ಒಂದೇ ಒಂದು ಸಿನಿಮಾದಿಂದ ರಶ್ಮಿಕಾ ಮಂದಣ್ಣ ಹಿಂದಿಕ್ಕಿದ 23 ವರ್ಷದ ನಟಿ; ಯಾರೀ ಹೊಸ ನ್ಯಾಷನಲ್ ಕ್ರಶ್?
ಮುಂಬೈ: ಇಷ್ಟು ದಿನ ನ್ಯಾಷನಲ್ ಕ್ರಶ್ ಅಂದ ಕೂಡಲೇ ನೆನಪಿಗೆ ಬರುತ್ತಿದ್ದದ್ದು ಕಣ್‌ಸನ್ನೆ ಹುಡುಗಿ ಪ್ರಿಯಾ ವಾರಿಯರ್. ಇತ್ತೀಚೆಗೆ ರಶ್ಮಿಕಾ ಮಂದಣ್ಣ ಅತೀ ಹೆಚ್ಚು ಸಮಯ ನ್ಯಾಷನಲ್ ಕ್ರಶ್ ಆಗಿದ್ದರು. 'ಗೀತಾ ಗೋವಿಂದಂ' ಸಿನಿಮಾ ಬಳಿಕ ಎಲ್ಲರ ಮನಸ್ಸಿನಲ್ಲೂ ರಶ್ಮಿಕಾ ಮಂದಣ್ಣ ಗಟ್ಟಿಯಾಗಿ ನೆಲೆಯೂರಿದ್ದರು.
ರಣ್‌ಬೀರ್ ಕಪೂರ್ ನಟಿಸಿದ ಬ್ಲಾಕ್ ಬಸ್ಟರ್ ಸಿನಿಮಾ 'ಅನಿಮಲ್' ರಿಲೀಸ್ ಆಗುತ್ತಿದ್ದಂತೆ ತೃಪ್ತಿ ದಿಮ್ರಿಗೆ ಯುವಕರು ಹೃದಯ ಕೊಟ್ಟಿದ್ದರು. ಆದರೂ, ಇದು ಹೆಚ್ಚು ದಿನ ಉಳಿಯಲಿಲ್ಲ. ಈ ಗ್ಯಾಪ್‌ನಲ್ಲೇ ಬಾಲಿವುಡ್‌ನ ಹೊಸ ನಟಿ ಹೊಸ ನ್ಯಾಷನಲ್ ಕ್ರಶ್ ಆಗಿ ಹೊರಹೊಮ್ಮಿದ್ದಾರೆ. ಈ ನಟಿಗೀಗ ಕೇವಲ 23 ವರ್ಷ.

