For Quick Alerts
  ALLOW NOTIFICATIONS  
  For Daily Alerts

  'ಟಾಪ್‌ ಲೆಸ್' ಫೋಟೊಶೂಟ್ ಟ್ರೋಲ್: ಕಿಯಾರಾ ಅಡ್ವಾಣಿ ಹೇಳಿದ್ದೇನು?

  |

  ಬಾಲಿವುಡ್‌ನ ಖ್ಯಾತ ಸೆಲೆಬ್ರಿಟಿ ಫೋಟೊಗ್ರಾಫರ್ ಡಬೂ ರತ್ನಾನಿ ಅವರ ಕ್ಯಾಲೆಂಡರ್ ಫೋಟೊಶೂಟ್‌ನಲ್ಲಿ ಟಾಪ್‌ಲೆಸ್‌ ಆಗಿ ಎಲೆಮರೆಯಲ್ಲಿ ಕಾಣಿಸಿಕೊಂಡು ಪಡ್ಡೆಹುಡುಗರ ಎದೆಯಲ್ಲಿ ಕಚಗುಳಿಯಿರಿಸಿದ್ದ ಕಿಯಾರಾ ಅಡ್ವಾಣಿ, ಅಷ್ಟೇ ಟ್ರೋಲ್‌ಗೂ ಒಳಗಾಗಿದ್ದರು.

  ಕಿಯಾರಾ ಅವರ ಹಾಟ್ ಚಿತ್ರ ಅಂತರ್ಜಾಲದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಕಿಯಾರಾ ಹಾಗೂ ಫೋಟೊಗ್ರಾಫರ್ ಇಬ್ಬರನ್ನೂ ಅಣಕಿಸುವ ಮೀಮ್‌ಗಳು ತಯಾರಾಗಿದ್ದವು. ಈ ರೀತಿಯ ವಿಡಂಬನೆ, ವ್ಯಂಗ್ಯದ ಟ್ರೋಲ್‌ಗಳಿಗೆ ಕಿಯಾರಾ ಈಗ ಪ್ರತಿಕ್ರಿಯೆ ನೀಡಿದ್ದಾರೆ.

  ಕಿಯಾರಾ ಟಾಪ್ ಲೆಸ್ ಫೋಟೋ ಶೂಟ್: ಟ್ರೋಲ್ ಆದ ಮಹೇಶ್ ಬಾಬು ನಾಯಕಿ.!ಕಿಯಾರಾ ಟಾಪ್ ಲೆಸ್ ಫೋಟೋ ಶೂಟ್: ಟ್ರೋಲ್ ಆದ ಮಹೇಶ್ ಬಾಬು ನಾಯಕಿ.!

  ಇಂತಹ ಮೀಮ್‌ಗಳು ತಮ್ಮ ವ್ಯಕ್ತಿತ್ವಕ್ಕೇನೂ ಘಾಸಿ ಮಾಡಲಾರವು. ಅಲ್ಲದೆ, ತಮ್ಮ ಟೀಕಿಸುವ ಮೀಮ್‌ಗಳನ್ನು ಒಂದು ರೀತಿಯ ಹೊಗಳಿಕೆ ಎಂದೇ ಭಾವಿಸಿದ್ದಾಗಿ ಅವರು ತಿಳಿಸಿದ್ದಾರೆ. ಹಾಗೆಯೇ ಇವುಗಳನ್ನು ಕೆಲವು ಮೀಮ್‌ಗಳನ್ನು ಸ್ವತಃ ತಾವೇ ಶೇರ್ ಮಾಡಿಕೊಂಡಿದ್ದನ್ನೂ ತಿಳಿಸಿದ್ದಾರೆ.

  ನಾನು ಸೀರಿಯಸ್ಸಾಗಿಲ್ಲ...

  ನಾನು ಸೀರಿಯಸ್ಸಾಗಿಲ್ಲ...

  'ಇವು ಸಾಕಷ್ಟು ತಮಾಷೆ ಹಾಗೂ ಶ್ಲಾಘನೀಯವಾಗಿವೆ. ಕೆಲವು ವೈರಲ್ ಆದ ಮೀಮ್‌ಗಳನ್ನು ನಾನು ಕೂಡ ಹಂಚಿಕೊಂಡಿದ್ದೇನೆ. ಅವುಗಳು ನಿಜಕ್ಕೂ ಮಜವಾಗಿದ್ದವು. ಇದೆಲ್ಲಾ ತೊಂದರೆಯಿಲ್ಲ. ಇವೆಲ್ಲವೂ ಒಂದು ಬಗೆಯ ಹೊಗಳಿಕೆ ಎಂದೇ ಭಾವಿಸಿದ್ದೇನೆ' ಎಂದು ಕಿಯಾರಾ ಹೇಳಿದ್ದಾರೆ.

