Mouni Roy Beach Photo: ಕಡಲ ತೀರದಲ್ಲಿ ಪುಟ್ಟ ಡ್ರೆಸ್ ತೊಟ್ಟು 'ಕೆಜಿಎಫ್' ನಟಿ ಮೌನಿ ರಾಯ್ ಸಡಗರ
ಸೋಶಿಯಲ್ ಮೀಡಿಯಾ ಬಂದ್ಮೇಲೆ ಹೀರೊಯಿನ್ಸ್ ತಮ್ಮ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿರುತ್ತಾರೆ. ಗ್ಲಾಮರ್ ಡ್ರೆಸ್ ತೊಟ್ಟು ಫೋಟೊ ಹಾಕುವುದು. ಬಿಕಿನಿ ಫೋಟೊಗಳನ್ನು ಪೋಸ್ಟ್ ಮಾಡುವುದನ್ನು ಮಾಡುತ್ತಲೇ ಇರುತ್ತಾರೆ. ಈ ಕಾರಣಕ್ಕೆ ನಾಯಕಿಯರು ಸದಾ ಸುದ್ದಿಯಲ್ಲಿ ಇರುತ್ತಾರೆ. ಇಂತಹ ನಟಿಯರಲ್ಲಿ ಕೆಜಿಎಫ್ ಸಿನಿಮಾದ ನಟಿ ಮೌನಿ ರಾಯ್ ಕೂಡ ಒಬ್ಬರು.
ಮೌನಿ ರಾಯ್ ಬಾಲಿವುಡ್ ಸಿನಿಮಾ ಹಾಗೂ ಹಿಂದಿ ಧಾರಾವಾಹಿಗಳಲ್ಲಿ ತುಂಬಾನೇ ಫೇಮಸ್. ಕೆಲವು ದಿನಗಳಿಂದ ಮೌನಿ ರಾಯ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಮಿಂಚುತ್ತಿದ್ದಾರೆ. ಅಸಲಿಗೆ ಮೌನಿ ರಾಯ್ ಹಾಟ್ ಫೋಟೊಗಳಿಗೆ ಭರ್ಜರಿ ಪ್ರತಿಕ್ರಿಯೆ ಕೂಡ ಸಿಗುತ್ತಿದೆ. ಮೌನಿ ರಾಯ್ ಇತ್ತೀಚೆಗೆ ಬೀಚ್‌ನಲ್ಲಿ ಪುಟ್ಟ ಪುಟ್ಟ ಡ್ರೆಸ್‌ನಲ್ಲಿ ಹಾಟ್ ಲುಕ್ ಕೊಟ್ಟ ಫೋಟೋವನ್ನು ಶೇರ್ ಮಾಡಿದ್ದಾರೆ.

ಧಾರಾವಾಹಿಗಳಲ್ಲಿ ಮೌನಿ ಫೇಮಸ್
2004ರಲ್ಲಿ ಮೌನಿ ರಾಯ್ ಮಾಡೆಲ್ ಆಗಿ ಫೇಮಸ್ ಆಗಿದ್ದರು. ಈ ಯಶಸ್ಸಿನ ಬೆನ್ನಲ್ಲೇ 'ರನ್' ಸಿನಿಮಾದಲ್ಲಿ ಸ್ಪೆಷಲ್ ಸಾಂಗ್‌ವೊಂದರಲ್ಲಿ ನಟಿಸಿದ್ದರು. ಬಳಿಕ ಕಿರುತೆರೆ ಪ್ರಪಂಚಕ್ಕೆ ಕಾಲಿಟ್ಟರು. ಹಿಂದಿ ಫೇಮಸ್ ಧಾರಾವಾಹಿ 'ಕ್ಯೂಂಕಿ ಸಾಸ್ ಬಿ ಕಭಿ ಬಹು ಥೀ' ಧಾರಾವಾಹಿಯೊಂದಿಗೆ ಕಿರುತೆರೆಗೆ ಎಂಟ್ರಿಕೊಟ್ಟರು. ಈ ಧಾರಾವಾಹಿ ಸೂಪರ್ ಹಿಟ್ ಆಯ್ತು. ಈ ಸೀರಿಯಲ್ ಬಳಿಕ 'ಕಹೋ ನಾ ಯಾರ್ ಹೈ', 'ಕಸ್ತೂರಿ', 'ಝರಾ ನಚ್ ಕೆ ದಿಖಾ' 'ದೋ ಸಹೇಲಿಯನ್', ನಂತಹ ಸಾಲು ಸಾಲು ಧಾರಾವಾಹಿಗಳಲ್ಲಿ ಮೌನಿ ರಾಯ್ ನಟಿಸಿದ್ದಾರೆ.

'ನಾಗಿನ್' ಧಾರಾವಾಹಿಯಿಂದ ಫೇಮಸ್
ಮೌನಿ ರಾಯ್ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿದ್ದರೂ, ಫೇಮಸ್ ಆಗಿದ್ದು 'ನಾಗಿನ್' ಸೀರಿಯಲ್ ಮೂಲಕ. ಮೂರು ಸೀಸನ್‌ಗಳಲ್ಲಿ ಈ 'ನಾಗಿನ್' ಸೀರಿಯಲ್ ಪ್ರಸಾರ ಆಗಿತ್ತು. ಇದೇ ಧಾರಾವಾಹಿಯಲ್ಲಿ ಮೌನಿ ರಾಯ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಧಾರಾವಾಹಿ ಭಾರತದ ಹಲವು ಭಾಷೆಗಳಿಗೆ ಡಬ್ ಆಗಿದೆ. ಕನ್ನಡದಲ್ಲಿಯೂ 'ನಾಗಿಣಿ' ಸೂಪರ್ ಡೂಪರ್ ಹಿಟ್ ಆಗಿದೆ.

