ಸುಶಾಂತ್- ರಿಯಾ ಮೊದಲ ಭೇಟಿಯಾಗಿದ್ದು ಎಲ್ಲಿ?: ನಂತರ ನಡೆದಿದ್ದು ಆಘಾತ ಮೂಡಿಸುವ ಘಟನೆಗಳು

ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ಸುಪ್ರೀಂಕೋರ್ಟ್ ಸಿಬಿಐ ತನಿಖೆಗೆ ಒಪ್ಪಿಸಿದೆ. ಸುಮಾರು ಐವತ್ತು ದಿನಗಳಿಂದ ಸುಶಾಂತ್ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಬೇಡಿಕೆ ಇರಿಸುತ್ತಿದ್ದ ಅಭಿಮಾನಿಗಳು ಖುಷಿಯಾಗಿದ್ದಾರೆ. ಇದರಿಂದ ಈ ಪ್ರಕರಣ ಮತ್ತಷ್ಟು ರೋಚಕ ಸಂಗತಿಗಳನ್ನು ಹೊರಹಾಕುವ ಸಾಧ್ಯತೆ ಇದೆ. ಸುಶಾಂತ್ ಸಿನಿಮಾ ಮತ್ತು ಖಾಸಗಿ ಬದುಕಿನ ಸುತ್ತಲೂ ಅನೇಕ ಮಹತ್ವದ ಘಟನೆಗಳು ನಡೆದಿವೆ. ಈ ಸತ್ಯವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂದು ಆರೋಪಿಸಲಾಗಿದೆ.

Recommended Video

Sushant ತಂದೆ ಪ್ರಕಾರ ಕೊಲೆ , Police report ಪ್ರಕಾರ ಆತ್ಮಹತ್ಯೆ | Filmibeat Kannada

ಸುಶಾಂತ್ ಬದುಕಿನಲ್ಲಿ ಪ್ರವೇಶಿಸಿದ ರಿಯಾ, ಕುಟುಂಬದೊಂದಿಗಿನ ಅವರ ಸಂಪರ್ಕವನ್ನು ಕಡಿದುಹಾಕಲು ಎಲ್ಲ ಪ್ರಯತ್ನಗಳನ್ನು ನಡೆಸಿದ್ದರು. ಅದರಲ್ಲಿ ಬಹುತೇಕ ಯಶಸ್ವಿಯೂ ಆಗಿದ್ದರು. ಸುಶಾಂತ್ ಮತ್ತು ಅವರ ಸಹೋದರಿಯರ ನಡುವಿನ ಬಾಂಧವ್ಯವನ್ನು ಹಾಳುಮಾಡಲು ರಿಯಾ ಪ್ರಯತ್ನಿಸಿದ್ದರು ಎಂದು ಅವರ ಕುಟುಂಬದ ಪರ ವಕೀಲ ವಿಕಾಸ್ ಸಿಂಗ್ ಆರೋಪಿಸಿದ್ದಾರೆ. ಮುಂದೆ ಓದಿ.

ಸುಶಾಂತ್-ರಿಯಾ ಮೊದಲ ಭೇಟಿ

ಸುಶಾಂತ್-ರಿಯಾ ಮೊದಲ ಭೇಟಿ

ಸುಶಾಂತ್ ಮತ್ತು ರಿಯಾ 2019ರ ಏಪ್ರಿಲ್ 14ರಂದು ಸ್ನೇಹಿತರೊಬ್ಬರ ಪಾರ್ಟಿಯಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಮರುದಿನವೇ ಸುಶಾಂತ್ ಮನೆಗೆ ಹೋಗಿದ್ದ ರಿಯಾ, ಸುಶಾಂತ್ ಸಹೋದರಿ ಪ್ರಿಯಾಂಕಾ ಮತ್ತು ಅವರ ಗಂಡನನ್ನು ಕೂಡ ಭೇಟಿಯಾಗಿದ್ದರು. ಬಳಿಕ ಎಲ್ಲರೂ ಫಾವ್ನಾ ಫಾರ್ಮ್ ಹೌಸ್‌ಗೆ ಹೋಗಿ ಒಂದು ರಾತ್ರಿ ಕಳೆದಿದ್ದರು ಎಂದು ವಿಕಾಸ್ ಸಿಂಗ್ ತಿಳಿಸಿದ್ದಾರೆ.

