'ಒಂದು ದಿನ ಯಾರಾದ್ರೂ ನಿನ್ನ ಬಯೋಪಿಕ್ ಮಾಡ್ತಾರೆ': ಸುಶಾಂತ್ ಸಿಂಗ್ ರಜಪೂತ್ ನೆನೆದ ಕಿಯಾರಾ!

ಕಿಯಾರಾ ಅಡ್ವಾಣಿ ಭಾರತದ ಬೋಲ್ಡ್ ಅಂಡ್ ಬ್ಯೂಟಿಫುಲ್ ನಟಿ. ಕಿಯಾರಾ ಅಡ್ವಾಣಿ ಬಾಲಿವುಡ್‌ನಲ್ಲಿ ಬ್ಯುಸಿಯಾಗಿದ್ದರೂ, ದಕ್ಷಿಣ ಭಾರತೀಯರ ತುಂಬಾನೇ ಚಿರಪರಿಚಿತ. ಟಾಲಿವುಡ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅಭಿನಯದ 'ಭರತ್ ಅನೇ ನೇನು' ಸಿನಿಮಾದಲ್ಲಿ ನಟಿಸಿದ್ದರು. ಈಗ ರಾಮ್ ಚರಣ್ ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ಕಿಯಾರಾ ಅಡ್ವಾಣಿ ಈಗ ಬಿಡುಗಡೆಗೆ ಸಜ್ಜಾಗಿರುವ ಬಾಲಿವುಡ್‌ ಸಿನಿಮಾ 'ಭೂಲ್ ಭುಲಯ್ಯ 2' ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಬಾಲಿವುಡ್‌ ಯುವನಟ ಕಾರ್ತಿಕ್ ಆರ್ಯನ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ದಿವಂಗತ ಸುಶಾಂತ್ ಸಿಂಗ್ ರಜಪೂತ್ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ಮುಂದೊಂದು ದಿನ ಯಾರೋ ಇಬ್ಬರು ನಿನ್ನ ಬಯೋಪಿಕ್ ಅನ್ನೇ ಸಿನಿಮಾ ಮಾಡುತ್ತಾರೆ ಎಂದು ಹೇಳಿದ್ದನ್ನು ಮತ್ತೆ ನೆನಪಿಸಿಕೊಂಡಿದ್ದಾರೆ. ಅಷ್ಟಕ್ಕೂ ಕಿಯಾರಾ ಅಡ್ವಾಣಿ ತಮ್ಮ ಸಹ ನಟನ ಬಗ್ಗೆ ಹೇಳಿದ್ದೇನು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಸುಶಾಂತ್ ಮಾತುಗಳನ್ನು ನೆನೆದ ಕಿಯಾರಾ

ಸುಶಾಂತ್ ಮಾತುಗಳನ್ನು ನೆನೆದ ಕಿಯಾರಾ

ಕಿಯಾರಾ ಅಡ್ವಾಣಿ ಯೂಟ್ಯೂಬ್ ಚಾನೆಲ್ ಒಂದಕ್ಕೆ 'ಭೂಲ್ ಭೂಲಯ್ಯ 2' ಸಿನಿಮಾ ಸಂದರ್ಶನ ನೀಡಲು ಹೋಗಿದ್ದರು. ಈ ವೇಳೆ ಕಿಯಾರಾ ತಮ್ಮ ಹೊಸ ಸಿನಿಮಾದ ಜೊತೆಗೆ ತನ್ನ ಸಹ ನಟ ಸುಶಾಂತ್ ಸಿಂಗ್ ರಜಪೂತ್ ಬಗ್ಗೆನೂ ಮನ ಬಿಚ್ಚಿ ಮಾತಾಡಿದ್ದಾರೆ. "ಎಂಎಸ್ ದೋನಿ: ಅನ್‌ಟೋಲ್ಡ್ ಸ್ಟೋರಿಗಾಗಿ ಔರಂಗಬಾದ್‌ನಲ್ಲಿ ಶೂಟಿಂಗ್ ಶುರು ಮಾಡಿದ್ದೆವು. ಒಂದು ಹಾಡು ಹಾಗೂ ಕೆಲವು ದೃಶ್ಯಗಳನ್ನು ನಾವು ಶೂಟ್ ಮಾಡುತ್ತಿದ್ದೆವು. ಆ ದಿನ ನಾವು ರಾತ್ರಿ 8 ಗಂಟೆಗೆ ಶೂಟಿಂಗ್ ಮುಗಿಸಿದ್ದೆವು. ಬೆಳಗ್ಗೆ 4 ಗಂಟೆಗೆ ನಮಗೆ ಫ್ಲೈಟ್ ಇತ್ತು. ಆ ದಿನ ರಾತ್ರಿ ಇಡೀ ಮಾತಿಗೆ ಕುಳಿತಿದ್ದೆವು. ಆಗ ಅವರೊಂದಿಗೆ ಹೆಚ್ಚು ಸಮಯ ಕಳೆಯುವ ಅವಕಾಶ ಸಿಕ್ಕಿತ್ತು." ಎಂದು ಸುಶಾಂತ್ ಸಿಂಗ್ ರಜಪೂತ್‌ರನ್ನು ನೆನಪಿಸಿಕೊಂಡಿದ್ದಾರೆ.