ಸಿನಿಮಾಗಳಲ್ಲೂ ಮೌನಿ ಫೇಮಸ್
ಮೌನಿ ರಾಯ್ ಕೈ ತುಂಬ ಸೀರಿಯಲ್‌ಗಳಿತ್ತು. ಮೌನಿ ರಾಯ್ ಕಿರುತೆರೆಯಲ್ಲಿ ಯಶಸ್ಸಿನ ತುತ್ತ ತುದಿಯಲ್ಲಿ ಇದ್ದರು. ಈ ವೇಳೆ ಹಲವು ಚಿತ್ರಗಳಲ್ಲಿ ನಟಿಸುವ ಅವಕಾಶ ಕೂಡ ಒದಗಿ ಬಂತು. 'ಹೀರೋ ಹಿಟ್ಲರ್ ಲವ್' ಎಂಬ ಪಂಜಾಬಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಬಾಲಿವುಡ್ ಸೂಪರ್ ಹಿಟ್ ಸಿನಿಮಾ 'ಗೋಲ್ಡ್' ರಿಲೀಸ್ ಆಯ್ತು. 'ರೋಮಿಯೋ ಅಕ್ಬರ್ ವಾಲ್ಟರ್', 'ಮೇಡ್ ಇನ್ ಚೈನಾ' ಸಿನಿಮಾಗಳಿಗೆ ನಾಯಕಿಯಾಗಿ ಮಿಂಚಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ 'ಕೆಜಿಎಫ್ ಚಾಪ್ಟರ್ 1'ರ ಹಿಂದಿ ಅವತರಣಿಕೆಯಲ್ಲಿ ಐಟಂ ಸಾಂಗ್‌ಗೆ ಯಶ್ ಜೊತೆ ಹೆಜ್ಜೆ ಹಾಕಿದ್ದರು.

ಪ್ರೇಮ ವಿವಾಹ, ಹನಿಮೂನ್
ಮೌನಿ ರಾಯ್ ಡೇಟಿಂಗ್ ವಿಷಯ ಗುಟ್ಟಾಗಿ ಉಳಿದಿರಲಿಲ್ಲ. ಬಹಳ ದಿನಗಳಿಂದ ಸೂರಜ್ ನಂಬಿಯಾರ್ ಎಂಬುವವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಬೆನ್ನಲ್ಲೇ ಕೆಲವು ದಿನಗಳ ಹಿಂದಷ್ಟೇ ಪ್ರೀತಿಸಿದ ವ್ಯಕ್ತಿಯನ್ನೇ ಮದುವೆಯಾಗಿದ್ದಾರೆ. ವಿವಾಹದ ಹನಿಮೂನ್, ಪೋಟೊಶೂಟ್ ಎಲ್ಲಾ ವಿಚಾರದಲ್ಲೂ ಮೌನಿ ಸುದ್ದಿಯಲ್ಲಿದ್ದರು.

ಮೌನಿ ರಾಯ್ ಫುಲ್ ಬ್ಯುಸಿ
ಮೌನಿ ರಾಯ್ ಸಿನಿಮಾ ಧಾರಾವಾಹಿ ಅಂತ ಅದೆಷ್ಟೇ ಬ್ಯುಸಿಯಾಗಿದ್ದರೂ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. ತನ್ನ ಅಭಿಮಾನಿಗಳಿಗಾಗಿ ಸದಾ ಗ್ಲಾಮರ್ ಫೋಟೊಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಆಗಾಗ ವಿಡಿಯೋಗಳನ್ನು ಶೇರ್ ಮಾಡುತ್ತಾರೆ.

ಬೀಚ್‌ನಲ್ಲಿ ಮೌನಿ ಸದ್ದು
ಸೋಶಿಯಲ್ ಮೀಡಿಯಾದಲ್ಲಿ ಮೌನಿರಾಯ್ ಬೇಜಾನ್ ಸದ್ದು ಮಾಡುತ್ತಿದ್ದಾರೆ. ಸಮುದ್ರ ತೀರದ ಮುಂದೆ ನಿಂತು ಹಾಟ್ ಹಾಟ್ ವಿಡಿಯೋಗಳು ಹಾಗೂ ಫೋಟೊಗಳನ್ನು ಶೇರ್ ಮಾಡುತ್ತಿದ್ದಾರೆ. ಭಿನ್ನ ವಿಭಿನ್ನ ಫೋಟೊಗಳನ್ನು ಶೇರ್ ಮಾಡುವ ಮೂಲಕ ಮೌನಿ ಬೇಜಾನ್ ಸದ್ದು ಮಾಡುತ್ತಿದ್ದಾರೆ. ಸದ್ಯ ಪುಟ್ಟ ಡ್ರೆಸ್ ತೊಟ್ಟು ಕಡಲ ತೀರದಲ್ಲಿ ನಿಂತ ಮೌನಿ ಪೋಟೊಗಳಿಗೆ ನೆಟ್ಟಿಗರು ಸೂಪರ್ ಎನ್ನುತ್ತಿದ್ದಾರೆ.


Click it and Unblock the Notifications