ಸುಶಾಂತ್ ಮನೆಗೆ ಮರಳಿದ್ದ ರಿಯಾ

ಸುಶಾಂತ್ ಮನೆಗೆ ಮರಳಿದ್ದ ರಿಯಾ

ಮರುದಿನ ಮಧ್ಯಾಹ್ನದ ವೇಳೆಗೆ ಸುಶಾಂತ್, ರಿಯಾಳನ್ನು ಮುಂಬೈಗೆ ಬಿಟ್ಟು ಪಾವ್ನಾ ಫಾರ್ಮ್ ಹೌಸ್‌ಗೆ ಸಂಜೆ ಮರಳಿದ್ದರು. ಏಪ್ರಿಲ್ 18-19ರ ಮಧ್ಯರಾತ್ರಿ ಕ್ಯಾಪ್ರಿ ಹೈಟ್ಸ್‌ನಲ್ಲಿನ ಸುಶಾಂತ್ ಮನೆಗೆ ಬರುವುದಾಗಿ ಪಟ್ಟು ಹಿಡಿದ ರಿಯಾ, ರಾತ್ರಿ 1 ಗಂಟೆಗೆ ಬಂದಿದ್ದರು. ಅಲ್ಲಿ ಸ್ನೇಹಿತರನ್ನು ಸೇರಿಸಿ ಮದ್ಯಪಾನ ಮಾಡಿದ್ದರು. ರಾತ್ರಿಯಿಡೀ ಅಲ್ಲಿಯೇ ಇದ್ದು ತಮ್ಮ ತಮ್ಮ ಮನೆಗಳಿಗೆ ಹೋಗಿದ್ದರು. ಆದರೆ ರಿಯಾ, ಸುಶಾಂತ್ ಮನೆಯಲ್ಲಿಯೇ ಉಳಿದುಕೊಂಡಿದ್ದರು.

ಸುಶಾಂತ್ ಹಣದಲ್ಲಿ ಶೌವಿಕ್ ಬರ್ಥಡೇ

ಸುಶಾಂತ್ ಹಣದಲ್ಲಿ ಶೌವಿಕ್ ಬರ್ಥಡೇ

ಸಹೋದರ ಶೌವಿಕ್ ಚಕ್ರವರ್ತಿಯ ಬರ್ಥಡೇ ಪಾರ್ಟಿಗೆ ಬರುವಂತೆ ಸುಶಾಂತ್ ಮತ್ತು ಪ್ರಿಯಾಂಕಾಗೆ ರಿಯಾ ಆಹ್ವಾನ ನೀಡಿದ್ದರು. ಅಕ್ಕ-ತಮ್ಮ ಇಬ್ಬರೂ ರಿಯಾ ಹೇಳಿದ್ದ ಸ್ಥಳ ತಲುಪಿದ್ದರು. ರಿಯಾ ಸಹೋದರನಿಗೆ ಪ್ರಿಯಾಂಕ್ ಶುಭಾಶಯ ಕೋರಿದ್ದರು. ಆದರೆ ನಂತರ ಗೊತ್ತಾಗಿದ್ದು, ಅಂದು ಆತನ ಜನ್ಮದಿನ ಅಲ್ಲ ಎಂದು.

ಅಂದು ಆಯೋಜಿಸಿದ್ದ ಪಾರ್ಟಿಯ ಹಣ ಪಾವತಿಸಲು ರಿಯಾ, ಸುಶಾಂತ್ ಕ್ರೆಡಿಟ್ ಕಾರ್ಡ್ ಬಳಸಿದ್ದರು ಎನ್ನುವುದು ಕೊನೆಯಲ್ಲಿ ಪ್ರಿಯಾಂಕಾಗೆ ಅರ್ಥವಾಗಿತ್ತು. ಪಾರ್ಟಿ ಮುಗಿದ ನಂತರ ರಿಯಾ, ಸುಶಾಂತ್ ಮನೆಗೆ ಹೋಗಿದ್ದರು. ಪ್ರಿಯಾಂಕಾ ಮಲಗಿದ್ದರೆ, ಸುಶಾಂತ್ ಮತ್ತು ರಿಯಾ ಹರಟೆ ಹೊಡೆದಿದ್ದರು.

