"ಕೆನ್ನೆಗೆ ಮುತ್ತು ಕೊಟ್ಟು.. ಆ ಸೀನ್ ಮಾಡೋಣ ಬಾ ಅಂತ ಕರೀಬೇಕಿತ್ತು": ಸಿದ್ಧಿಕಿ ಬಗ್ಗೆ ಕುಬ್ರಾ ಕಮೆಂಟ್

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಯಾರಿಗೆ ಗೊತ್ತಿಲ್ಲ ಹೇಳಿ? ಬಾಲಿವುಡ್‌ನ ಈ ಅದ್ಭುತ ನಟನ ಅದೆಷ್ಟೋ ಪಾತ್ರಗಳನ್ನು ಸಿನಿಪ್ರಿಯರು ಮೆಚ್ಚಿ ಕೊಂಡಾಡಿದ ಉದಾಹರಣೆಗಳು ಸಾಕಷ್ಟು ಇವೆ. ಬಾಲಿವುಡ್ ಇರಲಿ, ದಕ್ಷಿಣ ಭಾರತದ ಸಿನಿಮಾಗಳೇ ಇರಲಿ ನವಾಜುದ್ದೀನ್ ಸಿದ್ಧಿಕಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಖಳನಾಯಕನ ಪಾತ್ರಗಳಲ್ಲಿ ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿಯನ್ನು ಮೀರಿಸೋರು ತೀರಾ ವಿರಳ. ಇವರದ್ದೇ ವಿಶಿಷ್ಟ ಮ್ಯಾನರಿಸಂ, ಡೈಲಾಗ್ ಡಿಲೇವರಿಗೆ ಪ್ರೇಕ್ಷಕರು ಮರುಳಾಗಿದ್ದಾರೆ. ಕೆಲವು ಬೋಲ್ಡ್ ಸೀನ್‌ಗಳಲ್ಲೂ ಮೈ ಚಳಿ ಬಿಟ್ಟು ನಟಿಸೋ ನಟನ ರಿಯಲ್ ಲೈಫ್ ಬೇರೆನೇ ಇದೆ.

Kubbra Sait reveals about Sacred Games actor Nawazuddin Siddiqui

ನವಾಜುದ್ದೀನ್ ಸಿದ್ದಿಕಿ ರಿಯಲ್‌ ಲೈಫ್‌ನಲ್ಲಿ ಸಿಕ್ಕಾ ಪಟ್ಟೆ ನಾಚಿಕೆ ಸ್ವಭಾವದವರು. ಈ ವಿಷಯವನ್ನು ಮತ್ತೊಬ್ಬ ಬಾಲಿವುಡ್ ನಟಿ ಕುಬ್ರಾ ಸೇಠ್ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ಸೆಕ್ಸ್ ಸೀನ್ ಮಾಡುವಾಗ ಅವರ ಕೆನ್ನೆ ಮುತ್ತು ಕೊಟ್ಟು ಕರೆದುಕೊಂಡು ಹೋಗುತ್ತಿದ್ದೆ ಅಂತ ಬಾಲಿವುಡ್ ಹಂಗಾಮಕ್ಕೆ ಕೊಟ್ಟ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

ವೆಬ್ ಸೀರಿಸ್ ಸೀನ್‌ ನೆನೆದ ಕುಬ್ರಾ ಸೇಠ್

ರಗಡ್ ಸಿನಿಮಾಗಳನ್ನು ನಿರ್ದೇಶಿಸೋ ಅನುರಾಗ್ ಕಶ್ಯಪ್ 'ಸೇಕ್ರೆಡ್ ಗೇಮ್ಸ್' ವೆಬ್‌ ಸೀರಿಸ್ ನಿರ್ದೇಶನ ಮಾಡುತ್ತಿದ್ದರು. ಇದರಲ್ಲಿ, ಸೈಫ್ ಅಲಿಖಾನ್, ರಾಧಿಕಾ ಆಪ್ಟೆ, ನವಾಜುದ್ದೀನ್ ಸಿದ್ಧಿಕಿ ಹಾಗೂ ಕುಬ್ರಾ ಸೇಠ್ ನಟಿಸುತ್ತಿದ್ದರು. ಈ ಸಿನಿಮಾದಲ್ಲಿ ಕುಬ್ರಾ ಸೇಠ್ ಸಲಿಂಗಿ ಪಾತ್ರದಲ್ಲಿ ನಟಿಸಿದ್ದಾರೆ. ಇದರಲ್ಲಿ ನವಾಜುದ್ದೀನ್ ಸಿದ್ಧಿಕಿ ಹಾಗೂ ಕುಬ್ರಾ ಸೇಠ್ ನಡುವೆ ಹಸಿಬಿಸಿ ದೃಶ್ಯಗಳಿವೆ. ಈ ಸೀನ್‌ಗೆ ಏಳು ಬಾರಿ ಟೇಕ್ ತೆಗೆದುಕೊಳ್ಳಲಾಗಿತ್ತು ಎಂದು ಹೇಳಿದ್ದಾರೆ.

