರು? ಹೀಗೆ ಈ ಸ್ಟಾರ್ ಜೋಡಿಯ ವಿವಾಹದ ಸಂದರ್ಭದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ರಣ್‌ಬೀರ್ ಕಪೂರ್ ಜೊತೆ ಬ್ರೇಕ್ ಬಳಿಕ ಕತ್ರಿನಾ ಕೈಫ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ವಿಕ್ಕಿ ಕೌಶಲ್ ನಡಿಸಿದ 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ವಿಕ್ಕಿ ಕೌಶಲ್ ಜೋಷ್‌ನಲ್ಲಿದ್ದರು. ಇಡೀ ಬಾಲಿವುಡ್‌ ವಿಕ್ಕಿಯ ಹೈ ಜೋಷ್‌ಗೆ ಫಿದಾ ಆಗಿದ್ದರು. ಇದೇ ಸಂದರ್ಭದಲ್ಲಿ 2019ರಲ್ಲಿ ಕತ್ರಿನಾ ಕೈಫ್, ಕರಣ್ ಜೋಹರ್ ನಡೆಸಿಕೊಡುತ್ತಿದ್ದ ಕಾಫಿ ವಿಥ್ ಕರಣ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಆ ಶೋನಲ್ಲಿ ಕರಣ್ ''ನೀವು ನಿಮ್ಮ ಮಂದಿನ ಸಿನಿಮಾದಲ್ಲಿ ಯಾರೊಂದಿಗೆ ನಟಿಸಲು ಇಷ್ಟ ಪಡುತ್ತೀರ'' ಎಂದು ಪ್ರಶ್ನೆ ಮಾಡಿದ್ದರು. ಕತ್ರಿನಾ ಹಿಂದೆ ಮುಂದೆ ಯೋಚಿಸದೆ ವಿಕ್ಕಿ ಕೌಶಲ್ ಹೆಸರು ಹೇಳಿದ್ದರು. " ನಮ್ಮಿಬ್ಬರ ಜೋಡಿ ತೆರೆಮೇಲೆ ಸುಂದರವಾಗಿ ಕಾಣಿಸುತ್ತೆ." ಎಂದಿದ್ದರು ಕತ್ರಿನಾ ಕೈಫ್

ಕತ್ರಿನಾ ಮಾತಿಗೆ ದಂಗಾಗಿದ್ದ ವಿಕ್ಕಿ ಕೌಶಲ್

ಕತ್ರಿನಾ ಮಾತಿಗೆ ದಂಗಾಗಿದ್ದ ವಿಕ್ಕಿ ಕೌಶಲ್

ಇದೇ 'ಕಾಫಿ ವಿಥ್ ಕರಣ್ ಶೋ' ಗೆ ಕತ್ರಿನಾ ಕೈಫ್ ಬಂದು ಹೋದ ಮೇಲೆ ವಿಕ್ಕಿ ಕೌಶಲ್ ಅನ್ನು ಅತಿಥಿಯಾಗಿ ಕರೆಸಲಾಗಿತ್ತು. ವಿಕ್ಕಿ ಕೌಶಲ್ ಜೊತೆ ಮತ್ತೊಬ್ಬ ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಕೂಡ ಜೊತೆಯಲ್ಲಿದ್ದರು. ಈ ವೇಳೆ ಕತ್ರಿನಾ ಆಸೆಯನ್ನು ಕರಣ್ ಜೋಹರ್ ವಿಕ್ಕಿ ಮುಂದಿಟ್ಟಿದ್ದರು. ಕರಣ್ ಈ ಮಾತನ್ನು ಹೇಳುತ್ತಿದ್ದಂತೆ ವಿಕ್ಕಿ ಕೌಶಲ್ ಆಶ್ಚರ್ಯ ಹೊರ ಹಾಕಿದ್ದರು. ಮೂಕ ವಿಸ್ಮಿತರಾದಂತೆ ನಟಿಸಿದ್ದರು.

ಒಂದೇ ಶೋನಲ್ಲಿ ಕತ್ರಿನಾ ಕೈಫ್ ವಿಕ್ಕಿ ಕೌಶಲ್

ಕರಣ್ ಜೋಹರ್ ನಿರೂಪಣೆಯ ಕಾಫಿ ವಿಥ್ ಕರಣ್ ಶೊಗೆ ವಿಕ್ಕಿ ಕೌಶಲ್ ಬಂದು ಹೋಗುತ್ತಿದ್ದಂತೆ, ಇಬ್ಬರು ಚಿಕ್ಕದೊಂದು ಸಂದರ್ಶನದಲ್ಲಿ ಭಾಗಿಯಾಗಿದ್ದರು. ಟೇಪ್ ರೆಕಾರ್ಡ್ ಅನ್ನು ಮುಂದಿಟ್ಟು ತಮಗೆ ತಾವೇ ಪ್ರಶ್ನೆ ಹಾಕಿಕೊಳ್ಳುವ ಕಾರ್ಯಕಮ ಇದಾಗಿತ್ತು. ಒಂದೇ ಒಂದು ಸಿನಿಮಾದಲ್ಲಿ ನಟಿಸದೆ ಇರುವ ಜೋಡಿ ತಮ್ಮ ಕುಟುಂಬದ ಬಗ್ಗೆ, ಸ್ನೇಹಿತರ ಬಗ್ಗೆ, ಬಾಲಿವುಡ್‌ನಲ್ಲಿ ತಮ್ಮ ಅನುಭವದ ಬಗ್ಗೆ ನಿರಾಯಾಸವಾಗಿ ಮಾತಾಡಿದ್ದರು.

ವೇದಿಕೆ ಮೇಲೆ ವಿಕ್ಕಿ ಕೌಶಲ್ ಪ್ರಪೋಸ್

ಒಂದೇ ಶೋನಲ್ಲಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಒಟ್ಟಿಗೆ ಕಾಣಿಸಿಕೊಂಡ ಬಳಿಕ ಅವಾರ್ಡ್ ಶೋನಲ್ಲಿ ಮತ್ತೆ ಮುಖಾಮುಖಿಯಾಗಿದ್ದರು. ಐಫಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವಿಕ್ಕಿ ಕೌಶಲ್ ನಿರೂಪಣೆ ಮಾಡುತ್ತಿದ್ದರು. ಈ ವೇಳೆ ವೇದಿಕೆ ಮೇಲೆ ಬಂದಿದ್ದ ಕತ್ರಿನಾಗೆ " ಮದುವೆ ಸೀಸನ್ ನಡೆಯುತ್ತಿದೆ. ಅದಕ್ಕೆ ಕೇಳುತ್ತಿದ್ದೇನೆ ನನ್ನನ್ನು ಮದುವೆ ಆಗುತ್ತೀರಾ" ಎಂದು ಕತ್ರಿನಾಗೆ ಕೇಳಿದ್ದರು. ಆಗ ಕತ್ರಿನಾ ಕೈಫ್ ಧೈರ್ಯವಿಲ್ಲ ಎಂದು ಹೇಳಿದ್ದರು. ಇದೇ ಕಾರ್ಯಕ್ರಮಕ್ಕೆ ಸಲ್ಮಾನ್ ಖಾನ್ ಕೂಡ ಬಂದಿದ್ದರಿಂದ ಪ್ರೇಕ್ಷಕರು ಗೊಂದಲಕ್ಕೆ ಒಳಗಾಗಿದ್ದರು.

More from Filmibeat

English summary
Katrina and vicky have never worked together in a film they become love birds, Bollywood believed that it all started with Karan Johar talk show Koffee with Karan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X