ಆಮಿರ್ ಖಾನ್ ಮಾಜಿ ಪತ್ನಿ ಕಿರಣ್ ರಾವ್ ನಿರ್ದೇಶಿಸಿದ್ದ 'ಲಾಪತಾ ಲೇಡೀಸ್' ಸಿನಿಮಾದಲ್ಲಿ ನಟಿಸಿದ ಇಬ್ಬರು ನಟಿಯರಲ್ಲಿ ಒಬ್ಬರು ಈಕೆ. ಅಂದ್ಹಾಗೆ, ನ್ಯಾಷನಲ್ ಕ್ರಶ್ ಆಗಿ ಹೊರ ಹೊಮ್ಮಿರುವ ಈ ನಟಿಯರ ಹೆಸರು ಪ್ರತಿಭಾ ರತ್ನಾ. ಈ ಸಿನಿಮಾದಲ್ಲಿ ಹಳ್ಳಿ ಹುಡುಗಿಯ ಪಾತ್ರದಲ್ಲಿ ನಟಿಸಿದ್ದರು. ಪ್ರತಿಭಾ ರತ್ನಾ ನಟಿಸಿದ ಜಯಾ ಪಾತ್ರ ಸಿನಿಪ್ರಿಯರ ಮನ ಸೆಳೆದಿದ್ದರು.
ಬಾಲಿವುಡ್ ನಟಿ ಪ್ರತಿಭಾ ರತ್ನಾ ಮೂಲತ: ಹಿಮಾಚಲ ಪ್ರದೇಶದ ಶಿಮ್ಲಾದವರು. ಆರಂಭದ ಶಿಕ್ಷಣವನ್ನೆಲ್ಲ ಶಿಮ್ಲಾದಲ್ಲಿಯೇ ಮುಗಿಸಿದ ನಟಿ, ಮುಂಬೈನಲ್ಲಿ ಫಿಲ್ಮ್ ಮೇಕಿಂಗ್‌ನಲ್ಲಿ ಪದವಿಯನ್ನು ಪಡೆದಿದ್ದಾರೆ. 2020ರಲ್ಲಿ ಟಿವಿ ಶೋ ಮೂಲಕ ನಟನೆ ಕಡೆಗೆ ಮುಖ ಮಾಡಿದ್ದರು. ಜೀ ಟಿವಿಯಲ್ಲಿ ಪ್ರಸಾರ ಆಗಿದ್ದ 'ಖುರುಬಾನ್ ಹುವಾ' ಶೋನಲ್ಲಿ ನಟಿಸಿ ಗಮನ ಸೆಳೆದಿದ್ದರು.
'ಆದಾ ಇಶ್ಕ್' ಅನ್ನುವ ಮತ್ತೊಂದು ಟಿವಿ ಶೋನಲ್ಲಿ ನಟಿಸಿದ್ದರು. ಈ ಎರಡು ಟಿವಿ ಶೋಗಳ ಮೂಲಕ ಬಾಲಿವುಡ್ ಮಂದಿಯ ಗಮನ ಸೆಳೆದಿದ್ದರು. ಆಮಿರ್ ಖಾನ್ ನಿರ್ಮಾಣದ ಕಿರಣ್ ರಾವ್ ನಿರ್ದೇಶಿಸಿದ 'ಲಾಪತಾ ಲೇಡೀಸ್'ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಪಕ್ಕಾ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿ ಪ್ರತಿಭಾ ರತ್ನಾ ಗಮನ ಸೆಳೆದಿದ್ದಾರೆ. ಈ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ಪ್ರತಿಭಾ ರತ್ನಾ ಯುವಕ ಹೃದಯ ಗೆದ್ದು ಬಿಟ್ಟಿದ್ದಾರೆ.

ಪ್ರತಿಭಾ ರತ್ನಾ 'ಲಾಪತಾ ಲೇಡೀಸ್' ಅಷ್ಟೇ ಅಲ್ಲ, ಬಾಲಿವುಡ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶಿಸಿದ ವೆಬ್ ಸೀರಿಸ್ 'ಹೀರಾಮಂಡಿ' ಯಲ್ಲೂ ನಟಿಸಿದ್ದಾರೆ. ಶಮಾ ಅನ್ನೋ ಪಾತ್ರದಲ್ಲಿ ಪ್ರತಿಭಾ ರತ್ನಾ ನಟಿಸಿ ವೀಕ್ಷಕರ ಮನಗೆದ್ದಿದ್ದರು. ಈಗ ತನ್ನ ಸಹಜ ಸೌಂದರ್ಯದಿಂದ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ರಶ್ಮಿಕಾ ಮಂದಣ್ಣರನ್ನು ಹಿಂದಿಕ್ಕಿ ಹೊಸ ನ್ಯಾಷನಲ್ ಕ್ರಶ್ ಆಗಿ ಹೊರ ಹೊಮ್ಮಿದ್ದಾರೆ.
ಇಷ್ಟು ದಿನ ನ್ಯಾಷನಲ್ ಕ್ರಶ್ ಅಂದರೆ, ರಶ್ಮಿಕಾ ಮಂದಣ್ಣ ಹೆಸರು ಹೇಳಿ ಬರುತ್ತಿತ್ತು. ಗೀತಾ ಗೋವಿಂದಂ ಬಳಿಕ ರಶ್ಮಿಕಾ ನ್ಯಾಷನಲ್ ಕ್ರಶ್ ಆಗಿ ಹೊರಹೊಮ್ಮಿದ್ದರು. ಅಲ್ಲಿಂದ ಸ್ಟಾರ್ ಸಿನಿಮಾಗಳಲ್ಲಿ ನಟಿಸುವುದಕ್ಕೆ ಅವಕಾಶ ಸಿಕ್ಕಿತ್ತು. ಅದರಲ್ಲೂ ಬಾಲಿವುಡ್ ಸಿನಿಮಾಗಳಲ್ಲೂ ಅವಕಾಶ ಸಿಕ್ಕಿದ್ದವು.


Click it and Unblock the Notifications











