ಖಂಡಾಲದಲ್ಲಿ ಕೆಎಲ್ ರಾಹುಲ್-ಅಥಿಯಾ ಶೆಟ್ಟಿ ಮದುವೆ? ಬಾಲಿವುಡ್‌ನಲ್ಲಿ ಬಿಸಿಬಿಸಿ ಚರ್ಚೆ!

ಬಾಲಿವುಡ್‌ನಲ್ಲಿ ಕೆಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಮದುವೆ ಬಗ್ಗೆ ಬಹು ದಿನಗಳಿಂದ ಚರ್ಚೆ ನಡೆಯುತ್ತಲೇ ಇದೆ. ಕ್ರಿಕೆಟರ್-ಆಕ್ಟರ್ ಜೋಡಿ ಮದುವೆ ನೋಡುವುದಕ್ಕೆ ಬಾಲಿವುಡ್ ಕೂಡ ತುದಿಗಾಲಲ್ಲಿ ನಿಂತಿದೆ. ಆದರೆ, ಈ ಜೋಡಿ ತಮ್ಮ ಮದುವೆ ಬಗ್ಗೆ ಇನ್ನೂ ಅಧಿಕೃತವಾಗಿ ಎಲ್ಲೂ ಹೇಳಿಕೆಗಳನ್ನು ನೀಡಿಲ್ಲ.

ರಾಹುಲ್-ಅಥಿಯಾ ಜೋಡಿ ಬಹಿರಂಗವಾಗಿ ತಮ್ಮ ಮದುವೆ ಬಗ್ಗೆ ಹೇಳಿಕೊಳ್ಳದೇ ಇದ್ದರೂ, ತೆರೆಮರೆಯಲ್ಲಿ ಮದುವೆಗೆ ಸಿದ್ಧತೆಗಳು ನಡೆಯುತ್ತಿವೆ ಎಂಬ ಸುದ್ದಿನೂ ಇದೆ. ಸದ್ಯ ಬಾಲಿವುಡ್ ಅಂಗಳದಿಂದ ಇಬ್ಬರು ಎಲ್ಲಿ ಮದುವೆ ಆಗುತ್ತಾರೆ ಎಂಬ ಸುದ್ದಿ ಹೊರಬಿದ್ದಿದೆ.

ರಾಹುಲ್-ಅಥಿಯಾ ಮದುವೆ ಯಾವಾಗ?

ಕೆ ಎಲ್ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಮದುವೆ ಇದೇ ವರ್ಷದ ಕೊನೆಯಲ್ಲಿ ನಡೆಯುತ್ತೆ ಅನ್ನೋ ಮಾತು ಕೇಳಿ ಬರುತ್ತಿದೆ. ಡಿಸೆಂಬರ್ 2022 ಇಲ್ಲವೇ 2023ರ ಜನವರಿ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಈ ಜೋಡಿ ಕಾಲಿಡುತ್ತಿದೆ ಅನ್ನೋ ಗುಸಗುಸು ಶುರುವಾಗಿದೆ.

KL Rahul-Athiya Shetty Will Marry Suniel Shetty House In Khandala

ಅಥಿಯಾ ಶೆಟ್ಟಿ ಹಾಗೂ ರಾಹುಲ್ ಇಬ್ಬರೂ ಕಳೆದ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಆದರೆ, ಇಬ್ಬರೂ ಲವ್ ಸ್ಟೋರಿ ಬಗ್ಗೆ ಎಲ್ಲೂ ಬಹಿರಂಗವಾಗಿ ಹೇಳಿಕೆಯನ್ನು ನೀಡಿರಲಿಲ್ಲ. ಇತ್ತೀಚೆಗೆ ಅಥಿಯಾ ಶೆಟ್ಟಿ 29ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ವೇಳೆ ತಮ್ಮ ಸಂಬಂಧದ ಬಗ್ಗೆ ಸುಳಿವು ನೀಡಿದ್ದರು.

ತಾರಾ ಜೋಡಿಯ ಮದುವೆ ಆಗೋದೆಲ್ಲಿ?

