ಕತ್ರಿನಾ ಕೈಫ್, ಕರೀನಾ, ಪ್ರಿಯಾಂಕಾ, ಜಾಹ್ನವಿ ಕಪೂರ್ ಧರಿಸುವ ಬಿಕಿನಿಯ ಬೆಲೆ ಎಷ್ಟು ಗೊತ್ತೆ?
ಬಾಲಿವುಡ್ ನಟಿಯರಿಗೆ ದುಡ್ಡಿಗೇನು ಕಮ್ಮಿ? ಒಂದೊಂದು ಸಿನಿಮಾ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಅಂದ್ಮೇಲೆ ಖರ್ಚು ಹಾಗೇ ಮಾಡಲೇಬೇಕು. ಇಲ್ಲಿವರೆಗೂ ಬಾಲಿವುಡ್ ನಟಿಯರು ಬಳಸುವ ದುಬಾರಿ ಉಡುಗೆಯ ಬೆಲೆಯನ್ನು ಕೇಳಿದ್ದೇವೆ. ಒಂದು ಪಾರ್ಟಿಗೆ ಹೋಗುವುದಕ್ಕೆಂದೇ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಸ್ತ್ರವನ್ನು ಖರೀದಿ ಮಾಡುತ್ತಾರೆ. ಅದೇ ಬಿಡುವು ಸಿಕ್ಕಾಗ ಮಾಲ್ಡೀವ್ಸ್ ಹಾರುವ ನಟಿಯರು ಬಿಕಿನಿ, ಸ್ವಿಮ್ ಸೂಟ್‌ಗೂ ಸಾವಿರಾರು ರೂಪಾಯಿ ಖರ್ಚು ಮಾಡುತ್ತಾರೆ.
ಬಾಲಿವುಡ್‌ನಲ್ಲಿ ಚಾಲ್ತಿಯಲ್ಲಿರುವ ನಟಿಯರು ವರ್ಷಕ್ಕೆ ಕಮ್ಮಿ ಅಂದರೂ ವರ್ಷಕ್ಕೆ ಎರಡು ಬಾರಿ ವಿದೇಶಕ್ಕೆ ಹಾರುತ್ತಾರೆ. ರಿಲ್ಯಾಕ್ಸ್‌ಗಾಗಿ ಮಾಲ್ಡೀವ್ಸ್, ಮಾರಿಷಿಯಲ್ ಸೇರಿದಂತೆ ಬೇರೆ ಕಡೆ ಹೋಗುತ್ತಾರೆ. ಈ ವೇಳೆ ಅವರು ಸ್ವಿಮ್ ಸೂಟ್ ಖರೀದಿ ಮಾಡದೆ ಪ್ರವಾಸಕ್ಕೆ ತೆರಳುವುದೇ ಇಲ್ಲ. ಹಾಗಿದ್ದರೆ ಕತ್ರಿನಾ, ಕರೀನಾ, ಪ್ರಿಯಾಂಕಾರಿಂದ ಹಿಡಿದು ಇತ್ತೀಚೆಗೆ ಬಂದ ಜಾಹ್ನವಿ ಕಪೂರ್ ವರೆಗೂ ಅವರು ಧರಿಸುವ ಬಿಕಿನಿ, ಸ್ವಿಮ್ ಸೂಟಿನ ಬೆಲೆ ಬಲು ದುಬಾರಿ.

ಕತ್ರಿನಾ ಕೈಫ್ ಬಿಕಿನಿ ಬೆಲೆ ಎಷ್ಟು?
ಕತ್ರಿನಾ ಕೈಫ್ ಇತ್ತೀಚೆಗೆ ಜಾಹೀರಾತಿನ ಚಿತ್ರೀಕರಣಕ್ಕೆಂದು ಮಾಲ್ಡೀವ್ಸ್‌ಗೆ ತೆರಳಿದ್ದರು. ಈ ವೇಳೆ ಮಾಲ್ಡೀವ್ಸ್‌ನಲ್ಲಿ ತಂಗಿದ್ದ ಕತ್ರಿನಾ ನಿಯಾನ್ ಬಿಕಿನಿಯಲ್ಲಿ ಕಂಡಿದ್ದರು. ಅವರೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು. ಮಲ್ಟಿ ಕಲರ್ ಬಿಕಿನಿ ಫೋಟೊಗಳನ್ನು ಶೇರ್ ಮಾಡಿದ್ದರು. ಕತ್ರಿನಾ ಮಾಲ್ಡೀವ್ಸ್‌ನಲ್ಲಿ ಧರಿಸಿದ ಈ ಬಿಕಿನಿಯ ಬೆಲೆ ಬರೋಬ್ಬರಿ 10,900 ರೂಪಾಯಿಗಳೆಂದು ಬಾಲಿವುಡ್ ಲೈಫ್ ವರದಿ ಮಾಡಿದೆ.

