For Quick Alerts
  ALLOW NOTIFICATIONS  
  For Daily Alerts

  "ಬಾಲಿವುಡ್‌ನಲ್ಲಿ ರಶ್ಮಿಕಾಗೆ ಭವಿಷ್ಯವಿಲ್ಲ.. ಭೋಜ್‌ಪುರಿ ಸಿನಿಮಾಗೇ ಲಯಕ್ಕು" -ಕಮಾಲ್ ವಿವಾದಾತ್ಮಕ ಟ್ವೀಟ್

  |

  ಇಬ್ಬರು ಸದಾ ವಿವಾದದಲ್ಲಿ ಇರುವವರೇ. ಒಬ್ಬರು ಪ್ಯಾನ್ ಇಂಡಿಯಾ ನಟಿ ರಶ್ಮಿಕಾ ಮಂದಣ್ಣ. ಮತ್ತೊಬ್ಬರು ಸ್ವಯಂ ಘೋಷಿತ ವಿಮರ್ಶಕ ಕಮಾಲ್ ಆರ್ ಖಾನ್. ಇವರಿಬ್ಬರೂ ಒಂದಲ್ಲ ಒಂದು ವಿವಾದದಲ್ಲಿ ಸಿಕ್ಕಿಕೊಳ್ಳುತ್ತಲೇ ಇರುತ್ತಾರೆ.

  ವಿವಾದಾತ್ಮಕ ವಿಮರ್ಶಕ ಕಮಾಲ್ ಆರ್ ಖಾನ್ ಏನಾದರೂ ಒಂದು ಟ್ವೀಟ್ ಮಾಡುತ್ತಿರುತ್ತಾರೆ. ಬಾಲಿವುಡ್‌ ಸಂಬಂಧಿಸಿದಂತೆ ಒಂದಲ್ಲ ಒಂದು ವಿವಾದ ಸೃಷ್ಟಿಸುವ ಟ್ವೀಟ್ ಅನ್ನು ಮಾಡುತ್ತಿರುತ್ತಾರೆ. ಸೂಪರ್‌ಸ್ಟಾರ್‌ಗಳ ಹಿಂದೆ ಬೀಳುತ್ತಿದ್ದ ಕೆಆರ್‌ಕೆ ಈಗ ರಶ್ಮಿಕಾ ಮಂದಣ್ಣ ಕುರಿತು ಟ್ವೀಟ್ ಮಾಡಿದ್ದಾರೆ. ಅದು ಸೋಶಿಯಲ್ ಮೀಡಿಯಾದಲ್ಲಿ ಕಳೆದೆರಡು ದಿನಗಳಿಂದ ಚರ್ಚೆಯಾಗುತ್ತಿದೆ.

  ಬಾಲಿವುಡ್‌ ಮಂದಿಗೆ ಕೆಆರ್‌ಕೆ ಕಾಟ

  ಬಾಲಿವುಡ್‌ ಮಂದಿಗೆ ಕೆಆರ್‌ಕೆ ಕಾಟ

  ಸ್ವಯಂ ಘೋಷಿತ ವಿಮರ್ಶಕ ಕೆಆರ್‌ಕೆ ಬಾಲಿವುಡ್ ಮಂದಿಯ ನಿದ್ದೆ ಕದ್ದಿದ್ದಾರೆ. ಹಿಂದೆ ಮುಂದೆ ನೋಡದೆ ಟ್ವೀಟ್ ಮಾಡೋ ಕೆಆರ್‌ಕೆ ಸಿನಿಮಾ ನಟ-ನಟಿಯರ ಪಾಲಿಗೆ ಶತ್ರು. ಶಾರುಖ್ ಖಾನ್‌ ಅನ್ನು ಟಿಕ್ ಟಾಕ್ ಸ್ಟಾರ್ ಅಂತ ಕರೆದಿದ್ದರು. ಅರ್ಜುನ್ ಕಪೂರ್-ಮಲ್ಲಿಕಾ ಅರೋರಾ ಸಂಬಂಧವನ್ನು ಟ್ರೋಲ್ ಮಾಡಿದ್ದರು. ಆಮಿರ್ ಖಾನ್ ಸಿನಿಮಾ 'ಲಾಲ್ ಸಿಂಗ್ ಚಡ್ಡ' ಮಕಾಡ ಮಲಗುತ್ತೆ ಎಂದಿದ್ದರು. ಈಗ ರಶ್ಮಿಕಾ ಮಂದಣ್ಣ ಕುರಿತು ಖಾರವಾಗಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

  'ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣಗೆ ಭವಿಷ್ಯವಿಲ್ಲ'

  'ಬಾಲಿವುಡ್‌ನಲ್ಲಿ ರಶ್ಮಿಕಾ ಮಂದಣ್ಣಗೆ ಭವಿಷ್ಯವಿಲ್ಲ'

