ಹಿಂದಿ ರಾಷ್ಟ್ರ ಭಾಷೆಯಾಗಿ ಉಳಿದಿಲ್ಲ: ಕಿಚ್ಚನ ಹೇಳಿಕೆಗೆ ಪುಷ್ಪಿ ಕೊಟ್ಟ ಈ ಟ್ರೈಲರ್‌ನಲ್ಲಿ ಅಂತಹದ್ದೇನಿದೆ?

ಕಿಚ್ಚ ಸುದೀಪ್ ಕೆಲವು ದಿನಗಳ ಹಿಂದೆ ಕೊಟ್ಟಿದ್ದ ಒಂದು ಹೇಳಿಕೆ ಹಲವು ದಿನಗಳು ಭಾರಿ ಚರ್ಚೆಯಲ್ಲಿತ್ತು. ರಾಮ್ ಗೋಪಾಲ್ ವರ್ಮ ಹಾಗೂ ಉಪ್ಪಿ ಸಿನಿಮಾ 'ಐ ಯಾಮ್ ಆರ್' ಚಿತ್ರದ ಲಾಂಚ್ ವೇಳೆ ಕಿಚ್ಚ ಹಿಂದಿ ಸಿನಿಮಾ ರಾಷ್ಟ್ರ ಭಾಷೆಯಾಗಿ ಉಳಿದಿಲ್ಲವೆಂದು ಹೇಳಿದ್ದರು. ಇದೇ ಹೇಳಿಕೆಯನ್ನು ಮುಂದಿಟ್ಟುಕೊಂಡು ಬಾಲಿವುಡ್ ನಟ ಅಜಯ್ ದೇವಗನ್ ಕಿಚ್ಚನಿಗೆ ತಿರುಗೇಟು ನೀಡಿದ್ದರು.

"ಹಿಂದಿ ರಾಷ್ಟ್ರ ಭಾಷೆಯಾಗಿತ್ತು. ಮುಂದೆನೂ ರಾಷ್ಟ್ರ ಭಾಷೆಯಾಗಿಯೇ ಇರುತ್ತೆ." ಎಂದು ಅಜಯ್ ದೇವಗನ್ ಕೊಟ್ಟ ಹೇಳಿಕೆ ದೇಶಾದ್ಯಂತ ಚರ್ಚೆಯಲ್ಲಿತ್ತು. ಅದೇ ಚರ್ಚೆ ಈಗ ಮತ್ತೆ ಶುರುವಾಗಿದೆ. ಅದೂ ಬಾಲಿವುಡ್ ಸಿನಿಮಾದ ಒಂದು ಟ್ರೈಲರ್‌ನಿಂದ ಈ ವಾದ-ವಿವಾದ ಮತ್ತೆ ಅರಂಭ ಆಗಿದೆ.

ರಾಷ್ಟ್ರ ಭಾಷೆ, ದಕ್ಷಿಣ ಭಾರತ, ಉತ್ತರ ಭಾರತ ಇಂತಹ ಚರ್ಚೆ ಆಗಾಗ ಆಗುತ್ತಲೇ ಇರುತ್ತವೆ. ಇವೆಲ್ಲವನ್ನು ಹೊಡೆದು ಹಾಕಿ ನಾನೊಬ್ಬ ಭಾರತೀಯ ಎಂದು ಜನರು ಹೇಳೋದು ಯಾವಾಗ? ಈ ಪ್ರಶ್ನೆಗೆ ಬಾಲಿವುಡ್ ಸಿನಿಮಾ ಡೈಲಾಗ್ ಒಂದು ಪುಷ್ಪಿ ನೀಡಿದೆ. ಈ ಸಿನಿಮಾದ ಡೈಲಾಗ್ ಕಂಡು ಕಿಚ್ಚನ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಹಾಗಿದ್ದರೆ. ಕಿಚ್ಚ ಮಾತನ್ನು ಒಪ್ಪುವ ಆ ಸಿನಿಮಾ ಯಾವುದು? ಡೈಲಾಗ್‌ನಲ್ಲಿ ಏನಿದೆ? ಹೀರೊ ಯಾರು? ಅನ್ನುವುದನ್ನು ತಿಳಿಯಲು ಮುಂದೆ ಓದಿ.

