₹9.85 ಕೋಟಿಯ ಆಸ್ತಿ ಖರೀದಿಸಿದ ಬಳಿಕ ಕೆಎಲ್ ರಾಹುಲ್, ಸುನೀಲ್ ಶೆಟ್ಟಿ ಆಸ್ತಿಯ ಮೌಲ್ಯ ಎಷ್ಟಾಯ್ತು?
ಭಾರತೀಯ ಕ್ರಿಕೆಟ್ ತಂಡ ಆಟಗಾರ ಕೆಎಲ್ ರಾಹುಲ್ ಹಾಗೂ ನಟ ಸುನೀಲ್ ಶೆಟ್ಟಿ ಸಂಬಂಧದಲ್ಲಿ ಅಳಿಯ-ಮಾವ. ಇಬ್ಬರೂ ತಮ್ಮ ಕ್ಷೇತ್ರದಲ್ಲಿ ಸೂಪರ್‌ಸ್ಟಾರ್‌ಗಳು. ಕ್ರಿಕೆಟ್‌ನಲ್ಲಿ ಕೆಎಲ್ ರಾಹುಲ್ ಆಗಿದ್ದರೆ, ಸಿನಿಮಾದಲ್ಲಿ ಸುನೀಲ್ ಶೆಟ್ಟಿ. ಕೆಲವು ದಿನಗಳಿಂದ ಇಬ್ಬರೂ ಸೇರಿ ಮುಂಬೈನ ಥಾಣೆ ಏರಿಯಾದಲ್ಲಿ ದುಬಾರಿ ಮೊತ್ತದ ಆಸ್ತಿಯನ್ನು ಖರೀದಿ ಮಾಡಿರುವುದು ಚರ್ಚೆಯಾಗುತ್ತಿದೆ.
ಮುಂಬೈನ ಕಮರ್ಷಿಯಲ್ ಏರಿಯಾಗಳಲ್ಲಿ ಒಂದಾದ ಥಾಣೆಯಲ್ಲಿ 7 ಎಕ್ಕರೆ ಜಮೀನನ್ನು ಕೆಎಲ್ ರಾಹುಲ್ ಹಾಗೂ ಸುನೀಲ್ ಶೆಟ್ಟಿ ಜಂಟಿಯಾಗಿ ಖರೀದಿ ಮಾಡಿದ್ದಾರೆ. ಕಳೆದೆರಡು ದಿನಗಳಿಂದ ಈ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಅವರು ಕೊಟ್ಟಿರುವ ಬೆಲೆ. ಸುಮಾರು ₹9.85 ಕೋಟಿ ಹಣವನ್ನು ನೀಡಿ ಈ ಜಮೀನನ್ನು ಖರೀದಿ ಮಾಡಿದ್ದಾರೆಂದು IGR ವೆಬ್‌ಸೈಟ್‌ನಲ್ಲಿ ದಾಖಲೆಗಳಿವೆ ಎಂದು ವರದಿಯಾಗಿದೆ.

2025, ಮಾರ್ಚ್ ತಿಂಗಳಿನಲ್ಲಿ ಈ ಪ್ರಾಪರ್ಟಿಯನ್ನು ಖರೀದಿ ಮಾಡಲಾಗಿದೆ ಎಂದೂ ಹೇಳಲಾಗುತ್ತಿದೆ. ಈ ಜಮೀನು ಆನಂದ ನಗರ ಹಾಗೂ ಕಸರ್ವದವಲ್ಲಿ ನಡುವೆ ಇದ್ದು, ಪ್ರಮುಖ ಬ್ಯುಸಿನೆಸ್ ಹಬ್‌ಗಳಿಗೆ ಸಂಪರ್ಕ ಕಲ್ಪಿಸುತ್ತದೆ ಎಂದು ಹೇಳಲಾಗುದೆ. ಥಾಣೆ, ಮುಂಬೈ ಸೇರಿದಂತೆ ಹಲವೆಡೆ ಇರುವ ವ್ಯಾಪಾರ ಸಂಕೀರ್ಣಗಳಿಗೆ ಇದು ಸಂಪರ್ಕವನ್ನು ಕಲ್ಪಿಸಲಿದೆ. ಹಾಗಿದ್ದರೆ, ಈ ಪ್ರಾಪರ್ಟಿಯನ್ನು ಖರೀದಿಸಿರುವ ಅಳಿಯ ಮಾವನ ಬಳಿ ಎಷ್ಟು ಆಸ್ತಿ ಇತ್ತು? ಈಗ ಎಷ್ಟಾಗಿದೆ? ಎನ್ನುವುದನ್ನು ತಿಳಿಯಲು ಮುಂದೆ ಓದಿ.
ಕೆಎಲ್ ರಾಹುಲ್ ಬಳಿ ಇರುವ ಆಸ್ತಿ ಎಷ್ಟು?
ಭಾರತೀಯ ಕ್ರಿಕೆಟ್ ತಂಡ ಸ್ಟಾರ್ ಆಟಗಾರ ಕೆಎಲ್ ರಾಹುಲ್ ತನ್ನ ವೃತ್ತಿ ಜೀವನದಲ್ಲಿ ಯಶಸ್ಸು ಗಳಿಸಿದ್ದಾರೆ. ಆಟದಲ್ಲಿ ಆಗಾಗ ಏರಿಳಿತಗಳಿದ್ದರೂ ಈ ಕನ್ನಡಿಗನ ಜನಪ್ರಿಯತೆಯೇನು ಕಡಿಮೆಯಾಗಿಲ್ಲ. ಕೆ.ಎಲ್ ರಾಹುಲ್ ಕ್ರಿಕೆಟ್‌ನಿಂದಷ್ಟೇ ಅಲ್ಲ, ಜಾಹೀರಾತು ಸೇರಿದಂತೆ ಬೇರೆ ಮೂಲಗಳಿಂದ ಹಣವನ್ನು ಗಳಿಸುತ್ತಾರೆ. ರಿಪಬ್ಲಿಕ್ ವೆಬ್‌ಸೈಟ್ ಪ್ರಕಾರ, ಕೆಎಲ್ ರಾಹುಲ್ ಬಳಿ ಸುಮಾರು 100 ಕೋಟಿ ರೂಪಾಯಿಗಳ ಆಸ್ತಿಯಿದ್ದು, ಪತ್ನಿ ಅಥಿಯಾ ಬಳಿಕ 28 ಕೋಟಿ ರೂಪಾಯಿ ಆಸ್ತಿಯಿದೆ ಎನ್ನಲಾಗಿದೆ. ಅದಕ್ಕೀಗ ಈ ಹೊಸ ಪ್ರಾಪರ್ಟಿ ಕೂಡ ಸೇರ್ಪಡೆಯಾಗಿದೆ.

