ಕತ್ರಿನಾ-ವಿಕ್ಕಿ ಕೌಶಲ್ 2ನೇ ವಿವಾಹ ವಾರ್ಷಿಕೋತ್ಸವ; ಇಬ್ಬರಲ್ಲಿ ಅತೀ ಹೆಚ್ಚು ಆಸ್ತಿ ಹೊಂದಿರೋದ್ಯಾರು?

ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಬಾಲಿವುಡ್‌ನ ಬ್ಯೂಟಿಫುಲ್ ಜೋಡಿ. ನಿನ್ನೆ (ಡಿಸೆಂಬರ್ 9) ಇವರಿಬ್ಬರೂ ಎರಡನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ವಿಕ್ಕಿ ಕೌಶಲ್ ನಿನ್ನೆಯಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದರು. ಆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಡಿಸೆಂಬರ್ 9, 2021ರಲ್ಲಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ರಾಜಸ್ತಾನದಲ್ಲಿ ಅದ್ಧೂರಿಯ ಆಪ್ತರು ಹಾಗೂ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಮದುವೆ ಆಗಿದ್ದರು. ಈಗ ಎರಡನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ.

Katrina Kaif Vicky Kaushal 2nd Wedding Anniversary here couple property list

ಕತ್ರಿನಾ ಕೈಫ್ ದಶಕಗಳ ಕಾಲ ಬಾಲಿವುಡ್‌ನ ಟಾಪ್ ನಟಿಯಾಗಿ ಮಿಂಚಿದ್ದಾರೆ. ಬಾಲಿವುಡ್‌ ಸೂಪರ್‌ಸ್ಟಾರ್‌ಗಳ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿರುವ ಕತ್ರಿನಾ ವಿವಾಹ ಬಳಿಕ ಸಿನಿಮಾದಿಂದ ಕೊಂಚ ದೂರವಿದ್ದಾರೆ. ಆದರೂ, ಇತ್ತೀಚೆಗೆ ಸಲ್ಮಾನ್ ಖಾನ್ ಜೊತೆ ನಟಿಸಿದ 'ಟೈಗರ್ 3' ರಿಲೀಸ್ ಆಗಿದ್ದು, ಕತ್ರಿನಾ ರೋಲ್ ಬಗ್ಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇತ್ತ ವಿಕ್ಕಿ ಕೌಶಲ್ ನಟಿಸಿರುವ 'ಸ್ಯಾಮ್ ಬಹದ್ದೂರ್' ತೆರೆಕಂಡಿದೆ.

ವಿಕ್ಕಿ ಕೌಶಲ್ ಬಾಲಿವುಡ್‌ನ ಉದಯೋನ್ಮುಖ ನಟ. ಸಹಾಯ ನಿರ್ದೇಶಕನಾಗಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಈಗ ಅದೇ ಚಿತ್ರರಂಗದ ಸ್ಟಾರ್ ನಟನಾಗಿ ಬೆಳೆದು ನಿಂತಿದ್ದಾರೆ. ವಿಕ್ಕಿಗಿಂತ ಕತ್ರಿನಾ ಕೈಫ್ ಬಾಲಿವುಡ್‌ಗೆ ಸೀನಿಯರ್. ಹೀಗಾಗಿ ಆಸ್ತಿ ಗಳಿಸುವುದರಲ್ಲಿ ವಿಕ್ಕಿಗಿಂತ ಕೊಂಚ ಮುಂದಿದ್ದಾರೆ.

ಮಾಧ್ಯಮಗಳ ವರದಿ ಪ್ರಕಾರ, 2023ಯಲ್ಲಿ ಕತ್ರಿನಾ ಕೈಫ್ ಬಳಿ ಸುಮಾರು 224 ಕೋಟಿ ರೂಪಾಯಿ ಮೌಲ್ಯದ ಆಸ್ತಿಯಿದೆ. ಒಂದು ವರ್ಷಕ್ಕೆ ಕತ್ರಿನಾ ಕೈಫ್ ಸುಮಾರು 25 ರಿಂದ 30 ಕೋಟಿ ರೂಪಾಯಿ ಸಂಪಾದನೆ ಮಾಡುತ್ತಾರೆ. ಒಂದು ಸಿನಿಮಾಗೆ ಬರೋಬ್ಬರಿ 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

Katrina Kaif Vicky Kaushal 2nd Wedding Anniversary here couple property list

ಕತ್ರಿನಾ ಕೈಫ್ ಕೇವಲ ಸಿನಿಮಾ ಅಷ್ಟೇ ಅಲ್ಲ. ಕೆಲವು ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. ನೈಕಾ ಸೇರಿದಂತೆ ಕೆಲವು ಮೇಕಪ್ ಕಂಪನಿಗಳ ಮೇಲೆ ಹೂಡಿಕೆ ಮಾಡಿದ್ದಾರೆ. ಇದರಿಂದ ಕತ್ರಿನಾಗೆ ಲಾಭ ಗಳಿಸಿದ್ದಾರೆ. ಹಾಗೇ ಜಾಹೀರಾತುಗಳಲ್ಲೂ ಕತ್ರಿನಾ ಕೈಫ್ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ಜಾಹೀರಾತಿಗೆ ಕೋಟಿ ಲೆಕ್ಕದಲ್ಲಿ ಚಾರ್ಜ್ ಮಾಡುತ್ತಾರೆ. ಮರ್ಸಿಡೀಸ್ ಎಂಎಲ್‌350, ಔಡಿ ಕ್ಯೂ 7 ಅಂತಹ ದುಬಾರಿ ಕಾರುಗಳನ್ನು ಹೊಂದಿದ್ದಾರೆ.

ಇತ್ತ ಬಾಲಿವುಡ್‌ನಲ್ಲಿ ವಿಕ್ಕಿ ಕೌಶಲ್ ವೃತ್ತಿ ಬದುಕು ಈಗ ಉತ್ತಮ ಹಂತಕ್ಕೆ ಬಂದಿದೆ. ಈಗಾಗಲೇ ಆಗಿರೋ ವರದಿ ಪ್ರಕಾರ, 2022ರಲ್ಲಿ ವಿಕ್ಕಿ ಕೌಶಲ್ ಬಳಿ 30 ಕೋಟಿ ರೂಪಾಯಿ ಆಸ್ತಿಯಿದೆ. ಪ್ರತಿ ಸಿನಿಮಾಗೆ ವಿಕ್ಕಿ ಕೌಶಲ್ 3 ರಿಂದ 4 ಕೋಟಿ ರುಪಾಯಿ ಸಂಭಾವನೆ ಪಡೆಯುತ್ತಾರೆ. ಇನ್ನು ಪ್ರತಿ ಜಾಹೀರಾತಿಗೆ ವಿಕ್ಕಿ ಕೌಶಲ್ ಬರೋಬ್ಬರಿ 2 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ. ಕತ್ರಿನಾ ಹಾಗೂ ವಿಕ್ಕಿ ಕೌಶಲ್ ಬಾಲಿವುಡ್‌ನ ಪವರ್‌ಫುಲ್ ಜೋಡಿ ಅನ್ನೋದರಲ್ಲಿ ಅನುಮಾನವೇ ಇಲ್ಲ.

More from Filmibeat

English summary
Katrina Kaif, Vicky Kaushal net worth and property list:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X