ಪ್ರಿಯಾಂಕಾ ಸ್ವಿಮ್ ಸೂಟ್ ದುಬಾರಿ
ಲೈಫ್ ಎಂಜಾಯ್ ಮಾಡುವುದರಲ್ಲಿ ಪ್ರಿಯಾಂಕಾ ಚೋಪ್ರಾ ಸದಾ ಮುಂದಿರುತ್ತಾರೆ. ಸಮಯ ಸಿಕ್ಕಾಗಲೆಲ್ಲಾ ಪತಿ ನಿಕ್ ಜೊತೆ ಪ್ರಿಯಾಂಕಾ ಚಿಕ್ಕದೊಂದು ಪ್ರವಾಸಕ್ಕೆ ಹೋಗಿ ಬರುತ್ತಾರೆ. ಇತ್ತೀಚೆಗೆ ಪ್ರಿಯಾಂಕಾ ತನ್ನ ಹುಟ್ಟುಹಬ್ಬದಂದು ಸ್ವಿಮ್ ಸೂಟ್ ಧರಿಸಿದ್ದರು. ಅದರ ಬೆಲೆ ಬರೋಬ್ಬರಿ 28,200 ರೂಪಾಯಿ ಅಂತೆ.

ಜಾಹ್ನವಿ ಬಿಕಿನಿ ಬಲು ದುಬಾರಿ
ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಇತ್ತೀಚೆಗೆ ಬಿಕಿನಿ ಧರಿಸಿದ ಫೋಟೊಗಳು ವೈರಲ್ ಆಗಿದ್ದವು. ಸ್ವಿಮ್ಮಿಂಗ್ ಪೂಲ್‌ನಲ್ಲಿ ಪ್ರಿಂಟೆಡ್ ಬಿಕಿನಿಯಲ್ಲಿ ರಿಲ್ಯಾಕ್ಸ್ ಮೂಡಿಗೆ ಜಾರಿದ್ದರು. ಹಳದಿ ಬಣ್ಣದ ಈ ಬಿಕಿನಿಯ ಬೆಲೆ 17,490 ರೂಪಾಯಿ.

ದಿಶಾ ಪಟಾನಿ ಬಿಕಿನಿ ಬೆಲೆ ಎಷ್ಟು?
ಟೈಗರ್ ಶ್ರಾಫ್ ಗರ್ಲ್‌ಫ್ರೆಂಡ್ ದಿಶಾ ಪಟಾನಿ ಬಿಕಿನಿ ಫೋಟೊಗಳು ಆಗಾಗ ವೈರಲ್ ಆಗುತ್ತಲೇ ಇರುತ್ತವೆ. ಇತ್ತೀಚೆಗೆ ಡಾರ್ಕ್ ಆರೇಂಜ್ ಶೇಡಿನ ಬಣ್ಣದ ಬಿಕಿನಿ ಧರಿಸಿದ್ದರು. ಈ ಫ್ರಿಂಜ್ಡ್ ಬಿಕಿನಿಯ ಬೆಲೆ ಬರೋಬ್ಬರಿ 12,800 ರೂಪಾಯಿ ಎನ್ನಲಾಗಿದೆ.

ಕರೀನಾ ಬಿಕಿನಿ ಬೆಲೆ ಎಷ್ಟು?
ಆಗಾಗ ಮಾಲ್ಡೀವ್ಸ್‌ಗೆ ಹಾರುವ ನಟಿಯರಲ್ಲಿ ಲಿಸ್ಟ್‌ನಲ್ಲಿ ಕರೀನಾ ಕಪೂರ್ ಖಾನ್ ಕೂಡ ಇದ್ದಾರೆ. ಕರೀನಾ ಮಾಲ್ಡೀವ್ಸ್‌ಗೆ ಹೋದರೆ, ಮುಗೀತು ಬಿಕಿನಿ ಧರಿಸಿದ ಒಂದೆರಡು ಫೋಟೊಗಳನ್ನು ತನ್ನ ಅಭಿಮಾನಿಗಳಿಗಾಗಿ ಪೋಸ್ಟ್ ಮಾಡುತ್ತಾರೆ. ಇತ್ತೀಚೆಗೆ ಕರೀನಾ ಧರಿಸಿದ ಪ್ರಿಂಟೆಡ್ ಬಿಕಿನಿಯ ಬೆಲೆ 2,590 ರೂಪಾಯಿ ಎನ್ನಲಾಗಿದೆ.


Click it and Unblock the Notifications