ಕಿರುಕುಳ ನೀಡಿದ ಆರೋಪ

ಕಿರುಕುಳ ನೀಡಿದ ಆರೋಪ

ಮರುದಿನ ಬೆಳಿಗ್ಗೆ ನಡೆದ ಘಟನೆ ಸುಶಾಂತ್ ಮತ್ತು ಪ್ರಿಯಾಂಕಾಗೆ ಆಘಾತ ನೀಡಿತ್ತು. ಪ್ರಿಯಾಂಕಾ ಎದ್ದ ಸಮಯದಲ್ಲಿ ರಿಯಾ ಅಲ್ಲಿರಲಿಲ್ಲ. ಸುಶಾಂತ್ ಬಹಳ ಕೋಪೋದ್ರಿಕ್ತರಾಗಿದ್ದರು. ಮೊದಲ ಬಾರಿ ಭೇಟಿ ಮಾಡಿದ್ದಾಗ ಪ್ರಿಯಾಂಕಾ ತಮಗೆ ಕಿರುಕುಳ ನೀಡಲು ಪ್ರಯತ್ನಿಸಿದ್ದರು ಎಂದು ಸುಶಾಂತ್ ಬಳಿ ರಿಯಾ ಆರೋಪಿಸಿದ್ದರು. ಪ್ರಿಯಾಂಕಾ ಮತ್ತು ರಿಯಾ ನಡುವೆ ಕಿತ್ತಾಟ ನಡೆದಿತ್ತು ಎಂದೇ ಸುಶಾಂತ್ ನಂಬಿದ್ದರು. ಸುಶಾಂತ್ ಇದನ್ನೆಲ್ಲ ನಂಬುತ್ತಾರೆ ಎನ್ನುವುದು ಪ್ರಿಯಾಂಕಾರಿಗೂ ಅರಿವಿರಲಿಲ್ಲ. ಈ ಮನಸ್ತಾಪಗಳು ಬೇಡ ಎಂದು ಪ್ರಿಯಾಂಕಾ ಅಪಾರ್ಟ್‌ಮೆಂಟ್ ತೊರೆದಿದ್ದರು.

ಕ್ಷಮೆ ಕೋರಿದ್ದ ಸುಶಾಂತ್

ಕ್ಷಮೆ ಕೋರಿದ್ದ ಸುಶಾಂತ್

ದೆಹಲಿಗೆ ತೆರಳಿದ ನಂತರ ರಿಯಾ ಮಾಡಿದ್ದ ಆರೋಪಗಳ ಬಗ್ಗೆ ಪ್ರಿಯಾಂಕಾ ತಮ್ಮ ಪತಿಗೆ ವಿವರಿಸಿದ್ದರು. ಇದು ಅವರಲ್ಲಿ ಕೋಪ ತರಿಸಿತ್ತು. ಆ ದಿನ ರಾತ್ರಿ ಅವರೂ ಜತೆಯಲ್ಲಿ ಇದ್ದಿದ್ದರಿಂದ ಇದು ಸುಳ್ಳು ಎನ್ನುವುದು ಅವರಿಗೆ ತಿಳಿದಿತ್ತು. ವಾಟ್ಸಾಪ್ ಸಂದೇಶಗಳ ಮೂಲಕ ಸುಶಾಂತ್‌ರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸುಶಾಂತ್ ಅದಕ್ಕೆ ಸ್ಪಂದಿಸಿರಲಿಲ್ಲ.

ಪ್ರಿಯಾಂಕಾ ಜತೆ ಸುಶಾಂತ್ ಬಹಳ ಉತ್ತಮ ಬಾಂಧವ್ಯ ಹೊಂದಿದ್ದರು. ಆದರೆ ಒಂದು ದಿನ ಇಬ್ಬರ ಬಾಂಧವ್ಯ ಹದಗೆಟ್ಟಿತು. ಆ ಘಟನೆ ಬಳಿಕ ಹಲವು ತಿಂಗಳು ಇಬ್ಬರೂ ಮಾತನಾಡಿರಲಿಲ್ಲ. 2019ರ ನವೆಂಬರ್‌ನಲ್ಲಿ ಪ್ರಿಯಾಂಕಾಗೆ ಕರೆ ಮಾಡಿದ್ದ ಸುಶಾಂತ್ ಕ್ಷಮೆ ಕೋರಿದ್ದರು. ಇನ್ನಿಬ್ಬರು ಸಹೋದರಿಯರಿಗೂ ಕರೆ ಮಾಡಿ ಮಾತನಾಡಿದ್ದರು. ಮೂವರೂ ಸಹೋದರಿಯರು ಆತನ ಅಪಾರ್ಟ್‌ಮೆಂಟ್‌ಗೆ ಹೋಗಿದ್ದರು.

ಅಕ್ಕನ ವಿರುದ್ಧ ಈ ರೀತಿ ಆಪಾದನೆ ಮಾಡಿದ್ದು ಏಕೆ? ಮೊದಲ ಬಾರಿ ಭೇಟಿ ಮಾಡಿದ್ದಾಗ ಕಿರುಜುಳ ನೀಡದ್ದರೆ ಬರ್ಥಡೇ ಪಾರ್ಟಿಗೆ ಏಕೆ ಆಹ್ವಾನಿಸಿದ್ದು? ಎರಡು ದಿನ ಏಕೆ ಅದನ್ನು ಹೇಳಿರಲಿಲ್ಲ? ಮುಂತಾದ ಪ್ರಶ್ನೆಗಳನ್ನು ರಿಯಾಗೆ ಸುಶಾಂತ್ ಕೇಳಿದ್ದರು ಎಂದು ವಿಕಾಸ್ ಸಿಂಗ್ ತಿಳಿಸಿದ್ದಾರೆ.

More from Filmibeat

English summary
Sushant Singh Rajput's family lawyer Vikas Singh has revealed the when the first meet of him with Rhea Chakraborty and Sushant's sister Priyanka.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X