RRR ಆಯ್ತು.. ಈಗ ದಂಗಲ್ ದಾಖಲೆ ಧೂಳೀಪಟ: ಕೆಜಿಎಫ್ 21ನೇ ದಿನದ ಸಾಧನೆಯೇನು?

ಕೆಜಿಎಫ್.. ಕೆಜಿಎಫ್.. ಕೆಜಿಎಫ್.. ಎಲ್ಲಿ ನೋಡಿದರೂ ಕೆಜಿಎಫ್ ಸಿನಿಮಾದ್ದೇ ಹವಾ. ಭಾರತದ ಮೂಲೆ ಮೂಲೆಯಲ್ಲೂ 'ಕೆಜಿಎಫ್ 2' ಸಿನಿಮಾ ಬಗ್ಗೆನೇ ಸದ್ದು ಕೇಳಿಸುತ್ತಿದೆ. ಸಿನಿಮಾ ರಿಲೀಸ್ ಆಗಿ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದರೂ, ಕಲೆಕ್ಷನ್‌ನಲ್ಲಿ ಕಾಂಪ್ರಮೈಸ್ ಅನ್ನೋ ಮಾತೇ ಇಲ್ಲ. ದೇಶದ ಉದ್ದಗಲಕ್ಕೂ 'ಕೆಜಿಎಫ್ 2' ಕಿಕ್ ಕಡಿಮೆ ಆಗುತ್ತಲೇ ಇಲ್ಲ. ಈಗ ಬಾಲಿವುಡ್‌ನಲ್ಲಿ ಸೂಪರ್‌ಸ್ಟಾರ್ ಆಮಿರ್ ಖಾನ್ ಸಿನಿಮಾ ದಾಖಲೆಯನ್ನು ಬ್ರೇಕ್ ಮಾಡಿದೆ.

ರಾಕಿ ಭಾಯ್ ಹಾಗೂ ಪ್ರಶಾಂತ್ ನೀಲ್ ಮೋಡಿ ವರ್ಕ್‌ಔಟ್ ಆಗಿದೆ. 'ಕೆಜಿಎಫ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಇನ್ನೂ ರಾಕಿ ಭಾಯ್ ಡೈಲಾಗ್ ಸದ್ದು ಕೇಳಿಸುತ್ತಲೇ ಇದೆ. ಅದರಲ್ಲೂ ಉತ್ತರ ಭಾರತದ ಹಿಂದಿ ಬೆಲ್ಟ್‌ನಲ್ಲಿ 'ಕೆಜಿಎಫ್ 2' ಅಲ್ಲಾಡುತ್ತಿಲ್ಲ. ಹೊಸದಾಗಿ ಬಿಡುಗಡೆಯಾದ ಸಿನಿಮಾಗಳ ದಾಖಲೆಗಳನ್ನೆಲ್ಲಾ ಉಡೀಸ್ ಮಾಡುತ್ತಲೇ ಮುನ್ನುಗ್ಗುತ್ತಿದೆ.

ಹೌದು.. 'ಕೆಜಿಎಫ್ 2' ಹಲವು ಬಾಲಿವುಡ್ ಸಿನಿಮಾಗಳನ್ನು ಹಿಂದಿಕ್ಕುತ್ತಾ ಮುಂದೆ ಬಂದಿದೆ. ಈಗ ಬಾಲಿವುಡ್‌ನಲ್ಲಿ ಎರಡನೇ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳ ಪಟ್ಟಿಯಲ್ಲಿ 'ಕೆಜಿಎಫ್ 2' ಸಿನಿಮಾ ನಿಂತಿದೆ. ಹಾಗಿದ್ದರೆ, ಆಮಿರ್ ಖಾನ್ ಸಿನಿಮಾದ ಗಳಿಕೆಯನ್ನು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಈ ಸಿನಿಮಾದ ಕೆಲಕ್ಷನ್ ಹೇಗಿದೆ? ಅಂತ ತಿಳಿಯಲು ಮುಂದೆ ಓದಿ..

'ದಂಗಲ್' ದಾಖಲೆ ಧೂಳೀಪಟ

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೊಂದು ಇಷ್ಟು ದೊಡ್ಡ ದಾಖಲೆ ಮಾಡುತ್ತೆ ಅನ್ನೋದು ಯಾರೂ ಊಹಿಸಿರಲು ಸಾಧ್ಯವೇ ಇಲ್ಲ. ಆದರೆ, ಕೆಜಿಎಫ್ 2' ನಂಬಲು ಅಸಾಧ್ಯವಾದ ದಾಖಲೆಗಳನ್ನು ಹಲವು ದಿನಗಳಿಂದ ಮಾಡುತ್ತಲೇ ಇದೆ. ಆಮಿರ್ ಖಾನ್ ನಟಿಸಿದ 'ದಂಗಲ್' ಸಿನಿಮಾ ಬಾಲಿವುಡ್‌ ಬಾಕ್ಸಾಫೀಸ್‌ನಲ್ಲಿ ಸುಮಾರು 387.38 ಕೋಟಿ ಕಲೆಹಾಕಿತ್ತು. ಈ ದಾಖಲೆಯನ್ನು 'ಕೆಜಿಎಫ್ 2' ಬೀಟ್ ಮಾಡಿದೆ. ನಿನ್ನೆ (ಮೇ 4) 'ಕೆಜಿಎಫ್ 2' ಸಿನಿಮಾ 8.75 ಕೋಟಿ ಗಳಿಕೆ ಕಂಡಿದೆ. ಇದರಿಂದ 'ಕೆಜಿಎಫ್ 2' ಬಾಲಿವುಡ್ ಬಾಕ್ಸಾಫೀಸ್ ಕಲೆಕ್ಷನ್ 391.65 ಕೋಟಿ ಆಗಿದೆ. ನಿನ್ನೆ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೊಂದು ಬಾಲಿವುಡ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಎರಡನೇ ಸಿನಿಮಾವಾಗಿ ಹೊರಹೊಮ್ಮಿದೆ. ಮುಂದಿನ ಗುರಿ ಬಾಹುಬಲಿ 2 ಕಲೆಕ್ಷನ್ 510.99 ಕೋಟಿ.

