Monalisa Marriage: ವೈರಲ್ ಹುಡುಗಿಯ 6 ತಿಂಗಳ ಲವ್‌ಸ್ಟೋರಿ.. ಕುಂಭಮೇಳದ ಮೊನಾಲಿಸಾ ಕೇರಳದಲ್ಲಿಯೇ ಮದುವೆ ಆಗಿದ್ದೇಕೆ?

2025ರ ಕುಂಭಮೇಳ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಸೋಶಿಯಲ್ ಮೀಡಿಯಾದಲ್ಲಿ ಕುಂಭಮೇಳದ ಬಗ್ಗೆ ಎಷ್ಟು ಚರ್ಚೆಯಾಗಿತ್ತೋ? ಅದಕ್ಕಿಂತ ಹೆಚ್ಚು ಚರ್ಚೆಯಾಗಿದ್ದು ಈ ವೈರಲ್ ಹುಡುಗಿ ಮೊನಾಲಿಸಾ. ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆಯನ್ನು ಮಾರುತ್ತಾ ಕುಳಿತಿದ್ದ ಹುಡುಗಿ ರಾತ್ರೋ ರಾತ್ರಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಳು. ಇಡೀ ದೇಶವೇ ಈಕೆಯ ಕಣ್ಣುಗಳಿಗೆ ಫಿದಾ ಆಗಿದ್ದರು. ಇಲ್ಲಿಂದ ಈಕೆ ಮೊನಾಲಿಸಾ ಅಂತಲೇ ಜನಪ್ರಿಯತೆ ಪಡೆದಿದ್ದರು.

ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯರಾಗುತ್ತಿದ್ದಂತೆ ಸಿನಿಮಾಗಳಲ್ಲಿಯೂ ನಟಿಸುವ ಅವಕಾಶ ಬಂದಿತ್ತು. ಇದರ ಜೊತೆ ಒಂದಿಷ್ಟು ವಿವಾದವನ್ನು ಮೈಮೇಲೆ ಎಳೆದುಕೊಂಡು ಟೀಕೆಗಳಿಗೆ ಗುರಿಯಾಗಿದ್ದರು. ಇತ್ತೀಚೆಗೆ ಸೈಲೆಂಟ್ ಆಗಿದ್ದ ಮೊನಾಲಿಸಾ ಮತ್ತೆ ದೇಶದಾದ್ಯಂತ ಸಂಚಲನ ಸೃಷ್ಟಿಸಿದ್ದಾರೆ. ಕೇರಳದಲ್ಲಿ ತನ್ನ ಬಾಯ್‌ಫ್ರೆಂಡ್‌ ಜೊತೆ ವಿವಾಹವಾಗುವ ಮೂಲಕ ಆಕೆಯ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾಳೆ.

Kumbh Mela 2025 viral girl Monalisa marries boyfriend Muhammad Farman in Kerala here is her love story

ಮೊನಾಲಿಸಾ ಮೂಲತ: ಮಧ್ಯಪ್ರದೇಶದ ಇಂದೋರ್‌ನವರು. ಇನ್ನು ಈಕೆಯ ಬಾಯ್‌ಫ್ರೆಂಡ್ ಮಹಾರಾಷ್ಟ್ರದವರು. ಇಬ್ಬರೂ ಕೇರಳದಲ್ಲಿ ಯಾಕೆ ಮದುವೆಯಾದರು? ಈ ಪ್ರಶ್ನೆ ಸಹಜವಾಗಿಯೂ ಮೂಡತ್ತೆ. ಅದಕ್ಕೊಂದು ಬಲವಾದ ಕಾರಣವಿದೆ. ಮದುವೆ ಬಳಿಕ ಮೊನಾಲಿಸಾ ಬಾಯ್‌ಫ್ರೆಂಡ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಷ್ಟಕ್ಕೂ ಕಾರಣವೇನು? ತಿಳಿಯುವುದಕ್ಕೆ ಮುಂದೆ ಓದಿ.

ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಮಹಾರಾಷ್ಟ್ರದ ಮುಹಮ್ಮದ್ ಫರ್ಮಾನ್ ಎಂಬುವವರನ್ನು ಇಂದು (ಮಾರ್ಚ್ 11) ವಿವಾಹವಾಗಿದ್ದಾರೆ. ವಿಶೇಷ ಅಂದರೆ, ಈ ಜೋಡಿ ಸೀದಾ ಕೇರಳದ ಪೂವಾರ್ ಬಳಿಯ ಅರುಮನೂರ್ ನೈನಾರ್ ದೇವಸ್ಥಾನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಜೋಡಿಗೆ ಕೇರಳ ಗಣ್ಯರು, ರಾಜಕೀಯ ಮುಖಂಡರು ಜೊತೆಯಾಗಿದ್ದರು. ಅಷ್ಟಕ್ಕೂ ಇವರಿಬ್ಬರು ಮದುವೆ ಆಗುವುದಕ್ಕೆ ಕೇರಳವನ್ನೇ ಯಾಕೆ ಆಯ್ಕೆ ಮಾಡಿಕೊಂಡರು? ಈ ಕುತೂಹಲಕ್ಕೆ ಅವರೇ ಉತ್ತರ ಕೊಟ್ಟಿದ್ದಾರೆ.

