ಕತ್ರಿನಾ ಕೈಫ್ ಮೊದಲ ಮಗುವಿನ ಬಗ್ಗೆ ಬಾಲಿವುಡ್ ಸೆಲೆಬ್ರಿಟಿ ಜ್ಯೋತಿಷಿ ಭವಿಷ್ಯ; ಏನು ಹೇಳಿದ್ರು?
ಬಾಲಿವುಡ್ ನಟಿ ಕತ್ರಿನಾ ಕೈಫ್ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮದುವೆ ಬಳಿಕ ಮಗುವಿಗಾಗಿ ಯತ್ನಿಸುತ್ತಿದ್ದ ಕತ್ರಿನಾ ಕೈಫ್ ಗರ್ಭಿಣಿಯಾಗಿದ್ದಾರೆ. ಅದರಲ್ಲೂ ಕತ್ರಿನಾ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಪೂಜೆ ಸಲ್ಲಿಸಿದ ಬಳಿಕ ಗರ್ಭಿಣಿಯಾಗಿದ್ದು ದೇಶಾದ್ಯಂತ ಸುದ್ದಿ ಮಾಡಿತ್ತು. ಈಗ ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ.
ಇದೇ ವೇಳೆ ಬಾಲಿವುಡ್ ಸೆಲೆಬ್ರೆಟಿಗಳ ಜ್ಯೋತಿಷಿಯೊಬ್ಬರು ಕತ್ರಿನಾ ಕೈಫ್‌ಗೆ ಜನಿಸಲಿರುವ ಮೊದಲ ಮಗುವಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಇದು ಬಾಲಿವುಡ್ ಅಂಗಳಲ್ಲಿ ಹಲ್‌ಚಲ್ ಎಬ್ಬಿಸಿದೆ. ಒಂದು ವೇಳೆ ಈ ಜ್ಯೋತಿಷಿ ನುಡಿದ ಭವಿಷ್ಯ ಸತ್ಯವಾದರೆ ಎಂದು ಕುತೂಹಲ ಹಾಗೂ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ನೆಟ್ಟಿಗರು ಈ ಬಗ್ಗೆ ಸೋಶಿಯಲ್ ಮೀಡಿಯಾ ಕಮೆಂಟ್‌ಗಳನ್ನು ಮಾಡುತ್ತಲೇ ಇದ್ದಾರೆ.

ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಬಾಲಿವುಡ್‌ನ ಕ್ಯೂಟಿ ಜೋಡಿಗಳಲ್ಲಿ ಒಂದು. ಇಬ್ಬರು ಪ್ರೀತಿಯಲ್ಲಿ ಬಿದ್ದಿರೋ ವಿಷಯ ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದರು. ಮದುವೆ ಬಳಿಕ ಕತ್ರಿನಾ ಕೈಫ್ ಸಿನಿಮಾದಿಂದ ದೂರ ಉಳಿದಿದ್ದರು. ಫ್ಯಾಮಿಲಿ ಪ್ಲಾನಿಂಗ್ ಮಾಡುವತ್ತ ಗಮನ ಹರಿಸಿದ್ದರು. ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈ ಸಮಯದಲ್ಲಿ ಜ್ಯೋತಿಷಿ ನುಡಿದ ಭವಿಷ್ಯ ಬಾಲಿವುಡ್ ಮಂದಿಯಲ್ಲೇ ಕುತೂಹಲ ಕೆರಳಿಸಿದೆ. ಅಷ್ಟಕ್ಕೂ ಏನು ಹೇಳಿದ್ದಾರೆಂದು ನೋಡುವುದಾರೇ,
ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ವಿವಾಹವಾಗಿ ನಾಲ್ಕು ವರ್ಷಗಳಾಗಿದ್ದರೂ ಅಭಿಮಾನಿಗಳುಗೆ ಶುಭ ಸುದ್ಧಿ ನೀಡಿರಲಿಲ್ಲ. ಈ ಸುದ್ದಿಗಾಗಿ ಅವರ ಅಭಿಮಾನಿಗಳು ಹಾಗೂ ಆಪ್ತ ವಲಯಗಳು ಕಾತುರದಿಂದ ಕಾಯುತ್ತಿದ್ದರು. ಹಲವು ಸಂದರ್ಭಗಳಲ್ಲಿ ಕತ್ರಿನಾ ಕೈಫ್ ಗರ್ಭಿಣಿ ಎಂದು ಸುದ್ದಿಯಾಗಿತ್ತು. ಆದರೆ, ಅದು ಗಾಳಿ ಸುದ್ದಿಗಳಾಗಿಯೇ ಉಳಿದು ಬಿಟ್ಟಿತ್ತು. ಇತ್ತೀಚೆಗೆ ಕತ್ರಿನಾ ಕೈಫ್ ಬೇಬಿ ಬಂಪ್ ಫೋಟೊ ಶೇರ್ ಮಾಡಿ ಶುಭ ಸುದ್ದಿಯನ್ನು ನೀಡಿದ್ದರು.
