ಲತಾ ಮಂಗೇಶ್ಕರ್ ಗೆ ಹಜಾರಿಕಾ ಜೊತೆ ಅಫೇರ್

ಭೂಪೇನ್ ಹಜಾರಿಕಾ ಅವರ ಪ್ರಥಮ ಪುಣ್ಯ ಸ್ಮರಣೆ ನವೆಂಬರ್ ಐದರಂದು ನಡೆಯಲಿದೆ. ಈ ಹಿನ್ನಲೆಯಲ್ಲಿ ಸ್ಥಳೀಯ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಿಯಂವದಾ ಪಟೀಲ್ ಹೇಳಿದ್ದಾರೆ.
ಲತಾ ಅವರೊಂದಿಗೆ ಹಜಾರಿಕಾ ಸ್ನೇಹ ಆರಂಭಿಸಿದ್ದರು. ಲತಾ ಕೊಲ್ಕತ್ತಾಗೆ ಭೇಟಿ ನೀಡುತ್ತಿದ್ದಾಗ ಇಲ್ಲಿನ ಮೂರು ಬೆಡ್ ರೂಮಿನ ಅಪಾರ್ಟ್ಮೆಂಟ್ ನಲ್ಲಿ ವಾಸವಾಗುತ್ತಿದ್ದರು. ಲತಾ ಮತ್ತು ಭೂಪೇನ್ ಹಜಾರಿಕಾ ಇದರಲ್ಲಿ ಒಂದು ಬೆಡ್ ರೂಮನ್ನು ಹಂಚಿಕೊಳ್ಳುತ್ತಿದ್ದರು ಎಂದು ಪ್ರಿಯಂವದಾ ಹೇಳಿದ್ದಾರೆ.
ಭೂಪೇನ್ ಲತಾ ಅವರನ್ನು ತುಂಬಾ ಹಚ್ಚಿಕೊಂಡಿದ್ದರು. ಪೂರ್ತಿ ರಾತ್ರಿ ಲತಾ ಮಂಗೇಶ್ಕರ್ ಜೊತೆ ಇರುವುದಕ್ಕೆ ನಾನು ಆಕ್ಷೇಪಿಸುತ್ತಿದ್ದೆ. ಆಗ ಕೆಲವೊಮ್ಮೆ ವೃತ್ತಿ ಜೀವನದಲ್ಲಿ ಹೀಗೆ ನಡೆದುಕೊಳ್ಳಬೇಕಾಗುತ್ತದೆ ಎಂದು ನನಗೆ ಸಮಜಾಯಿಷಿ ನೀಡುತ್ತಿದ್ದರು ಎಂದು ಪ್ರಿಯಂವದಾ ಹೇಳಿಕೊಂಡಿದ್ದಾರೆ.
ಲತಾ ಮಂಗೇಶ್ಕರ್ ಮತ್ತು ಭೂಪೇನ್ ನಡುವಣ ಪ್ರೇಮ ಸಂಬಂಧದ ಬಗ್ಗೆ ಹೆಚ್ಚಿನ ಅಸ್ಸಾಮಿಗರಿಗೆ ತಿಳಿದಿದೆ. ನನ್ನ ಈ ಹೇಳಿಕೆಯಿಂದ ಇದು ಚರ್ಚಾಸ್ಪದ ವಿಷಯವಾಗಬಹುದೆಂದು ಪ್ರಿಯಂವದಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಭೂಪೇನ್ ಹಜಾರಿಕಾ ಅವರು ತನ್ನ ಜೀವನ ಚರಿತ್ರೆ "ಮೊಯಿಯೆತಿ ಜಗಾಬೋರ್" ನಲ್ಲಿ ಮುಂಬೈ ಮೂಲದ ಗಾಯಕಿಯ ಹೆಸರನ್ನು ನಮೂದಿಸಿದ್ದರು.


Click it and Unblock the Notifications