ಟ್ವಿಟರ್‌ನಲ್ಲಿ ಯುದ್ಧವೇ ನಡೆದಿತ್ತು

ಟ್ವಿಟರ್‌ನಲ್ಲಿ ಯುದ್ಧವೇ ನಡೆದಿತ್ತು

ಕಿಚ್ಚ ಸುದೀಪ್ ಪ್ಯಾನ್ ಇಂಡಿಯಾ ಸಿನಿಮಾ ಬಗ್ಗೆ ಮಾತಾಡುವಾಗ "ಹಿಂದಿ ರಾಷ್ಟ್ರ ಭಾಷೆಯಾಗಿ ಉಳಿದಿಲ್ಲ" ಎಂದು ಹೇಳಿದ್ದರು. ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ಬಾಲಿವುಡ್ ನಟ ಅಜಯ ದೇವಗನ್ ರೊಚ್ಚಿಗೆದ್ದಿದ್ದರು. ಇಬ್ಬರ ನಡುವೆ ಹಿಂದಿ ರಾಷ್ಟ್ರ ಭಾಷೆ ಅನ್ನೋ ಟಾಪಿಕ್ ಬಗ್ಗೆ ಟ್ವೀಟ್ ಮೂಲಕ ಯುದ್ಧವೇ ನಡೆದು ಹೋಗಿತ್ತು. ಈ ವೇಳೆ ಕೆಲವರು ಕಿಚ್ಚ ಸುದೀಪ್ ಪರ. ಮತ್ತೆ ಕೆಲವರು ಅಜಯ್ ದೇವಗನ್ ಪರ ನಿಂತಿದ್ದರು. ಆದ್ರೀಗ ಬಾಲಿವುಡ್ ಟ್ರೈಲರ್‌ನ ಡೈಲಾಗ್‌ವೊಂದು ಹಿಂದಿ ಭಾಷೆಯ ಬಗ್ಗೆ ಮತ್ತೆ ಕಿಚ್ಚು ಹಚ್ಚಿದೆ.

ಟ್ರೈಲರ್ ಹಾಗೂ ಡೈಲಾಗ್ ಮ್ಯಾಟರ್ ಏನು?

ಸದಾ ವಿಶಿಷ್ಟ ಸಿನಿಮಾಗಳಲ್ಲಿ ನಟಿಸುವ ಆಯುಷ್ಮಾನ ಖುರಾನ ಹೊಸ ಬಾಲಿವುಡ್‌ ಸಿನಿಮಾ ಅನೇಕ್ ಟ್ರೈಲರ್ ರಿಲೀಸ್ ಆಗಿದೆ. ಈ ಟ್ರೈಲರ್‌ನ ಮಧ್ಯದಲ್ಲಿ ಅಯುಷ್ಮಾನ್ ಖುರಾನ ಹಾಗೂ ತೆಲುಗು ನಟ ಜೆಡಿ ಚಕ್ರವರ್ತಿ ನಡುವೆ ನಡೆದ ಸಂಭಾಷಣೆ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಅಷ್ಟಕ್ಕೂ ಟ್ರೈಲರ್‌ನಲ್ಲಿರೋ ಡೈಲಾಗ್‌ನ ಸಾರಾಂಶ ಹೀಗಿದೆ. ಆಯುಷ್ಮಾನ್ ಖುರಾನಾ, ಜೆಡಿ ಚಕ್ರವರ್ತಿ ನಡುವೆ ಕಾರಿನಲ್ಲಿ ಸಂಭಾಷಣೆ ಆರಂಭ ಆಗುತ್ತೆ. ಈ ವೇಳೆ ದಕ್ಷಿಣ ಭಾರತ ಹಾಗೂ ಉತ್ತರ ಭಾರತ. ಹಿಂದಿ ಭಾಷೆ, ಭಾರತೀಯ ಇಂತಹ ವಿಷಯಗಳ ಬಗ್ಗೆ ಚರ್ಚೆ ಆಗುತ್ತೆ. ಭಾಷೆ, ದಕ್ಷಿಣ, ಉತ್ತರ ಅನ್ನುವುದನ್ನು ಬಿಟ್ಟು ಭಾರತೀಯ ಎನಿಸಿಕೊಳ್ಳುವುದು ಹೇಗೆ? ಎಂದು ಟ್ರೈಲರ್ ಕೊನೆಯಲ್ಲಿ ಪ್ರಶ್ನೆಯೊಂದು ಉದ್ಭವಿಸುತ್ತೆ. ಅದರ ಚಿಕ್ಕದೊಂದು ತುಣುಕು ಇಲ್ಲಿದೆ.