Kubbra Sait reveals about Sacred Games actor Nawazuddin Siddiqui

ಏಳನೇ ಬಾರಿ ಆ ದೃಶ್ಯ ಓಕೆ ಅಂದಾಗ ಫ್ಲೋರ್‌ನಲ್ಲೇ ಬಿದ್ದು ಅತ್ತಿದ್ದನ್ನೂ ನೆನಪಿಸಿಕೊಂಡಿದ್ದಾರೆ. ಗಂಟೆಗಳ ಕಾಲ ಸಿನಿಮಾ ಶೂಟ್ ಮಾಡಿದ್ದ ಆಯಾಸಗೊಂಡಾಗ ನಿರ್ದೇಶಕ ಅನುರಾಗ್ ಕಶ್ಯಪ್ ಹಾಗೂ ನಟ ನವಾಜುದ್ದೀನ್ ಸಿದ್ಧಿಕಿ ಸಾಥ್ ಕೊಟ್ಟ ಕ್ಷಣಗಳನ್ನು ಕುಬ್ರಾ ಸೇಠ್ ನೆನೆದಿದ್ದಾರೆ. ಅಂದ್ಹಾಗೆ ಕುಬ್ರಾ ಸೇಠ್ ಕನ್ನಡದ ನಟ ಹಾಗೂ ಮಿಸ್ಟರ್ ನ್ಯಾಗ್ಸ್ ಖ್ಯಾತಿಯ ದಾನಿಶ್ ಸೇಠ್ ಅವರ ಸಹೋದರಿ.

"ಆ ಸೀನ್ ಮಾಡೋಣ ಬಾ ಅಂತ ಕರೀಬೇಕಿತ್ತು"

ಬಾಲಿವುಡ್ ಹಂಗಾಮಗೆ ನೀಡಿದ ಸಂದರ್ಶನದಲ್ಲಿ ಕುಬ್ರಾ ಸೇಠ್ ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಯ ನಾಚಿಕೆ ಸ್ವಭಾವದ ಬಗ್ಗೆನೂ ರಿವೀಲ್ ಮಾಡಿದ್ದಾರೆ. ನವಾಜುದ್ದೀನ್ ಸಿದ್ಧಿಕಿ ತೆರೆಮೇಲೆ ಕಂಡಂತೆ ಇರುವುದಿಲ್ಲ. ಅವರು ತುಂಬಾನೇ ನಾಚಿಕೆ ಸ್ವಭಾವದ ವ್ಯಕ್ತಿ ಎಂದು ರಿವೀಲ್ ಮಾಡಿದ್ದಾರೆ.

" ನನಗೆ ನವಾಜುದ್ದೀನ್ ಸಿದ್ದಿಕಿ ಅಂದರೆ ತುಂಬಾನೇ ಇಷ್ಟ. ನಾವು ಅಷ್ಟೆಲ್ಲಾ ಕ್ರೇಜಿ ಸೀನ್ ಮಾಡಿದ್ರೂ, ಅವರು ನಾಚಿಕೆ ಸ್ವಭಾವದ ವ್ಯಕ್ತಿ. ಈ ಭೂಮಿ ಮೇಲೆ ಇರುವ ಅತ್ಯಂತ ನಾಚಿಕೆ ಸ್ವಭಾವದ ವ್ಯಕ್ತಿ. ಅವರನ್ನು ಹಿಡಿದು ಹಿಡಿದು ಅಂತಹ ಸೀನ್ ಮಾಡಿಸಬೇಕು. ನಾನು ಅವರ ಕೆನ್ನೆಗೆ ಮುತ್ತು ಕೊಟ್ಟು ಬಾ ಸೆಕ್ಸ್ ಸೀನ್ ಮಾಡೋಣ ಅಂತ ಎಳೆದುಕೊಂಡು ಹೋಗಬೇಕಿತ್ತು. ಅಂತಹ ವಾತಾವರಣ ಕ್ರಿಯೇಟ್ ಮಾಡೋದು ನನ್ನ ಕೆಲಸ ಆಗಿತ್ತು" ಎಂದು ಕುಬ್ರಾ ಸೇಠ್ ಹೇಳಿಕೊಂಡಿದ್ದಾರೆ.

ವೆಬ್ ಸೀರಿಸ್‌ಗಳಲ್ಲಿ ಕುಬ್ರಾ ಬ್ಯುಸಿ

ಕುಬ್ರಾ ಸೇಠ್ ನಟಿಯಷ್ಟೇ ಅಲ್ಲ. ಲೇಖಕಿ ಕೂಡ ಹೌದು. ತಮ್ಮ ಜೀವನಾಧಾರಿತ 'ಓಪನ್ ಬುಕ್: ನಾಟ್ ಕ್ವಿಟ್ ಎ ಮೆಮೊಯಿರ್' ಅನ್ನು ಇತ್ತೀಚೆಗೆ ರಿಲೀಸ್ ಆಗಿದೆ. ಈ ಬುಕ್‌ಗೆ ಉತ್ತಮ ರೆಸ್ಪಾನ್ಸ್ ಕೂಡ ಸಿಗುತ್ತಿದೆ. ಸದ್ಯ 'ದಿ ಗುಡ್ ವೈಫ್' ವೆಬ್ ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಕಾಜೋಲ್, ಶಿಬಾ ಚಡ್ಡಾ, ಆಮಿರ್ ಅಲಿ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.

ಇದಲ್ಲದೆ 'ಶೇಹರ್ ಲಖೋಟ್' ಅನ್ನೋ ವೆಬ್ ಸೀರಿಸ್‌ನಲ್ಲೂ ನಟಿಸುತ್ತಿದ್ದಾರೆ. ಇವರೊಂದಿಗೆ ಚಂದನ್ ರಾಯ್ ಸಾನ್ಯಾಲ್, ಪ್ರಿಯಾಂಶು ಪೈನ್ಯುಲಿ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಹೀಗಾಗಿ ವೆಬ್ ಸಿರೀಸ್‌ನಲ್ಲಿ ಕುಬ್ರಾ ಸೇಠ್ ಬ್ಯುಸಿಯಾಗಿದ್ದಾರೆ.

More from Filmibeat

English summary
Kubbra Sait reveals about Sacred Games actor Nawazuddin Siddiqui's Shy Nature, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X