ಬಾಲಿವುಡ್‌ನಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಖಂಡಾಲದಲ್ಲಿ ಇಬ್ಬರ ಮದುವೆ ನಡೆಯಲಿದೆ. ಇಲ್ಲಿ ಸುನೀಲ್ ಶೆಟ್ಟಿಯ ಬಂಗಲೆ ಇದೆ. ಸುಮಾರು 17 ವರ್ಷಗಳ ಹಿಂದೆ ಸುನೀಲ್ ಶೆಟ್ಟಿ ಹಾಗೂ ಪತ್ತಿ ಮನಾ ಶೆಟ್ಟಿ ಖರೀದಿ ಮಾಡಿದ್ದರು. ಇದು ಇಬ್ಬರಿಗೂ ವಿಶೇಷವಾದ ಜಾಗ. ಹೀಗಾಗಿ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಮದುವೆ ಇದೇ ಜಾಗದಲ್ಲಿ ನಡೆಯಲಿದೆ ಎನ್ನಲಾಗಿದೆ.

ಮನಾ ಶೆಟ್ಟಿ ಹಾಗೂ ಸುನೀಲ್ ಶೆಟ್ಟಿ ಬಾಲಿವುಡ್ ಸೆಲೆಬ್ರೆಟಿಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದಾರೆ. ಹೀಗಾಗಿ ಅದ್ಧೂರಿಯಾಗಿ ಮದುವೆ ನಡೆಯಲಿದೆ. ಆದರೆ, ಮದುವೆ ಯಾವಾಗ ಜರುಗುತ್ತೆ ಅನ್ನೋದು ಕೆ.ಎಲ್ ರಾಹುಲ್ ಶೆಡ್ಯೂಲ್ ಮೇಲೆ ನಿಂತಿದೆ ಎನ್ನಲಾಗಿದೆ. ಇನ್ನೊಂದು ಕಡೆ ಆಯೋಜಕರು ಖಂಡಾಲದಲ್ಲಿ ಈಗಾಗಲೇ ಪ್ರಿಪರೇಷನ್ ಶುರುವಾಗಿದೆ ಅನ್ನೋ ಮಾತು ಕೇಳಿ ಬರುತ್ತಿದೆ.

KL Rahul-Athiya Shetty Will Marry Suniel Shetty House In Khandala

ಒಟ್ಟಿಗೆ ನೆಲೆಸಿರೋ ಅಥಿಯಾ ಶೆಟ್ಟಿ

ಅಥಿಯಾ ಶೆಟ್ಟಿ ಹಾಗೂ ಕೆ ಎಲ್ ರಾಹುಲ್ ಇಬ್ಬರೂ ಮದುವೆಗೂ ಒಟ್ಟಿಗೆ ನೆಲೆಸಿದ್ದಾರೆ ಎನ್ನಲಾಗಿದೆ. ಮುಂಬೈನ ಬಾಂಡ್ರಾದಲ್ಲಿ ಇಬ್ಬರೂ ಒಟ್ಟಿಗೆ ಅಪಾರ್ಟ್‌ಮೆಂಟ್‌ ಅನ್ನು ಖರೀದಿ ಮಾಡಿದ್ದಾರೆ ಎನ್ನಲಾಗಿದೆ.

ಕೆ ಎಲ್‌ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಇಬ್ಬರೂ ಆಗಾಗ ಫ್ಯಾಮಿಲಿ ಜೊತೆ ಕಾಣಿಸಿಕೊಳ್ಳುತ್ತಾರೆ. ಇಬ್ಬರಿಗೂ ಕ್ರಿಕೆಟ್ ಹಾಗೂ ಸಿನಿಮಾ ಬಗ್ಗೆ ಆಸಕ್ತಿಯಿದೆ. ಅಲ್ಲದೆ ಕ್ರಿಕೆಟ್ ಹಾಗೂ ಫಿಟ್ನೆಸ್ ಬಗ್ಗೆನೂ ಚರ್ಚೆ ಮಾಡುತ್ತಾರೆ ಎನ್ನಲಾಗಿದೆ.

More from Filmibeat

English summary
KL Rahul-Athiya Shetty Will Marry Suniel Shetty House In Khandala, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X