ಕಪಿಲ್ ಶರ್ಮಾ ರೆಸ್ಟೋರೆಂಟ್ ಮೇಲೆ ಗುಂಡಿನ ದಾಳಿ; ಬಹಿರಂಗ ಕ್ಷಮೆ ಕೇಳದೆ ಇದ್ದರೆ...? ಎಚ್ಚರಿಕೆ ಕೊಟ್ಟಿದ್ಯಾರು?
ಭಾರತದ ಜನಪ್ರಿಯ ಕಾಮೆಡಿಯನ್ ಕಪಿಲ್ ಶರ್ಮಾ ಯಾರಿಗೆ ಗೊತ್ತಿಲ್ಲ? ವಿಶ್ವದ ಮೂಲೆ ಮೂಲೆಯಲ್ಲಿರುವ ಹಾಸ್ಯವನ್ನು ಇಷ್ಟ ಪಡುವ ಪ್ರತಿಯೊಬ್ಬ ಭಾರತೀಯರಿಗೂ ಗೊತ್ತಿದೆ. 'ದಿ ಕಪಿಲ್ ಶರ್ಮಾ ಶೋ' ಅಂತಹ ಜನಪ್ರಿಯ ಹಾಸ್ಯ ಕಾರ್ಯಕ್ರಮವನ್ನು ನಡೆಸಿಕೊಡುವ ಈ ಶೋನ ರುವಾರಿ ಇವರೇ. ಇತ್ತೀಚೆಗೆ ಕಪಿಲ್ ಶರ್ಮಾ ಕೆನಾಡದಲ್ಲಿ ಕೆಫೆಯೊಂದನ್ನು ಆರಂಭಿಸಿದ್ದರು. ಅದರ ಮೇಲೆ ಖಲಿಸ್ತಾನಿ ಉಗ್ರಂ ಗುಂಡಿನ ದಾಳಿ ಮಾಡಿದ್ದಾರೆ.
ಕಪಿಲ್ ಶರ್ಮಾ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿ ಕ್ಯಾಪ್ಸ್ ಕಫೆಯನ್ನು ಆರಂಭಿಸಿದ್ದರು. ಕಪಿಲ್ ಶರ್ಮಾ ಪತ್ನಿ ಗಿನ್ನಿ ಛತ್ರತ್ ಕೂಡ ಕೆಫೆಯ ಮುಖ್ಯ ಭಾಗವಾಗಿದ್ದರು. ಆದರೆ, ಬುಧವಾರ (ಜುಲೈ 9) ತಡರಾತ್ರಿ ದುಷ್ಕರ್ಮಿಗಳು ಗುಂಡಿನ ದಾಳಿಯನ್ನು ನಡೆಸಿ ಅಲ್ಲಿಂದ ಪರಾರಿಯಾಗಿದ್ದರು. ಈ ದಾಳಿ ನಡೆದ ಕೆಲವೇ ಸಮಯಗಳಲ್ಲಿ ಹೊಣೆಗಾರಿಕೆಯನ್ನು ಖಲಿಸ್ಥಾನಿ ಸಂಘಟನೆಯ ಸದಸ್ಯ ಹರ್ಜಿತ್ ಸಿಂಗ್ ಲಡ್ಡಿ ಹೊತ್ತುಕೊಂಡಿದ್ದಾರೆ. ಈ ದಾಳಿಯಲ್ಲಿ ಯಾವುದೇ ರೀತಿಯ ಸಾವು ನೋವುಗಳಾಗಿಲ್ಲ.

