ಬಾಲಿವುಡ್‌ನ ಬಹು ನಿರೀಕ್ಷೆಯ ಸಿನಿಮಾಗಳ ಪಟ್ಟಿಯಲ್ಲಿ 'ಕೆಜಿಎಫ್ 2'ಗೆ ಮೊದಲ ಸ್ಥಾನ: ಏನು ಹೇಳುತ್ತೆ ಸರ್ವೆ?

'ಕೆಜಿಎಫ್ 2' ಸಿನಿಮಾಗಾಗಿ ಇಡೀ ವಿಶ್ವದಲ್ಲಿರುವ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಕಾದು ಕೂತಿದ್ದಾರೆ ಅನ್ನುವುದು ಗೊತ್ತಿದೆ. 'ಕೆಜಿಎಫ್ ಚಾಪ್ಟರ್ 1' ಸೃಷ್ಟಿಸಿದ ಹವಾನೇ ಹಾಗಿತ್ತು. ಇನ್ನು 'ಕೆಜಿಎಫ್ ಚಾಪ್ಟರ್ 2' ಹವಾ ದುಪ್ಪಟ್ಟಾಗಿದೆ. ಇದಕ್ಕೆ ಈ ಹಿಂದೆ ರಿಲೀಸ್ ಮಾಡಿದ ಒಂದೇ ಒಂದು ಟೀಸರ್ ಸಾಕ್ಷಿ. ಇನ್ನೇನು ಸಿನಿಮಾ ಬಿಡುಗಡೆಗೆ ಕೆಲವೇ ತಿಂಗಳು ಬಾಕಿ ಉಳಿದುಕೊಂಡಿದೆ ಅನ್ನುವಾಗಲೇ ಯಶ್ ಅಭಿಮಾನಿಗಳಿಗೆ ಖುಷಿ ವಿಷಯವೊಂದು ಹೊರಬಿದ್ದಿದೆ.

ಬಾಲಿವುಡ್‌ನಲ್ಲಿ ಈ ವರ್ಷ ಬಹುನಿರೀಕ್ಷೆಯಲ್ಲಿರುವ ಸಿನಿಮಾ ಯಾವುದು? ಅನ್ನುವ ಸರ್ವೆಯೊಂದನ್ನು ಮಾಡಲಾಗಿತ್ತು. ಈ ಸರ್ವೆಯಲ್ಲಿ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆನೇ ಜನರು ಬೊಟ್ಟು ಮಾಡಿ ತೋರಿಸಿದ್ದಾರೆ. 2022 ಬಾಲಿವುಡ್ ದಿಗ್ಗಜರ ಸಿನಿಮಾಗಳು ಒಂದರ ಹಿಂದೊಂದು ಬಿಡುಗಡೆಗೆ ಸಜ್ಜಾಗಿ ನಿಂತಿದೆ. ಈ ಮಧ್ಯೆ ಡಬ್ಬಿಂಗ್ ಸಿನಿಮಾವೊಂದು ಈ ಮಟ್ಟಿಗೆ ಸದ್ದು ಮಾಡುತ್ತಿರುವುದು ರಾಕಿಂಗ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ.

ಬಾಲಿವುಡ್‌ನಲ್ಲಿ ಕೆಜಿಎಫ್ ನಂ. 1

ಬಾಲಿವುಡ್‌ನಲ್ಲಿ ಕೆಜಿಎಫ್ ನಂ. 1

2022ರಲ್ಲಿ ಬಾಲಿವುಡ್‌ನಲ್ಲಿ ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿ ನಿಂತಿವೆ. ಹೀಗಾಗಿ ಮುಂಬೈ ಮೂಲಕ ಮೀಡಿಯಾ ಕನ್ಸಲ್ಟಿಂಗ್ ಕಂಪನಿ ಓರ್ಮ್ಯಾಕ್ಸ್ ಒಂದು ಸರ್ವೆ ಮಾಡಿದೆ. ಈ ವರ್ಷ ಬಾಲಿವುಡ್‌ನ ಬಹುನಿರೀಕ್ಷೆಯ ಸಿನಿಮಾ ಯಾವುದು ಎಂದು ಸರ್ವೆ ಮಾಡಲಾಗಿದೆ. ಈ ಸರ್ವೆಯಲ್ಲಿ ಅಚ್ಚರಿ ಎಂಬಂತೆ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗೆ ಹೆಚ್ಚು ಮತಗಳು ಸಿಕ್ಕಿದ್ದು, ಕೆಜಿಎಫ್ 2 ನಂಬರ್ 1 ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದೆ. ಆಮಿರ್ ಖಾನ್, ಅಕ್ಷಯ್ ಕುಮಾರ್, ರಣ್‌ವೀರ್ ಸಿಂಗ್, ರಣ್‌ಬೀರ್ ಕಪೂರ್ ಸೇರಿದಂತೆ ದಿಗ್ಗಜರ ಸಿನಿಮಾಗಳನ್ನೇ ಹಿಂದಿಕ್ಕಿ 'ಕೆಜಿಎಫ್ 2' ಮೊದಲ ಸ್ಥಾನಕ್ಕೆ ಏರಿದೆ.