'ಕೆಜಿಎಫ್ 2' 21 ದಿನಗಳಲ್ಲಿ ಗಳಿಸಿದ್ದೆಷ್ಟು?

'ಕೆಜಿಎಫ್ 2' 21 ದಿನಗಳಲ್ಲಿ ಗಳಿಸಿದ್ದೆಷ್ಟು?

ರಾಕಿ ಭಾಯ್ ಹಾಗೂ ಪ್ರಶಾಂತ್ ನೀಲ್ ಚಮತ್ಕಾರ ಮಾಡಿದ್ದಾರೆ. 21ನೇ ದಿನವೂ 'ಕೆಜಿಎಫ್ 2' ಸಿನಿಮಾದ ಗಳಿಕೆ ಮಾತ್ರ ಕಮ್ಮಿಯಾಗಿಲ್ಲ. ರಂಜಾನ್ ಮಾರನೇ ದಿನವೂ (ಮೇ 05) 'ಕೆಜಿಎಫ್ 2' ತೂಫಾನ್‌ನಂತೆ ಮತ್ತೆ ಅಬ್ಬರಿಸಿದೆ. ಈ ಸಿನಿಮಾ ಬಿಡುಗಡೆಯಾದ 21 ದಿನಗಳಲ್ಲಿ 1097.10 ಕೋಟಿ ಗಳಿಕೆ ಕಂಡಿದೆ. ಈ ಮೂಲಕ ರಾಜಮೌಳಿ ನಿರ್ದೇಶನದ RRR ದಾಖಲೆಯನ್ನೂ ಶೀಘ್ರದಲ್ಲಿಯೇ ಉಡೀಸ್ ಮಾಡಲಿದೆ.

RRR ದಾಖಲೆನೂ ಧೂಳೀಪಟ

RRR ದಾಖಲೆನೂ ಧೂಳೀಪಟ

ರಾಜಮೌಳಿ ನಿರ್ದೇಶನದ RRR ಸಿನಿಮಾ ಬಿಡುಗಡೆಯಾಗಿ 41 ದಿನಗಳಾಗಿದೆ. ಈ 41 ದಿನಗಳಲ್ಲಿ RRR ವರ್ಲ್ಡ್‌ ವೈಡ್ ಕಲೆಕ್ಷನ್ 1126.15 ಕೋಟಿ ಗಳಿಕೆ ಕಂಡಿದೆ. ಕೆಜಿಎಫ್ ಇನ್ನೊಂದೆರಡು ದಿನಗಳಲ್ಲಿ ಈ ದಾಖಲೆಯನ್ನೂ ಲೂಟಿ ಮಾಡಲಿದೆ. ಅದೇ RRR 21ನೇ ದಿನ ಹಿಂದಿ ಬೆಲ್ಟ್‌ನಲ್ಲಿ 3 ಕೋಟಿ ಹಾಗೂ ವಲ್ಡ್‌ವೈಟ್ 7 ಕೋಟಿ ಕಲೆಹಾಕಿತ್ತು. ಆದೇ 'ಕೆಜಿಎಫ್ 2' ವರ್ಲ್ಡ್‌ವೈಡ್ 32 ಕೋಟಿ ಲೂಟಿ ಮಾಡಿದೆ. ಈ ಲೆಕ್ಕಾಚಾರದ ಪ್ರಕಾರ, 'ಕೆಜಿಎಫ್ 2' ಮುಂದಿನ ಗುರಿ 1500 ಕೋಟಿ ಎನ್ನಬಹುದು.

ಕನ್ನಡ, ತಮಿಳಿನಲ್ಲೂ ಕ್ರೇಜ್

ಕನ್ನಡ, ತಮಿಳಿನಲ್ಲೂ ಕ್ರೇಜ್

'ಕೆಜಿಎಫ್ 2' ಹಿಂದಿ ಬೆಲ್ಟ್‌ನಲ್ಲಿ ಅಷ್ಟೇ ಅಲ್ಲ. ಕರ್ನಾಟಕ ಹಾಗೂ ತಮಿಳುನಾಡಿನಲ್ಲೂ ಉತ್ತಮ ಗಳಿಕೆ ಕಂಡಿದೆ. ಕರ್ನಾಟಕದಲ್ಲಿ ಇದೂವರೆಗೂ ನಿರ್ಮಾಪಕರಿಗೆ 70 ರಿಂದ 80 ಕೋಟಿ ಸಿಕ್ಕಿದೆ. ಇನ್ನೊಂದು ಕಡೆ ತಮಿಳುನಾಡಿನಲ್ಲೂ ವಿತರಕರು ಲಾಭದಲ್ಲಿದ್ದು, 40 ರಿಂದ 50 ಕೋಟಿ ಲಾಭದಲ್ಲಿದ್ದಾರೆ ಎನ್ನಲಾಗಿದೆ. ಕೇರಳದಿಂದ ನಿರ್ಮಾಪಕರ ಜೇಬು ಸೇರಿದ್ದು 10 ಕೋಟಿ ಎನ್ನಲಾಗಿದೆ.

More from Filmibeat

English summary
KGF 2 Becomes 2nd Highest Grosser Bollywood Movie Beats Dangal, RRR. Here Is The KGF 2 day 21 Worldwide Boxoffice Collection Report.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X