Keerthy Suresh: ಕೊನೆಗೂ ಬಾಲಿವುಡ್‌ಗೆ ಕಾಲಿಟ್ಟ ಮಹಾನಟಿ.. ಆ ಸ್ಟಾರ್ ಹೀರೊ ಯಾರು?

ದಕ್ಷಿಣ ಭಾರತದಲ್ಲಿ ಮಹಾ ನಟಿಯೆಂದೇ ಹೆಸರು ವಾಸಿಯಾಗಿರೋದು ಕೀರ್ತಿ ಸುರೇಶ್. ಸೌತ್ ಸಿನಿಮಾರಂಗದ ಅತ್ಯುತ್ತಮ ನಟಿಯರಲ್ಲಿ ಇವರಿಗೆ ಪ್ರಮುಖ ಸ್ಥಾನವಿದೆ. ಈಗಾಗಲೇ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ಕೀರ್ತಿ ಸುರೇಶ್ ಜನಮನ ಗೆದ್ದಿದ್ದಾರೆ.

ಇತ್ತೀಚೆಗೆ ಕೀರ್ತಿ ಸುರೇಶ್ ನಟಿಸಿದ ಸಾಲು ಸಾಲು ಸಿನಿಮಾಗಳು ಸೋಲುಂಡಿದ್ದವು. ಇದೇ ವಿಷಯಕ್ಕೆ ಹಲವರ ಟೀಕೆಗೂ ಗುರಿಯಾಗಿದ್ದರು. ಕೊನೆಗೂ ಉದಯನಿಧಿ ಸ್ಟಾಲಿನ್ ಅಭಿನಯದ 'ಮಾಮನ್ನನ್' ಸಿನಿಮಾ ಕೀರ್ತಿ ಸುರೇಶ್‌ಗೆ ಮತ್ತೆ ಗೆಲುವನ್ನು ತಂದು ಕೊಟ್ಟಿದೆ.

Keerthy Suresh, Varun Dhawan,

'ಮಹಾನಟಿ' ಸಿನಿಮಾ ಮೂಲಕ ರಾಷ್ಟ್ರ ಪ್ರಶಸ್ತಿ ಗಿಟ್ಟಿಸಿಕೊಂಡಿರೋ ಕೀರ್ತಿ ಸುರೇಶ್‌ಗೆ ಅಂದಿನಿಂದಲೇ ಬಾಲಿವುಡ್‌ಗೆ ಆಫರ್‌ಗಳು ಬಂದಿದ್ದವು. ಆದರೆ, ಅದ್ಯಾಕೋ ಕೀರ್ತಿ ಸುರೇಶ್ ಒಪ್ಪಿಕೊಂಡಿರಲಿಲ್ಲ. ಈಗ ಕೊನೆಗೂ ಬಾಲಿವುಡ್‌ಗೆ ಎಂಟ್ರಿ ಕೊಡುವುದಕ್ಕೆ ಮನಸ್ಸು ಮಾಡಿದ್ದಾರೆ. ಹಾಗಿದ್ದರೆ, ಆ ಸಿನಿಮಾ ಯಾವುದು? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಬಾಲಿವುಡ್‌ಗೆ ಕೀರ್ತಿ ಸುರೇಶ್ ಎಂಟ್ರಿ

ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್ ಶೀಘ್ರದಲ್ಲಿಯೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಬಾಲಿವುಡ್‌ನ ಯಂಗ್ ಹೀರೊ ವರುಣ್ ಧವನ್ 18ನೇ ಸಿನಿಮಾದಲ್ಲಿ ನಟಿಸಲು ಕೀರ್ತಿ ಸುರೇಶ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಪಿಂಕ್ ಪಿಲ್ಲ ವರದಿ ಮಾಡಿದೆ.

Keerthy Suresh, Varun Dhawan,

ಕೀರ್ತಿ ಸುರೇಶ್ ಬಾಲಿವುಡ್‌ನಲ್ಲಿ ಲಾಂಚ್ ಆಗಲು ಒಂದು ಪರ್ಫೆಕ್ಟ್ ಪ್ರಾಜೆಕ್ಟ್ ಅನ್ನು ಹುಡುಕಾಡುತ್ತಿದ್ದರು. ಅದಕ್ಕೆ ಸರಿಯಾಗಿ ವರುಣ್ ಧವನ್ ಸಿನಿಮಾ ಸಿಕ್ಕಿದೆ. ಪಕ್ಕಾ ಕಮರ್ಷಿಯಲ್ ಆಕ್ಷನ್ ಎಂಟರ್‌ಟೈನರ್‌ನಲ್ಲಿ ಕೀರ್ತಿ ಸುರೇಶ್ ಗ್ಲಾಮರಸ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಮುಂದಿನ ತಿಂಗಳಿನಿಂದ ಈ ಸಿನಿಮಾ ಸೆಟ್ಟೇರಲಿದೆ.

