ಕತ್ರಿನಾ, ಅತ್ತೆ ಹಾಗೂ ಮಗು ವೈರಲ್; ಪ್ರಶ್ನೆ ಹುಟ್ಟು ಹಾಕಿದ ಕತ್ರಿನಾ ಮಗುವಿನ ಫೋಟೋ!
ಬಾಲಿವುಡ್‌ನ ಸ್ಟಾರ್ ನಟಿ ಈಗ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದಾರೆ. ತಾಯ್ತನದ ಅನುಭವವನ್ನು ಅನುಭವಿಸುತ್ತಿರುವ ನಟಿ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತಿಲ್ಲ. ವಿಕ್ಕಿ ಕೌಶಲ್ ಜೊತೆ ವಿವಾಹವಾದ ಬಳಿಕ ಫ್ಯಾಮಿಲಿ ಪ್ಲಾನಿಂಗ್ ಕಡೆಗೆ ವಾಲಿದ್ದ ನಟಿ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಫೋಸ್ಟ್‌ಗಳನ್ನು ಮಾಡುತ್ತಿದ್ದರಷ್ಟೇ. ಈಗ ಗಂಡು ಮಗುವಿನ ತಾಯಿಯಾಗಿದ್ದು, ತಾಯ್ತನದ ಆನಂದವನ್ನು ಅನುಭವಿಸುತ್ತಿದ್ದಾರೆ.
ಕತ್ರಿನಾ ಕೈಫ್‌ಗೆ ಗಂಡು ಮಗು ಜನಿಸುವುದಕ್ಕೂ ಮುನ್ನ ಅವರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆಯನ್ನು ಸಲ್ಲಿಸಿದ್ದರು. ಆ ವೇಳೆ ಕತ್ರಿನಾ ಕೈಫ್ ಬಂದು ಹೋಗಿದ್ದ ಫೋಟೊಗಳು ವೈರಲ್ ಆಗಿದ್ದವು. ತಮ್ಮ ಗರ್ಭಾವಸ್ಥೆಯನ್ನು ತೀರಾ ಗೌಪ್ಯವಾಗಿ ಇಟ್ಟಿದ್ದ ಕತ್ರಿನಾ ಕೈಫ್ ನವೆಂಬರ್ 7ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ವಿಷಯವನ್ನು ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಜೋಡಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು.

ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಇಬ್ಬರೂ ಪೋಷಕರಾಗುತ್ತಿರುವ ವಿಷಯವನ್ನು ಗೌಪ್ಯವಾಗಿ ಇಟ್ಟಿದ್ದರು. ಆದರೆ, ಕೊನೆಯಲ್ಲಿ ಅವರೇ ಈ ಖುಷಿ ವಿಷಯವನ್ನು ಹಂಚಿಕೊಂಡಿದ್ದರು. ಗಂಡು ಮಗು ಜನಿಸಿದ್ದಷ್ಟೇ. ಮತ್ತೆ ಕತ್ರಿನಾ ಕೈಫ್ ಯಾವುದೇ ವಿಷಯವನ್ನು ಹಂಚಿಕೊಂಡಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಕತ್ರಿನಾ ಕೈಫ್ ತನ್ನ ಮಗುವಿನೊಂದಿಗೆ ಇರುವ ಫೋಟೊ ವೈರಲ್ ಆಗಿತ್ತು. ಆ ಫೋಟೋದ ಅಸಲಿಯತ್ತೇನು? ತಿಳಿಯುವುದಕ್ಕೆ ಮುಂದೆ ಓದಿ.
ಕತ್ರಿನಾ ಕೈಫ್-ವಿಕ್ಕಿ ಕೌಶಲ್ ಅಭಿಮಾನಿಗಳಿಗೆ ಗಂಡು ಮಗು ಜನಿಸಿದ ವಿಷಯ ಅಷ್ಟೇ ಗೊತ್ತಿತ್ತು. ಆದರೆ, ಮಗುವಿನ ಮುಖವನ್ನು ನೋಡುವ ಅವಕಾಶ ಇನ್ನೂ ಸಿಕ್ಕಿಲ್ಲ. ಕತ್ರಿಕಾ ಹಾಗೂ ವಿಕ್ಕಿ ಇಬ್ಬರೂ ಸಾರ್ವಜನಿಕವಾಗಿ ಮಗುವಿನ ದರ್ಶನ ಮಾಡಿಸಿಲ್ಲ. ಹೀಗಾಗಿ ಈ ವೈರಲ್ ಆಗಿರುವ ಫೋಟೋ ಪ್ರಶ್ನೆ ಹುಟ್ಟಾಕಿತ್ತು. ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆಯಾಗಿರುವ ಫೋಟೋದಲ್ಲಿ ಕತ್ರಿನಾ ಕೈಫ್ ತನ್ನ ಮಗುವನ್ನು ಹಿಡಿದುಕೊಂಡಿದ್ದು, ಪಕ್ಕದಲ್ಲಿ ಅವರ ಅತ್ತೆ ಕೂಡ ಇದ್ದಾರೆ. ಹಾಗೇ ಮಗುವಿನ ಮುಖ ಕಾಣಿಸುತ್ತಿದೆ.
ಅಸಲಿಗೆ ಇದು ನಿಜವಾದ ಫೋಟೋ ಅಲ್ಲ. ಯಾರೋ ಕಿಡಿಗೇಡಿಗಳು ಎಐ ಟೂಲ್ ಅನ್ನು ಬಳಸಿಕೊಂಡು ಕತ್ರಿನಾ ಕೈಫ್, ಅವರ ಮಗು ಹಾಗೂ ಪಕ್ಕದಲ್ಲಿ ಅವರ ಅತ್ತೆ ಕುಳಿತು ಆರೈಕೆ ಮಾಡುತ್ತಿರುವ ಹಾಗೆ ಕ್ರಿಯೇಟ್ ಮಾಡಿದ್ದರು. ಈ ಫೋಟೋ ನಿಜವೆಂದು ನಂಬಿದ ಕೆಲವರು ಕಮೆಂಟ್‌ಗಳನ್ನು ಹಾಕುವುದಕ್ಕೆ ಶುರು ಮಾಡಿದ್ದರು.