'ಅವರ ಸಿನಿಮಾ ಜರ್ನಿಯೇ ಅದ್ಭುತ'

'ಅವರ ಸಿನಿಮಾ ಜರ್ನಿಯೇ ಅದ್ಭುತ'

" ಅಂದು ತುಂಬಾನೇ ಇಂಟ್ರೆಸ್ಟಿಂಗ್ ಅಂತ ಅನಿಸಿತ್ತು. ಕಾರಣ, ಸುಶಾಂತ್ ತಮ್ಮ ಜರ್ನಿಯ ಬಗ್ಗೆ ಮಾತಾಡುತ್ತಲೇ ಇದ್ದರು. ಅವರು ಧೋನಿ ಸಿನಿಮಾ ಸಿಕ್ಕಿದ್ದು ಹೇಗೆ? ಅವರ ಲೈಫ್ ಸ್ಟೋರಿ ಬಗ್ಗೆ ಹೇಳುತ್ತಿದ್ದರು. ಪ್ರೀತಿ ಜಿಂಟಾಗೆ ಬ್ಯಾಕಪ್ ಡ್ಯಾನ್ಸರ್ ಆಗಿದ್ದಾಗಿನಿಂದ ಎಂಜಿನಿಯರ್ ಆಗಿದ್ದೇಗೆ? ಎಂಬುದನ್ನು ಹೇಳುತ್ತಿದ್ದರು. ಹಾಗೇ ಬದುಕಿನ ಬಗ್ಗೆ ಅವರಲ್ಲಿ ತುಂಬಾನೇ ಕುತೂಹಲವಿತ್ತು. ಹಾಗೇ ಜನರ ಬಗ್ಗೆ ಕುತೂಹಲವಿತ್ತು. ಯಾವಾಗಲೂ ದೊಡ್ಡ ದೊಡ್ಡ ಪುಸ್ತಕ ಓದುತ್ತಲೇ ಇದ್ದರು." ಎಂದು ಕಿಯಾರಾ ನೆನಪಿಸಿಕೊಂಡಿದ್ದಾರೆ.

'ನಿಮ್ಮ ಬದುಕು ಸಿನಿಮಾ ಆಗುತ್ತೆ ಎಂದಿದ್ದೆ'

'ನಿಮ್ಮ ಬದುಕು ಸಿನಿಮಾ ಆಗುತ್ತೆ ಎಂದಿದ್ದೆ'

'ಎಂಎಸ್ ಧೋನಿ' ಶೂಟಿಂಗ್ ವೇಳೆ ಸುಶಾಂತ್ ಜೊತೆ ನಡೆದ ಸಂಭಾಷಣೆ ಕೊನೆಯಲ್ಲಿ ಕಿಯಾರಾ ಬಯೋಪಿಕ್ ಬಗ್ಗೆ ಮಾತಾಡಿದ್ದರು. "ನನಗೆ ಇನ್ನೂ ನೆನಪಿದೆ. ನಮ್ಮ ಸಂಭಾಷಣೆ ಕೊನೆಯಲ್ಲಿ ಅವರಿಗೆ ನಾನು ಮುಂದೊಂದು ದಿನ ಯಾರೋ ಒಬ್ಬರು ನಿಮ್ಮ ಬಗ್ಗೆ ಬಯೋಪಿಕ್ ಮಾಡುತ್ತಾರೆ. ಯಾಕೆಂದರೆ, ಅವರ ಜರ್ನಿ ಮತ್ತು ಸ್ಟೋರಿ ತುಂಬಾನೇ ಇಂಟ್ರೆಸ್ಟಿಂಗ್ ಆಗಿತ್ತು." ಎಂದು ಕಿಯಾರಾ ಅಡ್ವಾಣಿ ಹೇಳಿದ್ದಾರೆ.

ದೋನಿ ಪತ್ನಿ ಪಾತ್ರದಲ್ಲಿ ಸಾಕ್ಷಿ

ದೋನಿ ಪತ್ನಿ ಪಾತ್ರದಲ್ಲಿ ಸಾಕ್ಷಿ

'ಎಂ ಎಸ್‌ ಧೋನಿ' ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ ಧೋನಿ ಪತ್ನಿ ಸಾಕ್ಷಿಯಾಗಿ ಕಾಣಿಸಿಕೊಂಡಿದ್ದರು. 2016ರಲ್ಲಿ ಈ ಸಿನಿಮಾ ಬಾಲಿವುಡ್‌ನಲ್ಲಿ 100 ಕೋಟಿಗೂ ಅಧಿಕ ಬ್ಯುಸಿನೆಸ್ ಮಾಡಿತ್ತು. ನೀರಜ್ ಪಾಂಡೆ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇದೇ ಸಿನಿಮಾದಲ್ಲಿ ಸುಶಾಂತ್ ಸಿಂಗ್ ರಜಪೂತ್ ಅದ್ಭುತ ಅಭಿನಯ ನೀಡಿದ್ದರು. ಆದರೆ, 2020 ಜೂನ್‌ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿ ಇಡೀ ದೇಶಕ್ಕೆ ಶಾಕ್ ನೀಡಿದ್ದರು.

More from Filmibeat

English summary
Kiara Advani remembers Sushanth Singh Rajput in Bhool Bhulaiyaa 2 Promotions, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X