ಮೊನಾಲಿಸಾ ಹಾಗೂ ಮುಹಮ್ಮದ್ ಫರ್ಮಾನ್ ಇಬ್ಬರೂ ಕಳೆದ ಆರು ತಿಂಗಳಿನಿಂದ ಪ್ರೀತಿ ಮಾಡುತ್ತಿದ್ದರು. ಸಿನಿಮಾದ ಸೆಟ್‌ನಲ್ಲಿ ಮೊನಾಲಿಸಾ ಹಾಗೂ ಮುಹಮ್ಮದ್ ಫರ್ಮಾನ್ ಇಬ್ಬರೂ ಪರಿಚಯ ಆಗಿತ್ತು. ಅದು ಪ್ರೀತಿಗೆ ತಿರುಗಿ ಈಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ, ಈ ಮದುವೆ ಮೊನಾಲಿಸಾ ತಂದೆಗೆ ಇಷ್ಟವಿರಲಿಲ್ಲ. ಹೀಗಾಗಿ ತಂದೆಯ ವಿರೋಧವಿದ್ದರಿಂದ ತನ್ನ ಪ್ರೇಮವನ್ನು ಉಳಿಸಿಕೊಳ್ಳುವುದಕ್ಕೆ ಕೇರಳದ ತಿರುವನಂತಪುರಂ ಪೊಲೀಸ್ ಠಾಣೆಗೆ ತೆರಳಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದರು. ಮೊನಾಲಿಸಾ ನೀಡಿದ ದೂರಿನಲ್ಲಿ ತನ್ನ ತಂದೆ ಬಲವಂತವಾಗಿ ಮನೆಗೆ ಕರೆದೊಯ್ದು ಮತ್ತೊಬ್ಬರೊಂದಿಗೆ ಮದುವೆ ಮಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.

ಕೇರಳದಲ್ಲಿ ನಡೆದ ಮೊನಾಲಿಸಾ ಹಾಗೂ ಮುಹಮ್ಮದ್ ಫರ್ಮಾನ್ ಮದುವೆಗೆ ಅಲ್ಲಿನ ಗಣ್ಯರೇ ಬೆಂಬಲ ಕೊಟ್ಟಿದ್ದಾರೆ. ಈ ಸಮಾರಂಭಕ್ಕೆ ಸಚಿವ ವಿ. ಶಿವನ್​ಕುಟ್ಟಿ, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಹಾಗೂ ಸಂಸದ ಎ.ಎ. ರಹೀಮ್ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾಗಿದ್ದಾರೆ. ಅಲ್ಲದೇ ದೇವಸ್ಥಾನದ ಆಡಳಿತ ಮಂಡಳಿ ಕೂಡ ಇವರ ಮದುವೆಗೆ ನೆರವಾಗಿದೆ. ಮದುವೆ ಬಳಿಕ ಮೊನಾಲಿಸಾ ಪತಿ ಮುಹಮ್ಮದ್ ಫರ್ಮಾನ್ ಕೇರಳ ನನಗೆ ಸೇಫ್ ಎನಿಸುತ್ತದೆ ಎಂದು ಹೇಳಿಕೆ ಕೊಟ್ಟಿದ್ದಾರೆ.

ಮೊನಾಲಿಸಾ ತಂದೆ ಈ ವಿವಾಹವನ್ನು ಬಲವಾಗಿ ವಿರೋಧಿಸಿದ್ದರು. ಹೀಗಾಗಿ, ಇಬ್ಬರೂ ತಮ್ಮ ಪ್ರೇಮವನ್ನು ಉಳಿಸಿಕೊಳ್ಳಲು ಕೇರಳಕ್ಕೆ ಆಗಮಿಸಿದ್ದರು. ಮದುವೆ ಬಳಿಕ ಇಲ್ಲೇ ಸ್ವಲ್ಪ ದಿನ ಆಶ್ರಯ ಪಡೆಯುವುದಾಗ ಮೊನಾಲಿಸಾ ಪತಿ ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಈಗಾಗಲೇ ರಕ್ಷಣೆ ಕೋರಿ ತಿರುವನಂತಪುರಂ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲು ಮಾಡಿದ್ದಾರೆ.

ಮೊನಾಲಿಸಾ ಭೋಸ್ಲೆ ಮಧ್ಯಪ್ರದೇಶದವರಾಗಿದ್ದು, ಮಹಾಕುಂಭಮೇಳದ ವೇಳೆ ಸೋಶಿಯಲ್ ಮೀಡಿಯಾ ಇನ್ಫ್ಯೂಯೆನ್ಸರ್ ಕಣ್ಣಿಗೆ ಬಿದ್ದಿದ್ದರು. ಅಲ್ಲಿಂದ ಇವರು ದೇಶಾದ್ಯಂತ ಜನಪ್ರಿಯರಾಗಿದ್ದರು. ಇವರ ಕಣ್ಣುಗಳಿಂದಲೇ ದೇಶದ ಜನರ ಹೃದಯ ಗೆದ್ದಿದ್ದ ಮೊನಾಲಿಸಾಗೆ ಸಿನಿಮಾ ಅವಕಾಶಗಳು ದೊರೆತಿದ್ದವು. ವಿಝಿಂಜಂ-ಪೂವಾರ್‌ನಲ್ಲಿ ನಡೆದ ತಮ್ಮ ಚಿತ್ರವೊಂದರ ಶೂಟಿಂಗ್ ವೇಳೆ ನಾಯಕ ನಟ ಫರ್ಮಾನ್ ಅವರನ್ನು ಅವರು ಭೇಟಿಯಾಗಿದ್ದರು. ಅಲ್ಲಿಂದ ಇಬ್ಬರಲ್ಲೂ ಪ್ರೀತಿ ಹುಟ್ಟಿತ್ತು. ಆದರೆ, ತಂದೆಯ ವಿರೋಧ ಇದ್ದಿದ್ದರಿಂದ ಕೇರಳದಲ್ಲಿ ಮದುವೆ ಆಗಿದ್ದಾರೆ.

More from Filmibeat

English summary
Kumbh Mela 2025 viral girl Monalisa marries boyfriend Muhammad Farman in Kerala here is her love story.
Read more about: monalisa marriage
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X