  ವಿವಾದ ಸೃಷ್ಟಿಸಿದ್ದ ಫೋಟೊ

  ವಿವಾದ ಸೃಷ್ಟಿಸಿದ್ದ ಫೋಟೊ

  ಕಿಯಾರಾ ಅಡ್ವಾಣಿ ಚಿತ್ರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ರೀತಿಯ ಫೋಟೊಗಳನ್ನು ಈ ಹಿಂದೆಯೂ ಅನೇಕ ಛಾಯಾಗ್ರಾಹಕರು ತೆಗೆದಿದ್ದಾರೆ. ಹಾಗಾಗಿ ಈ ಫೋಟೊ ಕೃತಿಚೌರ್ಯ ಎಂದು ಆರೋಪಿಸಿದ್ದರು. ಕಿಯಾರಾ ನಿಜಕ್ಕೂ ಟಾಪ್‌ಲೆಸ್ ಆಗಿರಲಿಲ್ಲ. ಅವರು ಉಡುಪು ಧರಿಸಿದ್ದರು. ಎಲೆಯನ್ನು ಅಡ್ಡಲಾಗಿ ಹಿಡಿದಿದ್ದರಿಂದ ಟಾಪ್‌ಲೆಸ್ ಆಗಿದ್ದಂತೆ ಕಾಣಿಸಿದೆ. ಈ ಮೂಲಕ ಅವರು ಜನರನ್ನು ಯಾಮಾರಿಸಿದ್ದಾರೆ ಎಂದು ಟೀಕಿಸಲಾಗಿತ್ತು. ಹಾಗೆಯೇ ಕಿಯಾರಾ ಅವರಗೆ ಸೀರೆ ತೊಡಿಸಿದ ಮೀಮ್‌ಗಳು ವೈರಲ್ ಆಗಿದ್ದವು.

  ಟಾಪ್ ಲೆಸ್ ಫೋಟೋಶೂಟ್: ಎಲೆ ಹಿಂದೆ ಬೆತ್ತಲಾದ ಕಿಯಾರಾ ಅಡ್ವಾಣಿ.!ಟಾಪ್ ಲೆಸ್ ಫೋಟೋಶೂಟ್: ಎಲೆ ಹಿಂದೆ ಬೆತ್ತಲಾದ ಕಿಯಾರಾ ಅಡ್ವಾಣಿ.!

  ಹಸಿರೆಲೆ ನಡುವೆ ಪಾಲಕ್

  ಹಸಿರೆಲೆ ನಡುವೆ ಪಾಲಕ್

  ಕಿಯಾರಾ ಅವರಂತೆಯೇ ಎಲೆ ಮರೆಯಲ್ಲಿ ನಿಂತು ಕಿರುತೆರೆ ನಟಿ ಶ್ವೇತಾ ತಿವಾರಿ ಮಗಳು ಪಾಲಕ್ ತಿವಾರಿ ಹಾಟ್ ಪೋಸ್ ನೀಡಿದ್ದಾರೆ. ದಟ್ಟವಾಗಿರುವ ಹಸಿರು ಎಲೆಗಳ ನಡುವೆ ಪಾಲಕ್ ಪೋಸ್ ನೀಡಿದ್ದಾರೆ. ಆದರೆ ಕಿಯಾರಾ ಅವರಂತೆ ಟಾಪ್‌ಲೆಸ್ ಆಗಿ ಅಲ್ಲ. ಹೀಗಾಗಿ ಪಾಲಕ್ ಅವರ ಚಿತ್ರಕ್ಕೆ ಹೆಚ್ಚಿನ ಪ್ರಶಂಸೆ ವ್ಯಕ್ತವಾಗಿದೆ. ಕಿಯಾರಾ ಚಿತ್ರಗಿಂತಲೂ ಚೆನ್ನಾಗಿ ಮೂಡಿಬಂದಿದೆ ಎಂದು ಶ್ಲಾಘಿಸಿದ್ದಾರೆ.

  ಪಾಲಕ್‌ಗೆ ಈಗಲೇ ಅನೇಕ ಅಭಿಮಾನಿಗಳು

  ಈಗಾಗಲೇ ಜಾಹೀರಾತುಗಳಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡಿರುವ ಪಾಲಕ್‌ಗೆ ಇನ್‌ಸ್ಟಾಗ್ರಾಂನಲ್ಲಿ ಭಾರಿ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಫೋಟೊಗೆ ಅನೇಕರು, 'ನೀವು ಟಿಕ್‌ಟಾಕ್‌ಗೆ ಬಂದು ವಿಡಿಯೋ ಮಾಡಿ. ನಿಮಗೆ ನಟನೆಗೆ ಅದೇ ಒಳ್ಳೆಯ ಜಾಗ ಎಂದೂ ಕಾಲೆಳೆದಿದ್ದಾರೆ. ತನ್ನ ಮಲತಂದೆ ಅಭಿನವ್ ಕೊಹ್ಲಿ ತಮ್ಮ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದಾಗ ಪಾಲಕ್, ಈ ರೀತಿಯ ಘಟನೆ ನಡೆದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

  English summary
  Actress Kiara Advani reacted to the memese on her topless leaf photoshoot. Palk Tiwari recreates the photo and shared on Insta.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X