ಕೆಲ ನೆಟ್ಟಿಗರು "ಯಾರ ಕಣ್ಣೂ ಬೀಳದಿರಲಿ" ಎಂದು ಕಮೆಂಟ್ ಮಾಡಿದ್ದರೆ, ಇನ್ನು ಕೆಲವರು "ಮಗ ತುಂಬಾನೇ ಮುದ್ದಾಗಿದ್ದಾನೆಂದು ಒಪ್ಪಿಕೊಳ್ಳಲೇಬೇಕು" ಎಂದು ಕಮೆಂಟ್ ಮಾಡಿದ್ದಾರೆ. ಹೀಗಾಗಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್‌ಗೆ ಶುಭ ಕೋರಿ ಮೆಸೇಜ್‌ಗಳನ್ನು ಮಾಡುತ್ತಿದ್ದಾರೆ. ಕೆಲವರು ಈ ಫೋಟೋವನ್ನು ನಿಜವೆಂದು ಕಮೆಂಟ್ ನಂಬಿ ಬಿಟ್ಟಿದ್ದಾರೆ. ಅಸಲಿಗೆ ಇದು ನಿಜವಾದ ಫೋಟೋ ಅಲ್ಲ. ಇದು ಎಐ ಜನರೇಟೆಡ್ ಫೋಟೋ ಎಂದು ವೈರಲ್ ಆಗುತ್ತಿದೆ.
ಈ ವೈರಲ್ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಂಚಲವನ್ನು ಸೃಷ್ಟಿಸಿದೆ. ಈ ಫೋಟೋವನ್ನು ಕ್ರಿಯೇಟ್ ಮಾಡಿರೋದು ಎಐ ತಂತ್ರಜ್ಞಾನವನ್ನು ಬಳಸಿ ಸೃಷ್ಟಿಸಲಾಗಿದೆ. ಇದು ನಿಜನೋ ಇಲ್ಲ ನಕಲಿನೋ ಎನ್ನುವಷ್ಟು ಗೊಂದಲವನ್ನು ಉಂಟು ಮಾಡಿದೆ. ಇದು ಕೆಲವರಿಗೆ ಗೊತ್ತಿದ್ದರೂ, ಫೋಟೋದಲ್ಲಿರುವ ಕತ್ರಿನಾ ಮಗು ಮುದ್ದಾಗಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
Disclaimer: ಯಾವುದೇ ರೀತಿಯ AI ಫೋಟೋಗಳು ಅಥವಾ ವೀಡಿಯೊಗಳನ್ನು ಫಿಲ್ಮಿಬೀಟ್ ಕನ್ನಡ ಪ್ರೋತ್ಸಾಹ ಮಾಡುವುದಿಲ್ಲ. ಈ ಫೋಟೋವನ್ನು ಕೇವಲ ಮಾಹಿತಿಯನ್ನು ನೀಡುವುದಕ್ಕಾಗಿ ಅಷ್ಟೇ.


Click it and Unblock the Notifications