  ರಶ್ಮಿಕಾ ಮಂದಣ್ಣ ಬಾಲಿವುಡ್‌ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಮಿತಾಬ್ ಬಚ್ಚನ್ ಜೊತೆ 'ಗುಡ್‌ಬೈ' ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ, ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮೋಡಿ ಮಾಡಿಲ್ಲ. 'ಮಿಷನ್ ಮಜ್ನು' ರಿಲೀಸ್ ಆಗಬೇಕಿದೆ. ಇನ್ನೊಂದು ಶೂಟಿಂಗ್ ಹಂತದಲ್ಲಿದೆ. ಆ ನಡುವೆಯೇ ಕೆಆರ್‌ಕೆ ಖಾರವಾಗಿ ಟ್ವೀಟ್ ಮಾಡಿದ್ದಾರೆ. "ರಶ್ಮಿಕಾ ಮಂದಣ್ಣ ಲುಕ್ ನೋಡಿದರೆ, ದಕ್ಷಿಣ ಭಾರತದ ಸಿನಿಮಾಗಳು ಹಾಗೂ ಭೋಜ್‌ಪುರಿ ಸಿನಿಮಾಗಳಿಗೆ ಸೂಕ್ತ ಹೊರತು ಹಿಂದಿ ಸಿನಿಮಾಗಳಿಗಲ್ಲ. ಹಿಂದಿ ಪ್ರೇಕ್ಷಕರು ರಶ್ಮಿಕಾಳನ್ನು ಹೀರೊಯಿನ್ ಆಗಿ ಒಪ್ಪಿಕೊಳ್ಳಲ್ಲ. ಈಗಾಗಲೇ ಐಶ್ವರ್ಯಾ, ಮಾಧುರಿ, ಕರೀನಾರನ್ನು ನೋಡಿದ್ದಾರೆ." ಎಂದು ಟ್ವೀಟ್ ಮಾಡಿದ್ದಾರೆ.

  ಕೆಆರ್‌ಕೆ ಪ್ರತಿಕ್ರಿಯೆ ಏನು?

  ಕೆಆರ್‌ಕೆ ಪ್ರತಿಕ್ರಿಯೆ ಏನು?

  ರಶ್ಮಿಕಾ ಮಂದಣ್ಣ ಸಿನಿಮಾ ವಿರುದ್ಧ ಕೆಆರ್‌ಕೆ ಮಾಡಿದ ಟ್ವೀಟ್‌ಗೆ ಕೆಲ ನೆಟ್ಟಿಗರು ತಿರುಗೇಟು ನೀಡಿದ್ದಾರೆ. ಮತ್ತೆ ಕೆಲವರು ಈ ಟ್ವೀಟ್ ಅನ್ನು ಸಮರ್ಥಿಸಿಕೊಂಡಿದ್ದಾರೆ. " ಅವರು ಹೇಗೆ ಕಾಣಿಸುತ್ತಾರ ಅನ್ನೋದು ನನಗೆ ಬೇಕಾಗಿಲ್ಲ. ಆದರೆ, ರಿಷಬ್ ಶೆಟ್ಟಿ ಹಾಗೂ ಆಕೆಯ ವೃತ್ತಿ ಬದುಕಿಗೆ ಕಾರಣವಾದ ನಿರ್ಮಾಣ ಸಂಸ್ಥೆಯ ವಿಚಾರವಾಗಿ ನಡೆದುಕೊಂಡಿದ್ದು ಬೇಸರ ತರಿಸಿದೆ." ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ. " ನಿಮ್ಮ ಮಾತನ್ನು ಒಪ್ಪುತ್ತೇನೆ. ಅವರು ಹಿಂದಿ ಸಿನಿಮಾಗೆ ಒಪ್ಪಿಗೆ ಆಗುವುದಿಲ್ಲ. ಆದರೆ. ಬಾಲಿವುಡ್ ಮಂದಿ ಈ ನಟಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಎನಿಸುತ್ತದೆ." ಎಂದು ಮತ್ತೊಬ್ಬ ನೆಟ್ಟಿಗ ಕಮೆಂಟ್ ಮಾಡಿದ್ದಾರೆ.

  ರಣ್‌ವೀರ್ ವಿರುದ್ಧವೂ ಕೆಆರ್‌ಕೆ ಟ್ವೀಟ್

  ರಣ್‌ವೀರ್ ವಿರುದ್ಧವೂ ಕೆಆರ್‌ಕೆ ಟ್ವೀಟ್


  ಇತ್ತೀಚೆಗೆ "ಬಾಲಿವುಡ್ ರಣ್‌ವೀರ್ ಸಿಂಗ್ ಭವಿಷ್ಯ ಮುಗಿಯಿತು" ಎಂದು ಟ್ವೀಟ್ ಮಾಡಿದ್ದರು. ರಣ್‌ವೀರ್ ಸಿಂಗ್ ಅಭಿನಯದ 'ಸರ್ಕಸ್' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಈ ವಿಚಾರವಾಗಿ ರಣ್‌ವೀರ್ ವಿರುದ್ಧ ತಿರುಗಿಬಿದ್ದಿದ್ದರು. ಅಲ್ಲದೆ ರಣ್‌ವೀರ್ ಸಿಂಗ್ ಮುಂದಿನ ಸಿನಿಮಾ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಕೂಡ ಬಾಕ್ಸಾಫೀಸ್‌ನಲ್ಲಿ ದುರಂತ ಕಾಣುತ್ತೆ ಎಂದು ಹೇಳಿದ್ದರು.

  English summary
  KRK Says Rashmika Mandanna Has No Future In Bollywood,Know More.
  Wednesday, December 28, 2022, 5:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X