3 ವರ್ಷದಲ್ಲಿ ಶೇ.300ರಷ್ಟು ಸಂಪಾದನೆ ಏರಿಕೆ; ದಿನಕ್ಕೆ 10 ಲಕ್ಷ ದುಡಿಯೋ ದೀಪಿಕಾಳ ಒಟ್ಟು ಆಸ್ತಿ ಎಷ್ಟಿದೆ?
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಯಾವುದೇ ಹೀರೊಗೂ ಕಮ್ಮಿಯಿಲ್ಲ. ಸಂಭಾವನೆ ವಿಷಯದಲ್ಲಿ ತಾರತಮ್ಯ ಆಗುತ್ತಿದೆ ಅಂತ ಗೊಣಗಾಡೋ ನಟಿಯರಿಗೆ ದೀಪಿಕಾ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. 'ಓಂ ಶಾಂತಿ ಓಂ' ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ನಟಿ ಮತ್ತೆ ಹಿಂತಿರುಗಿ ನೋಡುವ ಗೋಜಿಗೆ ಹೋಗಲೇ ಇಲ್ಲ.
'ಓಂ ಶಾಂತಿ ಓಂ' ಸಿನಿಮಾದಿಂದ ದೀಪಿಕಾ ಸಿನಿಪ್ರಿಯರ ಮನಗೆದ್ದು ಆಗಿತ್ತು. ಅಲ್ಲಿಂದ ಬಾಲಿವುಡ್‌ನ ಹೊಸ ಸೂಪರ್‌ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಕಳೆದ ವರ್ಷ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದ ಈ ಡಿಂಪಲ್ ಕ್ವೀನ್ ಬಾಲಿವುಡ್‌ನ ಶ್ರೀಮಂತ ನಟಿ. ಕಳೆದ ಮೂರು ವರ್ಷಗಳಿಂದ ಈಕೆಯ ಒಟ್ಟು ಆಸ್ತಿಯಲ್ಲಿ ಏರಿಕೆಯಾಗಿದೆ ಎನ್ನಲಾಗಿದೆ.

ಸದ್ಯ ದೀಪಿಕಾ ಪಡುಕೋಣೆ ಭಾರತದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಅಂತಾನೂ ವರದಿಗಳಾಗಿವೆ. ಒಂದು ಸಿನಿಮಾಗೆ ದೀಪಿಕಾ ಪಡುಕೋಣೆ ಬರೋಬ್ಬರಿ 30 ಕೋಟಿ ರೂಪಾಯಿವರೆಗೂ ಸಂಭಾವನೆ ಪಡೆದಿದ್ದಾರೆ ಅನ್ನೋ ಸುದ್ದಿಯಿದೆ. ಇನ್ನು ವೃತ್ತಿ ಬದುಕಿನಲ್ಲಿ ದೀಪಿಕಾಗೆ ಕಳೆದ ಮೂರು ವರ್ಷಗಳಿಂದ ಸಿಕ್ಕಿದ್ದು ಬರೀ ಯಶಸ್ಸು.
ಕಳೆದ ವರ್ಷ ಸೋಲನ್ನೇ ಕಾರಣದ ಈ ನಟಿ 'ಪಠಾಣ್', 'ಜವಾನ್' ಅಂತ ಮೆಗಾ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ್ದರು. ದೀಪಿಕಾ ಪಡುಕೋಣೆ ಒಟ್ಟು ಆಸ್ತಿಯಲ್ಲಿ ಶೇ. 300ಕ್ಕೂ ಅಧಿಕ ಏರಿಕೆ ಆಗಿದ್ಯಂತೆ. ಅವರ ಬಳಿ ಇರುವ ಆಸ್ತಿಯ ಮೌಲ್ಯ ಹೆಚ್ಚಳ, ಹಲವು ಬ್ರ್ಯಾಂಡ್‌ಗಳು, ಸಂಭಾವನೆಯಲ್ಲಿ ಏರಿಕೆ ಎಲ್ಲವೂ ಸೇರಿದೆ ಎಂದು ಹೇಳಲಾಗುತ್ತಿದೆ.