'ಅನೇಕ್' ಟ್ರೈಲರ್‌ಗೆ ಫ್ಯಾನ್ಸ್ ಏನಂದ್ರು?

'ಅನೇಕ್' ಟ್ರೈಲರ್ ನೋಡುತ್ತಿದ್ದಂತೆ ಕಿಚ್ಚನ ಅಭಿಮಾನಿಗಳು ಅಖಾಡಕ್ಕಿಳಿದಿದ್ದಾರೆ. ಕೆಲವರಂತೂ ಇದನ್ನೇ ಕಿಚ್ಚ ಸುದೀಪ್ ಹೇಳಲು ಹೊರಟಿದ್ದು ಎಂದು ಅಭಿಪ್ರಾಯ ಹೊರ ಹಾಕಿದ್ದಾರೆ. " ಭಾರತದಂತ ದೊಡ್ಡ ದೇಶದಲ್ಲಿ ಪ್ರತಿಯೊಬ್ಬರಿಗೂ ಶಾಂತಿಯುತವಾಗಿ ಬದುಕುವ ಹಕ್ಕಿದೆ. ಭಾಷೆ ಹಾಗೂ ಧರ್ಮದಿಂದ ಯಾರನ್ನೂ ಜಡ್ಜ್ ಮಾಡಬಾರದು. ಇದನ್ನು ಮೊದಲ ಹೇಳಿದ್ದು, ಕಿಚ್ಚ ಸುದೀಪ್." ಎಂದು ಹೇಳಿದ್ದಾರೆ.

ಅಜಯ್ ತಕ್ಕ ಉತ್ತರ ಕೊಟ್ಟ ಟ್ರೈಲರ್

ಅಜಯ್ ತಕ್ಕ ಉತ್ತರ ಕೊಟ್ಟ ಟ್ರೈಲರ್

ಮತ್ತೆ ಕೆಲವರು ಬಾಲಿವುಡ್ ಸಿನಿಮಾದ 'ಅನೇಕ್' ಟ್ರೈಲರ್ ಅಜಯ್ ದೇವಗನ್‌ಗೆ ತಕ್ಕ ಉತ್ತರ ಕೊಟ್ಟಿದೆ. "ಇಲ್ಲಿ ಭಾಷೆ ಮುಖ್ಯ ಅಲ್ಲ. ಭಾರತೀಯರು ಅನ್ನುವುದು ಮುಖ್ಯ. ಬಾಲಿವುಡ್‌ನವರೇ ನಾವು ಭಾರತೀಯರು. ಬಾಲಿವುಡ್‌ನ ಅತ್ಯುತ್ತಮ ನಟರಲ್ಲಿ ಒಬ್ಬರಾದ ಅಯುಷ್ಮಾನ್ ಖುರಾನ ನಟಿಸಿದ ಸಿನಿಮಾವಿದು." ಎಂದಿದ್ದಾರೆ.

More from Filmibeat

English summary
Kichcha Sudeepa Fans Happy with Anek Movie Trailer on Hindi Language Debate. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X