ಈ ದಾಳಿಯ ಬಳಿಕ ಹರ್ಜಿತ್ ಸಿಂಗ್ ಲಡ್ಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ, ಕಾರಣವನ್ನು ಬಹಿರಂಗ ಪಡಿಸಿದ್ದಾರೆ. ಅಲ್ಲದೇ, ಕಾಮಿಡಿಯನ್ ಕಪಿಲ್ ಶರ್ಮಾ ಅವರಿಗೆ ಬಹಿರಂಗ ಕ್ಷಮೆಯನ್ನು ಕೇಳಬೇಕು ಎಂದು ಬೆದರಿಕೆಯನ್ನು ಹಾಕಿದ್ದಾರೆ. ಅಷ್ಟಕ್ಕೂ ಕಪಿಲ್ ಶರ್ಮಾ ಒಡೆತನದ ಕೆಫೆ ಮೇಲೆ ದಾಳಿ ಮಾಡಿದ್ದು ಯಾಕೆ? ತಿಳಿಯುವುದಕ್ಕೆ ಮುಂದೆ ಓದಿ.
ಕಪಿಲ್ ಶರ್ಮ ಕಾಮಿಡಿ ಶೋಗೆ ವಿಶ್ವದಾದ್ಯಂತ ಅಭಿಮಾನಿಗಳು ಇದ್ದಾರೆ. ಆದರೆ, ಈ ಶೋನಲ್ಲಿ ಕೆಲವೊಮ್ಮೆ ಕೆಲವರಿಗೆ, ಕೆಲವು ಪಂಗಡಗಳಿಗೆ ನೋವು ಆಗುವ ಸಾಧ್ಯತೆ ಇರುತ್ತೆ. ಈಗ ಖಲಿಸ್ಥಾನಿ ಉಗ್ರರು ಕೂಡ ಇದೇ ವಾದವನ್ನು ಮಂಡಿಸಿದ್ದಾರೆ. ದಿ ಕಪಿಲ್ ಶರ್ಮಾ ಶೋನಲ್ಲಿ ನಿಹಾಂಗ್ ಸಿಖ್ ಜನಾಂಗದ ವರ್ತನೆ ಹಾಗೂ ಉಡುಪಿನ ಬಗ್ಗೆ ಕಾಮಿಡಿ ಮಾಡಲಾಗಿದ್ದು, ಇದನ್ನು ಖಂಡಿಸಲಾಗಿದೆ.
ಖಲಿಸ್ಥಾನಿ ಉಗ್ರ ಹರ್ಜಿತ್ ಸಿಂಗ್ ಲಡ್ಡಿ ಮಾಡಿದ ಪೋಸ್ಟ್‌ನಲ್ಲಿ ಕಪಿಲ್ ಶರ್ಮಾಗೆ ಬೆದರಿಕೆ ಹಾಕಲಾಗಿದೆ. " ಕಪಿಲ್ ಶರ್ಮಾ ಅವರ ದಿ ಕಪಿಲ್ ಶರ್ಮಾ ಶೋದ ಒಂದು ಎಪಿಸೋಡ್‌ನಲ್ಲಿ ಪಾತ್ರವೊಂದು ನಿಹಾಂಗ್ ಸಿಖ್ ಜನಾಂಗದ ಡ್ರೆಸ್ ಹಾಗೂ ವರ್ತನೆಯ ಮೇಲೆ ಹಾಸ್ಯ ಮಾಡಲಾಗಿತ್ತು. ಅಲ್ಲಿ ಮಾಡಿದ ಟೀಕೆಗಳು ನಿಹಾಂಗ್ ಜನಾಂಗದ ಭಾವನಾತ್ಮಕ ಸನ್ನಿವೇಶಗಳಿಗೆ ನೋವುಂಟು ಮಾಡಿದೆ. ಈ ಶೋನಲ್ಲಿ ಮಾಡಿದ ಅಪಹಾಸ್ಯ ನಿಹಾಂಗ್ ಸಿಖ್ಖರ ಆಧ್ಯಾತ್ಮಿಕ ಸಂಪ್ರದಾಯ ಮತ್ತು ಘನತೆಯನ್ನು ಅಣುಕಿಸಿದಂತೆ ಆಗಿದೆ. ಹಾಸ್ಯದ ನೆಪದಲ್ಲಿ ಯಾವುದೇ ಧರ್ಮವಾಗಲಿ, ಇಲ್ಲವೇ ಆಧ್ಯಾತ್ಮಿಕ ಗುರುತನ್ನು ಅಪಹಾಸ್ಯಕ್ಕೆ ಒಳಪಡಿಸುವುದಕ್ಕೆ ಸಾಧ್ಯವಿಲ್ಲ" ಎಂದು ಖಲಿಸ್ಥಾನಿ ಉಗ್ರ ಹರ್ಜಿತ್ ಸಿಂಗ್ ಲಡ್ಡಿ ಬರೆದುಕೊಂಡಿದ್ದಾನೆ.