ದುಬಾರಿ ಪ್ರಾಪರ್ಟಿಗಳು
ಬಾಲಿವುಡ್ ನಟ ಸುನೀಲ್ ಶೆಟ್ಟಿಯ ಪುತ್ರಿಯನ್ನು ಕೆಎಲ್ ರಾಹುಲ್ ವಿವಾಹವಾಗುತ್ತಿದ್ದಂತೆ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುವುದಕ್ಕೆ ಮುಂದಾಗಿದ್ದಾರೆ. ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಕೆಎಲ್ ರಾಹುಲ್ ಹಾಗೂ ಪತ್ನಿ ಅಥಿಯಾ ಶೆಟ್ಟಿ ಮುಂಬೈನ ಪಾಲಿ ಹಿಲ್ಸ್‌ನಲ್ಲಿ ಬರೋಬ್ಬರಿ 20 ಕೋಟಿ ರೂಪಾಯಿಯ ಆಸ್ತಿಯನ್ನು ದುಬಾರಿ ಅಪಾರ್ಟ್‌ಮೆಂಟ್ ಅನ್ನು ಖರೀದಿ ಮಾಡಿದ್ದಾರೆಂದು ಸುದ್ದಿಯಾಗಿತ್ತು. ಈಗ ಅವರು ಆಸ್ತಿಗೆ ತಮ್ಮ ಪಾಲಿನ ₹5 ಕೋಟಿ ಬೆಲೆ ಆಸ್ತಿ ಸೇರ್ಪಡೆಯಾಗಿದೆ.
ಸುನಿಲ್ ಶೆಟ್ಟಿ ಆಸ್ತಿಯೇನು ಕಮ್ಮಿಯಿಲ್ಲ
ಬಾಲಿವುಡ್‌ನ ದಿಗ್ಗಜ ಸುನೀಲ್ ಶೆಟ್ಟಿ ಮೂವತ್ತು ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ಇದ್ದಾರೆ. ಹಾಗೇ ಹಲವು ಉದ್ಯಮಗಳಲ್ಲಿ ಹೂಡಿಕೆ ಮಾಡಿದ್ದಾರೆ. ಸುನೀಲ್ ಶೆಟ್ಟಿ ಒಟ್ಟು ಆಸ್ತಿ 125 ಕೋಟಿ ರೂಪಾಯಿ ಎಂದು ರಿಪಬ್ಲಿಕ್ ನಲ್ಲಿ ವರದಿಯಾಗಿದೆ. ಇತ್ತೀಚೆಗೆ ಸುನೀಲ್ ಶೆಟ್ಟಿ ಹಾಗೂ ಪುತ್ರ ಜಂಟಿಯಾಗಿ 8 ಕೋಟಿ ರೂಪಾಯಿ ಆಸ್ತಿಯನ್ನು ಖರೀದಿ ಮಾಡಿದ್ದರು. ಅದರ ಹಿಂದೆನೇ ಅಳಿಯನ ಜೊತೆ ಮತ್ತೊಂದು ಪ್ರಾಪರ್ಟಿಗೆ ಖರೀದಿ ಮಾಡಿ ಸುದ್ದಿಯಲ್ಲಿ ಇದ್ದಾರೆ.
ಇಬ್ಬರ ಒಟ್ಟು ಆಸ್ತಿ
ಸುನೀಲ್ ಶೆಟ್ಟಿ ಹಾಗೂ ಕೆಎಲ್ ರಾಹುಲ್ ಇಬ್ಬರ ಒಟ್ಟು ಆಸ್ತಿ ಸೇರಿದರೆ, ಸುಮಾರು 225 ರಿಂದ 250 ಕೋಟಿ ರೂಪಾಯಿ ಆಗುತ್ತೆ. ಅಳಿಯ ಹಾಗೂ ಮಾವ ಇಬ್ಬರೂ ಹೆಚ್ಚಾಗಿ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಸುನೀಲ್ ಶೆಟ್ಟಿ ಮುಂಬೈ ಅಷ್ಟೇ ಅಲ್ಲದೆ, ಗೋವಾ ಸೇರಿದಂತೆ ಹಲವೆಡೆ ಹೂಡಿಕೆ ಮಾಡಿದ್ದು, ಅವರ ಜೊತೆ ಕ್ರಿಕೆಟಿಗ ಕೆಎಲ್ ರಾಹುಲ್ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆ.


Click it and Unblock the Notifications