ಅಟ್ಲೀ ಪತ್ನಿಯೇ ನಿರ್ಮಾಪಕಿ

ಕೀರ್ತಿ ಸುರೇಶ್ ಮೊದಲ ಬಾಲಿವುಡ್ ಸಿನಿಮಾ ಮೊದಲ ಹಂತದ ಚಿತ್ರೀಕರಣ ಮುಂಬೈನಲ್ಲಿ ಆರಂಭ ಆಗಲಿದೆ. ನಿರಂತರವಾಗಿ ಬಿಡದಂತೆ ಈ ಸಿನಿಮಾವನ್ನು ಮೂರು ತಿಂಗಳ ಕಾಲ ಚಿತ್ರೀಕರಣ ಮಾಡುವ ಪ್ಲ್ಯಾನ್ ಅನ್ನು ಚಿತ್ರತಂಡ ಇಟ್ಟುಕೊಂಡಿದೆ. ನವೆಂಬರ್‌ನಲ್ಲಿ ಶೂಟಿಂಗ್ ಮುಗಿಸಿ, ಮೇ 31ನೇ ತಾರೀಕು 2024ನಲ್ಲಿ ಸಿನಿಮಾವನ್ನು ತೆರೆಗೆ ತರುವುದಕ್ಕೆ ಚಿತ್ರತಂಡ ನಿರ್ಧರಿಸಿದೆ.

ಅಂದ್ಹಾಗೆ, ಕೀರ್ತಿ ಸುರೇಶ್ ಮೊದಲ ಬಾಲಿವುಡ್ ಸಿನಿಮಾವನ್ನು ಮುರಾದ್ ಖೇತಾನಿ ಮತ್ತು ನಿರ್ದೇಶಕ ಅಟ್ಲೀ ಪತ್ನಿ ಪ್ರಿಯಾ ಅಟ್ಲೀ ನಿರ್ಮಾಣ ಮಾಡುತ್ತಿದ್ದಾರೆ. ಹಾಗೇ ಜವಾನ್ ಸಿನಿಮಾದ ನಿರ್ದೇಶಕ ಅಟ್ಲೀ ಕುಮಾರ್ ಪ್ರಸ್ತುತಿ ಪಡಿಸುತ್ತಿದ್ದಾರೆ.

ಸಮಂತಾ ಬಳಿಕ ವರುಣ್‌ಗೆ ಕೀರ್ತಿ ನಾಯಕಿ

ವರುಣ್ ಧವನ್ ದಕ್ಷಿಣ ಭಾರತೀಯ ನಾಯಕಿಯರೊಂದಿಗೆ ಬ್ಯಾಕ್ ಟು ಬ್ಯಾಕ್ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. 'ಸಿಟಾಡೆಲ್' ವೆಬ್‌ ಸೀರಿಸ್‌ನಲ್ಲಿ ವರುಣ್ ಧವನ್‌ಗೆ ದಕ್ಷಿಣ ಭಾರತದ ನಟಿ ಸಮಂತಾ ನಾಯಕಿಯಾಗಿದ್ದರು. ಈಗಾಗಲೇ ಈ ವೆಬ್ ಸೀರಿಸ್ ಶೂಟಿಂಗ್ ಸಹ ಮುಗಿದಿದೆ. ಈಗ ಕೀರ್ತಿ ಸುರೇಶ್ ಜೊತೆ ಸಿನಿಮಾ ಮಾಡುತ್ತಿದ್ದಾರೆ.

ಇತ್ತ ಕೀರ್ತಿ ಸುರೇಶ್ ಕೈಯಲ್ಲೂ ಸಿನಿಮಾಗಳಿವೆ. ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ 'ಭೋಲಾ ಶಂಕರ್', 'ರಿವಾಲ್ವರ್ ರೀಟಾ','ರಘು ತಾತ' ಹಾಗೂ 'ಕನ್ನಿವೇಡಿ' ಸಿನಿಮಾಗಳಲ್ಲಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ.

More from Filmibeat

English summary
Keerthy Suresh making bollywood debut with Varuna Dhawan 18th Movie here is the details, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X