2020ರಲ್ಲಿ ದೀಪಿಕಾ ಪಡುಕೋಣೆ ಆಸ್ತಿಯ ಒಟ್ಟು ಮೌಲ್ಯ 118 ಕೋಟಿ ರೂಪಾಯಿ ಎಂದು ಹೇಳಲಾಗಿತ್ತು. ಅದೇ 2023ರಲ್ಲಿ ಅಂತ್ಯದ ವೇಳೆ ಇವರ ಸಂಭಾವನೆ 500 ಕೋಟಿ ರೂಪಾಯಿ ಎಂದು ಕೋಯ್‌ಮೋಯ್ ವರದಿ ಮಾಡಿದೆ. ಈ ವರದಿಯ ಪ್ರಕಾರ, ದೀಪಿಕಾ ಪಡುಕೋಣೆ ಒಟ್ಟು ಆಸ್ತಿಯಲ್ಲಿ ಶೇ. 323.73ರಷ್ಟು ಏರಿಕೆ ಆಗಿದೆ. ನಾಗ ಅಶ್ವಿನ್ ನಿರ್ದೇಶಿಸುತ್ತಿರುವ 'ಕಲ್ಕಿ 2898 AD' ಸಿನಿಮಾಗಾಗಿ ದೀಪಿಕಾ ಪಡುಕೋಣೆ 20 ರಿಂದ 22 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ. ಹಾಗೇ ಶಾರುಖ್ ಖಾನ್ ಜೊತೆ ನಟಿಸಿದ್ದ 'ಪಠಾಣ್' ಸಿನಿಮಾಗೆ 15 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ದೀಪಿಕಾ ಸಿನಿಮಾದಿಂದ ದುಡಿದ ಹಣವನ್ನು ಪ್ರಾಪರ್ಟಿ, ಬ್ಯುಸಿನೆಸ್ ಹಾಗೂ ಬೇರೆ ಬೇರೆ ಕಡೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಈ ನಟಿಯ ಬಳಿಕ ಅವರದ್ದೇ ಒಂದು ನಿರ್ಮಾಣ ಸಂಸ್ಥೆಯಿದೆ. ಫ್ಯಾಷನ್ ಬ್ರ್ಯಾಂಡ್‌ಗೆ ಸುಮಾರು 35 ಕೋಟಿಯಷ್ಟು ಹೂಡಿಕೆ ಮಾಡಿದ್ದಾರೆ. ಮುಂಬೈ ಹಾಗೂ ಸುತ್ತಮುತ್ತ ಐಶಾರಾಮಿ ಅಪಾರ್ಟ್‌ಮೆಂಟ್‌ಗಳಿವೆ. 22 ಕೋಟಿ ರೂಪಾಯಿತ 5 ಬೆಡ್ ರೂಮ್ ಮನೆ, 16 ಕೋಟಿಗೆ ಖರೀದಿಸಿದ ನಾಲ್ಕು ಬೆಡ್ ರೂಮ್ ಮನೆ ಹಾಗೂ ಬಾಂದ್ರದಲ್ಲಿರೋ 7 ಕೋಟಿ ಮೌಲ್ಯದ ಅಪಾರ್ಟ್‌ಮೆಂಟ್ ಇದೆ.
ಈ ಎಲ್ಲಾ ಲೆಕ್ಕಾಚಾರದ ಪ್ರಕಾರ ದೀಪಿಕಾ ಪಡುಕೋಣೆ ಬಳಿಕ 500 ಕೋಟಿ ರೂಪಾಯಿ ಆಸ್ತಿಯಿದೆ ಎನ್ನಲಾಗಿದೆ. ಹಾಗೇ ಈಕೆ ಒಂದು ದಿನಕ್ಕೆ 10 ಲಕ್ಷ ರೂಪಾಯಿ ದುಡಿಯುತ್ತಾರೆಂದು ಕೋಯ್‌ಮೊಯ್ ಲೆಕ್ಕ ಹಾಕಿದೆ. ಹಾಗೇ ದೀಪಿಕಾ ಹಾಗೂ ರಣ್‌ವೀರ್ ಸಿಂಗ್ ಒಟ್ಟು ಆಸ್ತಿ 862 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ಶೇ.58ರಷ್ಟು ದೀಪಿಕಾ ಪಡುಕೋಣೆ ಶೇರು. ಉಳಿದಿದ್ದು ರಣ್‌ವೀರ್ ಸಿಂಗ್ ಶೇರು ಎಂದೂ ವರದಿಯಾಗಿದೆ.


Click it and Unblock the Notifications