ಕತ್ರಿನಾ ಕೈಫ್ ತಾಯಿಯಾಗುತ್ತಿರುವ ಸುದ್ದಿಯನ್ನು ಅಧಿಕೃತವಾಗಿ ಹೇಳಿಕೊಳ್ಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿತ್ತು. ಮಗುವಿನ ನಿಖರವಾದ ಜನ್ಮ ದಿನಾಂಕದ ಬಗ್ಗೆ ಡಿಬೆಟ್ ಶುರುವಾಗಿತ್ತು. ಇದೇ ವೇಳೆ ಬಾಲಿವುಡ್‌ನ ಜನಪ್ರಿಯ ಜ್ಯೋತಿಷಿ ಅನಿರುದ್ಧ್ ಕುಮಾರ್ ಮಿಶ್ರಾ, ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಮಗುವಿನ ಕುರಿತು ಭವಿಷ್ಯ ನುಡಿದಿದ್ದಾರೆ.
The first child of Vicky Kaushal and Katrina Kaif will be a daughter. pic.twitter.com/2wjWk7SaKN
— Anirudh Kumar Mishra (Astrologer) (@Anirudh_Astro) October 8, 2025
ಕತ್ರಿನಾ ಮತ್ತು ವಿಕ್ಕಿ ಕೌಶಲ್ ದಂಪತಿಗೆ ಮೊದಲ ಮಗುವಾಗಿ ಹೆಣ್ಣು ಮಗು ಜನಿಸಲಿದೆ ಎಂದು ಜ್ಯೋತಿಷಿ ಅನಿರುದ್ಧ್ ಕುಮಾರ್ ಮಿಶ್ರಾ ಭವಿಷ್ಯ ನುಡಿದಿದ್ದಾರೆ. ಅನಿರುದ್ಧ್ ಕುಮಾರ್ ಮಾಡಿರುವ ಈ ಟ್ವೀಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕೆಲವರು ಖುಷಿಯನ್ನು ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಕಿಡಿಕಾರಿದ್ದಾರೆ.
ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಇಬ್ಬರೂ 2021ರ ಡಿಸೆಂಬರ್‌ನಲ್ಲಿ ರಾಜಸ್ಥಾನದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. ವಿಕ್ಕಿ ಕೌಶಲ್ ಬಗ್ಗೆ ಕತ್ರಿನಾ ಕೈಫ್ ಬಹಿರಂಗವಾಗಿ ಮೆಚ್ಚುಗೆ ವ್ಯಕ್ತಪಡಿಸಿದ ಬಳಿಕ ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ರಹಸ್ಯವಾಗಿ ಪಾರ್ಟಿ, ಪ್ರವಾಸ ಅಂತ ಸುತ್ತಾಡಿದ್ದರು. ಇಬ್ಬರು ಡೇಟಿಂಗ್ ಮಾಡುತ್ತಿರುವ ಸಂಗತಿ ಹೊರಬೀಳುತ್ತಿದ್ದಂತೆ ವಿವಾಹಕ್ಕೆ ಮುಂದಾಗಿದ್ದರು.


Click it and Unblock the Notifications