'ಕೆಜಿಎಫ್ 2' ಹಿಂದಿಕ್ಕಿದ ಸಿನಿಮಾಗಳಿವು

'ಕೆಜಿಎಫ್ 2' ಹಿಂದಿಕ್ಕಿದ ಸಿನಿಮಾಗಳಿವು

ಓರ್ಮ್ಯಾಕ್ಸ್ ಸರ್ವೆಯಲ್ಲಿ ಸ್ಯಾಂಡಲ್‌ವುಡ್‌ನ ಪ್ಯಾನ್‌ ಇಂಡಿಯಾ ಸಿನಿಮಾ 'ಕೆಜಿಎಫ್ 2' ನಂಬರ್ 1 ಸ್ಥಾನದಲ್ಲಿರುವುದೇನೋ ಸರಿ. ಆದರೆ, ಬಾಲಿವುಡ್‌ನ ಯಾವ್ಯಾವ ಸಿನಿಮಾಗಳನ್ನು ಹಿಂದಿಕ್ಕಿದೆ? ಯಾವ ಸಿನಿಮಾ ಯಾವ ಸ್ಥಾನದಲ್ಲಿದೆ ಎನ್ನುವುದನ್ನು ನೋಡುವುದಾದರೆ, ರಣ್‌ಬೀರ್ ಕಪೂರ್ ಸಿನಿಮಾ 'ಬ್ರಹ್ಮಾಸ್ತ್ರ', ಎರಡನೇ ಸ್ಥಾನದಲ್ಲಿದೆ. ಲಾಲ್ ಸಿಂಗ್ ಚಡ್ಡಗೆ ಮೂರನೇ ಸ್ಥಾನ, ಟ್ರೈಗರ್ ಶ್ರಾಫ್ ಅಭಿನಯದ 'ಹೀರೋಪಂತಿ 2' ನಾಲ್ಕನೇ ಸ್ಥಾನದಲ್ಲಿದ್ದು, ಅಕ್ಷಯ್ ಕುಮಾರ್ ಅಭಿನಯದ 'ರಾಮ್ ಸೇತು' ಈ ವರ್ಷದ ಬಹು ನಿರೀಕ್ಷೆಯ ಸಿನಿಮಾಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.

'ಕೆಜಿಎಫ್ 2' ಹೊಸ ದಾಖಲೆ ನಿರೀಕ್ಷೆ

'ಕೆಜಿಎಫ್ 2' ಹೊಸ ದಾಖಲೆ ನಿರೀಕ್ಷೆ

'ಕೆಜಿಎಫ್ ಚಾಪ್ಟರ್ 2' ಚಿತ್ರದ ಟೀಸರ್ ಬರೆದ ದಾಖಲೆಗಳನ್ನು ನೋಡಿದರೆ, ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುವುದು ಖಚಿತ. ಆದರೆ, ಯಾವ ಭಾಷೆಯಲ್ಲಿ ಎಷ್ಟು ಗಳಿಕೆ ಮಾಡುತ್ತೆ ಅನ್ನುವುದೇ ಕೂತೂಹಲ. ಅದರಲ್ಲೂ ಬಾಲಿವುಡ್‌ ಗಲ್ಲಾಪಟ್ಟೆಗೆಯಲ್ಲಿ ಬಾಹುಬಲಿ ಬಿಟ್ಟರೆ, ಬೇರಾವುದೇ ಸಿನಿಮಾ ಆ ಮಟ್ಟಕ್ಕೆ ತಲುಪಿದ ಉದಾಹರಣೆಗಳೇ ಇಲ್ಲ. ಹೀಗಾಗಿ ಈ ಬಾರಿ 'ಕೆಜಿಎಫ್ 2' ಹೊಸ ದಾಖಲೆ ಬರೆಯಬಹುದೆಂಬ ನಿರೀಕ್ಷೆಯಿದೆ.

'ಕೆಜಿಎಫ್ 2' Vs 'ಲಾಲ್ ಸಿಂಗ್ ಚಡ್ಡ'

'ಕೆಜಿಎಫ್ 2' Vs 'ಲಾಲ್ ಸಿಂಗ್ ಚಡ್ಡ'

ಬಾಲಿವುಡ್‌ ಚಿತ್ರರಂಗದಲ್ಲಿ ದಿಗ್ಗಜರು ನಟಿಸಿದ ಸಿನಿಮಾಗಳನ್ನು 'ಕೆಜಿಎಫ್ 2' ಸರ್ವೆಯಲ್ಲಿ ಹಿಂದಿಕ್ಕಿದೆ. ಆದರೆ, ಅಸಲಿ ಹೋರಾಟ ಇರುವುದು ಥಿಯೇಟರ್‌ನಲ್ಲಿ. ಏಪ್ರಿಲ್ 14ಕ್ಕೆ 'ಕೆಜಿಎಫ್ 2' ರಿಲೀಸ್ ಆಗುತ್ತಿದ್ದರೆ, ಇನ್ನೊಂದು ಕಡೆ ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ ನಟಿಸುತ್ತಿರುವ 'ಲಾಲ್ ಸಿಂಗ್ ಚಡ್ಡ' ಕೂಡ ಏಪ್ರಿಲ್ 14ಕ್ಕೆ ಬಿಡುಗಡೆಯಾಗಲಿದೆ. ಇದೂವರೆಗೂ ಕೆಜಿಎಫ್ ಆಗಲಿ, ಲಾಲ್ ಸಿಂಗ್ ಚಡ್ಡ ತಂಡವಾಗಲಿ ಬಿಡುಗಡೆ ದಿನವನ್ನು ಬದಲಾಯಿಸಿಕೊಂಡಿಲ್ಲ. ಹೀಗಾಗಿ ಥಿಯೇಟರ್ ಕಾಳಗವೇ ಅಂತಿಮ ಎನ್ನಬಹುದು.

More from Filmibeat

English summary
KGF 2 is most awaited movie in Bollywood after Brahmastra, Laal Singh Chaddha, Heropanti 2, and Ram Setu. KGF: Chapter 2 is topping the list despite hindi films have big names like Ranbir Kapoor, Aamir Khan and Akshay Kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X