ಇದೇ ಪೋಸ್ಟ್‌ನಲ್ಲಿ ಕಪಿಲ್ ಶರ್ಮಾ ಮ್ಯಾನೇಜರ್ ಅನ್ನು ಹಲವು ಬಾರಿ ಈ ವಿಷಯಕ್ಕೆ ಸಂಬಂಧಿಸಿದಂತೆ ಸಂಪರ್ಕ ಮಾಡುವುದಕ್ಕೆ ಪ್ರಯತ್ನ ಮಾಡಿದ್ದಾಗಿ ತಿಳಿಸಿದ್ದಾನೆ. ಆದರೆ, ಕಪಿಲ್ ಶರ್ಮಾ ಮ್ಯಾನೇಜರ್‌ನಿಂದ ಯಾವುದೇ ಪ್ರತಿಕ್ರಿಯೆ ಬಾರಲಿಲ್ಲ. ಹಾಗೇ ತಮ್ಮ ಎಲ್ಲಾ ಕರೆಗಳನ್ನು ನಿರ್ಲ್ಯಕ್ಷ ಮಾಡಲಾಯಿತು. ಒಂದು ವೇಳೆ ಕಪಿಲ್ ಶರ್ಮಾ ಈ ವಿಷಯಕ್ಕೆ ಸಂಬಂಧಿಸಿದಂತೆ ಬಹಿರಂಗವಾಗಿ ಕ್ಷಮೆಯನ್ನು ಕೇಳದೆ ಇದ್ದರೆ ಹಲ್ಲೆಗೆ ಮುಂದಾಗುವುದಾಗಿ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಹರ್ಜಿತ್ ಸಿಂಗ್ ಲಡ್ಡಿ ಭಾರತದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿ ಇದ್ದಾನೆ. ಲಡ್ಡಿ ಅಂತಲೇ ಕರೆಸಿಕೊಳ್ಳುವ ಈತ ಜರ್ಮನಿಯಲ್ಲಿ ಕೂಡ ಇಂತಹ ಚಟುವಟಿಗಳನ್ನು ನಡೆಸುತ್ತಾನೆ. ಈಗಾಗಲೇ ಬ್ಯಾನ್ ಆಗಿರುವ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ ಭ*ಯೋತ್ಪಾದಕ ಸಂಘಟನೆಯಲ್ಲಿ ಈಗ ಗುರುತಿಸಿಕೊಂಡಿದ್ದಾನೆ. ಹಲವು ಹತ್ಯೆಗಳಲ್ಲಿ ಈತನ ಕೈವಾಡವಿದೆ ಎಂದು ಗುರುತಿಸಲಾಗಿದೆ. ಅಲ್ಲದೇ ವಿಶ್ವ ಹಿಂದೂ ಪರಿಷತ್ ಸಂಘಟನೆಯ ಮುಖಂಡ ವಿಕಾಸ್ ಪ್ರಭಾಕರ್ ಹತ್ಯೆಯ ರೂವಾರಿ ಕೂಡ ಈತನೇ ಆಗಿದ್ದ. ಈ ಬೆದರಿಕೆ ಬಳಿಕೆ ಕಪಿಲ್ ಶರ್ಮಾ ಮುಂದಿನ ನಡೆ ಏನು ಅನ್ನೋದು ನೋಡಬೇಕಿದೆ.


Click it and Unblock the Notifications











